Bigg Boss OTT: ನಂದು ಇನ್ನೊಂದು ವಿಡಿಯೋ ಇದೆ; ಅದ್ಯಾವಾಗ ಬಿಡ್ತಾನೋ ಗೊತ್ತಿಲ್ಲ-ಸೋನು ಗೌಡ

ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಬಿಗ್​ ಬಾಸ್​ ಮನೆಯಲ್ಲಿ ಸೋನು ಗೌಡ ಕಣ್ಣೀರು ಹಾಕಿದ್ದಾರೆ.

ಸೋನು ಗೌಡ

ಸೋನು ಗೌಡ

  • Share this:
ಟಿಕ್​ ಟಾಕ್​ ಹಾಗೂ ರೀಲ್ಸ್​ ಮೂಲಕ ಫೇಮಸ್​ ಆಗಿರೋ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಈಗ ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ.  ಬಿಗ್​ ಬಾಸ್​ ಮನೆಯಲ್ಲಿ (Bigg Boss House) ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ. ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್​ ಆಗಿತ್ತು ಎಂಬುದು ಗೊತ್ತಿರುವ ವಿಚಾರ. ಆ ಬಗ್ಗೆ ಸ್ವತಃ ಸೋನು ಅವರೇ ಈಗ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ (Video) ಇದೆ. ಅದನ್ನು ಅವನ್ನು ಯಾವಾಗ ರಿಲೀಸ್ ಮಾಡ್ತಾನೋ ಗೊತ್ತಿಲ್ಲ ಅನ್ನೋ ಆತಂಕವನ್ನು ಸಹ ಸೋನು ಗೌಡ ಹೊರಹಾಕಿದ್ದಾರೆ. 


ನನ್ನ  ವಿಡಿಯೋ ರೆಕಾರ್ಡ್​ ಮಾಡಿ ಬ್ಲಾಕ್​ ಮೇಲ್​


ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ. ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ ಎಂದು ಸೋನುಗೌಡ ಹೇಳಿದ್ದಾರೆ.


ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ


ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಸೋನು ಗೌಡ ಕಣ್ಣೀರು ಹಾಕಿದ್ದಾರೆ.




ಇನ್ನೊಂದು ವಿಡಿಯೋ ಇದೆಯಂತೆ


ಇದೀಗ ಆ ವ್ಯಕ್ತಿಯ ಬಳಿ ಸೋನು ಅವರ ಇನ್ನೊಂದು ವಿಡಿಯೋ ಇದೆಯಂತೆ. ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ನನಗೆ ಮುಖ ತೋರಿಸೋಕೆ ಆಗ್ತಾ ಇಲ್ಲ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ.


ಹುಡುಗಿಯರು ನನ್ನ ರೀತಿ ಸ್ಟ್ರಾಂಗ್ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಅವನ ಬಳಿ ಇದ್ದಿದ್ದು ಎರಡು ವಿಡಿಯೋ. ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಸೋನು ಗೌಡ ಹೇಳಿದ್ದಾರೆ.




ನನ್ನಿಂದಾಗಿ ಅವರಿಗೆ ಲೈಕ್ಸ್​ 




ಬಿಗ್​ ಬಾಸ್​ ಶೋಗೆ ಬಂದ ಬಳಿಕ ಸೋನು ಅವರನ್ನು ಹೆಚ್ಚು ಟ್ರೋಲ್​ ಮಾಡಲಾಗುತ್ತಿದೆ. ಟ್ರೋಲರ್​ಗಳಿಂದ ನಾನು ಬೆಳೆದಿದ್ದೀನಿ ಅಂತ ಜನರು ಹೇಳ್ತಾರೆ. ಅದರೆ ಅದು ನಿಜವಲ್ಲ. ನನ್ನಿಂದಾಗಿ ಅವರು ಲೈಕ್ಸ್​ ಮತ್ತು ಫಾಲೋವರ್ಸ್​ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಸೋನು ಗೌಡ

ನಾನು ಸಿಗರೇಟ್ ಸೇದುತ್ತೇನೆ, ತಪ್ಪೇನು?

ಸೋನು ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್​ ಶೆಟ್ಟಿ ಕುಳಿತು ಮಾತನಾಡುವಾಗ, ವಾಯ್ಸ್​ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆ ಸಮಯದಲ್ಲಿ ಸೋನು ರೂಪೇಶ್​ ಅವರದ್ದು ಬೇಸ್​ ವಾಯ್ಸ್​, ನನ್ನದು ಮೊದಲು ಹಾಗೆ ಇತ್ತು ಸ್ಮೋಕ್​ ಮಾಡಿದ ಕಾರಣ ಹಾಳಾಯಿತು ಎಂದಿದ್ದಾರೆ. ಆಗ ನಟ ರೂಪೇಶ್​, ನಾನು ಸ್ಮೋಕ್ ಮಾಡಲ್ಲ, ಎಂದಿದ್ದಾರೆ. ಅದಕ್ಕೆ ಸೋನು, ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ ಎನ್ನುವ ಹೇಳಿಕೆ ಕೊಟ್ಟಿದ್ದಾರೆ.

Published by:Pavana HS
First published: