ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಬಂಧನ

ಇನ್ನು, ಸಿಸಿಬಿ ಮತ್ತು ಡಿ.ಜೆ ಹಳ್ಳಿ ಪೊಲೀಸರು ಪ್ರತೀದಿನ ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಡಿ.ಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನ ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಇದುವರೆಗೂ 300ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ.

news18-kannada
Updated:August 17, 2020, 8:39 AM IST
ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಬಂಧನ
ಬಂಧಿತ ಆರೋಪಿ ವಾಜೀದ್​ ಪಾಷಾ
  • Share this:
ಬೆಂಗಳೂರು(ಆ.17): ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೋರ್ವ ಪ್ರಮುಖ ಆರೋಪಿ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ. ವಾಜಿದ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೆಡಿಎಸ್​​ನಲ್ಲಿ ಗುರುತಿಸಿಕೊಂಡಿದ್ದ ವಾಜೀದ್​​​ನನ್ನು ಸಿಸಿಬಿ ಪೊಲೀಸರು ಭಾನುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆ ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿ ವಾಜಿದ್ ಪಾಷಾ ಕೆಲವು ದಿನಗಳ ಹಿಂದೆಯಷ್ಟೇ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಾಕಿದ್ದ. ಬಳಿಕ ಈ ಪೋಸ್ಟ್​ ಸಂಬಂಧ ಅಖಂಡ ಶ್ರೀನಿವಾಸ ಮೂರ್ತಿ ಬೆಂಬಲಿಗರು ವಾಜೀದ್​​ ವಿರುದ್ಧ ಪೊಲೀಸ್​​ ಠಾಣಾ ಮೆಟ್ಟಿಲೇರಿದ್ದರು. ದೂರು ಬಂದ ನಂತರ ಪೊಲೀಸರು ಎರಡು ಕಡೆಯವರಿಗೂ ಬುದ್ದಿ ಹೇಳಿ ಕಳಿಸಿದ್ದರು.

ಇತ್ತೀಚೆಗೆ ಡಿ.ಜೆ ಹಳ್ಳಿ ಗಲಭೆಗೂ ಮುನ್ನ ವಾಜೀದ್​​​ ನವೀನ್ ವಿರುದ್ಧ ದೂರು ನೀಡಿದ್ದ ಗುಂಪಿನಲ್ಲಿಯೂ ಇದ್ದ. ಆಗ ಪೊಲೀಸರು ನಮ್ಮನ್ನಾದರೇ ಐದು ಸೆಕೆಂಡಿನಲ್ಲಿ ಅರೆಸ್ಟ್​ ಮಾಡುತ್ತೀರಿ. ನವೀನ್ ಅರೆಸ್ಟ್ ಮಾಡಲು ಪೊಲೀಸರು ಮಾತ್ರ ಎರಡು ಗಂಟೆ ಕಾಲ ಸಮಯ ಕೇಳುತ್ತಿದ್ದೀರಿ. ಎರಡು ಗಂಟೆಗಳ ಸಮಯ ಯಾಕೆ ಬೇಕು ಎಂದು ಪೊಲೀಸರ ವಿರುದ್ಧ ವಾಜಿದ್ ಕೂಗಾಡಿದ್ದ ಎನ್ನಲಾಗಿದೆ.

ಇನ್ನು, ಸಿಸಿಬಿ ಮತ್ತು ಡಿ.ಜೆ ಹಳ್ಳಿ ಪೊಲೀಸರು ಪ್ರತೀದಿನ ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಡಿ.ಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನ ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಇದುವರೆಗೂ 300ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ.

ಇದನ್ನೂ ಓದಿ: ಎಸ್​​ಡಿಪಿಐ ಕಚೇರಿ ಮೇಲೆ ಸಿಸಿಬಿ ಪೊಲೀಸರ ದಾಳಿ - ಕಬ್ಬಿಣದ ರಾಡ್​​, ಬ್ಯಾಟ್​​ಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗಳು

ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಕುಲ್ದೀಪ್ ಕುಮಾರ್ ಜೈನ್, ಡಿಸಿಪಿ ರವಿಕುಮಾರ್ ನೇತ್ರತ್ವದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ನೂರು ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡದಿಂದ ಅರೋಪಿಗಳ ರೌಂಡಪ್ ಮಾಡಿ ಬಂಧಿಸಲಾಗುತ್ತಿದೆ.
Published by: Ganesh Nachikethu
First published: August 17, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading