Olive Ridley Sea Turtle: ಅಪರೂಪದ ಅಳಿವಿನಂಚಿನಲ್ಲಿರುವ ಕಡಲಾಮೆಯ ಸಂತಾನೋತ್ಪತ್ತಿಗೆ ಜಾಗವಾದ ಕಾರವಾರ ಕಡಲತೀರ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಡಲು ಅನೇಕ ಅಪರೂಪದ ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

olive ridley turtle

olive ridley turtle

  • Share this:
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಡಲು ಅನೇಕ ಅಪರೂಪದ ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಆಲಿವ್ ರಿಡ್ಲೇ ಕಡಲಾಮೆಗಳು (Olive ridley sea turtle) ಜಿಲ್ಲೆಯ ಕರಾವಳಿ ತಟಗಳನ್ನ ಸಂತಾನೋತ್ಪತ್ತಿಯ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ವಿವಿಧೆಡೆ ಮೊಟ್ಟೆಗಳನ್ನಿಟ್ಟು ತೆರಳಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಗೊಳಪಡುವ ಈ ಆಮೆಗಳ ಮೊಟ್ಟೆಗಳನ್ನೀಗ ಸಂರಕ್ಷಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ (Forest Department) ಮುಂದಾಗಿದೆ. ಈ ಮೊಟ್ಟೆಗಳಿಗೆ ರಾಜ್ಯ ಮತ್ತು ವಿದೇಶಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಲಾಕ್ ಡೌನ್ ವೇಳೆ ಪ್ರವಾಸಿಗರ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಅನೇಕ ಜಲಚರ ಜೀವಿಗಳು ದಡಕ್ಕೆ ಬಂದು ವಿಹರಿಸಿದ್ದವು.

ಸಂತಾನೋತ್ಪತ್ತಿಗೆ ಉತ್ತಮ ಜಾಗವನ್ನಾಗಿ ಆಯ್ಕೆ ಮಾಡಿಕೊಂಡ ಆಲಿವ್ ರೆಡ್ಲಿ ಕಡಲ ಆಮೆಗಳು

ಹೌದು, 140 ಕಿ.ಮೀ. ವ್ಯಾಪ್ತಿಯ ಉತ್ತರ ಕನ್ನಡದ ಕಡಲು ಸಹಸ್ರಾರು ಅಪರೂಪದ ಜೀವಿಗಳ ವಾಸಸ್ಥಾನ. ಅದರಲ್ಲೂ ಈ ಭಾಗದಲ್ಲಿ ಅಳಿನಂಚಿನಲ್ಲಿರುವ ಆಲಿವ್ ರಿಡ್ಲೇ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಟ್ಟು ತೆರಳಿರುವುದು ಇದೀಗ ಜಿಲ್ಲೆಯ ಕಡಲತೀರಕ್ಕೆ ಇನ್ನಷ್ಟು ಪ್ರಾಮುಖ್ಯತೆ ದೊರಕಿಸಿಕೊಟ್ಟಿದೆ.

ಇದನ್ನೂ ಓದಿ:  ರಾಜ್ಯಕ್ಕೆ GOOD NEWS: ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಕೇಂದ್ರದ ಗ್ರೀನ್​ಸಿಗ್ನಲ್​​

ಜನವರಿಯಿಂದ ಮಾರ್ಚ್ ತಿಂಗಳು ಈ ಆಮೆಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ಕಾರವಾರದ ದೇವಬಾಗ, ಅಂಕೋಲಾದ ಕೇಣಿ ಕಡಲತೀರದಲ್ಲಿ 250ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿವೆ.

ಆಲಿವ್ ರಿಡ್ಲೇಗಳಿಗೆ ಭಾರೀ ಬೇಡಿಕೆ

ಆಮೆಗಳ ಜೊತೆಗೆ ಆಮೆಗಳ ಮೊಟ್ಟೆಗಳಿಗೆ ಅದರಲ್ಲೂ ಅಪರೂಪದ ಈ ಆಲಿವ್ ರಿಡ್ಲೇಗಳಿಗೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಈ ಆಮೆ ಮೊಟ್ಟೆಗಳನ್ನು ತಿನ್ನುವ ಜನಾಂಗವೂ ಒಂದಿದೆ. ಹೀಗಾಗಿ ಅಂಥವರಿಂದ ಈ ಆಮೆಗಳನ್ನು ಸಂರಕ್ಷಿಸುವುದಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಪ್ರಭೇದದ ಉಳಿವಿಗಾಗಿ ಶ್ರಮಿಸಲೆಂದೇ ಅರಣ್ಯ ಇಲಾಖೆ ಕರಾವಳಿ ಮತ್ತು ಕಡಲು ಪರಿಸರ ವಿಭಾಗವನ್ನ ಸ್ಥಾಪಿಸಿದೆ.

ಈ ವಿಭಾಗದ ಆರ್‌ಎಫ್‌ಒ ಪ್ರಮೋದ್ ಅವರ ನೇತೃತ್ವದ ತಂಡ ಮೀನುಗಾರರ ಸಹಕಾರದೊಂದಿಗೆ ಈ ಮೊಟ್ಟೆಗಳನ್ನು ಸಂರಕ್ಷಿಸಿ, ದಿನವಿಡೀ ಕಾಯುವ ಕಾರ್ಯ ನಡೆಸುತ್ತಿದೆ. ಅರಣ್ಯ ಇಲಾಖೆ ಕಡಲ ಆಮೆಯ ರಕ್ಷಣೆಗೆ ಮುಂದಾಗಿದ್ದು ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ:  Two-Headed Diamondback Turtle| ಅಮೆರಿಕದಲ್ಲಿ ಪತ್ತೆಯಾದ ಅಪರೂಪದ ಎರಡು ತಲೆಯ ಡೈಮಂಡ್ ಬ್ಯಾಕ್ ಟೆರಪಿನ್ ಆಮೆ

ಯಾಕೆಂದ್ರೆ ಇತ್ತಚಿಗೆ ಕಡಲ ಆಮೆಗಳ ಸರಣಿ‌ಸಾವು ಕಾರವಾರ ಸೇರಿ ಜಿಲ್ಲೆಯ ಕಡಲತೀರದಲ್ಲಿ ನಡೆಯುತ್ತಿತ್ತು ಆದ್ರೆ ಈಗ ಅಪರೂಪದ ಕಡಲ ಆಮೆಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಜತಗೆ ಅವುಗಳ ಮೊಟ್ಟೆ ಕೂಡಾ ರಕ್ಷಣೆ ಮಾಡಿ ಸಂತಾನೋತ್ಪತ್ತಿಗೆ ಉತ್ತಮ ವಾತಾವರಣ ಕಲ್ಪಿಸಿರೋದು ಉತ್ತಮ‌ಬೆಳವಣಿಗೆ...

ಹುಣ್ಣಿಮೆ ಬೆಳಕಲ್ಲಿ ಮೊಟ್ಟೆ ಇಡುವ ಕಡಲ ಆಮೆಗಳು

ಹುಣ್ಣಿಮೆ, ಬೆಳಕಿರುವ ಸಮಯದಲ್ಲಿ ಮೊಟ್ಟೆಗಳನ್ನಿಡುವ ಈ ಆಮೆಗಳು, ಅವುಗಳ ರಕ್ಷಣೆಯ ಜವಾಬ್ದಾರಿಯನ್ನೂ ತಾನೇ ವಹಿಸಿಕೊಂಡಿರುತ್ತದೆ. ಮೊಟ್ಟೆಗಳನ್ನಿಟ್ಟು ಹೋಗುವಾಗ ಮೊಟ್ಟೆಗಳಿರುವ ಜಾಗ ಗೊತ್ತಾಗದಂತೆ ತಾನು ಬಂದ ದಾರಿಯನ್ನೂ ಅಳಿಸಿ ತೆರಳುತ್ತವೆ. ಆದರೂ ಅರಣ್ಯ ಇಲಾಖೆ ಈ ಆಮೆಗಳ ಗೂಡುಗಳನ್ನ ಪತ್ತೆ ಮಾಡಿವೆ.

ಅರಣ್ಯ ಇಲಾಖೆ ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ

ಅಳಿವಿನಂಚಿನಲ್ಲಿರುವ ಇವುಗಳ ಸಂರಕ್ಷಣೆ ಕೇವಲ ಇಲಾಖೆಯದ್ದಷ್ಟೇ ಅಲ್ಲ, ಸಾರ್ವಜನಿಕರದ್ದೂ ಕೂಡ ಆಗಿದೆ. ಹೀಗಾಗಿ ಸಾರ್ವಜನಿಕರು ಮೊಟ್ಟೆಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಿಕೊಟ್ಟಲ್ಲಿ ಅರಣ್ಯ ಇಲಾಖೆ ಸಾವಿರ ರೂಪಾಯಿ ನಗದು ಬಹುಮಾನ(Cash Prize)ವನ್ನೂ ಘೋಷಿಸಿದೆ.

ಅದೇನೆ ಇರಲಿ, ಈ ಮೊಟ್ಟೆಗಳಿಂದ ಮರಿ ಹೊರ ಬರಲು ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಸುರಕ್ಷಿತವಾಗಿ ಎಷ್ಟು ಆಮೆಗಳ ಜನನವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.
Published by:Mahmadrafik K
First published: