Cow Dung: ಬಣ್ಣ ಅಲ್ಲ, ಸಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ ಜನ! ನಾಗರ ಪಂಚಮಿ ಮರುದಿನ ವಿಶಿಷ್ಟ ಆಚರಣೆ

ಗದಗ ನಗರದಲ್ಲಿ (Gadag City) ಹಸುವಿನ ಸಗಣಿ (Cow Dung) ಓಕುಳಿ ಅನ್ನೋ ವಿಶಿಷ್ಟ ಆಚರಣೆ ಜಾರಿಯಲ್ಲಿದೆ. ನಗರದ ಗಂಗಾಪುರ ಪೇಟೆಯ ಕುಂಬಾರ ಓಣಿಯಲ್ಲಿ ಪರಸ್ಪರ ಸಗಣೆ ಎರಚಾಡುವ ಮೂಲಕ, ನೂರಾರು ವರ್ಷದಿಂದ ಆಚರಿಸಿಕೊಂಡು ಬಂದಿರೋ ವಿಶಿಷ್ಟ ಹಬ್ಬವನ್ನ (Festival) ಜೀವಂತವಾಗಿ ಇಡಲಾಗಿದೆ.

ಸಗ:ಣಿ ಓಕುಳಿಯ ವಿಶಿಷ್ಟ ಆಚರಣೆ

ಸಗ:ಣಿ ಓಕುಳಿಯ ವಿಶಿಷ್ಟ ಆಚರಣೆ

  • Share this:
ಗದಗ: ಬಣ್ಣ (Colors) ಎರಚಿ ಓಕುಳಿ ಆಡಿರ್ತಿರಾ.. ರಾಜ ಮಹಾರಾಜರ (Kings) ಕಾಲದಲ್ಲಿ ಹಾಲಿನ (Milk) ಓಕುಳಿ ನಡೀತಿತ್ತು ಅಂತಾ ಕೇಳಿರ್ತಿರಾ.. ಆದ್ರೆ, ಗದಗ ನಗರದಲ್ಲಿ (Gadag City) ಹಸುವಿನ ಸಗಣಿ (Cow Dung) ಓಕುಳಿ ಅನ್ನೋ ವಿಶಿಷ್ಟ ಆಚರಣೆ ಜಾರಿಯಲ್ಲಿದೆ. ನಗರದ ಗಂಗಾಪುರ ಪೇಟೆಯ ಕುಂಬಾರ ಓಣಿಯಲ್ಲಿ ಪರಸ್ಪರ ಸಗಣೆ ಎರಚಾಡುವ ಮೂಲಕ, ನೂರಾರು ವರ್ಷದಿಂದ ಆಚರಿಸಿಕೊಂಡು ಬಂದಿರೋ ವಿಶಿಷ್ಟ ಹಬ್ಬವನ್ನ (Festival) ಜೀವಂತವಾಗಿ ಇಡಲಾಗಿದೆ.. ನಾಗರ ಪಂಚಮಿ (Nag Panchami) ಹೆಣ್ಣು ಮಕ್ಕಳ (Girls) ಹಬ್ಬ.. ಹೊಸ ಬಟ್ಟೆ ಹಾಕ್ಕೊಂಡು ನಾಗರ ಕಟ್ಟೆಗೆ ತೆರಳಿ ಹೆಣ್ಣು ಮಕ್ಕಳು ಹಾಲು ಸಮರ್ಪಿಸಿ ಹಬ್ಬ ಆಚರಿಸ್ತಾರೆ.. ಪಂಚಮಿಯ ಮರುದಿನ ಷಷ್ಠಿ, ಕರಿಕಟ್ಟಂಬಲಿ ದಿನ ಗಂಡ್ ಹೈಕ್ಳು (Boys) ಸೇರಿಕೊಂಡು ಈ ವಿಶೇಷ ಹಬ್ಬ ಆಚರಿಸ್ತಾರೆ.

ನಾಗ ಪಂಚಮಿ ಮರುದಿನ ನಡೆಯುವ ವಿಶಿಷ್ಟ ಹಬ್ಬ

ಪಂಚಮಿ ಮರುದಿನ ನಡೆಯೋ ಈ ವಿಶಿಷ್ಟ ಆಟಕ್ಕೆ ತಿಂಗಳಿಂದ ತಯಾರಿ ನಡೆಯುತ್ತೆ.. ಕರಿಕಟ್ಟಂಬಲಿ ದಿನ ಆಟ ಆಡೋದಕ್ಕೆ ಅಂತಾ ತಿಂಗಳು ಹಿಂದೆಯೇ ಸೆಗಣಿ ಸಂಗ್ರಹ ಕಾರ್ಯ ನಡೆಯುತ್ತೆ.. ಬಡಾವಣೆಯ ಯುವಕರು ಗುಂಪು ಕಟ್ಕೊಂಡು, ದನ ಕರುಗಳಿರುವ ಮನೆಗಳಿಗೆ ತೆರಳಿ ಅವರಿಂದ ಸೆಗಣೆ ಬೇಡಿ ಪಡೀತಾರೆ.

ಸಗಣಿ ಓಕಳಿಗೆ ತಯಾರಿ


ಸಗಣಿಯಿಂದ ವಿಶಿಷ್ಟ ಓಕುಳಿ ಆಟ

ಸೆಗಣಿ ಕಾಳಗ ನೋಡೋದಕ್ಕೆ ಥೇಟ್ ಹೋಳಿ ಹುಣ್ಣಿಮೆಯ ರಂಗಿನಾಟ ಅನ್ಸುತ್ತೆ.. ಆದ್ರೆ ಬಣ್ಣದ ಬದ್ಲು ಇಲ್ಲಿ ಸೆಗಣಿ ಎರಚಲಾಗುತ್ತೆ.. ಬಡಾವಣೆಯ ಮುಖ್ಯರಸ್ತೆಯಲ್ಲಿ  ಸೆಗಣಿಯ ಗುಂಪು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕುತ್ತಾರೆ. ಯುವಕರು ಎರಡು ತಂಡ ಕಟ್ಕೊಂಡು ಹತ್ತಿರದ ತೋಟದಲ್ಲಿ ತೆರಳಿ ಸಗಣೆ ಆಟಕ್ಕೆ ರೆಡಿ ಆಗ್ತಾರೆ..

ಇದನ್ನೂ ಓದಿ: Cow Dung: ಭಾರತದ ಸಗಣಿ ಮೇಲೆ ಅಮೆರಿಕನ್ನರ ಕೆಂಗಣ್ಣು, ವಿಮಾನ ನಿಲ್ದಾಣದಲ್ಲಿ ಇನ್ನು ಇದನ್ನು ತಲುವಂತೆಯೇ ಇಲ್ಲ!

ಯುವಕರ ಕೊರಳಲ್ಲಿ ತರಕಾರಿಗಳ ಹಾರ!

ಡಿಫರೆಂಟ್ ಓಕುಳಿಗೆ ಡಿಫರೆಂಟಾಗೇ ರೆಡಿಯಾಗುವ ಯುವಕರು, ಕೊರಳಲ್ಲಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳ ಹಾರ ಮಾಡಿಕೊಂಡು ಹಾಕ್ಕೊತಾರೆ... ಅಲ್ಲದೆ, ವಿಚಿತ್ರ ವೇಶಭೂಷಣ ಧರಿಸಿ ಗಮನ ಸೆಳೀತಾರೆ.. ಹುಡುಗ್ರು, ಹಿಡುಗೀರ ಉಡುಪು ಧರಸಿ ಖುಷಿ ಪಡ್ತಾರೆ.. ರೆಡಿಯಾದ ಯುವಕ್ರು, ತೋಟದಿಂದ ದುರ್ಗಾದೇವಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸುತ್ತಾರೆ.. ಅಲ್ಲಿಂದ ಆಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗುತ್ತೆ..

ಸಗಣಿ ಓಕಳಿಯಲ್ಲಿ ನಿರತರಾದ ಜನ


2 ಗಂಟೆಗಳ ಕಾಲ ಸಗಣಿ ಎರಚಾಟ

ಸುಮಾರು ಎರಡು ಗಂಟೆಗಳ ಕಾಲ ಸೆಗಣಿ ಆಟ ಆಡಿ ಯುವಕರು ಫುಲ್ ಎಂಜಾಯ್ ಮಾಡ್ತಾರೆ. ಆಯುರ್ವೇದದಲ್ಲಿ ಸೆಗಣಿಗೆ ವಿಶೇಷ ಸ್ಥಾನ ಇದೆ.. ಸೆಗಣಿ ಇಲ್ಲದೇ ರೈತ್ರ ಜೀವನ ಊಹಿಸೋದಕ್ಕೆ ಸಾಧ್ಯವಿಲ್ಲ.. ರೈತ ಸಮುದಾಯ ಸಗಣೆಗೆ ದೈವ ಸ್ಥಾನ ನೀಡಿದೆ.. ಸೆಗಣಿಯ ಪಾವಿತ್ರತೆ ಸಾರುವ ನಿಟ್ಟಿನಲ್ಲಿ ಸಗಣೆ ಓಕುಳಿಯನ್ನ ನೂರಾರು ವರ್ಷದಿಂದ ನಡೆಸಿಕೊಂಡು ಬರಲಾಗ್ತಿದೆ.. ಅಲ್ದೆ, ಔಷಧಿಗುಣ ಹೊಂದಿರೋ ಸೆಗಣಿಯನ್ನ ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ..

ಇದನ್ನೂ ಓದಿ: Uttara Kannada: ಜೀವಂತ ಹಾವಿಗೆ ಪೂಜೆ! ಇವರ ಹೆಂಡತಿ, ಮಕ್ಕಳಿಗೂ ಹಾವಂದ್ರೆ ಭಯವಿಲ್ಲ!

ಸೆಗಣಿಯ ಮಹತ್ವವನ್ನ ಸಾರುವ ಅತ್ಯಂತ ವಿಶಿಷ್ಟ ಆಚರಣೆ ನಡೆಯೋದು ಗದಗದಲ್ಲೆ.. ಸೆಗಣಿ ಇಲ್ಲದೇ ರೈತರ ಜೀವನ ಇಲ್ಲ ಅನ್ನೋ ಸಂದೇಶವನ್ನ ಈ ಆಚರಣೆ ಮೂಲಕ ಜನ ಮತ್ತೊಮ್ಮೆ ಸಾರಿದ್ದಾರೆ.. ಮನರಂಜನೆಯ ಆಟದ ಜೊತೆಗೆ ಯುವಕರಲ್ಲಿ ಸೆಗಣಿ ಮಹತ್ವ ಸಾರೋದು ಹಿರಿಯರ ಉದ್ದೇಶ ಆಗುತ್ತು.. ಹೀಗಾಗಿ ಇಂಥ ಆಚರಣೆ ಈಗ್ಲೂ ನಡ್ಕೊಂಡು ಬಂದಿವೆ.
Published by:Annappa Achari
First published: