Independence Day: ವಿಜಯಪುರದಲ್ಲಿ ಹಾರಾಡಿದ ವಿಶೇಷ ಧ್ವಜ: 1947, ಆಗಸ್ಟ್ 14 ರ ಮಧ್ಯರಾತ್ರಿ ಹಾರಿತ್ತು ಈ ತಿರಂಗಾ!

ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮ ಕಳೆಗಟ್ಟಿದೆ. ದೇಶದ ಉದ್ದಗಲಕ್ಕೂ ಇಂದು ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಇಡೀ ದೇಶವೇ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುತ್ತಿದೆ. ಹೀಗಿರುವಾಗ ವಿಜಯಪುರದ ನಾಲತವಾಡ ಪಟ್ಟಣದಲ್ಲಿ ವಿಶೇಷ ಧ್ವಜವೊಂದು ಹಾರಾಡಿದೆ ಅಷ್ಟಕ್ಕೂ ಇದರ ಸ್ಪೆಷಾಲಿಟಿ ಏನು ಅಂತೀರಾ? ಇಲ್ಲಿದೆ ವಿವರ


ನಾಲತವಾಡ ಪಟ್ಟಣದಲ್ಲಿ 75 ವರ್ಷದ ಹಳೆಯ ಧ್ವಜ ಹಾರಾಟ. ಗ್ರಾಮದಲ್ಲಿ ಸಂತಸ.

ನಾಲತವಾಡ ಪಟ್ಟಣದಲ್ಲಿ 75 ವರ್ಷದ ಹಳೆಯ ಧ್ವಜ ಹಾರಾಟ. ಗ್ರಾಮದಲ್ಲಿ ಸಂತಸ.

  • Share this:
ಗುರುರಾಜ್ ವಿಜಯಪುರ, ನ್ಯೂಸ್​ 18 ಕನ್ನಡ

ವಿಜಯಪುರ(ಆ.15): ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಧರ್ಭದಲ್ಲಿ ವಿಶೇಷ ಧ್ವಜ ಹಾರಾಡಿದೆ. ದೇಶಕ್ಕೆ ಸ್ವಾತಂತ್ರ್ಯ (Independence) ಸಿಕ್ಕ 75 ವರ್ಷವಾದಂತೆ ನಾಲವಾಡ ಪಟ್ಟಣದಲ್ಲಿ ಹಾರಾಡಿದ ಧ್ವಜಕ್ಕೂ ಇದೀಗ 75 ವರ್ಷ ತುಂಬಿದೆ. ನಾಲತವಾಡ ಪಟ್ಟಣದ ಕಾಳಮ್ಮನಗುಡಿ ಓಣಿಯ ವಿಶ್ವಚೇತನ ಪ್ರಾಥಮಿಕ ಶಾಲೆ ಮೇಲೆ ಈ ತ್ರಿವರ್ಣ ಧ್ವಜ (National Flag) ಹಾರಿದ್ದು, ಈ ವಿಶೇಷ ಧ್ವಜ ಪಟ್ಟಣದಲ್ಲಿ ಹಾರುತ್ತಿರುವುದಕ್ಕೆ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ:  Independence Day 2022: ಭಾರತದಾದ್ಯಂತ ಪ್ರತಿಧ್ವನಿಸುತ್ತದೆ ಹರ್ ಘರ್ ತಿರಂಗ ಅಭಿಯಾನ, ಎಲ್ಲೆಲ್ಲಿ ಹೇಗಿದೆ ನೋಡಿ

ನಾಲತವಾಡ ಮೂಲದ ಧಾರವಾಡ ನಿವಾಸಿಯಾಗಿರುವ 91 ವರ್ಷದ ಗಂಗಾಧರ ನರಸಿಂಗರಾವ್ ಕುಲಕರ್ಣಿ ಎಂಬುವರ ಬಳಿ ಈ ಧ್ವಜವಿದೆ. ಅದನ್ನು ನಾಲತವಾಡದಲ್ಲಿ 4ನೇ ತರಗತಿ ಓದುತ್ತಿದ್ದಾಗ ಆದಪ್ಪ ಯರಗುಂಟಿ ಎಂಬ ಗುರುಗಳು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮಕ್ಕಾಗಿ ಗಂಗಾಧರ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪ್ರತೀಕವಾಗಿ ಆ.14ರ ಮಧ್ಯರಾತ್ರಿ ರಾಷ್ಟ್ರಧ್ವಜ ನೀಡಿದ್ದರಂತೆ. ಆಗ ಅವರು ನಾಲ್ಕು ಆಣೆ (25 ಪೈಸೆ) ಕೊಟ್ಟು ಇದನ್ನು ಖರೀದಿಸಿದ್ದರು. ಅಂದಿನಿಂದ ಧ್ವಜವನ್ನು ತಮ್ಮ ಧಾರವಾಡದ ಮನೆಯಲ್ಲಿ ಹಾರಿಸುತ್ತಿದ್ದಾರೆ. ಈ ಸಲ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಈ ಸಲ ನಾಲತವಾಡ ಪಟ್ಟಣದ ಶಾಲೆಯಲ್ಲಿ ಕುಲಕರ್ಣಿಯವರು ಇದನ್ನು ಹಾರಿಸಿ ಸಂತಸ ಪಟ್ಟುಕೊಂಡಿದ್ದಾರೆ.

ಇಷ್ಟೇ ಅಲ್ಲದೇ ಧ್ವಜಕ್ಕೆ ಧಕ್ಕೆಯಾಗಬಾರದು ಎನ್ನುವ ದೃಷ್ಟಿಯಿಂದ ಕಳೆದ 10 ವರ್ಷಗಳಿಂದಲೂ ಧಾರವಾಡದ ಬ್ಯಾಂಕ್ ಲಾಕರ್‌ನಲ್ಲೇ ಇದನ್ನು ಇಡುತ್ತಿದ್ದಾರೆ. ಪ್ರತಿ ವರ್ಷವೂ ಧ್ವಜಾರೋಹಣದ ವೇಳೆ ಮನೆಗೆ ತರುತ್ತಾರೆ. ಮನೆಯಲ್ಲೇ ಧ್ವಜ ಪೂಜೆ ಸಲ್ಲಿಸುತ್ತಾರೆ. ಧ್ವಜಾರೋಹಣ ನೆರವೇರಿಸಿ ಮರುದಿನ ಮತ್ತೆ ಬ್ಯಾಂಕ್‌ ಲಾಕರ್‌ನಲ್ಲಿ ಇಡುತ್ತಾರೆ.‌

ಇದನ್ನೂ ಓದಿ: Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು

ಕಳ್ಳರಿಂದ ಚಿನ್ನ ಬೆಳ್ಳಿ ಕಾಪಾಡಲು ಇಂದಿನ ಕಾಲದಲ್ಲಿ ಬ್ಯಾಂಕ್ ಲಾಕರ್​ ಬಳಸುತ್ತಿರುವಾಗ ರಾಷ್ಟ್ರಧ್ವಜವನ್ನು ಕಾಪಾಡಲು ಬ್ಯಾಂಕ್ ಲಾಕರ್​ ಬಳಸುತ್ತಿರುವ ಕುಲಕರ್ಣಿಯವರ ದೇಶಪ್ರೇಮಕ್ಕೆ ನಮ್ಮದೊಂದು ಸಲಾಂ.
Published by:Precilla Olivia Dias
First published: