ನೀನೊಬ್ನೇ ಲಾಭದ ನಿರೀಕ್ಷೆ ಇಲ್ಲದೆ ಬರೋನು; ಆರೋಗ್ಯ ವಿಚಾರಿಸಲು ಬಂದ ಪ್ರಥಮ್ ಬೆನ್ನು ಸವರಿದ​ ಸಿದ್ದರಾಮಯ್ಯ

ಶನಿವಾರ ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವ ನಟ ಪ್ರಥಮ್ ಈ ಬಗ್ಗೆ ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ಬರೋನು ನೀನೊಬ್ಬನೇ. ನಿನಗೆ ಒಳ್ಳೆಯದಾಗುತ್ತೆ ಎಂದು ಸಿದ್ದರಾಮಯ್ಯ ಹರಸಿದ್ದಾರೆ ಎಂದು ಕೂಡ ಪ್ರಥಮ್ ಬರೆದುಕೊಂಡಿದ್ದಾರೆ.

Sushma Chakre | news18-kannada
Updated:December 15, 2019, 10:20 AM IST
ನೀನೊಬ್ನೇ ಲಾಭದ ನಿರೀಕ್ಷೆ ಇಲ್ಲದೆ ಬರೋನು; ಆರೋಗ್ಯ ವಿಚಾರಿಸಲು ಬಂದ ಪ್ರಥಮ್ ಬೆನ್ನು ಸವರಿದ​ ಸಿದ್ದರಾಮಯ್ಯ
ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ ನಟ ಪ್ರಥಮ್
  • Share this:
ಬೆಂಗಳೂರು (ಡಿ. 15): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯದಿಂದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಸಿದ್ದರಾಮಯ್ಯ ಇಂದು ಡಿಸ್ಚಾರ್ಜ್​ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸಿಎಂ ಯಡಿಯೂರಪ್ಪ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ರಮೇಶ್ ಜಾರಕಿಹೊಳಿ, ಎಚ್​. ವಿಶ್ವನಾಥ್ ಸೇರಿದಂತೆ ರಾಜಕೀಯ ಶತ್ರುಗಳು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಶನಿವಾರ ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವ ನಟ ಪ್ರಥಮ್ ಈ ಬಗ್ಗೆ ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ಬರೋನು ನೀನೊಬ್ಬನೇ. ನಿನಗೆ ಒಳ್ಳೆಯದಾಗುತ್ತೆ ಎಂದು ಸಿದ್ದರಾಮಯ್ಯ ಹರಸಿದ್ದಾರೆ ಎಂದು ಕೂಡ ಪ್ರಥಮ್ ಬರೆದುಕೊಂಡಿದ್ದಾರೆ.ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕೂಡಲೆ ಅವರು ಬಹಳ ಖುಷಿಯಾದರು. ನಾಳೆ ನಾನೇ ಡಿಸ್ಚಾರ್ಜ್ ಆಗ್ತಿದ್ದೆ. ನಾಳೆ ಮನೆಗೆ ಬಾ ಎಂದರು. ಅದೇನೋ ಗೊತ್ತಿಲ್ಲ ನನ್ನ ನೋಡಿದ ಕೂಡಲೇ ಬಹಳ ಖುಷಿ ಪಟ್ಟರು! ನನ್ನ ಎಲ್ಲಾ ಕಾರ್ಯಕ್ರಮದಲ್ಲೂ ಸಿದ್ದರಾಮಣ್ಣ ಜೊತೆಯಲ್ಲಿರ್ತಾರೆ. ಅವರ ಆರೋಗ್ಯ ವ್ಯತ್ಯಾಸದ ವಿಷಯ ಕೇಳಿ ಬಹಳಷ್ಟು ಬೇಸರವಾಗಿತ್ತು. ಆಸ್ಪತ್ರೆಯಲ್ಲಿ ಅವರ ನಗು ನೋಡಿ ಸಮಾಧಾನ ಆಯ್ತು! ಯಾವಾಗ್ಲೂ ನಮ್‌ ಸಿದ್ಧರಾಮಣ್ಣ 'ನೀನೊಬ್ನೆ ಕಣಯ್ಯಾ ಯಾವ ಲಾಭದ ನಿರೀಕ್ಷೆ ಇಲ್ಲದೇ ಬರ್ತೀಯಾ, ನಿನಗೆ ಒಳ್ಳೇದಾಗುತ್ತೆ' ಎಂದು ಹೇಳುತ್ತಿದ್ದರು. ಈ ಬಾರಿ ಕೂಡ ಅದೇ ಮಾತು ಹೇಳಿದರು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ಪ್ರಥಮ್ ಇದೀಗ 'ನಟ ಭಯಂಕರ' ಎಂಬ ಸಿನಿಮಾಗೆ ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಿದ್ದು, ತಾವೇ ನಟನಾಗಿಯೂ ಅಭಿನಯಿಸುತ್ತಿದ್ದಾರೆ.
Published by: Sushma Chakre
First published: December 15, 2019, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading