• Home
  • »
  • News
  • »
  • state
  • »
  • Water Supply: ಬೆಂಗಳೂರಿಗರೇ ಗಮನಿಸಿ, ಇಂದು ಈ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

Water Supply: ಬೆಂಗಳೂರಿಗರೇ ಗಮನಿಸಿ, ಇಂದು ಈ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 700 ಎಂಎಂ ವ್ಯಾಸದ ನೀರಿನ ಪೈಪ್‌ ಗೆ ಯುಎಫ್‌ಡಬ್ಲ್ಯೂ ಮೂಲಕ ಇಎಮ್‌ಎಫ್ ಮೀಟರ್ ಅಳವಡಿಕೆ ಕೆಲಸವನ್ನು ಕೈಗೆತ್ತಿಕೊಂಡಿದೆ. ಹೀಗಾಗಿ 26 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

    ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಈ ಮಧ್ಯೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಾಮಗಾರಿಗಳು (Electrical Works) ನಡೆದಿವೆ. ಹೀಗಾಗಿ ಸಾಕಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡುತ್ತದೆ. ಜೊತೆಗೆ ನೀರಿನ ಸಮಸ್ಯೆ (Water Problem) ಕೂಡ ಎದುರಾಗಿದೆ.  ಅದರಲ್ಲೂ ವೀಕೆಂಡ್ ನಲ್ಲಿ (Weekend) ನೀರು ಸರಬರಾಜು (Water Supply) ಕೆಲವು ಭಾಗಗಳಲ್ಲಿ ನಿಲ್ಲಿಸಲಾಗುತ್ತಿದೆ. ಬೆಂಗಳೂರಿನ ಈ ಪ್ರದೇಶಗಳ ಜನರಿಗೆ ನೀರಿನ ಸಮಸ್ಯೆ ಕಾಡಲಿದೆ. ನಗರದ ಕೆಲವು ಭಾಗಗಳಲ್ಲಿ ನೀರು ಸರಬರಾಜು ಇರುವುದಿಲ್ಲ. ವೀಕೆಂಡ್ ನಲ್ಲಿ ನೀರು ಇರದೇ ಇರುವುದು ಸಿಟಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ.


    26-11-2022 (ನವೆಂಬರ್ ಶನಿವಾರ 2022) ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06:00 ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ.


    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 700 ಎಂಎಂ ವ್ಯಾಸದ ನೀರಿನ ಪೈಪ್‌ ಗೆ ಯುಎಫ್‌ಡಬ್ಲ್ಯೂ ಮೂಲಕ ಇಎಮ್‌ಎಫ್ ಮೀಟರ್ ಅಳವಡಿಕೆ ಕೆಲಸವನ್ನು ಕೈಗೆತ್ತಿಕೊಂಡಿದೆ. ಹೀಗಾಗಿ 26 (ಶನಿವಾರ) ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


    ಯಾವ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ


    ಶಿವಾಜಿನಗರ, ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ, ಬನ್ನಪ್ಪ ಪಾರ್ಕ್, ಕಬ್ಬನ್ ಪೇಟೆ, ಕುಂಬಾರ್ ಪೇಟೆ, ಕಾಮರಾಜ ರಸ್ತೆ, ವೀರಪಿಲೈ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, ರಾಜಮಾರುಕಟ್ಟೆ, ವಿಧಾನಸೌಧ, ವಿಕಾಸ ಸೌಧ, ಎಂ.ಎಸ್. ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


    ಇನ್ನು ನೀರನ್ನು ಮಿತವಾಗಿ ಬಳಸುವಂತೆ ಸೂಚನೆ


    ಪ್ರತಿದಿನ ಟಿಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1450 MLD ನೀರು ಸರಬರಾಜು ಆಗುತ್ತಿತ್ತು. ಆದರೆ ನಿನ್ನೆ ರಾತ್ರಿ ಸೇರಿದಂತೆ 600 MLD ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 MLD ನೀರು ಸರಬರಾಜು ಸ್ಥಗಿತಗೊಂಡಿದೆ.  ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ.


    ಮತ್ತೆ ಇದೇ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆಗಳಿವೆ. BWSSB ಯಿಂದ ಅಧಿಕೃತ ಸೂಚನೆ ಬರುವವರೆಗೆ ಮಿತವಾಗಿ ನೀರು ಬಳಕೆಗೆ ಮನವಿ ಮಾಡಲಾಗಿದೆ.


    ಎರಡು ಕಾರ್​​ಗಳು ಜಖಂ


    ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ಹಲಸೂರು, ಜೀವನ್‌ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ.


    ಮಹಾಲಕ್ಷ್ಮೀ ಲೇಔಟ್​​ನ ತರಕಾರಿ ಮಾರ್ಕೆಟ್​​ ಬಳಿ ಎರಡು ಬೃಹತ್ ಮರಗಳು ಕಾರ್ ಮೇಲೆ ಬಿದ್ದಿವೆ. ಎರಡು ಕಾರ್​​ಗಳು ಸಂಪೂರ್ಣ ಜಖಂ ಆಗಿದ್ದು, BBMP ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.


    ತುಂಬಿ ಹರಿಯುತ್ತಿರುವ ನದಿಗಳು


    ಮಹಾರಾಷ್ಟ್ರ (Maharashtra Rains) ಮತ್ತು ಬೆಳಗಾವಿ (Belagavi Rains) ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕ (North Karnataka) ಭಾಗದ ನದಿಗಳು (Rivers) ತುಂಬಿ ಹರಿಯುತ್ತಿದ್ದು, ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.


    ಇದನ್ನೂ ಓದಿ: ಬೆಂಗಳೂರಿಗೆ ಎರಡು ದಿನ ನೀರು ಬಂದ್; ಮಿತ ಬಳಕೆಗೆ BWSSB ಮನವಿ


    ಮಲಪ್ರಭಾ ನದಿಗೆ ಹೆಚ್ಚಿನ ನೀರು


    ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಗೋವನಕೊಪ್ಪ ಹಳೆ ಸೇತುವೆ ಜಲಾವೃತಗೊಂಡಿದೆ. ಸದ್ಯ ಜನರು ಹೊಸ ಸೇತುವೆ ಮೂಲಕ ಸಂಚಾರ ಮಾಡುತ್ತಿದ್ದಾರೆ.


    ನವಿಲು ತೀರ್ಥ ಜಲಾಶಯದಿಂದ 7 ಸಾವಿರ ಕ್ಯೂಸೆಕ್ಸಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ.

    Published by:renukadariyannavar
    First published: