Omicron ಭಯ: ಮಹಾರಾಷ್ಟ್ರ, ಕರ್ನಾಟಕದಲ್ಲಿ ಮತ್ತೆ Online ತರಗತಿಗಳ ಕಡೆ ಮುಖ ಮಾಡಲಿವೆಯೇ ಶಾಲೆಗಳು?

ಕೋವಿಡ್ 19 ಕಾರಣದಿಂದ ದೇಶದೆಲ್ಲೆಡೆ ದೀರ್ಘ ಸಮಯದವರೆಗೆ ಮುಚ್ಚಿದ್ದ ಶಾಲೆಗಳು ಇತ್ತೀಚೆಗಷ್ಟೇ ತೆರೆದಿವೆ. ಆದರೆ, ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳು ಮತ್ತೆ ಶಾಲೆಗಳನ್ನು ಮುಚ್ಚುವ ಸಾಧ್ಯತೆಗಳು ಇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನ ವೈರಸ್‍ನ ಹೊಸ ರೂಪಾಂತರಿ ಓಮಿಕ್ರಾನ್ (Corona New Variant Omicron) ಹೆಚ್ಚಬಹುದು ಎಂಬ ಭಯದಿಂದ ಹಲವಾರು ರಾಜ್ಯ ಸರ್ಕಾರಗಳು (State Govt) , ಕೋವಿಡ್ ಪ್ರಕರಣಗಳು (Covid Cases) ಹೆಚ್ಚದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಆಲೋಚನೆ ನಡೆಸುತ್ತಿವೆ. ಕಳೆದ ವರ್ಷಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗತೊಡಗಿದಂತೆ, ಮೊದಲು ಮುಚ್ಚತೊಡಗಿದ್ದು ಶಾಲೆಗಳನ್ನು. ಈ ವರ್ಷವು ಕೂಡ ಹಲವಾರು ರಾಜ್ಯಗಳು ಅದೇ ಕ್ರಮವನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ. ಕೋವಿಡ್ 19 ಕಾರಣದಿಂದ ದೇಶದೆಲ್ಲೆಡೆ ದೀರ್ಘ ಸಮಯದ ವರೆಗೆ ಮುಚ್ಚಿದ್ದ ಶಾಲೆಗಳು ಇತ್ತೀಚೆಗಷ್ಟೇ ತೆರೆದಿವೆ. ಆದರೆ, ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳು ಮತ್ತೆ ಶಾಲೆಗಳನ್ನು ಮುಚ್ಚುವ ಸಾಧ್ಯತೆಗಳು ಇವೆ.

  ಮಹಾರಾಷ್ಟ್ರ:ಇತ್ತೀಚೆಗೆ ಮಹಾರಾಷ್ಟ್ರದ ಶಿಕ್ಷಣ ಸಚಿವರಾದ ವರ್ಷಾ ಗಾಯಕ್‍ವಾಡ್ ಅವರು , ರಾಜ್ಯ ಸರಕಾರವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಪ್ರಕರಣಗಳ ಹೆಚ್ಚಳ ಮುಂದುವರಿದರೆ ಶಾಲೆಗಳನ್ನು ಮುಚ್ಚುವ ಆದೇಶ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ವರ್ಷಾ ಗಾಯಕ್‍ವಾಡ್ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, “ಒಂದು ವೇಳೆ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಾ ಹೋದರೆ, ನಾವು ಶಾಲೆಗಳನ್ನು ಪುನಃ ಮುಚ್ಚು ಘೋಷಣೆಗಳನ್ನು ಮಾಡಬೇಕಾಗುತ್ತದೆ. ನಾವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದೇವೆ” ಎಂದು ಹೇಳಿದರು. ಇತ್ತೀಚಿನ ಸಂಖ್ಯೆಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 54 ಓಮಿಕ್ರಾನ್ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈ ವರೆಗೆ 57 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರ ಈ ವಿಷಯದಲ್ಲಿ ದೆಹಲಿಯ ನಂತರದ ಸ್ಥಾನದಲ್ಲಿ ಇದೆ.

  ಇದನ್ನೂ ಓದಿ: Covid vaccines : ಶಾಲಾ ಐಡಿ ತೋರಿಸಿಯೂ ಪಡೆಯಬಹುದು ಲಸಿಕೆ; ಮಕ್ಕಳಿಗೆ ಯಾವ ವಾಕ್ಸಿನ್​ ಉತ್ತಮ ಇಲ್ಲಿದೆ ಮಾಹಿತಿ

  ಮಹಾರಾಷ್ಟ್ರದಲ್ಲಿ , ಗ್ರಾಮೀಣ ಪ್ರದೇಶಗಳಲ್ಲಿ 5 ರಿಂದ 12 ನೇ ತರಗತಿ ವರೆಗಿನ ತರಗತಿಗಳು ಮತ್ತು ನಗರ ಪ್ರದೇಶಗಳಲ್ಲಿ 8 ರಿಂದ 12 ನೇ ತರಗತಿ ವರೆಗೆ ಹಾಗೂ ದೊಡ್ಡ ತರಗತಿಗಳು ಅಕ್ಟೋಬರ್‍ನಲ್ಲಿ ಆರಂಭಗೊಂಡವು. ರಾಜ್ಯದಲ್ಲಿ ಕ್ರೀಡಾ ತರಗತಿಗಳು ಡಿಸೆಂಬರ್ ಒಂದರಿಂದ ಆರಂಭವಾದವು. ಮುಂಬೈನಲ್ಲಿ ಡಿಸೆಂಬರ್ 15 ರಿಂದ ತರಗತಿಗಳು ಆರಂಭವಾದವು.ಅದೇ ಸಮಯದಲ್ಲಿ ಪುಣೆಯಲ್ಲಿ ಪುನರಾರಂಭಗೊಂಡಿದ್ದ ಶಾಲೆಗಳು, ಓಮಿಕ್ರಾನ್ ಭಯದಿಂದ ಪುನರಾರಂಭವನ್ನು ಡಿಸೆಂಬರ್ 15ಕ್ಕೆ ಮುಂದೂಡಿದ್ದವು.

  ಕರ್ನಾಟಕ: ಕರ್ನಾಟಕದಲ್ಲಿ ಇತ್ತೀಚೆಗೆ ಕಾಲೇಜೊಂದರಲ್ಲಿ ಒಮ್ಮೆಲೆ ಹಲವಾರು ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ , ಶೈಕ್ಷಣಿಕ ಸಂಸ್ಥೆಗಳು ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಕೂಟಗಳನ್ನು ಜನವರಿ 15 ರ ವರೆಗೆ ಮುಂದೂಡಬೇಕು ಎಂದು ಸರಕಾರ ಸೂಚನೆ ನೀಡಿತ್ತು. “ಹೆತ್ತವರು ಸಂಪೂರ್ಣ ಕೋವಿಡ್ ಲಸಿಕೆ ಪಡೆಯದಿದ್ದಲ್ಲಿ ವಿದ್ಯಾರ್ಥಿಗಳು ಆಫ್‍ಲೈನ್ ತರಗತಿಗಳಿಗೆ ಹಾಜರಾಗುವಂತಿಲ್ಲ “ ಎಂದು ಒಂದು ಸರಕಾರಿ ಪ್ರಕಟಣೆ ತಿಳಿಸಿದೆ.

  ಡಿಸೆಂಬರ್ 6 ರಂದು ಪ್ರಾಥಮಿಕ ಮತ್ತು ಪ್ರೌಢ ಶೀಕ್ಷಣ ಸಚಿವ ಬಿ ಸಿ ನಾಗೇಶ್, ಪರಿಸ್ಥಿತಿ ಹೀಗೆ ಮುಂದುವರೆದರೆ ಸರಕಾರವು ಪರೀಕ್ಷೆಗಳನ್ನು ಮತ್ತು ಶಾಲೆಗಳನ್ನು ನಡೆಸುವುದನ್ನು ನಿಲ್ಲಿಸಲಿದೆ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, “ ಶಿಕ್ಷಣ ಇಲಾಖೆಯು ಗಂಟೆಗಳ ಆಧಾರದಲ್ಲಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅಗತ್ಯ ಬಿದ್ದರೆ, ಪರೀಕ್ಷೆಗಳನ್ನು ನಡೆಸುವ ಕುರಿತು ಕೂಡ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಪರೀಕ್ಷಾ ಹಾಲ್‍ಗಳಲ್ಲಿ ಸಾಮಾಜಿಕ ಅಂತರವನ್ನು ಖಾತರಿಗೊಳಿಸಲಾಗುತ್ತದೆ. ಒಂದು ವೇಳೆ ಕೋವಿಡ್ ಪ್ರಕರಗಳಲ್ಲಿ ಗಂಭೀರ ಹೆಚ್ಚಳ ಕಂಡು ಬಂದರೆ, ನಾವು ಶಾಲೆಗಳನ್ನು ಮುಚ್ಚುವ ಮತ್ತು ಪರೀಕ್ಷೆಗಳನ್ನು ರದ್ದು ಮಾಡುವ ಆಯ್ಕೆಯನ್ನು ತೆರೆದಿಟ್ಟುಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: Night Curfew Rules: ನೈಟ್​ ಕರ್ಫ್ಯೂ ಸಮಯದಲ್ಲಿ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಫುಲ್ ಡೀಟೈಲ್ಸ್

  ಕೇಂದ್ರ ಸರಕಾರವು ಕೂಡ, ರಾಜ್ಯಗಳಿಗೆ “ವಾರ್ ರೂಮ್”ಗಳನ್ನು ಸಿದ್ಧವಾಗಿಡುವಂತೆ ಮತ್ತು ರಾತ್ರಿ ಕಫ್ರ್ಯೂ ಹಾಗೂ ಜನರು ಒಂದು ಕಡೆ ಗುಂಪುಗೂಡುವುದರ ಕಡೆಗೆ ಕಫ್ರ್ಯೂ ಹೇರುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಮರಳಿ ತರುವಂತೆ ತಿಳಿಸಿದೆ.
  ಇದುವರೆಗೆ ದೇಶದಲ್ಲಿ 300ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಪ್ರಕರಣಗಳು ಮುಂಚೂಣಿಯಲ್ಲಿವೆ. ಓಮಿಕ್ರಾನ್ ಭಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೋಷಕರು ಕೂಡ ಆನ್‍ಲೈನ್ ತರಗತಿಗಳನೇ ಮುಂದುವರೆಸುವಂತೆ ಮತ್ತು ಆಫ್‍ಲೈನ್ ತರಗತಿಗಳನ್ನು ಆರಂಭಿಸದಂತೆ ಶಾಲೆಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೂ ಈ ವರೆಗೆ ಶಾಲೆಗಳನ್ನು ಮುಚ್ಚುವ ಕುರಿತು ಯಾವುದೇ ಶಿಫಾರಸ್ಸು ಮಾಡಲಾಗಿಲ್ಲ. ಇದೇ ಸಂದರ್ಭದಲ್ಲಿ ದೆಹಲಿ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಹಲವಾರು ಶಾಲೆಗಳು ಕೋವಿಡ್ ಪ್ರಕರಣಗಳ ಭಯದಿಂದ ಮತ್ತೆ ಆನ್‍ಲೈನ್ ತರಗತಿಗಳ ಕಡೆಗೆ ಮುಖ ಮಾಡಿವೆ.
  Published by:Kavya V
  First published: