ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112; ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ

ಈ ಆ್ಯಪ್  ನಲ್ಲಿ ನಿಮ್ಮ ವಿಳಾಸ ಮತ್ತು ಸಂಬಂಧಿಕರು ಮತ್ತು ಸ್ನೇಹಿತರ  ಮೊಬೈಲ್  ನಂಬರ್  ದಾಖಲು ಮಾಡಬೇಕು.  ಒಂದು  ವೇಳೆ  ನೀವು ಅಪಾಯಕ್ಕೆ  ಸಿಲುಕಿದ್ದಾಗ ತಕ್ಷಣವೇ ಆಪ್  ಓಪನ್ ಮಾಡಿ 112 ಗೆ ಕರೆ  ಮಾಡಿದಾಗ ಕೇಂದ್ರ  ಕಂಟ್ರೋಲ್  ರೂಮಿಗೆ  ಕರೆ ಹೋಗುತ್ತದೆ.

news18-kannada
Updated:October 31, 2020, 10:14 AM IST
ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112; ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಅ.31): ಒಂದೇ ಭಾರತ ಒಂದೇ ತುರ್ತು  ಕರೆ  ಸಂಖ್ಯೆ  112 ಅನ್ನು  ಕೇಂದ್ರ  ಸರ್ಕಾರ  ಜಾರಿಗೊಳಿಸಿದೆ. ಈ ಹಿಂದೆ ತುರ್ತು ಸಮಯದಲ್ಲಿ  ಪೊಲೀಸ್  ಇಲಾಖೆ, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್​ ಸೇವೆ ಗೆ ವಿವಿಧ ಬೇರೆ ಬೇರೆ  ನಂಬರ್​​ ಗೆ ಕರೆ ಮಾಡಬೇಕಿತ್ತು. ಇದರಿಂದ  ಸಾರ್ವಜನಿಕರು ಸಹ ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಎಲ್ಲಾ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ  112 ಆಗಿ ಬದಲಾಯಿಸಲಾಗಿದೆ. ತುರ್ತು  ಸೇವೆಗಳನ್ನು ಪಡೆಯಲು  ಈ ಹಿಂದೆ ವ್ಯಕ್ತಿ ಆ್ಯಂಬುಲೆನ್ಸ್ , ಅಗ್ನಿಶಾಮಕ  ಮತ್ತು ಪೊಲೀಸ್  ಇಲಾಖೆಗೆ ಬೇರೆ ಬೇರೆ ನಂಬರ್ ಗೆ ಕರೆ ಮಾಡಬೇಕಿತ್ತು. ಈ ಬಗ್ಗೆ  ಸಾರ್ವಜನಿಕರಲ್ಲಿ ಸಾಕಷ್ಟು  ಗೊಂದಲ ಇತ್ತು.  ಈ ಗೊಂದಲಗಳಿಗೆ  ಪರಿಹಾರ ಕಂಡುಹಿಡಿಯುವ  ಉದ್ದೇಶದಿಂದ  ಕೇಂದ್ರ  ಸರ್ಕಾರದ  ಒಂದೇ ಭಾರತ ಒಂದೇ ತುರ್ತು  ಕರೆ  112 ಜಾರಿ ಮಾಡಿದೆ. ಕರ್ನಾಟಕದಲ್ಲಿ   ಪ್ರಾಯೋಗಿಕವಾಗಿ  5 ಜಿಲ್ಲೆಗಳಲ್ಲಿ  112 ತುರ್ತು ಕರೆ ವ್ಯವಸ್ಥೆ  ಜಾರಿ ಮಾಡಲಾಗಿದ್ದು, ಬೆಂಗಳೂರು  ಗ್ರಾಮಾಂತರ  ಜಿಲ್ಲೆ ಸಹ ಈ ವ್ಯವಸ್ಥೆಗೆ ಸೇರ್ಪಡೆಗೊಂಡಿದೆ. 

ತುರ್ತು  ಸಮಯದಲ್ಲಿ  ತೊಂದರೆಗೊಳಗಾದ ವ್ಯಕ್ತಿಯನ್ನ   ಮೊದಲು ಸಂಪರ್ಕಿಸುವುದು ಪೊಲೀಸ್  ಸಿಬ್ಬಂದಿ. ಅಪಘಾತ ಇರಲಿ,  ಅಪರಾಧವಾಗಿರಲಿ ಮತ್ತು ವಿಪತ್ತು ಆಗಿರಲಿ ಆ ಸ್ಥಳಕ್ಕೆ  ಮೊದಲು ತಲುಪುದು  ಪೊಲೀಸ್  ಇಲಾಖೆ.  ತೊಂದರೆಗೊಳಗಾದ ವ್ಯಕ್ತಿಗೆ ತಕ್ಷಣಕ್ಕೆ ಬೇಕಾದ ನೆರವು  ನೀಡಿ ಆತನ ರಕ್ಷಣೆ ಮಾಡುತ್ತೆ, ಈ ಕಾರಣದಿಂದ  ಪೊಲೀಸ್  ಇಲಾಖೆ 112  ತುರ್ತು ಕರೆಯ ಪೋರ್ಟಲ್  ವ್ಯವಸ್ಥೆ ಜಾರಿಗೆ ತರುತ್ತಿದೆ. 112 ಆ್ಯಪ್ ಅನ್ನು  ಸಹ ಬಿಡುಗಡೆ ಮಾಡಿದೆ.  ಸ್ಮಾರ್ಟ್ ಫೋನ್​​ನಲ್ಲಿ  ಈ ಆ್ಯಪ್​​​ ಅನ್ನು  ಡೌನ್ ಲೋಡ್  ಮಾಡಿಕೊಳ್ಳಬಹುದು.

ಮಾಜಿ ಡಿಸಿಎಂ ಪರಮೇಶ್ವರ್ ಅಣ್ಣನ ಮಗಳೆಂದು ನಾಟಕ; ಲೋನ್ ಕೊಡಿಸುವುದಾಗಿ ಹಲವರಿಗೆ ವಂಚಿಸಿದ ಯುವತಿ

ಈ ಆ್ಯಪ್  ನಲ್ಲಿ ನಿಮ್ಮ ವಿಳಾಸ ಮತ್ತು ಸಂಬಂಧಿಕರು ಮತ್ತು ಸ್ನೇಹಿತರ  ಮೊಬೈಲ್  ನಂಬರ್  ದಾಖಲು ಮಾಡಬೇಕು.  ಒಂದು  ವೇಳೆ  ನೀವು ಅಪಾಯಕ್ಕೆ  ಸಿಲುಕಿದ್ದಾಗ ತಕ್ಷಣವೇ ಆಪ್  ಓಪನ್ ಮಾಡಿ 112 ಗೆ ಕರೆ  ಮಾಡಿದಾಗ ಕೇಂದ್ರ  ಕಂಟ್ರೋಲ್  ರೂಮಿಗೆ  ಕರೆ ಹೋಗುತ್ತದೆ. ನೀವು ಕರೆ ಮಾಡಿದ ತಕ್ಷಣವೇ ನಿಮ್ಮ  ಲೋಕೇಷನ್  ಸಹ ಕಂಟ್ರೋಲ್  ರೂಂಗೆ ಹೋಗುತ್ತದೆ. ಮೂರು ಸ್ಟೇಷನ್​​ ಗೆ ಒಂದು ಎಮರ್ಜೆನ್ಸಿ ವೆಹಿಕಲ್ ಇಡಲಾಗಿದ್ದು, ನೀವಿರುವ ಸ್ಥಳದ ಸಮೀಪದಲ್ಲಿನ ಎಮೆರ್ಜೆನ್ಸಿ  ವೆಹಿಕಲ್ ನಿಮ್ಮ  ಬಳಿಗೆ ಬರುತ್ತದೆ.  ನಿಮಗೆ ಅಗತ್ಯವಾದ ನೆರವು  ಕೊಟ್ಟು  ನಿಮ್ಮ  ರಕ್ಷಣೆ  ಕಾರ್ಯ  ಮಾಡುತ್ತದೆ.

ತೊಂದರೆಗೊಳಗಾದ  ವ್ಯಕ್ತಿ  112 ಗೆ ಕರೆ ಮಾಡಿದ್ದಾಗ ಅಪಘಾತವಾಗಿದ್ದಲ್ಲಿ ಆಸ್ಪತ್ರೆಗೆ ಕರೆಯನ್ನು ವರ್ಗಾವಣೆ ಮಾಡುತ್ತೆ. ಅಪರಾಧವಾಗಿದ್ದಲ್ಲಿ ಪೊಲೀಸ್  ಇಲಾಖೆಗೆ ಮತ್ತು ವಿಪತ್ತು ಆಗಿದ್ದಲ್ಲಿ ಅಗ್ನಿಶಾಮಕ ದಳಕ್ಕೆ ನಿಮ್ಮ  ಕರೆಯನ್ನು ವರ್ಗಾವಣೆ ಮಾಡುತ್ತದೆ. ಇದರಿಂದ ತುರ್ತು  ಸಮಯದಲ್ಲಿ  ನಿಮಗೆ ಅಗತ್ಯವಾದ  ನೆರವು  ನೀಡುವುದು ಜೊತೆಗೆ ನಿಮ್ಮ  ರಕ್ಷಣೆಯ ಕಾರ್ಯವನ್ನು ಮಾಡುತ್ತದೆ.

ಪ್ಯಾನಿಕ್ ಅಲರ್ಟ್ ಗಾಗಿ  ಸಾಮಾನ್ಯ  ಮೊಬೈಲ್  ನಲ್ಲಿ 5 ಮತ್ತು 9 ಸಂಖ್ಯೆಯನ್ನು ಲಾಂಗ್  ಪ್ರೆಸ್ ಮಾಡಬೇಕು. ಸ್ಮಾರ್ಟ್  ಪೋನ್ ಆಗಿದ್ದಲ್ಲಿ  ಪವರ್ ಬಟನ್ ಅನ್ನು  ವೇಗವಾಗಿ 3 ರಿಂದ 5 ಬಾರಿ ಒತ್ತಿದ್ದರೆ ನೀವು  ಅಪಾಯದಲ್ಲಿರುವ ಮಾಹಿತಿ ಕಂಟ್ರೋಲ್  ರೂಂಗೆ ಹೊಗುತ್ತದೆ. ತಕ್ಷಣವೇ ನಿಮ್ಮ  ಸ್ಥಳಕ್ಕೆ  ಬಂದು ರಕ್ಷಣೆಯನ್ನ ಮಾಡುತ್ತಾರೆ.
Published by: Latha CG
First published: October 31, 2020, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading