HOME » NEWS » State » ONE PARTY WORKERS DIVERTING THE CAA PRO ISSUE SAYS DCM ASHWATH NARAYANA RH

ಬಿಜೆಪಿ ಕಾರ್ಯಕರ್ತರು ಸಿಎಎ ಪರ ಜನಾಂದೋಲನ ಮಾಡುತ್ತಿದ್ದ ವಿಚಾರ ತಿರುಚಲಾಗುತ್ತಿದೆ; ಡಿಸಿಎಂ ಅಶ್ವತ್ಥನಾರಾಯಣ

ಒಂದು ಪಕ್ಷದ ರಾಜಕೀಯ ಕಾರ್ಯಕರ್ತರಿಗೆ ಪ್ರಶ್ನೆ ಮಾಡುವ ಹಕ್ಕು ಯಾರು ಕೊಟ್ಟಿದ್ದಾರೆ? ಇವರಿಗೆ ಕಾನೂನಿಂದ ಸಮಸ್ಯೆಯಾಗಿದ್ರೆ ಪೋಲೀಸರಿಗೆ ದೂರು ನೀಡಬೇಕಿತ್ತು. ಕಾರ್ಯಕರ್ತರನ್ನು ಬಂದು ಪ್ರಶ್ನೆ ಮಾಡುವಂಥದು ಏನಿತ್ತು? ಬಿಜೆಪಿ ಕಾರ್ಯಕರ್ತರು ಅಲ್ಲಿ ದೇಶದ್ರೋಹಿ ಕೆಲಸ ಮಾಡ್ತಾ ಇಲ್ಲ. ಇಷ್ಟು ಅಪಪ್ರಚಾರ ಮಾಡೋದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

HR Ramesh | news18-kannada
Updated:January 9, 2020, 3:36 PM IST
ಬಿಜೆಪಿ ಕಾರ್ಯಕರ್ತರು ಸಿಎಎ ಪರ ಜನಾಂದೋಲನ ಮಾಡುತ್ತಿದ್ದ ವಿಚಾರ ತಿರುಚಲಾಗುತ್ತಿದೆ; ಡಿಸಿಎಂ ಅಶ್ವತ್ಥನಾರಾಯಣ
ಡಿಸಿಎಂ ಅಶ್ವತ್ಥ್ ನಾರಾಯಣ.
  • Share this:
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಿಜೆಪಿ ಕಾರ್ಯಕರ್ತರು ಜ್ಯೋತಿ ನಿವಾಸ ಕಾಲೇಜು ವಿದ್ಯಾರ್ಥಿನಿಯರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಈ ಕ್ರಮವನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು,  ಜನಾಂದೋಲನ ಮಾಡುವುದನ್ನು ನಮ್ಮ ಕಾರ್ಯಕರ್ತರ ಕರ್ತವ್ಯ. ಆ ಕೆಲಸವನ್ನು ಅವರು ಮಾಡ್ತಾ ಇದ್ದಾರೆ. ಈ ವಿಚಾರವನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಕಾಲೇಜಿನ ಹೊರಗಡೆ ನಮ್ಮ ಕಾರ್ಯಕರ್ತರು ಜನಾಂದೋಲನ ಮಾಡುತ್ತಿದ್ದರು. ಆದರೆ, ಇದನ್ನು  ಬೇರೆ ರೀತಿಯೇ ತಿರುಚುತ್ತಾ ಇದ್ದಾರೆ. ಇದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನು ವಿರೋಧಿಸುವುದರಲ್ಲಿ ಏನಿದೆ? ಯಾಕೆ ವಿರೋಧ ಮಾಡ್ತಾ ಇದ್ದಾರೆ ಅನ್ನೋದು ಗೊತ್ತಿಲ್ಲ. ಇದು ದೇಶದ ಕಾನೂನು, ಇದನ್ನು ವಿರೋಧಿಸುವುದರಲ್ಲಿ ಏನಿದೆ? ಈ ದೇಶದ ಕಾನೂನು ಬಗ್ಗೆ ಜಾಗೃತಿ ಮೂಡಿಸುವುದು ಒಳ್ಳೆಯ ವಿಚಾರ. ಕಾಲೇಜಿನಲ್ಲಿ ಕೂಡ ಈ.ಬಗ್ಗೆ ಮಾಹಿತಿ ತಿಳಿಸಬೇಕು. ಕಾನೂನು ಏನು ಅಂತ ಪ್ರತಿಯೊಂದು ಕಾಲೇಜು ತಿಳಿಸಬೇಕು.  ಇಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿ ಇಂಥ ಮನೋಭಾವ ಬರುತ್ತೆ. ಕೆಲವೊಂದು ವಿದ್ಯಾರ್ಥಿಗಳಲ್ಲಿ ಮಾಹಿತಿ ಕೊರತೆ ಇದೆ. ಇನ್ನು ಕೆಲವು ಕಡೆ ಕಿಡಿಕೇಡಿಗಳು ತಪ್ಪು ಸಂದೇಶ ರವಾನೆ ಮಾಡ್ತಾ ಇದ್ದಾರೆ. ಹಾಗಾಗೀ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿಎಎ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಇದ್ದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಸಲಹೆ ನೀಡಿದರು.

ಒಂದು ಪಕ್ಷದ ರಾಜಕೀಯ ಕಾರ್ಯಕರ್ತರಿಗೆ ಪ್ರಶ್ನೆ ಮಾಡುವ ಹಕ್ಕು ಯಾರು ಕೊಟ್ಟಿದ್ದಾರೆ? ಇವರಿಗೆ ಕಾನೂನಿಂದ ಸಮಸ್ಯೆಯಾಗಿದ್ರೆ ಪೋಲೀಸರಿಗೆ ದೂರು ನೀಡಬೇಕಿತ್ತು. ಕಾರ್ಯಕರ್ತರನ್ನು ಬಂದು ಪ್ರಶ್ನೆ ಮಾಡುವಂಥದು ಏನಿತ್ತು? ಬಿಜೆಪಿ ಕಾರ್ಯಕರ್ತರು ಅಲ್ಲಿ ದೇಶದ್ರೋಹಿ ಕೆಲಸ ಮಾಡ್ತಾ ಇಲ್ಲ. ಇಷ್ಟು ಅಪಪ್ರಚಾರ ಮಾಡೋದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

ಇದನ್ನು ಓದಿ: ಬಿಜೆಪಿ ಕಾರ್ಯಕರ್ತರ ಧಮ್ಕಿ ಆಕ್ಷೇಪಿಸಿ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಏನಿದು ಗಲಾಟೆ?

ನಿನ್ನೆ ಜ್ಯೋತಿ ನಿವಾಸ ಮಹಿಳಾ ಕಾಲೇಜಿನ ಮುಂದೆ ಬಿಜೆಪಿ ಕಾರ್ಯಕರ್ತರು ಸಿಎಎ ಪರ ಸಹಿ ಸಂಗ್ರಹದ ಬ್ಯಾನರ್ ಹಾಕಿದ್ದಾರೆ. ಈ ವೇಳೆ ಕೆಲ ವಿದ್ಯಾರ್ಥಿನಿಯರು ಅಲ್ಲಿಗೆ ಹೋಗಿ, ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಕಾರ್ಯಕರ್ತರು ಸಿಎಎ ಪರವಾಗಿ ಸಹಿ ಸಂಗ್ರಹ ಮಾಡ್ತಿದ್ದೀವಿ ಅಂತ ತಿಳಿಸಿದ್ದಾಗ, ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿ, ಕಾಲೇಜಿನಲ್ಲಿ ಸಹಿ ಸಂಗ್ರಹ ಬೇಡ, ಇದು ಕಾಲೇಜು ಅಂತ ಹೇಳಿದ್ದಾಗ, ಕೆಲವು ಕಾರ್ಯಕರ್ತರು ವಿದ್ಯಾರ್ಥಿನಿಯರ ಮೇಲೆ ಜೋರಾಗಿ ಮಾತನಾಡಿದ್ದಾರೆ.  ಕಾಲೇಜಿನಲ್ಲಿ ರಾಜಕೀಯ ಬೇಡ ಎಂಬ ಆಗ್ರಹದೊಂದಿಗೆ ವಿದ್ಯಾರ್ಥಿನಿಯರು ಇಂದು ಮೌನ ಪ್ರತಿಭಟನೆ ಮಾಡಿದ್ದಾರೆ.
Published by: HR Ramesh
First published: January 9, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories