High Court ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಇನ್ನೋರ್ವ ಅರೆಸ್ಟ್! ಈ ಬಗ್ಗೆ ಗೃಹಸಚಿವರು ಹೇಳಿದ್ದೇನು?

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಕೇಸ್‌ನಲ್ಲಿ ಮತ್ತೋರ್ವನ ಬಂಧನವಾಗಿದೆ. ಈಗಾಗಲೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು, ಹಾಗಿದ್ರೆ ಈಗ ಬಂಧಿಸಲ್ಪಟ್ಟ ಆರೋಪಿ ಯಾರು? ಎಲ್ಲಿಯವನು? ಈ ಬಗ್ಗೆ ಮಾಹಿತಿ ಇಲ್ಲಿದೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಜಾಬ್ ವಿವಾದದ (Hijab Controversy) ಕೇಸ್‌ನ (Case) ತೀರ್ಪು (Judgment) ನೀಡಿದ್ದ ಕರ್ನಾಟಕ ಹೈಕೋರ್ಟ್‌ನ (Karnataka High Court) ನ್ಯಾಯಮೂರ್ತಿಗಳಿಗೆ (Judges) ಅಪರಿಚಿತರು (Strangers) ಜೀವ ಬೆದರಿಕೆ (Life threatening) ಹಾಕಿದ್ದರು. ಇದೇ ದೇಶದೆಲ್ಲೆಡೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಅಪರಿಚಿತ ವ್ಯಕ್ತಿಗಳು ವಾಟ್ಸಾಫ್ ವೀಡಿಯೋದಲ್ಲಿ (WhatsApp Video) ನ್ಯಾಯಮೂರ್ತಿಗಳನ್ನ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ವಕೀಲೆ ಸುಧಾಕಾಟ್ವ ಎಂಬವರು ಬೆಂಗಳೂರಿನ (Bengaluru) ವಿಧಾನಸೌಧ ಪೊಲೀಸ್ ಠಾಣೆಗೆ (Vidhana soudha Police Station) ದೂರು ನೀಡಿದ್ದರು. ಇತ್ತ ಇದನ್ನು ರಾಜ್ಯ ಸರ್ಕಾರ ಸಹ ಗಂಭೀರವಾಗಿ ಪರಿಗಣಿಸಿತ್ತು. ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ʼವೈʼ ಭದ್ರತೆಯನ್ನು ಶ್ರೇಣಿಯ (Y Category Security) ರಾಜ್ಯ ಸರ್ಕಾರ ನೀಡಿತ್ತು. ಈ ಕೇಸ್‌ನಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.

 ತಂಜಾವೂರಿನಲ್ಲಿ ಮತ್ತೋರ್ವ ಆರೋಪಿ ಅರೆಸ್ಟ್

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದ ಕೇಸ್‌ನಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದೆ. ಇದರೊಂದಿಗೆ ಇದೇ ಕೇಸ್‌ನಲ್ಲಿ ಮೂವರ್ನನು ಬಂಧಿಸಿದಂತೆ ಆಗಿದೆ. ಇದೀಗ ತಮಿಳುನಾಡಿನ ತಂಜಾವೂರಿನಲ್ಲಿ 40 ವರ್ಷದ ಜಮಲ್ ಉಸ್ಮಾಲ್ ಎಂಬಾತನನ್ನು ಬೆಂಗಳೂರು ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೈಕೋರ್ಟ್‌ ತೀರ್ಪಿನಲ್ಲಿ ಏನು ಹೇಳಲಾಗಿತ್ತು?

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್‌ ಕುರಿತಂತೆ ಹೈಕೋರ್ಟ್ ತೀರ್ಪು ಪ್ರಕಟಿಸಿತ್ತು. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ  ಮಹತ್ವದ ತೀರ್ಪು ನೀಡಿತ್ತು. ಕುರಾನ್​​ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯಪಡಿಸಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಹಿಜಾಬ್ ಬಗ್ಗೆ ಕುರಾನ್​​ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಅಂತ ಹೈಕೋರ್ಟ್ ಹೇಳಿತ್ತು. ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿ ತೀರ್ಪು ಪ್ರಕಟಿಸಿತ್ತು.

ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಎಂಟ್ರಿ ಇಲ್ಲ: ಸರ್ಕಾರದ ಸ್ಪಷ್ಟನೆ; ಬಿಕಾಂ ಎಕ್ಸಾಂಗೆ ಮುಸ್ಕಾನ್ ಗೈರು

ಯಾರಿಗೆ ಬಂದಿತ್ತು ಜೀವ ಬೆದರಿಕೆ?

ಕಳೆದ ವಾರವಷ್ಟೇ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನೆಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ವಿಶೇಷ ಪೀಠ ಹಿಜಾಬ್ ವಿವಾದ ಕುರಿತಂತೆ ತೀರ್ಪು ನೀಡಿದ್ದರು. ಇದೇ ಕಾರಣಕ್ಕೆ ಅಪರಿಚಿತರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದರು.

ಕಳೆದ ವಾರ ಇಬ್ಬರು ಆರೋಪಿಗಳ ಬಂಧನ

ಇದೇ ಮಾರ್ಚ್ 21ರಂದು ಇದೇ ಕೇಸ್‌ಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.  ಕೋವೈ ರಹಮತುಲ್ಲಾ ಹಾಗೂ ಎಸ್. ದಮಾಲ್ ಮೊಹಮ್ಮದ್ ಉಸ್ಮಾನಿ ಎಂಬುವರನ್ನು ಬಂಧಿಸಲಾಗಿತ್ತು. ಕೋವೈ ರಹಮತುಲ್ಲಾನನ್ನು ತಿರುನಲ್ವೇಲಿಯಿಂದ ಬಂಧಿಸಿದರೆ, ಎಸ್. ಜಮಾಲ್ ಮೊಹಮ್ಮದ್ ಉಸ್ಮಾನಿಯನ್ನು ತಂಜಾವೂರಿನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

ಬಂಧಿತ ಆರೋಪಿಗಳ ಹಿನ್ನೆಲೆ ಏನು?

ಇಬ್ಬರೂ ಆರೋಪಿಗಳು ಇಸ್ಲಾಮಿಕ್ ಧಾರ್ಮಿಕ ಸಂಘಟನೆಯಾದ ತಮಿಳುನಾಡು ತೌಹೀದ್ ಜಮಾತ್ (ಟಿಎನ್‌ಟಿಜೆ) ಸದಸ್ಯರಾಗಿದ್ದಾರೆ. ಆದರೆ ಈಗ ಬಂಧಿಸಲ್ಪಟ್ಟಿರುವ ವ್ಯಕ್ತಿಯ ಹಿನ್ನೆಲೆ ಇನ್ನೂ ತಿಳಿದು ಬಂದಿಲ್ಲ. ಇದೀಗ ಬಂಧಿತ ಮೂವರ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಗಂಡನ ವಿರುದ್ಧವೇ ಅತ್ಯಾಚಾರದ Case ಹಾಕಿದ ಪತ್ನಿ! ತೀರ್ಪಿನಲ್ಲಿ High Court ಹೇಳಿದ್ದೇನು?

ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ

ಇನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಮತ್ತೋರ್ವನನ್ನು ಅರೆಸ್ಟ್ ಮಾಡಿರುವ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹಿಜಾಬ್ ಕುರಿತ ದಾವೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆಯೊಡ್ಡಿದ, ಅಪಾದನೆ ಎದುರಿಸುತ್ತಿರುವ ಮತ್ತೊಬ್ಬ ಆಪಾದಿತನನ್ನು, ಬೆಂಗಳೂರು ನಗರ ಪೊಲೀಸರು, ಇಂದು ಮುಂಜಾನೆ, ತಮಿಳು ನಾಡು ರಾಜ್ಯದಿಂದ ಬಂಧಿಸಿ ಕರೆ ತಂದಿದ್ದು, ಅಪಾದಿತನನ್ನು ಎಂಟು ದಿನಗಳ ಕಾಲ, ಪೊಲೀಸ್ ಕಸ್ಟಡಿ ಗೆ, ತೆಗೆದುಕೊಳ್ಳ ಲಾಗಿದೆ. ಅಂತ ಗೃಹಸಚಿವರು ತಿಳಿಸಿದ್ದಾರೆ.
Published by:Annappa Achari
First published: