• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BMTCಯ ರತ್ನವಾಗಿದ್ದ ವಜ್ರ ಬಸ್‌ಗಳು ಪ್ರಯಾಣಿಕರಿಲ್ಲದೇ ಪರದಾಡುತ್ತಿರೋದು ಏಕೆ?

BMTCಯ ರತ್ನವಾಗಿದ್ದ ವಜ್ರ ಬಸ್‌ಗಳು ಪ್ರಯಾಣಿಕರಿಲ್ಲದೇ ಪರದಾಡುತ್ತಿರೋದು ಏಕೆ?

ಬಿಎಂಟಿಸಿ

ಬಿಎಂಟಿಸಿ

ತನ್ನ ಫ್ಲೀಟ್‌ನಲ್ಲಿರುವ 800 ವೋಲ್ವೋ ಬಸ್‌ಗಳಲ್ಲಿ, ಬಿಎಂಟಿಸಿ 600 ಕ್ಕೂ ಹೆಚ್ಚು ವಜ್ರದಲ್ಲಿ (ವಿಮಾನ ನಿಲ್ದಾಣವಲ್ಲದ ಮಾರ್ಗಗಳು) ಮತ್ತು 100 ಕ್ಕೂ ಹೆಚ್ಚು ವಾಯು ವಜ್ರದಲ್ಲಿ (ವಿಮಾನ ನಿಲ್ದಾಣ ಮಾರ್ಗಗಳು) ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ನಿಯೋಜಿಸಿತ್ತು.

  • Share this:

ಸಾಂಕ್ರಾಮಿಕ ರೋಗದಿಂದಾಗಿ ಬಿಎಮ್‌ಟಿಸಿಗೆ (BMTC) ಭಾರಿ ನಷ್ಟ ಉಂಟಾಗಿದೆ. ಕೋವಿಡ್‌ ಬಂದು ಹೋಗಿ 3 ವರ್ಷಗಳಾದರೂ BMTC ಯ ಪ್ರೀಮಿಯಂ ಬಸ್ ಸೇವೆಯ ವಜ್ರ ಬಸ್ಸುಗಳು ಇನ್ನೂ ನಷ್ಟದಲ್ಲಿದೆ ಎಂದು ಮೂಲಗಳು ತಿಳಿಸಿವೆ ಹಾಗೂ ಅವುಗಳು ಮರಳಿ ಮೊದಲನೇ ಸ್ಥಿತಿಗೆ ಮರಳಲು, ಪ್ರಯಾಣಿಕರನ್ನು ಸೆಳೆಯಲು ಇನ್ನೂ ಹೆಣಗಾಡುತ್ತಿವೆ. ವರದಿಗಳ ಪ್ರಕಾರ, ಬೆಂಗಳೂರಿನ ಅತಿದೊಡ್ಡ ಸಾರ್ವಜನಿಕ ಸಾರಿಗೆ ಪೂರೈಕೆದಾರ ವಜ್ರ ಈಗ ತನ್ನ ಪೂರ್ವ ಕೋವಿಡ್ (Covid) ಸೇವೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿದೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಬೆಲೆ ಕಡಿತಗೊಳಿಸಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಿಲ್ಲ ಎಂದು ಬಿಎಂಟಿಸಿ ಹೇಳಿದೆ. ತನ್ನ ಫ್ಲೀಟ್‌ನಲ್ಲಿರುವ 800 ವೋಲ್ವೋ ಬಸ್‌ಗಳಲ್ಲಿ, ಬಿಎಂಟಿಸಿ 600 ಕ್ಕೂ ಹೆಚ್ಚು ವಜ್ರದಲ್ಲಿ (ವಿಮಾನ ನಿಲ್ದಾಣವಲ್ಲದ ಮಾರ್ಗಗಳು) ಮತ್ತು 100 ಕ್ಕೂ ಹೆಚ್ಚು ವಾಯು ವಜ್ರದಲ್ಲಿ (ವಿಮಾನ ನಿಲ್ದಾಣ ಮಾರ್ಗಗಳು) ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ನಿಯೋಜಿಸಿತ್ತು.


ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆಯಿಂದಾಗಿ ವಾಯು ವಜ್ರ ರೈಡರ್‌ಶಿಪ್ ಚೇತರಿಸಿಕೊಳ್ಳುತ್ತಿದೆ ಆದರೆ ವಜ್ರ ಪ್ರಯಾಣಿಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.


ವಜ್ರದ ಬಹುತೇಕ ಹವಾನಿಯಂತ್ರಿತ ಬಸ್‌ಗಳು ಟೆಕ್ ಕಾರಿಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, ನಗರದ ಹಲವಾರು ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ವೃತ್ತಿಪರರಿಗೆ ಸೇವೆ ಸಲ್ಲಿಸುತ್ತವೆ.


ಕೋವಿಡ್‌ಗೆ ಮುನ್ನ, 600 ಕ್ಕೂ ಹೆಚ್ಚು ವಜ್ರ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದವು, BMTC ಯ ದೈನಂದಿನ ಆದಾಯ ಸುಮಾರು 4 ಕೋಟಿಗೆ ರೂಪಾಯಿಗಳಷ್ಟಿದೆ ಅದರಲ್ಲಿ ವಜ್ರದ ಪಾಲು 50 ಲಕ್ಷವಿತ್ತು.


ಮೂರು ವರ್ಷಗಳ ನಂತರ, ಬಿಎಂಟಿಸಿ ಈಗ ದಿನಕ್ಕೆ ಕೇವಲ 300 ವಜ್ರ ಬಸ್‌ಗಳನ್ನು ಓಡಿಸುತ್ತಿದ್ದು ವಜ್ರದ ಪಾಲು ಬಿಎಂಟಿಸಿಯ ದೈನಂದಿನ ಆದಾಯದಲ್ಲಿ ಕೇವಲ 2.8 ಲಕ್ಷ ರೂ. ಕಿಲೋಮೀಟರ್ ಲೆಕ್ಕದಲ್ಲಿ, ವಜ್ರ ಬಸ್ಸುಗಳು ಈಗ ಕೋವಿಡ್ ಪೂರ್ವದ ದೈನಂದಿನ ಸರಾಸರಿಯ ಅರ್ಧದಷ್ಟು ಮಾತ್ರ ಚಲಿಸುತ್ತಿವೆ.


ವಜ್ರ ಏಕೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ?


ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹಲವು ಕಾರಣಗಳನ್ನು ನೀಡಿದರು, ಟೆಕ್‌ ಕಂಪನಿಯವರು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಿದ್ದೂ ಒಂದು ಕಾರಣವಾಗಿದೆ.


"ನಮ್ಮ ಫ್ಲೀಟ್‌ನಲ್ಲಿರುವ ಎಲ್ಲಾ ವೋಲ್ವೋ ಬಸ್‌ಗಳನ್ನು ನಾವು ಬಳಸಲಾಗುವುದಿಲ್ಲ. ನಮ್ಮ ಅನೇಕ ಪ್ರಯಾಣಿಕರು ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ" ಎಂದು ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.


ಅಧಿಕಾರಿಯ ಪ್ರಕಾರ, ವಜ್ರ ಸವಾರರ ವಿಷಯದಲ್ಲಿ ಕೋವಿಡ್ ಪೂರ್ವ ಮತ್ತು ನಂತರದ ಸನ್ನಿವೇಶಗಳು "ಸಂಪೂರ್ಣವಾಗಿ ವಿಭಿನ್ನವಾಗಿವೆ". "ಇದು ಸೇಬುಗಳು ಮತ್ತು ಕಿತ್ತಳೆಗಳನ್ನು ಹೋಲಿಸುವಂತಿದೆ" ಎಂದು ಹೇಳಿದರು.


ಪ್ರಯಾಣಿಕರನ್ನು ಆಕರ್ಷಿಸಲು, BMTC ಸುಮಾರು 40% ದರವನ್ನು ಕಡಿಮೆ ಮಾಡಿದೆ ಮತ್ತು ವಜ್ರ ಮಾರ್ಗಗಳನ್ನು ತರ್ಕಬದ್ಧಗೊಳಿಸಿದೆ ಆದರೂ ಇನ್ನೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.


“ಇದು ನಿರಂತರ ಪ್ರಕ್ರಿಯೆ. ನಾವು ಕೆಲವು ಮಾರ್ಗಗಳಲ್ಲಿ ಬ್ರೇಕ್-ಈವ್ ಅನ್ನು ತಲುಪಿದ್ದೇವೆ ಆದರೆ ಇತರ ಹಲವು ಮಾರ್ಗಗಳಲ್ಲಿ ಹಿಂದುಳಿದಿದ್ದೇವೆ, ”ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಸಚಿವ ವಿ ಸೋಮಣ್ಣ ವಿರುದ್ಧ ಎಫ್​ಐಆರ್ ದಾಖಲು


ವೈಟ್‌ಫೀಲ್ಡ್ ಮೆಟ್ರೋ ಮಾರ್ಗವು ವಜ್ರ ಬಸ್‌ಗಳಿಗೆ ಹೊಸ ಸವಾಲು. ಆದರೆ ಅದರ ಪ್ರಭಾವ ಇದುವರೆಗೆ ಬಿಎಮ್‌ಟಿಸಿ ಮೇಲೆ "ಕಡಿಮೆ" ಪ್ರಮಾಣದಲ್ಲಿ ಎಫೆಕ್ಟ್‌ ಆಗಿದೆ ಎಂದು ಅಧಿಕಾರಿ ಹೇಳಿದ್ದಾರೆ.


ಕೋವಿಡ್ ನಂತರ ಜನರಲ್ಲಿ ಈಗ ಕಾರಿನಲ್ಲಿ ಓಡಾಡುವ ಪ್ರವೃತ್ತಿ ಹೆಚ್ಚಾಗಿದ್ದು ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಫ್ಲಿಕ್ಸಿಬಿಲಿಟಿ ನೀಡುವಂತಹ ಒಲಾ, ಉಬರ್ ನಂತಹ ಸೇವೆಗಳೊಂದಿಗೆ ಪಾಲುದಾರಿಕೆಯನ್ನು ಅನ್ವೇಷಿಸುತ್ತಿದ್ದು ಇದು ಅಂತಹ ಜನರು ಬಸ್ಸುಗಳ ಬಳಿ ಆಕರ್ಷಿತರಾಗಲು ದೊಡ್ಡ ಅಡಚಣೆಯಾಗಿರುವುದಾಗಿ ಟೆಕ್ಕಿಯೊಬ್ಬರು ಹೇಳುತ್ತಾರೆ.


"ರಿಯಲ್-ಟೈಮ್ ಬಸ್ ಟ್ರ್ಯಾಕಿಂಗ್ ಕೊರತೆಯು ಮತ್ತೊಂದು ಡೀಲ್ ಬ್ರೇಕರ್" ಎಂದು ಅವರು ಹೇಳಿದರು. ಕಾಡುಗೋಡಿಗೆ ಹೋಗುವ ಸುಮಾರು ಖಾಲಿ ಇರುವ ವಜ್ರ ಬಸ್ಸಿನ ಕಂಡಕ್ಟರ್ ಪ್ರಯಾಣ ದರ ಕಡಿತದ ಬಗ್ಗೆ ಸರಿಯಾಗಿ ಪ್ರಚಾರ ಮಾಡಿಲ್ಲ ಎಂಬ ಅಭಿಪ್ರಾಯವನ್ನು ಸಹ ಅವರು ವ್ಯಕ್ತಪಡಿಸುತ್ತಾರೆ.


ಏಕೆಂದರೆ ಅವರು ಹೇಳುವಂತೆ "ಅನೇಕ ಪ್ರಯಾಣಿಕರು ನಿರ್ವಾಹಕರ ಬಿಳಿ ಸಮವಸ್ತ್ರವನ್ನು ನೋಡಿ ಈ ಬಸ್‌ ದರ ಹೆಚ್ಚ ಇರಬಹುದು ಎಂದು ಭಾವಿಸಿ ಹೊರಟುಹೋದರು" ಎಂದು ಅವರು ಹೇಳಿದರು.


ವಜ್ರ ಬಸ್‌ ಸಂಖ್ಯೆಗಳು


* ದೈನಂದಿನ ವೇಳಾಪಟ್ಟಿಗಳ ಸಂಖ್ಯೆ: 301 (607)
* ದಿನಕ್ಕೆ ಕಿಲೋಮೀಟರ್‌ಗಳು: 56,876 (1,07,109)
* ದೈನಂದಿನ ಆದಾಯ: ರೂ 28.57 ಲಕ್ಷ (ರೂ 50.37 ಲಕ್ಷ)
* ಪ್ರತಿ ಕಿಲೋಮೀಟರ್ ವೆಚ್ಚ: 90-100 ರೂ
* ಪ್ರತಿ ಕಿಲೋಮೀಟರ್‌ಗೆ ಗಳಿಕೆ: ರೂ 50.81 (ರೂ 51.95)


ಇದನ್ನೂ ಓದಿ: ಹೆಬ್ಬಾಳ್ಕರ್ ಹೇಳಿಕೆಗೆ ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದ ಸಿಎಂ


(ಬ್ರಾಕೆಟ್‌ಗಳಲ್ಲಿನ ಅಂಕಿಅಂಶಗಳು ಕೋವಿಡ್‌ಗೆ ಮೊದಲು ಆರು ತಿಂಗಳ ಅವಧಿಯಲ್ಲಿ ದೈನಂದಿನ ಸರಾಸರಿಯನ್ನು ಸೂಚಿಸುತ್ತವೆ.)


ವಾಯು ವಜ್ರ ಮತ್ತು ಬೆಂಗಳೂರು ಸಾರಿಗೆ


* ವಾಯು ವಜ್ರ (ವಿಮಾನ ನಿಲ್ದಾಣ) ಬಸ್‌ಗಳು ಪ್ರತಿ ಕಿ.ಮೀಗೆ ರೂ 72.33 ಮತ್ತು ಬೆಂಗಳೂರು ಟ್ರಾನ್ಸಿಟ್ (ಸಾಮಾನ್ಯ) ಬಸ್‌ಗಳು ಪ್ರತಿ ಕಿಮೀಗೆ ರೂ 140.59 ಗಳಿಸುತ್ತವೆ.


ವೈಟ್‌ಫೀಲ್ಡ್ ಮೆಟ್ರೋದ ಪರಿಣಾಮ


ಮಾರ್ಚ್ 26 ರಂದು ಪ್ರಾರಂಭವಾದ 13.71 ಕಿಮೀ ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗವು ವಜ್ರ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಕೆಲವು ರಸ್ತೆ ವಿಭಾಗಗಳ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ವರ್ಷದ ಕೊನೆಯಲ್ಲಿ 15.8 ಕಿಮೀ ವೈಟ್‌ಫೀಲ್ಡ್-ಬೈಯಪ್ಪನಹಳ್ಳಿ ಮೆಟ್ರೊ ಮಾರ್ಗವು ತೆರೆದಾಗ ವಜ್ರ ಸೇವೆಗಳ ಮೇಲೆ ಇನ್ನಷ್ಟು ಪರಿಣಾಮ ಬೀರಬಹುದು.




ಪ್ರಮುಖ ವಜ್ರ ಮಾರ್ಗಗಳು


* V 335E (ಮೆಜೆಸ್ಟಿಕ್-ಕಾಡುಗೋಡಿ)
* V 360B (ಮೆಜೆಸ್ಟಿಕ್-ಅತ್ತಿಬೆಲೆ)
* V 500CA (ಬನಶಂಕರಿ-ITPL)
* V 500ಡಿ (ಸಿಲ್ಕ್ ಬೋರ್ಡ್ ಜೆಎನ್-ಹೆಬ್ಬಾಳ್)
* V 500A (ಬನಶಂಕರಿ-ಹೆಬ್ಬಾಳ)
* V 226WF (ವೈಟ್‌ಫೀಲ್ಡ್-ವಂಡರ್ಲಾ)
* V-500KE (ಕೆಂಗೇರಿ ಹೌಸಿಂಗ್ ಬೋರ್ಡ್-ITPL)
*V-226HSR (HSR BDA ಕಾಂಪ್ಲೆಕ್ಸ್-ವಂಡರ್ಲಾ)
* V-226ELC (ಎಲೆಕ್ಟ್ರಾನಿಕ್ಸ್ ಸಿಟಿ-ವಂಡರ್ಲಾ)
* V-378 (ಕೆಂಗೇರಿ-ಎಲೆಕ್ಟ್ರಾನಿಕ್ಸ್ ಸಿಟಿ)
* V-365Y (ಯಶವಂತಪುರ-BNP)
* V-356M (ಮೆಜೆಸ್ಟಿಕ್-ಆನೇಕಲ್)
* V-378 (ಕೆಂಗೇರಿ-ಎಲೆಕ್ಟ್ರಾನಿಕ್ಸ್ ಸಿಟಿ)

top videos
    First published: