• Home
  • »
  • News
  • »
  • state
  • »
  • Karavali Ratna 2022: ಕರಾವಳಿ ಸಾಧಕರಿಗೆ ನ್ಯೂಸ್18 ಕನ್ನಡದ ಸನ್ಮಾನ, ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ

Karavali Ratna 2022: ಕರಾವಳಿ ಸಾಧಕರಿಗೆ ನ್ಯೂಸ್18 ಕನ್ನಡದ ಸನ್ಮಾನ, ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ

ಅ. 28ರಂದು ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಅ. 28ರಂದು ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಇತಿಹಾಸದಿಂದ ವರ್ತಮಾನದವರೆಗೆ ಕರಾವಳಿಯ ಕಡಲು ಸಾಧನಾ ರತ್ನಗಳಿಂದ ತುಂಬಿಹೋಗಿದೆ. ಇಂತಹ ರತ್ನಭಂಡಾರವನ್ನು ಶೋಧಿಸಿ ಅನರ್ಘ್ಯ, ಮಹೋನ್ನತ ರತ್ನಗಳನ್ನು ಹೆಕ್ಕಿ ತೆಗೆಯುವ ಹೆಮ್ಮೆಯ ಪ್ರಯತ್ನವೇ ನ್ಯೂಸ್18 ಕನ್ನಡದ 'ಕರಾವಳಿ ರತ್ನ' ಅವಾರ್ಡ್.

  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಬರೀ ಸುದ್ದಿ (News) ಪ್ರಸಾರ ಮಾಡುವುದಷ್ಟೇ ಅಲ್ಲ, ಸುದ್ದಿ ಪ್ರಸಾರದೊಂದಿಗೆ ಸರ್ಕಾರವನ್ನು (Government) ಎಚ್ಚರಿಸುವ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿರುವ ನಿಮ್ಮ ನ್ಯೂಸ್ 18 ಕನ್ನಡ (News18 Kannada), ಸಾಧಕರನ್ನು (achievers), ಅವರ ಸಾಧನೆಯನ್ನು ಗುರುತಿಸುವಲ್ಲಿಯೂ ಎಂದೂ ಹಿಂದೆ ಬಿದ್ದಿಲ್ಲ. ಈ ಹಿಂದೆ ನವ ಉದ್ಯಮಿಗಳನ್ನು ಬೆಂಬಲಿಸಲು 19 ಸಾಧಕರಿಗೆ 2022ರ ‘ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್’ (Business Leaders and Excellence Awards 2022) ನೀಡಿ ನ್ಯೂಸ್ 18 ಕನ್ನಡ ಗೌರವಿಸಿತ್ತು. ಇದೀಗ ಕರುನಾಡ ಕರಾವಳಿ ಭಾಗದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲು ನಿಮ್ಮ ನ್ಯೂಸ್ 18 ಕನ್ನಡ ಸಜ್ಜಾಗಿದೆ. ಇದೇ ಅಕ್ಟೋಬರ್ 28ರಂದು ಮಂಗಳೂರಿನಲ್ಲಿ (Mangaluru) ‘ಕರಾವಳಿ ರತ್ನ’ ಪ್ರಶಸ್ತಿ (Karavali Ratna Award) ಪ್ರದಾನ ಸಮಾರಂಭ ನಡೆಯಲಿದೆ.


ನ್ಯೂಸ್ 18 ಕನ್ನಡದ ‘ಕರಾವಳಿ ರತ್ನ 2022’ ಪ್ರಶಸ್ತಿ ಪ್ರದಾನ ಸಮಾರಂಭ


ಭಕ್ತಿಗೆ ನಾಗ, ಭಕ್ತರಿಗೆ ದೈವ, ಮುದಕ್ಕೆ ಕಿನಾರೆ, ಕದನಕ್ಕೆ ವೀರತ್ವ… ಕರಾವಳಿಯೆಂದರೆ ಪ್ರತಿಭೆಗಳ, ಸಾಧಕರ ಸಾರ್ವಕಾಲಿಕ ದೀಪಾವಳಿ. ಇತಿಹಾಸದಿಂದ ವರ್ತಮಾನದವರೆಗೆ ಕರಾವಳಿಯ ಕಡಲು ಸಾಧನಾ ರತ್ನಗಳಿಂದ ತುಂಬಿಹೋಗಿದೆ. ಇಂತಹ ರತ್ನಭಂಡಾರವನ್ನು ಶೋಧಿಸಿ ಅನರ್ಘ್ಯ, ಮಹೋನ್ನತ ರತ್ನಗಳನ್ನು ಹೆಕ್ಕಿ ತೆಗೆಯುವ ಹೆಮ್ಮೆಯ ಪ್ರಯತ್ನವೇ ನ್ಯೂಸ್ 18 ಕನ್ನಡದ ಕರಾವಳಿ ರತ್ನ.


ಅ. 28ರಂದು ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ


ಕರಾವಳಿ ಕರ್ನಾಟಕದ ಭಾಗದ ಸಾಧಕರನ್ನು ಗುರುತಿಸಿ, ಗೌರವಿಸಲು ನ್ಯೂಸ್ 18 ಕನ್ನಡ ಸಜ್ಜಾಗಿದೆ. ಇದೇ ಅಕ್ಟೋಬರ್ 28ರಂದು ಸಂಜೆ 5 ಗಂಟೆಗೆ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕರಾವಳಿ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದೆ.


ಇದನ್ನೂ ಓದಿ: Kantara For Oscars: ಆಸ್ಕರ್ ಅಂಗಳಕ್ಕೆ ಹೋಗುತ್ತಾ ಕಾಂತಾರ? ಅಭಿಮಾನಿಗಳಿಂದ ಶುರುವಾಗಿದೆ ಕ್ಯಾಂಪೇನ್!


ಪ್ರತಿಭೆಗಳ ಸಾಗರ ಕರುನಾಡ ಕರಾವಳಿ!


ಕರಾವಳಿ ಅಂದರೆ ಪ್ರತಿಭೆಗಳು ಮತ್ತು ಪ್ರತಿಭಾವಂತರ ಸಾಗರ! ಇಲ್ಲಿನ ಜನರು ರಾಜ್ಯ, ದೇಶ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹಲವು ಸಾಧನೆ ಮಾಡಿದ ಕರಾವಳಿ ಸಾಧಕರು, ಕನ್ನಡ ನಾಡಿನ ಕೀರ್ತಿ ಪತಾಕೆ ಎತ್ತರಕ್ಕೆ ಹಾರಿಸಿದ್ದಾರೆ. ಅಂತಹ ಕರಾವಳಿ ಸಾಧಕರಿಗೆ ಈ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.


ಕರಾವಳಿಯ ಹಲವು ಸಾಧಕರಿಗೆ ಸನ್ಮಾನ


ಹಲವು ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಕರಾವಳಿ ರತ್ನ ಪ್ರಶಸ್ತಿ ನೀಡಲು ನ್ಯೂಸ್ 18 ಕನ್ನಡ ಸಜ್ಜಾಗಿದೆ. ಈ ಅದ್ಧೂರಿ ಸಮಾರಂಭದಲ್ಲಿ ರಾಜಕೀಯ, ಮನರಂಜನೆ, ಕ್ರೀಡೆ ಮತ್ತು ವಿಜ್ಞಾನ  ಮತ್ತು ತಂತ್ರಜ್ಞಾನ, ಶಿಕ್ಷಣ, ಸಮಾಜ ಸೇವೆ, ಚಲನಚಿತ್ರ ಮತ್ತು ಮನರಂಜನೆ, ಕೃಷಿ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಸೇರಿದಂತೆ ವಿವಿಧ ವಿಭಾಗಗಳ, ವಿವಿಧ ಉದ್ಯಮಗಳ ಗಣ್ಯರನ್ನು ಗೌರವಿಸಲಾಗುತ್ತದೆ. ಜೊತೆಗೆ ವಿಶೇಷ ಪ್ರಶಸ್ತಿ, ಜೊತೆಗೆ ಜೀವಮಾನದ ಸಾಧನೆಗೈದ ಸಾಧಕರನ್ನೂ ಸನ್ಮಾನಿಸಲಾಗುತ್ತದೆ.


ಸಾಧಕರಿಂದಲೇ ಕರಾವಳಿ ಸಾಧಕರಿಗೆ ಸನ್ಮಾನ


ಕರಾವಳಿ ರತ್ನ 2022 ನ್ಯೂಸ್  18 ಕನ್ನಡದ ಸಂಪಾದಕೀಯ ತಂಡದ ಸಂಚಿತ ಪ್ರಯತ್ನವಾಗಿದೆ. ಸಾಧಕರ ಕಠಿಣ ಆಯ್ಕೆ ಪ್ರಕ್ರಿಯೆಯು ಪ್ರಶಸ್ತಿ ಪುರಸ್ಕೃತರಾಗಿ ವಿವಿಧ ಉದ್ಯಮಗಳಾದ್ಯಂತ ಹಲವಾರು ನಾಮನಿರ್ದೇಶನಗಳಲ್ಲಿ ಅತ್ಯುತ್ತಮ ಪ್ರೊಫೈಲ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಕರಾವಳಿ ರತ್ನ ಪ್ರಶಸ್ತಿ ವಿಜೇತರನ್ನು ಗೌರವಿಸಲು ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದ ಭಾಗವಾಗಲಿದ್ದಾರೆ.


ಇದನ್ನೂ ಓದಿ: Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?


ತುಳುನಾಡಿನ ಸಾಂಸ್ಕೃತಿಕ ಸಂಭ್ರಮ


ಕಲೆ, ಸಾಹಿತ್ಯ, ಉದ್ಯಮ, ಕ್ರೀಡೆ.. ಹೀಗೆ ವಿಭಿನ್ನ ಕ್ಷೇತ್ರಗಳ ವಿಶೇಷ ವ್ಯಕ್ತಿತ್ವಗಳನ್ನು ಗೌರವಿಸುವುದೆಂದರೆ ನಮಗೂ ಗೌರವ. ಈ ಸಂಭ್ರಮದ ಕಾರ್ಯಕ್ರಮಕ್ಕೆ ಕ್ಷಣಗಣಗೆ ಶುರುವಾಗಿದೆ.  ಗೌರವಾನ್ವಿತರ ಪುರಸ್ಕಾರದ ಜೊತೆ ಅದ್ಧೂರಿ ಮನರಂಜನೆಯೂ ಇದೆ. ತುಳುನಾಡಿನ ಸಂಸ್ಕೃತಿ ಬಿಂಬಿಸುವ ಆಕರ್ಷಕ ಕಲಾಪ್ರದರ್ಶನಕ್ಕೆ ಸಾಕ್ಷಿಯಾಗಿ. ಸರ್ವರಿಗೂ ಆದರದ ಸ್ವಾಗತ.

Published by:Annappa Achari
First published: