HOME » NEWS » State » ONE THING HE HAS FORGOTTEN TO SAY IS THAT LOOTING PUBLIC MONEY AND GOING TO JAIL IS THE ONLY ACHIEVEMENT OF LEADER OF SHIVAMOGGA SAYS SIDDARAMAIAH RHHSN

ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಮರೆತಿದ್ದಾರೆ; ಬಿಎಸ್​ವೈಗೆ ಸಿದ್ದರಾಮಯ್ಯ ತಿರುಗೇಟು

ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ನನಗೆ ಸೊಪ್ಪು ತಿನ್ನಬೇಕು ಅನಿಸಿದರೆ ಸೊಪ್ಪು ತಿನ್ನುತ್ತೇನೆ, ಮಾಂಸ ಬೇಕು ಅನಿಸಿದರೆ ಮಾಂಸ ತಿನ್ನುತ್ತೇನೆ. ನಾನೇನಾದರೂ ಯಡಿಯೂರಪ್ಪನಿಗೆ ಮಾಂಸ ತಿನ್ನು ಎಂದು ಒತ್ತಾಯ ಮಾಡಿದ್ದೇನಾ? ಹಾಗೇ ಅವರೂ ನನ್ನನ್ನು ಮಾಂಸ ತಿನ್ನಬೇಡ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

news18-kannada
Updated:January 13, 2021, 6:02 PM IST
ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಮರೆತಿದ್ದಾರೆ; ಬಿಎಸ್​ವೈಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ-ಯಡಿಯೂರಪ್ಪ.
  • Share this:
ಬೆಂಗಳೂರು; ಗೋ ಮಾಂಸ ತಿನ್ನುವ ವಿಷಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರಗೆ ತಿರುಗೇಟು ನೀಡಿದ್ದಾರೆ.  ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು @BSYBJP ಹೇಳಿದ್ದಾರೆ. ಆದರೆ ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೋಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಸಂಸ್ಕೃತಿ, ಆಹಾರ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು ಎಂದು ತಿಳಿ ಹೇಳಿದ್ದಾರೆ.

ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತ ಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಐದು ವರ್ಷ ಪೂರ್ತಿ ಮುಖ್ಯಮಂತ್ರಿಯಾಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು @BSYBJP ಹೇಳಿದ್ದಾರೆ. ಆದರೆ ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ. 6/6#Mysuru

ಇದನ್ನು ಓದಿ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 7 ಮಂದಿಯ ಬಗ್ಗೆ ಇಲ್ಲಿದೆ ಕಿರುಪರಿಚಯ!ಇನ್ನು ಮೈಸೂರಿನಲ್ಲೂ ಇದೇ ವಿಷಯವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಅವರು,  ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದರೆ, ನನಗೆ ತಿನ್ನಬೇಕು ಅನಿಸಿದರೆ ಖಂಡಿತ ತಿನ್ನುತ್ತೇನೆ. ಅದನ್ನು ಕೇಳೋಕೆ ಇವರ್ಯಾರು? ಆಹಾರ ನನ್ನ ಹಕ್ಕು. ಅದನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ. ಆದರೆ, ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೇನೆ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ, ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ನನಗೆ ಸೊಪ್ಪು ತಿನ್ನಬೇಕು ಅನಿಸಿದರೆ ಸೊಪ್ಪು ತಿನ್ನುತ್ತೇನೆ, ಮಾಂಸ ಬೇಕು ಅನಿಸಿದರೆ ಮಾಂಸ ತಿನ್ನುತ್ತೇನೆ. ನಾನೇನಾದರೂ ಯಡಿಯೂರಪ್ಪನಿಗೆ ಮಾಂಸ ತಿನ್ನು ಎಂದು ಒತ್ತಾಯ ಮಾಡಿದ್ದೇನಾ? ಹಾಗೇ ಅವರೂ ನನ್ನನ್ನು ಮಾಂಸ ತಿನ್ನಬೇಡ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
Published by: HR Ramesh
First published: January 13, 2021, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading