ನಗರದಲ್ಲಿ ಮತ್ತೊಂದು BMTC ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ

ಈ ಹಿಂದೆ ಎರಡು ಮಿಡಿ ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈಗ ಮತ್ತೊಂದು ಮಿಡಿ ಅಶೋಕ್ ಲೇಲ್ಯಾಂಡ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಗೆ ಆಹುತಿಯಾದ ಬಸ್​​

ಬೆಂಕಿಗೆ ಆಹುತಿಯಾದ ಬಸ್​​

 • Share this:
  ಬೆಂಗಳೂರು (ಏ. 9): ನಗರದಲ್ಲಿ ಮತ್ತೊಂದು ಬಿಎಂಟಿಸಿ ಬಸ್ (BMTC Bus)​ ನಡು ರಸ್ತೆಯಲ್ಲಿ ಬೆಂಕಿಗೆ (Fire) ಆಹುತಿಯಾಗಿದೆ. ನಗರದ ಕೆಆರ್​ ಸರ್ಕಲ್ (KR Circle​) ಬಳಿ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯವಾಗಿಲ್ಲ. ಶಾರ್ಟ್​ ಸರ್ಕ್ಯೂಟ್(Short circuit)​​ನಿಂದಾಗಿ ಬಸ್​ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಬಸ್​ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲು ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

  ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಎಚ್ಚೆತ್ತ ಸಿಬ್ಬಂದಿ

  ಬೆಂಕಿಗೆ ಆಹುತಿಯಾದ ಬಸ್​ ಡಿಪೋ - 20 ಬನಶಂಕರಿ ಡಿಪೋ ಗಾಡಿ ಎಂದು ತಿಳಿದು ಬಂದಿದೆ. KA- -57F- 1447 ಬಸ್ ನಂಬರಿನ ಬಿಎಂಟಿಸಿ ಬಸ್​​​​ ಮೆಜೆಸ್ಟಿಕ್​ನಿಂದ ಹೊಸಕೆರೆ ಹಳ್ಳಿ ವಿದ್ಯಾನಗರದ ಕಡೆ ಹೊರಟ್ಟಿತ್ತು. ಈ ವೇಳೆ ಬಸ್​ನ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣಕ್ಕೆ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಬಸ್​ನಿಂದ ಕೆಳಗೆ ಇಳಿದಿದ್ದು, ಸದ್ಯ ಯಾರಿಗೂ ಯಾವುದೇ ಪ್ರಾಣ ಪಾಯ ಸಂಭವಿಸಿಲ್ಲ.

  ಅಶೋಕ್ ಲೇಲ್ಯಾಂಡ್ ಬಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ
  ಇನ್ನು ಕಳೆದ ಹಲವು ದಿನಗಳಿಂದ ಒಂದರ ಮೇಲೆ ಒಂದರಂತೆ ಅನೇಕ ಬಿಎಂಟಿಸಿ ಬಸ್​ಗೆಳು ಬೆಂಕಿಗೆ ಆಹುತಿ ಆಗಿದೆ. ಈ ಹಿಂದೆ ಎರಡು ಮಿಡಿ ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈಗ ಮತ್ತೊಂದು ಮಿಡಿ ಅಶೋಕ್ ಲೇಲ್ಯಾಂಡ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

  ಇದನ್ನು ಓದಿ:  Nadini Milk : ನಂದಿನ ಹಾಲಿನ ಪ್ಯಾಕೇಟ್ ಮೇಲಿಂದ ಕನ್ನಡ ಮಾಯ..! ಏನಿದರ ಸತ್ಯಾಸತ್ಯತೆ?

  ಸುದ್ದಿ ತಿಳಿದು ತಕ್ಷಣಕ್ಕೆ ಬಿಎಂಟಿಸಿ ಅಧಿಕಾರಿಗಳು ಆಗಮಿಸಿದ್ದು, ಘಟನೆಗೆ ಕಾರಣ ಏನು ಎಂಬುದರ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾಲು ಸಾಲು ಬಸ್​ಗಳು ಈ ರೀತಿ ಬೆಂಕಿಗೆ ಆಹುತಿಯಾಗಲು ವಿನ್ಯಾಸ ದೋಷ ಕೂಡ ಕಾರಣವಾಗಿದೆ ಎಂದು ಈ ಹಿಂದೆ ನಡೆದ ಘಟನೆ ತನಿಖೆಯಲ್ಲಿ ತಿಳಿದು ಬಂದಿತ್ತು. ಸದ್ಯ ಅಶೋಕ್ ಲೈಲೆಂಡ್ ಕಂಪನಿಯ ಸುಮಾರು 189 ಬಸ್ ಗಳು ಬಿಎಂಟಿಸಿಯಲ್ಲಿವೆ. 9 ಮೀಟರ್ ಉದ್ದದ ಮಿನಿ ಬಸ್ ನಲ್ಲಿ ಈ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು.

  ವಿನ್ಯಾಸ ದೋಷವೇ ಕಾರಣ
  ಬಸ್ ನ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರೋದು ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಸ್ಟಾರ್ಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ತಕ್ಷಣವೇ ಡಿಸೇಲ್ ಪೈಪ್ ಗೆ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ದೊಡ್ಡ ಬಸ್ ಗಳಲ್ಲಿ ಪ್ರತ್ಯೇಕವಾಗಿ ಕೇಬಲ್ ಗಳು ಇರಲಿವೆ. ಮಿನಿ ಬಸ್ ಆಗಿರೋದ್ರಿಂದ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇಡಲಾಗಿದೆ. ಈ ವಿನ್ಯಾಸ ದೋಷವೇ ಬೆಂಕಿ ಹತ್ತಿಕೊಳ್ಳಲು ಕಾರಣ.

  ಇದನ್ನು ಓದಿ: ಶೌಚಾಲಯ ಇದ್ದರೂ ಜನಕ್ಕೆ ಬಯಲಿಗೆ ಹೋಗೋದೇ ಆನಂದ.. ಏಕೆ ಅಂತ ಗೊತ್ತಿಲ್ಲ: ಸಚಿವ KS Eshwarappa ವ್ಯಂಗ್ಯ

  ಸಾಲು ಸಾಲು ಬಸ್ ಗಳು ಬೆಂಕಿಗೆ ಆಹುತಿ ಆಗುತ್ತಿರೋದರಿಂದ ಬಿಎಂಟಿಸಿ ತಾಂತ್ರಿಕ ವಿಭಾಗ ಎಚ್ಚೆತ್ತುಕೊಂಡಿದೆ. ಇದೀಗ ವಿನ್ಯಾಸ ಬದಲಾವಣೆ ಬಿಎಂಟಿಸಿ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ತನ್ನ ಬಳಿಯಲ್ಲಿರುವ 189 ಮಿನಿ ಬಸ್ ಗಳಲ್ಲೂ ವಿನ್ಯಾಸ ಬದಲಾವಣೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.

  ಜನವರಿ, ಫೆಬ್ರವರಿಯಲ್ಲೂ ಬೆಂಕಿಗೆ ಆಹುತಿಯಾಗಿದ್ದ ಬಸ್​

  ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಸರ್ಕಲ್ ಬಳಿ, ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಎರಡು ಬಿಎಂಟಿಸಿ ಬಸ್​​ ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿದ್ದವು. ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನಡುರಸ್ತೆಯಲ್ಲೇ ಬಸ್ಸುಗಳು ಹೊತ್ತಿ ಉರಿದಿದ್ದವು.
  Published by:Seema R
  First published: