ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸೋಮಶೇಖರ್​ ರೆಡ್ಡಿ ವಿರುದ್ಧ ಮತ್ತೊಂದು ದೂರು ದಾಖಲು

ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಈ ಹಿಂದೆ ಕಾಂಗ್ರೆಸ್​ ನಾಯಕರು ಕೂಡ ಬೆಂಗಳೂರು ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದರು. 

news18-kannada
Updated:January 27, 2020, 5:23 PM IST
ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸೋಮಶೇಖರ್​ ರೆಡ್ಡಿ ವಿರುದ್ಧ ಮತ್ತೊಂದು ದೂರು ದಾಖಲು
ಶಾಸಕ ಸೋಮಶೇಖರ್ ರೆಡ್ಡಿ
  • Share this:
ರಾಯಚೂರು (ಜ.27): ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಎಚ್ಚರಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಾಗರಿಕ ಸಂವಿಧಾನ ಹಕ್ಕುಗಳ ಸಮಿತಿ ಸಂಚಾಲಕ ಆರ್​ ಮಾನಸಯ್ಯ ದೂರು ದಾಖಲಿಸಿದ್ದಾರೆ. 

ನಗರದ ಸದರ ಬಜಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ವಿರುದ್ಧ  ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಪಸಂಖ್ಯಾತರು ಹಾಗೂ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದ ಸೋಮಶೇಖರ್​ ರೆಡ್ಡಿ,  ದೇಶದಲ್ಲಿ ಶೇ 80ರಷ್ಟು ಹಿಂದೂಗಳಿದ್ದರೆ, ಅಲ್ಪಸಂಖ್ಯಾತರ ಸಂಖ್ಯೆ ಕೇವಲ 17 ರಷ್ಟು ಮಾತ್ರ. ಹಾಗಾಗಿ ಯಾವುದೇ ಹೆಜ್ಜೆ ಮುಂದಿಡುವ ಮುನ್ನ ಎಚ್ಚರಿಕೆಯಿಂದ ಇರಿ. ನಾವು ಅಧಿಕಾರಕ್ಕೆ ಬಂದು ಐದು ತಿಂಗಳು ಆಯಿತು. ನೀವು ಇನ್ನು ನಕರ ಮಾಡಿದಲ್ಲಿ ಏನಾಗಲಿದೆ ಎಂಬುದನ್ನು ನೆನಪಿನಲ್ಲಿಡಿ ಎಂದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್​ ನಾಯಕರು ಕೂಡ ಬೆಂಗಳೂರು ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

ಅಲ್ಲದೇ ನಾವು ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀವಿ ಎಂಬ ರೆಡ್ಡಿ ಸವಾಲನ್ನು ಸ್ವೀಕರಿಸಿದ ಜಮೀರ್​ ಅಹಮದ್​ ನಿಮ್ಮ ಮನೆ ಮುಂದೆ ಬರುತ್ತೇವೆ ಎಂದು ಪ್ರತಿಸವಾಲ್​ ಹಾಕಿದ್ದರು. ಕಾಂಗ್ರೆಸ್​ ನಾಯಕರು ನೀಡಿದ ಗಡುವಿನಲ್ಲಿ ರೆಡ್ಡಿಯನ್ನು ಬಂಧಿಸುವಲ್ಲಿ ವಿಫಲವಾದ ಹಿನ್ನೆಲೆ ಜಮೀರ್​ ಬಳ್ಳಾರಿ ಪ್ರವೇಶಿಸಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.

ಇದನ್ನು ಓದಿ: ಮಿ. ಸೋಮಶೇಖರ್​ ರೆಡ್ಡಿ, ನಾನು ಬಳ್ಳಾರಿಗೆ ಬರುತ್ತಿದ್ದೇನೆ, ಏನು ಮಾಡುತ್ತೀರಾ?; ಜಮೀರ್​ ಸವಾಲ್​​

ಈ ವೇಳೆ ಕಾಂಗ್ರೆಸ್​ ನಾಯಕ ಹಾಗೂ ಕಾರ್ಯಕರ್ತನನ್ನು ಬಳ್ಳಾರಿ ಪೊಲೀಸರು ತಡೆದಿದ್ದರು. ರೆಡ್ಡಿ ಒಬ್ಬ ಹೇಡಿ. ಆತ ಕರ್ನಾಟಕದವನೇ ಅಲ್ಲ. ಅವನು ಆಂಧ್ರದವನು.  2013ರ ಚುನಾವಣೆಯಲ್ಲಿ ಸೋಲುವ ಭಯದಿಂದ ನಿಲ್ಲಲ್ಲೇ ಇಲ್ಲ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
First published:January 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ