Kolar: ಕೋಲಾರದಲ್ಲಿದೆ ಹಲ್ಮಿಡಿ ಶಾಸನಕ್ಕಿಂತಲೂ ಪುರಾತನವಾದ ಕನ್ನಡ ಭಾಷೆಯ ತಾಮ್ರದ ಪತ್ರ

ತಾಮ್ರದ ಪತ್ರದಲ್ಲಿ ಅವಂತಿಪಾಳ್ಯದ ನಂದಿ ಲಾಂಛನ ಹಾಗೂ 5 ಪತ್ರಗಳ ಹಿಂದೆ ಮುಂದೆ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಕನ್ನಡ ಪದಗಳನ್ನ ಕಾಣಬಹುದಾಗಿದೆ,

ತಾಮ್ರದ ಪತ್ರ

ತಾಮ್ರದ ಪತ್ರ

  • Share this:
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು (Mudiyanuru) ಗ್ರಾಮದಲ್ಲಿ ಈ ಪುರಾತನವಾದ ತಾಮ್ರದ ಪತ್ರವನ್ನ  ರಕ್ಷಣೆ ಮಾಡಿ ಕಾಪಾಡಿಕೊಂಡಿರುವ ಡಾ ದಕ್ಷಿಣಮೂರ್ತಿ ಅವರು ಕೋಲಾರ ಜಿಲ್ಲಾಡಳಿತಕ್ಕೆ ಅಪರೂಪದ ದಾಖಲೆಯನ್ನ ಹಸ್ತಾಂತರ ಮಾಡುವ ಇಚ್ಚೆಯನ್ನು ಹೊಂದಿದ್ದಾರೆ. 

ದೇಶದಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಇತಿಹಾಸ ಪುಟದಲ್ಲಿನ ಶಾಸನಗಳು, ಸಾಹಿತ್ಯ, ಕಲೆ, ಹಾಗೂ ಕಾವ್ಯಗಳೇ ಪ್ರಮುಖ ಕಾರಣವಾಗಿದೆ, 2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುತ್ತಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು, ಆದರೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನಮಾನ ನೀಡಿದ್ದನ್ನ ಪ್ರಶ್ನಿಸಿ, ಚನ್ನೈ ಹೈಕೋರ್ಟ್‍ನಲ್ಲಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು, ಈ ಬಗ್ಗೆ ಚನ್ನೈ ನ್ಯಾಯಾಲಯ ಒಂದು ಸಮಿತಿಯನ್ನು ರಚಿಸಿದ್ದು, ವಿಚಾರಣೆ, ಪರಿಶೀಲನೆ, ಸಂಶೋಧನೆ ನಂತರ 2016 ರಲ್ಲಿ ದೂರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೆ ವಜಾಗೊಳಿಸಿತ್ತು, ಆ ಮೂಲಕ ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಪಡೆಯಲು ಅರ್ಹವಾದ ಭಾಷೆಯೆಂದು ಚನ್ನೈ ಹೈಕೋರ್ಟ್ ಸಹ ಕೇಂದ್ರ ಸರ್ಕಾರದ ಸ್ಥಾನಮಾನವನ್ನ ಎತ್ತಿಹಿಡಿದಿತ್ತು,ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಹೋರಾಟಕ್ಕೆ ಆನೆಬಲ

ಆದರೆ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ನ್ಯಾಯಾಂಗ ಹೋರಾಟಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿನ ತಾಮ್ರದ ಪತ್ರಗಳು ಆನೆಬಲ ತಂದುಕೊಟ್ಟಿತ್ತು, ಮುಡಿಯನೂರಿನ ಆಯುರ್ವೇದ ವೈದ್ಯರಾಗಿರುವ ಡಾ ದಕ್ಷಿಣ ಮೂರ್ತಿ ಅವರ ಪೂರ್ವಿಕರು, ಕ್ರಿಶ 338 ವರ್ಷದ ತಾಮ್ರ ಪತ್ರಗಳನ್ನ ಭದ್ರಪಡಿಸಿಕೊಂಡು ಬಂದಿದ್ದು, ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ನ್ಯಾಯಾಂಗ ಹೋರಾಟಕ್ಕೂ ಇದೇ ಕೋಲಾರದ ತಾಮ್ರ ಪತ್ರ ಸಹಕಾರಿಯಾಗಿದೆ.

ಇದನ್ನು ಓದಿ: ನಟಿ ಸಮಂತಾಗೆ ಬಂತು ಬಾಲಿವುಡ್ ಬಂಪರ್‌ ಆಫರ್‌..! ಕೇಳಿದ್ರೆ ಶಾಕ್‌ ಆಗ್ತೀರಾ..?

ಕನ್ನಡ ಭಾಷೆಯ ಮೊದಲ ಶಾಸನ ಎಂದು ಹಲ್ಮಿಡಿ ಶಾಸನವನ್ನ ಕರೆಯುತ್ತೇವೆ, ಆದರೆ ಮುಡಿಯನೂರಿನ ವೆಂಕಟರಾಮಶಾಸ್ತ್ರಿ ಎನ್ನುವರ ವಶದಲ್ಲಿದ್ದ ತಾಮ್ರದ ಪತ್ರಗಳು ಹಲ್ಮಿಡಿ ಶಾಸನಕ್ಕಿಂತಲೂ ನೂರು ವರ್ಷಕ್ಕೂ ಹೆಚ್ಚು ಕಾಲದ ಹಳೆಯದಾಗಿದೆ, ಕ್ರಿಸ್ತ ಶಕ 338 ರಲ್ಲಿ ಅಂದಿನ ಅವಂತಿಪಾಳ್ಯದಲ್ಲಿನ ಆಳ್ವಿಕೆ ನಡೆಸುತ್ತಿದ್ದ ನಂದಿವರ್ಮ ಎನ್ನುವರು ಈ ತಾಮ್ರದ ಪತ್ರವನ್ನ ರಚಿಸಿದ್ದಾರೆ.ನ್ಯಾಯಾಲಯದ ಮುಂದೆ ಪ್ರಸ್ತುತಿ

ತಾಮ್ರದ ಪತ್ರದಲ್ಲಿ ಅವಂತಿಪಾಳ್ಯದ ನಂದಿ ಲಾಂಛನ ಹಾಗೂ 5 ಪತ್ರಗಳ ಹಿಂದೆ ಮುಂದೆ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಕನ್ನಡ ಪದಗಳನ್ನ ಕಾಣಬಹುದಾಗಿದೆ, ಇದೇ ಪತ್ರಗಳನ್ನ ಚನ್ನೈ ಹೈಕೋರ್ಟ್‍ನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಹೋರಾಟದಲ್ಲಿ ವಕೀಲರು ನ್ಯಾಯಾಧೀಶರು ಎದುರು ಸಾಕ್ಷಿಯಾಗಿ ಪ್ರಸ್ತುತ ಪಡಿಸಿದ್ದು, ಸಂಶೋಧಕರು ತಾಮ್ರದ ಪತ್ರಗಳ ಪರಿಶೋಧಿಸಿದ ನಂತರ ನ್ಯಾಯಾಲಯವೂ ಈ ದಾಖಲೆಯನ್ನ ಒಪ್ಪಿದೆ.

ಇದನ್ನು ಓದಿ: ಕೃಷ್ಣನ ಪೂಜಾಧಿಕಾರ ಪಡೆದ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ; ಅದ್ದೂರಿ ದರ್ಬಾರ್ ಮೂಲಕ ಪರ್ಯಾಯ ಸಂಪನ್ನ

ಪ್ರಸಿದ್ದ ಇತಿಹಾಸಕಾರ ಪ್ರೊಪೆಸರ್ ಕೆಆರ್ ನರಸಿಂಹನ್ ಅವರು ಈ ತಾಮ್ರದ ಪತ್ರಗಳ ಬಗ್ಗೆ ಮೊದಲು ಪರಿಶೀಲನೆ ನಡೆಸಿ ಬಳಿಕ ನ್ಯಾಯಾಂಗ ಹೊರಾಟದಲ್ಲಿ ದಾಖಲಿಸಿಕೊಂಡಿದ್ದರು, ಈಗ ತಾಮ್ರ ಪತ್ರಗಳ ವಾರಸುದಾರರಾದ ದಕ್ಷಿಣ ಮೂರ್ತಿಯವರ ವಶದಲ್ಲಿ ತಾಮ್ರದ ಪತ್ರಗಳಿದೆ, ಈ ತಾಮ್ರ ಪತ್ರ ಕನ್ನಡ ಭಾಷೆ ಸಹಕಾರ ಆಗಿದ್ದು ನಮಗೆ ಹಾಗೂ ನಮ್ಮ ಗ್ರಾಮಕ್ಕೆ ಹೆಮ್ಮೆ ತರುವಂತಹ ವಿಚಾರ ಎಂದು ದಕ್ಷಿಣ ಮೂರ್ತಿಯವರು ನ್ಯೂಸ್ 18 ಕನ್ನಡ ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ,

ಮುಡಿಯನೂರಿನ ತಾಮ್ರದ ಪತ್ರದಲ್ಲೇನಿದೆ

ಅವಂತಿಪಾಳ್ಯದ ಆಳ್ವಿಕೆಯಲ್ಲಿ ರಚಿಸಲಾಗಿದ್ದ ಈ ಪತ್ರಗಳಲ್ಲಿ ಮುಡಿಯನೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಮುಂದಿನ ಆಳ್ವಿಕೆ, ಗ್ರಾಮಗಳ ಭೂಭಾಗದ ವ್ಯಾಪ್ತಿ, ಹಿರಿಯರಿಗೆ ಗೌರವ ನೀಡುವುದು, ಗ್ರಾಮದಲ್ಲಿನ ಆಚಾರ ವಿಚಾರಗಳನ್ನ ರೂಡಿಸಿಕೊಂಡು ಮುಂದುವರೆಸುವುದು, ಗ್ರಾಮಸ್ಥರಲ್ಲಿ ಹೊಂದಾಣಿಕೆ ಮನೋಭಾವ ರೂಢಿಸುವ ಪ್ರಮುಖವಾದ ಅಂಶಗಳನ್ನ ಸಂಸ್ಕೃತ ಪದಗಳಿಂದ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ, ಇಂದಿಗೂ ಗ್ರಾಮದಲ್ಲಿ ಪೌರಾಣಿಕ ಆಚರಣೆಗಳು ಹಿರಿಯರ ಆಶಯದಂತೆ ನೆರವೇರುತ್ತಿದೆ, ಇಂತಹ ಅಮೂಲ್ಯವಾದ ತಾಮ್ರದ ಪತ್ರಗಳನ್ನ ಜಿಲ್ಲಾಡಳಿತದ ವಶಕ್ಕೆ ನೀಡಿ ಮುಂದಿ ಪೀಳಿಗೆಗೆ ರಕ್ಷಿಸಿ, ಪರಿಚಯಿಸುವ ಚಿಂತನೆಯನ್ನು ಡಾ ದಕ್ಷಿಣ ಮೂರ್ತಿಯವರು ಮಾಡಿದ್ದಾರೆ.
Published by:Seema R
First published: