Mysore Car Accident: ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ; ಇಬ್ಬರು ಯುವಕರ ದುರ್ಮರಣ

ನಂಜನಗೂಡು ಬಳಿಯ ಗೀಕಳ್ಳಿ ಹುಂಡಿ ಗ್ರಾಮದ ಬಳಿ ನಡೆದ ಮತ್ತೊಂದು ಕಾರು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿ ನರಸೀಪುರದಿಂದ ನಂಜನಗೂಡು ಪಟ್ಟಣಕ್ಕೆ ಐದು ಯುವಕರು ಕಾರಿನಲ್ಲಿ ತೆರಳುತಿದ್ದರು. ಈ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. 

Rajesh Duggumane | news18-kannada
Updated:September 11, 2019, 6:08 PM IST
Mysore Car Accident: ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ; ಇಬ್ಬರು ಯುವಕರ ದುರ್ಮರಣ
ಅಪಘಾತಕ್ಕೊಳಗಾದ ಕಾರು
  • Share this:
ಮೈಸೂರು (ಸೆ.11): ಇಂದು ಮೈಸೂರು ಸಮೀಪದ ನಂಜನಗೂಡಿನಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಂಜನಗೂಡಿನ ಮಣಿಕಂಠ ಗೆಳೆಯರ ಜೊತೆ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಅವರ ಕಾರು ವಿದ್ಯುತ್ ವಸತಿ ಕಾಂಪೌಂಡ್​​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಣಿಕಂಠ (27) ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಾಯಗಳಾಗಿವೆ.

ನಂಜನಗೂಡು ಬಳಿಯ ಗೀಕಳ್ಳಿ ಹುಂಡಿ ಗ್ರಾಮದ ಬಳಿ ನಡೆದ ಮತ್ತೊಂದು ಕಾರು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿ ನರಸೀಪುರದಿಂದ ನಂಜನಗೂಡು ಪಟ್ಟಣಕ್ಕೆ ಐದು ಯುವಕರು ಕಾರಿನಲ್ಲಿ ತೆರಳುತಿದ್ದರು. ಈ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ ಒಕ್ಕಲಿಗರ ನಿಯೋಗ

ಪರಿಣಾಮ ನಂಜನಗೂಡು ಪಟ್ಟಣದ ಸಂಜಯ್ (23) ಕೊನೆ ಉಸಿರೆಳೆದಿದ್ದಾನೆ. ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ವೇಗವಾಗಿ ಕಾರು ಚಾಲನೆ ಮಾಡಿದ್ದು ಕಾರಣವೋ ಅಥವಾ ಕಾರಿನಲ್ಲಿ ತಾಂತ್ರಿಕ ದೋಷ ಇತ್ತೋ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

(ವರದಿ: ಪುಟ್ಟಪ್ಪ)

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ