• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಆಟೋ ಚಾಲಕನಿಂದಾಗಿ ಆಸ್ಪತ್ರೆ ಸೇರಿದ ಎಎಸ್ಐ ಮೆದುಳು ನಿಷ್ಕ್ರಿಯ! ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

Bengaluru: ಆಟೋ ಚಾಲಕನಿಂದಾಗಿ ಆಸ್ಪತ್ರೆ ಸೇರಿದ ಎಎಸ್ಐ ಮೆದುಳು ನಿಷ್ಕ್ರಿಯ! ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

ಎಎಸ್​​ಐ ನಾಗರಾಜ್

ಎಎಸ್​​ಐ ನಾಗರಾಜ್

ಫೆಬ್ರವರಿ 26ರಂದು ಬಸವೇಶ್ವರ ಸರ್ಕಲ್ ಬಳಿ ಕರ್ತವ್ಯಕ್ಕೆ ನಿಯೋಜನೆ ಆಗಿದ್ದ ಎಎಸ್ಐ ನಾಗರಾಜ್ ಅವರಿಗೆ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ನಾಗರಾಜ್​ ಅವರನ್ನು ಸಂಪಿಗೆ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ತವ್ಯ ನಿರತ ಸಂಚಾರ ಸಹಾಯಕ ಸಬ್ ಇನ್ ಸ್ಪೆಕ್ಟರ್ಗೆ (Assistant Sub-inspector of Police) ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ನಾಗರಾಜ್ (ASI Nagaraj) ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೈಗ್ರೌಂಡ್ಸ್​​ ಸಂಚಾರ ಪೊಲೀಸ್ (Highground Police Station )​ ಠಾಣೆಯ ಎಎಸ್​​ಐ ಬಸವೇಶ್ವರ ಸರ್ಕಲ್ (Basaveshwara Circle) ಬಳಿ ಕರ್ತವ್ಯದಲ್ಲಿದ್ದ ವೇಳೆ ಅಪಘಾತ (Accident) ಸಂಭವಿಸಿದ್ದು, ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ (Hospital) ದಾಖಲು ಮಾಡಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ಪರಿಣಾಮ ಸತತ ಎರಡು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಅಧಿಕಾರಿ, ಮೆದುಳು ನಿಷ್ಕ್ರಿಯಗೊಂಡು ಇಂದು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಎಎಸ್​​ಐ ನಾಗರಾಜ್ ಅಂಗಾಂಗದಾನ ಮಾಡಲು ನಿರ್ಧಾರ


ನಗರದ ಏರ್​ಪೋರ್ಟ್​ ರೋಡ್​​ನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಎಎಸ್​​ಐ ನಾಗರಾಜ್​ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸದ್ಯ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಕಾರಣ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಆ ಮೂಲಕ ಹಲವು ಮಂದಿಗೆ ಮರುಜೀವ ನೀಡುವ ನಿರ್ಣಯ ಮಾಡಿದ್ದಾರೆ.


ಇದನ್ನೂ ಓದಿ: Ramesh Jarkiholi: 14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಜಯ ಸಿಕ್ಕಿದೆ- ಹೆಬ್ಬಾಳ್ಕರ್​​ಗೆ ಶಾಕ್​ ಕೊಟ್ಟ 'ಸಾಹುಕಾರ್​'!


ಆಟೋ ಚಾಲಕ ಶಿವಕುಮಾರ್


ಸಿಗ್ನಲ್​ ಜಂಪ್​ ಮಾಡಿ ವೇಗವಾಗಿ ಬಂದಿದ್ದ ಆಟೋ ಚಾಲಕ


ಫೆಬ್ರವರಿ 26ರಂದು ಬಸವೇಶ್ವರ ಸರ್ಕಲ್ ಬಳಿ ಕರ್ತವ್ಯಕ್ಕೆ ನಿಯೋಜನೆ ಆಗಿದ್ದ ಎಎಸ್ಐ ನಾಗರಾಜ್ ಅವರಿಗೆ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದಿತ್ತು. ಸಿಗ್ನಲ್​ ಜಂಪ್​ ಮಾಡಿ ಚಾಲಕ ಶಿವಕುಮಾರ್ ಎಂಬಾತ ಆಟೋ ಓಡಿಸಿಕೊಂಡು ಹೊರಟ ಸಂದರ್ಭದಲ್ಲಿ ನಾಗರಾಜ್​ ಅವರು ಆಟೋ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ನೀಡಿ ಆಟೋಗೆ ಅಡ್ಡ ಬಂದಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಚಾಲಕ ಪೊಲೀಸ್​ ಅಧಿಕಾರಿಗೆ ಆಟೋ ಡಿಕ್ಕಿ ಹೊಡೆಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ.


ಆಟೋ ಡಿಕ್ಕಿಯಾಗಿದ್ದ ರಭಸಕ್ಕೆ ಅಧಿಕಾರಿ ಏಳೆಂಟು ಅಡಿ ದೂರಕ್ಕೆ ಹಾರಿ ಬಿದ್ದಿದ್ದರು. ಆದರೆ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಆಟೋ ಚಾಲಕನನ್ನು ಹಿಡಿದು ಹೈಗ್ರೌಂಡ್ಸ್ ಸಂಚಾರಿ ಪೊಲೀಸರ ವಶಕ್ಕೆ ನೀಡಿದ್ದರು. ಇತ್ತ ಗಾಯಗೊಂಡಿದ್ದ ನಾಗರಾಜ್​ ಅವರನ್ನು ಸಂಪಿಗೆ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಧಿಕಾರಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು, ಕುಟುಂಬಸ್ಥರಿಗೆ ತಿಳಿಸಿದ್ದರಂತೆ.




ಇದನ್ನೂ ಓದಿ: Bengaluru: ಕುಡಿತ ಬಿಡುವಂತೆ ಬೈದು ಬುದ್ಧಿ ಹೇಳಿದ್ದ ಹೆಂಡತಿ; ರಸ್ತೆ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡ ಗಂಡ!


ಕಾಂಗ್ರೆಸ್​ ಮುಖಂಡನಿಗೆ ಚಾಕು ಇರಿತ


ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ಯೂತ್ ಕಾಂಗ್ರೆಸ್ (Youth Congress ) ಅಧ್ಯಕ್ಷ ಪ್ರಶಾಂತ ಅಪರಾಜ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಶಾಂತನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಾಯಾಳು ಪ್ರಶಾಂತ್‌ಗೆ ಕಾಗವಾಡ ತಾಲೂಕ್​ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಶಾಂತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣಾ (Kagwad Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published: