Bengaluru Crime: ವಾಟ್ಸಾಪ್​​ನಲ್ಲಿ ಬಾಸ್​ ಅಂತಾ ಸ್ಟೇಟಸ್ ಹಾಕದ್ದಕ್ಕೆ ಹೀಗಾ ಮಾಡೋದು?

ಬೆಂಗಳೂರಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕುವ ವಿಚಾರಕ್ಕೆ ಕಿರಿಕ್ ಆಗಿದೆ. ಗೆಳೆಯ ತನ್ನ ಸ್ಟೇಟಸ್​ನಲ್ಲಿ ಬಾಸ್​ ಅಂತಾ ಹಾಕದ್ದಕ್ಕೆ ಲಾಂಗ್ ಹಿಡಿದುಕೊಂಡು ಮನೆಬಳಿ ಬಂದು ಹಲ್ಲೆಗೆ ಮುಂದಾಗಿದ್ದಾನೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಸೋಷಿಯಲ್ ಮೀಡಿಯಾಗಳಿಂದಾಗಿ (Social Media) ಜನ ಈಗ ಬೇಗ ಕನೆಕ್ಟ್​ ಆಗಿಬಿಡ್ತಾರೆ. ವಾಟ್ಸಾಪ್, ಫೇಸ್​ಬುಕ್​​, ಟ್ವಿಟ್ಟರ್​ ಮೂಲಕ ಬೇಗ ಸಂಪರ್ಕ ಸಾಧಿಸ್ತಾರೆ. ಅದರಲ್ಲೂ ಈಗ ವಾಟ್ಸಾಪ್​​ನಲ್ಲಿ (WhatsApp) ಸ್ಟೇಟಸ್ (Status) ಹಾಕಿದ್ರೆ ಸಾಕು ಎಲ್ಲಾ ಸ್ನೇಹಿತರಿಗೆ (Friends) ಬೇಗನೇ ಮಾಹಿತಿ ಸಿಗುತ್ತೆ. ತನ್ನ ಸಂತೋಷ-ಸಂಭ್ರಮದ ಕ್ಷಣಗಳನ್ನು ಕೂಡ ವಾಟ್ಸಾಪ್ ಸ್ಟೇಟನ್​ನಲ್ಲಿ ಹಂಚಿಕೊಳ್ಳಬಹುದು. ಸ್ನೇಹಿತರ ಹುಟ್ಟುಹಬಕ್ಕೂ (Birthday) ಶುಭಕೋರಬಹುದು. ಆದ್ರೆ ಇಲ್ಲೊಬ್ಬ ವಾಟ್ಸಾಪ್ ಸ್ಟೇಟಸ್ ವಿಚಾರಕ್ಕೂ ಕಿರಿಕ್ ಮಾಡ್ಕೊಂಡಿದ್ದಾನೆ. ತನ್ನ ಗೆಳೆಯ ವಾಟ್ಸಾಪ್ ಸ್ಟೇಟಸ್​ನಲ್ಲಿ ತನಗೆ ಬಾಸ್​ (Boss) ಅಂತಾ ಹಾಕದ್ದಕ್ಕೆ ಮಚ್ಚು ಹಿಡಿದು ಹಲ್ಲೆ ಮಾಡಲು ಬಂದಿದ್ದಾನೆ. ಅಂದಹಾಗೇ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ.

ಬೆಂಗಳೂರಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕುವ ವಿಚಾರಕ್ಕೆ ಕಿರಿಕ್ ಆಗಿದೆ. ಗೆಳೆಯ ತನ್ನ ಸ್ಟೇಟಸ್​ನಲ್ಲಿ ಬಾಸ್​ ಅಂತಾ ಹಾಕದ್ದಕ್ಕೆ ಲಾಂಗ್ ಹಿಡಿದುಕೊಂಡು ಮನೆಬಳಿ ಬಂದಿದ್ದಾನೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ.

ವಾಟ್ಸಾಪ್ ಸ್ಟೇಟಸ್​ ಹಾಕಿಲ್ಲ ಅಂತಾ ಕಿರಿಕ್

ಜನ ಏನೇನು ವಿಚಾರಕ್ಕೆಲ್ಲಾ ಕಿಕ್ ಮಾಡ್ಕೋತಾರೆ ಅನ್ಸತ್ತೆ. ಬೆಂಗಳೂರಿನ ಬ್ಯಾಡರಹಳ್ಳಿಯ ಮಹದೇಶ್ವರ ನಗರದಲ್ಲಿ, ಸ್ಟೇಟಸ್ ಹಾಕಿಲ್ಲ ಅಂತ ಹುಡುಗರೆಲ್ಲಾ ಮಾರುದ್ದ ಮಚ್ಚು ಹಿಡಿದು ಬಂದಿದ್ದಾರೆ. ಯುವಕನ ಮನೆ ಬಳಿ ಬಂದು ಆತನ ಮೇಲೆ ಹುಡುಗರೆಲ್ಲಾ ಮಚ್ಚು ಬೀಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಐದಾರು ಜನರಿಂದ ಗ್ಯಾಂಗ್​ರೇಪ್? ಕೆಲಸ ಕೊಡಿಸೋದಾಗಿ ಹೇಳಿ ವೇಶ್ಯಾವಾಟಿಕೆಗೆ ನೂಕಿದ್ರು; ಮೂವರು ಅರೆಸ್ಟ್

ಮಚ್ಚು ಕಸಿದು ಮರು ದಾಳಿ ಮಾಡಿದ ಯುವಕನ ತಂದೆ!

ಯುವಕನ ಮೇಲೆ ದಾಳಿ ಮಾಡ್ತಿರೋವಾಗಲೇ ತಂದೆ ಓಡಿ ಬಂದಿದ್ದಾರೆ. ಮಗನ ಮೇಲೆ ಹಲ್ಲೆಗೆ ಬಂದವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬಳಿಕ ತಂದೆ ಹುಡುಗರ ಬಳಿಯಿದ್ದ ಮಚ್ಚನ್ನು ಕಸಿದು ಹುಡುಗರ ಮೇಲೆಯೇ ಮರುದಾಳಿ ಮಾಡಿದ್ದಾರೆ.

ಲಾಂಗ್ ಹಿಡಿದು ಬಂದವನೇ ಆಸ್ಪತ್ರೆ ಸೇರಿದ!

ಯುವಕನ ತಂದೆ ಮರು ದಾಳಿ ಮಾಡುತ್ತಲೇ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ದಾರೆ. ಕೊನೆಗೆ ಲಾಂಗ್ ಹಿಡಿದು ಬಂದ ಹುಡುಗನೇ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹುಡುಗನ ತಂದೆ ಕೊಟ್ಟ ಏಟಿಗೆ ಲಾಂಗ್ ತಂದವ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕ್ರಿಕೆಟ್ ಆಡುವಾಗ ಶುರುವಾದ ಜಗಳ ಮನೆಯವರೆಗೆ!

ಅಂದಹಾಗೇ ಈ ಜಗಳ ಕ್ರಿಕೆಟ್ ಆಡುವಾಗ ಶುರುವಾಗಿತ್ತು. ಕ್ರಿಕೆಟ್ ಆಡುವಾಗ ಶುರುವಾದ ಜಗಳ ಮನೆಯವರೆಗೆ ಬಂದಿತ್ತು. ಕ್ರಿಕೆಟ್​ ಆಡೋವಾಗ ವಾಟ್ಸಪ್ ಸ್ಟೇಟಸ್​​ನಲ್ಲಿ ಬಾಸ್ ಅಂತಾ ಹಾಕಿಕೊಳ್ಳಲು ಹುಡುಗ ಹೇಳಿದ್ದ. ಇದಕ್ಕೆ ಇಬ್ಬರು ಹುಡುಗರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಆ ಇಬ್ಬರು ಹುಡುಗರು ಲಾಂಗ್​ನೊಂದಿಗೆ ಮನೆ ಬಳಿ ಬಂದಿದ್ದರು.

ಮನೆ ಬಳಿ ಬಂದು ಹುಡುಗನ ಮೇಲೆ ದಾಳಿ ಮಾಡಿದಾಗ ತಂದೆ ಆನಂದ್​ ರಾಮ್, ಮಚ್ಚು ಕಸಿದು ಮರು ದಾಳಿ ಮಾಡಿದ್ದರು. ಘಟನೆಯಲ್ಲಿ ಓರ್ವ ಹುಡುಗನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗಸ್ಟ್ 14 ರಂದು ಮಹಾದೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದ್ದು ಎರಡೂ ಗುಂಪುಗಳ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಪರಿಚಯ ಅಂತ ಮನೆಗೆ ಬರ್ತಿದ್ದ, ಸ್ಪೈ ಕ್ಯಾಮೆರಾ ಇರಿಸಿ ನಗ್ನ ವಿಡಿಯೋ ರೆಕಾರ್ಡ್; ವಿಕೃತ ಕಾಮಿ ಅರೆಸ್ಟ್

ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್?

ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ. ಕೆಲಸ ಕೊಡಿಸುವುದಾಗಿ ಹೇಳಿ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತಂದು ದಂಧೆಗೆ ನೂಕಲಾಗಿತ್ತು. ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಿಯಕರನಿಂದಲೇ ವಂಚನೆ

ಸಂತ್ರಸ್ತೆಯನ್ನು ಪ್ರಿಯಕರನೇ ಬೆಂಗಳೂರಿಗೆ ಕರೆತಂದು ಮಂಜುಳಾ ಎಂಬಾಕೆಯ ಬಳಿ ಸಂಪರ್ಕಕ್ಕೆ ಬಿಟ್ಟಿದ್ದ. ಆದರೆ ಮಂಜುಳಾ ಯುವತಿಯನ್ನ ವೇಶ್ಯಾವಾಟಿಕೆ ದಂಧೆಗೆ ನೂಕಿದ್ಲು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮಂಡ್ಯ ಮೂಲದ ಯುವತಿ ಬೆಂಗಳೂರಿಗೆ ಬಂದಿದ್ದರು.

ದಂಧೆಗಾಗಿ ಹೊಟೇಲ್​ಗೆ ಕಳುಹಿಸುತ್ತಿದ್ದ ಆರೋಪಿಗಳು!

ದಂಧೆಗಾಗಿ ಆರೋಪಿಗಳು ಯುವತಿಯನ್ನು ಹೊಟೇಲ್​ಗೆ ಕಳುಹಿಸುತ್ತಿದ್ದರು. ಈ ವೇಳೆ ಐದಾರು ಮಂದಿ ಏಕಕಾಲಕ್ಕೆ ದೌರ್ಜನ್ಯ ಎಸಗಿರುವುದಾಗಿ ಯುವತಿ ಮಾಹಿತಿ ನೀಡಿದ್ದಾಳೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಪಿಂಪ್‌ ಸೇರಿ ಮೂವರ ಬಂಧನವಾಗಿದೆ. ಮಂಜುಳಾ, ಬ್ರಹ್ಮೇಂದ್ರ, ಶಿವಾನಂದ ಸರ್ಕಲ್ ಬಳಿ ಇರುವ ಸಾಯಿ ಲಾಡ್ಜ್ ಮಾಲೀಕ ಸಂತೋಷ್ ಬಂಧಿತರು.
Published by:Thara Kemmara
First published: