ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲಗೊಂಡ ಎಕ್ಸಿಸ್ ಬ್ಯಾಂಕ್...!

G Hareeshkumar | news18
Updated:November 14, 2018, 7:48 AM IST
ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲಗೊಂಡ ಎಕ್ಸಿಸ್ ಬ್ಯಾಂಕ್...!
G Hareeshkumar | news18
Updated: November 14, 2018, 7:48 AM IST
- ಚಂದ್ರಕಾಂತ್ ಸುಗಂದಿ, ನ್ಯೂಸ್ 18 ಕನ್ನಡ 

ಬೆಳಗಾವಿ (ನವೆಂಬರ್ 13) : ರಾಜ್ಯದ ಅನ್ನದಾತರ ವಿರುದ್ಧ ಕೊಲ್ಕತ್ತಾ ಹೈಕೋರ್ಟ್ ನಿಂದ ವಾರೆಂಟ್ ಜಾರಿ ಮಾಡಿ ಆಕ್ರೋಶಕ್ಕೆ ಗುರಿಯಾಗಿ ಎಕ್ಸಿಸ್ ಬ್ಯಾಂಕ್ ಮಾತು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿದೆ. ಇಂದು ನಡೆದ ಒನ್ ಟೈಂ ಸೆಟ್ಲಮೆಂಟ್ ಸಭೆ ವಿಫಲಗೊಂಡಿದ್ದು, ಎಕ್ಸಿಸ್ ಬ್ಯಾಂಕ್ ಮ್ಯಾನೆಜರ್ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಇನ್ನೂ ಮತ್ತೊಬ್ಬ ರೈತನಿಗೆ ವಾರೆಂಟ್ ಜಾರಿಯಾಗಿದ್ದು, ರೈತ ಆತಂಕಕ್ಕೆ ಒಳಗಾಗಿದ್ದಾನೆ.

ಇದನ್ನು ಓದಿ :  ಬೆಳಗಾವಿ ರೈತರಿಗೆ ಕೊಲ್ಕತ್ತಾ ಕೋರ್ಟ್ ವಾರೆಂಟ್.. ಅನ್ನದಾತರಿಗೆ ಇದೆಂಥ ಸಂಕಷ್ಟ..!

ರೈತರು ಮಾಡಿರುವ ಸಾಲ ಸಂಬಂಧ ಎಕ್ಸಿಸ್ ಬ್ಯಾಂಕ್ ಕೋಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿ, ಐವರು ರೈತರ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಅಲ್ಲದೇ ಜಿಲ್ಲೆಯ ಕೆಲವು ರೈತರಿಗೆ ನೋಟಿಸ್ ನೀಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನವೆಂಬರ್ 7 ರಂದು ಸಭೆ ನಡೆಸಿದ್ದರು. ಸಭೆಯ ನಿರ್ಣಯದ ಪ್ರಕಾರ ಇಂದು ಬೈಲಹೊಂಗ ಎಸಿ ಶಿವಾನಂದ ಭಜಂತ್ರಿ ನೇತೃತ್ವದಲ್ಲಿ ಒನ್ ಟೈಂ ಸೆಟ್ಲಮೆಂಟ್ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ನನ್ನ ವ್ಯಾಪ್ತಿ ಮೀರಿದ್ದು ಎಂದ ಬ್ಯಾಂಕ್ ಮ್ಯಾನೇಜರ್:
ಎಸಿ ಶಿವಾನಂದ ಭಜಂತ್ರಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ರಾಜುಕುಮಾರ್, ಸವದತ್ತಿ, ರಾಮದುರ್ಗ ಹಾಗೂ ಬೈಲಹೊಂಗಲ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. ಈ ವೇಳೆ 65 ರೈತರ ಬಾಕಿ ಹಣ ಬ್ಯಾಂಕಿಗೆ ಬರಬೇಕಾಗಿದೆ. ಅದರಲ್ಲಿ 42 ಮಂದಿ ರೈತರು ಸಾಲಮನ್ನಾ ವ್ಯಾಪ್ತಿಯಲ್ಲಿ ಬರುತ್ತಿದ್ದಾರೆ. ಇನ್ನುಳಿದ 23 ಜನ ರೈತರ ಸಾಲವನ್ನು ಒನ್ ಟೈಮ್ ಸೆಟ್ಲಮೆಂಟ್ ಮಾಡಿಕೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
Loading...

ಅಲ್ಲದೇ ಈ ವೇಳೆ ರೈತರು ಮೂಲ ಸಾಲದ ಮೊತ್ತ, ಜತೆಗೆ ಕಟ್ಟಿದ ಮೊತ್ತ ಎಷ್ಟು ಎಂಬುದರ ವಿವರ ನೀಡಬೇಕು ಎಂದು ಬ್ಯಾಂಕನ್ನು ಆಗ್ರಹಿಸಿ, ರೈತರು ಪಟ್ಟು ಹಿಡಿದರು. ಒಂದು ವೇಳೆ ಸಾಲಕ್ಕಿಂತ ಕಟ್ಟಿದ ಹಣ ಹೆಚ್ಚು ಆಗಿದ್ದರೆ ಋಣಮುಕ್ತ ಪ್ರಮಾಣ ಪತ್ರ ನೀಡಬೇಕು ಎಂಬುದು ಅವರ ವಾದವಾಗಿತ್ತು. ಆಗ ಈ ನಿರ್ಣಯ ಕೈಗೊಳ್ಳುವ ಅಧಿಕಾರ ನನಗೆ ಇಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ರಾಜಕುಮಾರ್ ಹೇಳಿದರು.

ಬ್ಯಾಂಕ್​ಗೆ ಖಡಕ್​ ವಾರ್ನಿಂಗ್:

ಬ್ಯಾಂಕ್ ಅಧಿಕಾರಿಗಳು ಹಾಗೂ ರೈತರ ನಡುವೆ ಒಮ್ಮತ ಬಾರದ ಕಾರಣ ಇಂದಿನ ಸಭೆ ವಿಫಲಗೊಂಡಿದೆ. ಅಲ್ಲದೇ ಈ ಬಗ್ಗೆ ಮತ್ತೆ ಡಿಸೆಂಬರ್ 10 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಮದ್ಯೆ, ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ್ ಎಂಬುವರನ್ನು ಬೈಲಹೊಂಗಲ ರೈತರು ಇಂದಿನ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಖಡಕ್ ವಾರ್ನಿಂಗ್ ಕೊಟ್ಟರು.

ಒಟ್ಟಾರೆಯಾಗಿ ರೈತರ ಮೇಲಿನ ಎಕ್ಸಿಸ್ ಬ್ಯಾಂಕ್ ದಬ್ಬಾಳಿಕೆ ಹೊರ ಬೀಳುತ್ತಿದೆ. ಇನ್ನೂ ಇಂದು ನಡೆದ ಒನ್ ಟೈಂ ಸೆಟ್ಲಮೆಂಟ್ ಸಭೆ ವಿಫಲಗೊಂಡಿದ್ದು, ಡಿ 10 ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ರೈತರ ಸಮಸ್ಯೆ ಪರಿಹಾರ ಸಿಗಲಿದೇ ಎಂದು ಕಾದು ನೋಡಬೇಕು.

ಇದನ್ನು ಓದಿ :  ಸರ್ಕಾರದ ಮೌಖಿಕ ಆದೇಶದ ನಂತರ ರೈತರ ಮೇಲಿನ 140 ಪ್ರಕರಣಗಳನ್ನು​ ವಾಪಸ್​ ಪಡೆಯಲು ನಿರ್ಧರಿಸಿದ ಆಕ್ಸಿಸ್​ ಬ್ಯಾಂಕ್



 

 
First published:November 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626