news18-kannada Updated:February 14, 2020, 11:32 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಫೆ.14): ಇಂದು ಪ್ರೇಮಿಗಳ ದಿನ. ಪ್ರೇಮಿಗಳ ದಿನಾಚರಣೆಗಾಗಿ ಯುವಜನತೆ ತಯಾರಾಗಿದ್ದು, ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ, ಅವರೊಂದಿಗೆ ದಿನ ಕಳೆಯಲು ಸಜ್ಜಾಗಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಕಾರ ಈ ದಿನಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ ಈ ದಿನ ಸಂಭ್ರಮದಿಂದ ಆಚರಿಸುತ್ತಾರೆ ಯುವಜೋಡಿಗಳು.
ಇನ್ನು ಪ್ರೇಮಿಗಳ ಅಚ್ಚುಮೆಚ್ಚಿನ ತಾಣಗಳು ಎಂದರೆ ಉದ್ಯಾನವನ, ಮರದ ತಂಪು ನೆರಳಿನಲ್ಲಿ ಪ್ರೀತಿ ಪಾತ್ರರೊಂದಿಗೆ ಹರಟುತ್ತಾ ಪ್ರೇಮಿಗಳು ಕಾಲ ಕಳೆಯುತ್ತಾರೆ. ಅದರಲ್ಲಿಯೂ ಈ ದಿನದಂದು ಕಬ್ಬನ್ಪಾರ್ಕ್, ಲಾಲ್ಬಾಗ್ ಸೇರಿದಂತೆ ಪ್ರಮುಖ ಉದ್ಯಾನವನಗಳು ಪ್ರೇಮಿಗಳಿಂದಲೇ ತುಂಬಿ ಹೋಗಿರುತ್ತದೆ.
ಈ ದಿನವನ್ನು
ವಿರೋಧಿಸುವ ಸಂಘಟನೆಗಳು ಉದ್ಯಾನವನದಲ್ಲಿ ಕುಳಿತಿರುವ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಕಿರಿಕ್ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲದೇ ಪ್ರೇಮಿಗಳ ಫೋಟೊವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಕ್ಕೂ ಹಿಂದೇಟು ಹಾಕುವುದಿಲ್ಲ. ಜೊತೆಗೆ ಕೆಲವು ವೇಳೆ ಪ್ರೇಮಿಗಳು ಈ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಈ ಕಾರಣದಿಂದ ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಉದ್ಯಾನವನ ಹಾಗೂ ಪ್ರಮುಖ ತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೇ ವಿಶೇಷ ಪಿಂಕ್ ಪೊಲೀಸ್ ಪಡೆ ಎಲ್ಲೆಡೆ ಬೀಟ್ ನಡೆಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಇದನ್ನು ಓದಿ: Valentines Day Gifts: ಪ್ರೇಮಿಗಳ ದಿನಕ್ಕೆ ನಿಮ್ಮ ಸಂಗಾತಿಗೆ ಈ ಉಡುಗೊರೆಯೇ ಬೆಸ್ಟ್
ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಕಳೆದ ಹಲವು ವರ್ಷಗಳಿಂದ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತಲೇ ಬಂದಿದೆ. ಪ್ರೇಮಿಗಳ ದಿನಾಚರಣೆಯಂದು ಕೆಲವೆಡೆ ಪ್ರೇಮಿಗಳ ಮೇಲೆ ದಾಳಿ ಮಾಡಿರುವ ಘಟನೆಯೂ ನಡೆದಿದೆ.
First published:
February 14, 2020, 11:32 AM IST