Bagalkot: ತನಗೆ ಇರಲು ಮನೆ ಇಲ್ಲದಿದ್ದರೂ ದೇವರಿಗೆ ಬೆಳ್ಳಿ ಬಾಗಿಲು ಮಾಡಿಸಿದ ವೃದ್ಧೆ! ತರಕಾರಿ ಮಾರುವ ಅಜ್ಜಿಯ ಭಕ್ತಿಗೆ ಜನರ ಮೆಚ್ಚುಗೆ

ಈ ಅಜ್ಜಿಯ ಹೆಸರು ಚಂದ್ರವ್ವ ಜಗದಾಳ ಅಂತ. ವಯಸ್ಸು 80 ವರ್ಷ. ಈಕೆ ತೋರಿದ ಭಕ್ತಿ, ಮಾಡಿದ ಕಾರ್ಯಕ್ಕೆ ಎಲ್ಲರನ್ನು ಆಶ್ಚರ್ಯಚಕಿತಗೊಳಿಸುತ್ತೆ. ಅಜ್ಜಿ ಚಂದ್ರವ್ವ ಅಲ್ಲಮಪ್ರಭು ದೇವಸ್ಥಾನದ ಗರ್ಭಗುಡಿಗೆ ಬೆಳ್ಳಿ ಬಾಗಿಲು ಮಾಡಿಸಿದ್ದಾರೆ. ಹಾಗೆಂದು ಈ ಅಜ್ಜಿಯೇನು ಕೋಟ್ಯಧೀಶೆಯೂ ಅಲ್ಲ.

ದೇಗುಲಕ್ಕೆ ದಾನ ಮಾಡಿದ ಅಜ್ಜಿ ಚಂದ್ರವ್ವ

ದೇಗುಲಕ್ಕೆ ದಾನ ಮಾಡಿದ ಅಜ್ಜಿ ಚಂದ್ರವ್ವ

 • Share this:
  ಬಾಗಲಕೋಟೆ: ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ (Society) ಸರ್ವಸ್ವ ಎನ್ನುವುದನ್ನು ಬಹುತೇಕರು ಬರೀ ಬಾಯಿ ಮಾತಿಗೆ ಹೇಳುತ್ತಾರೆ. ಆದರೆ ಕೆಲವರು ಮಾತ್ರ ಮಾತನಾಡದೇ ಇದನ್ನು ಮಾಡಿ ತೋರಿಸುತ್ತಾರೆ. ಈ ಆದರ್ಶಗಳನ್ನು (Ideal) ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡಿರುವವರು ನಮ್ಮ ಸುತ್ತಮುತ್ತ ಇರುತ್ತಾರೆ. ಇಂತವರ ಸಾಲಿಗೆ ಸೇರುವ ಗುಣವುಳ್ಳ ಅಜ್ಜಿಯೊಬ್ಬರು (Grand Mother) ಇಲ್ಲಿದ್ದಾರೆ. ದಿನ ಬೆಳಗಾದರೆ ತರಕಾರಿ (Vegetables) ಮಾರಾಟ (Sale) ಮಾಡಿ ಜೀವನ ಸಾಗಿಸುತ್ತ ಬಂದಿದ್ದ ವೃದ್ದೆಯೊಬ್ಬರ (Old Women) ಭಕ್ತಿ ಎಂಥದ್ದು ಅಂದ್ರೆ ತಾನು ಮಳೆ ಬಂದರೆ ಸೋರುವ ಮನೆಯಲ್ಲಿ ಇದ್ರೂ ದೇವರಿಗೆ (God) ಕಾಣಿಕೆ ಅಂತ ಬಂದಾಗ ಲಕ್ಷ ಲಕ್ಷ ದಾನ ಮಾಡಿ ಮಹಾದಾನಿ ಆಗಿದ್ದಾರೆ.

  ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿದ ಅಜ್ಜಿ

  ಇಂತಹ ಘಟನೆಗೆ ಸಾಕ್ಷಿಯಾಗಿದ್ದು, ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಅಲ್ಲಮಪ್ರಭುಸ್ವಾಮಿ ಬ್ರಹನ್ ಮಠ. ಇಲ್ಲಿ ಝಗಮಗಿಸುತ್ತಿರೋ ಈ ದೇಗುಲದ ಬೆಳ್ಳಿ ಬಾಗಿಲು ಮಾಡಿಸಿದ್ದ್ಯಾರು ಅಂತ ನೋಡಿದಾಗ ಅಲ್ಲೊಬ್ಬ ವೃದ್ದೆಯ ಭಕ್ತಿ ಅನಾವರಣ ಆಗುತ್ತೆ.  ಹೌದು, ಪುಟ್ಟ ಮನೆಯಲ್ಲಿ, ಅರೇಬರೇ ಬರ್ತಿರೋ ಬೆಳಕಲ್ಲಿ, ಮಳೆ ಬಂದ್ರೆ ಸೋರುವಂತಿರುವ ನಿವಾಸದಲ್ಲಿ ಕುಳಿತಿರೋ ಈ ಅಜ್ಜಿಯೇ ಅಲ್ಲಮಪ್ರಭು ಸ್ವಾಮಿ ದೇವಸ್ಥಾನದ ಬಾಗಿಲಿಗೆ ಬೆಳ್ಳಿ ಬಾಗಿಲು ಮಾಡಿಸಿ ತನ್ನ ಭಕ್ತಿಯನ್ನು ಮರೆದಿರೋದು.

  ತರಕಾರಿ ಮಾರುವ ಅಜ್ಜಿಯಿಂದ ದಾನ

  ಈ ಅಜ್ಜಿಯ ಹೆಸರು ಚಂದ್ರವ್ವ ಜಗದಾಳ ಅಂತ. ವಯಸ್ಸು 80 ವರ್ಷ. ಈಕೆ ತೋರಿದ ಭಕ್ತಿ, ಮಾಡಿದ ಕಾರ್ಯಕ್ಕೆ ಎಲ್ಲರನ್ನು ಆಶ್ಚರ್ಯಚಕಿತಗೊಳಿಸುತ್ತೆ. ಅಜ್ಜಿ ಚಂದ್ರವ್ವ ಅಲ್ಲಮಪ್ರಭು ದೇವಸ್ಥಾನದ ಗರ್ಭಗುಡಿಗೆ ಬೆಳ್ಳಿ ಬಾಗಿಲು ಮಾಡಿಸಿದ್ದಾರೆ. ಹಾಗೆಂದು ಈ ಅಜ್ಜಿಯೇನು ಕೋಟ್ಯಧೀಶೆಯೂ ಅಲ್ಲ.

  ಜೀವನ ನಿರ್ವಹಣೆಗಾಗಿ ತರಕಾರಿ ಮಾರಾಟ ಮಾಡುತ್ತ ಬಂದಿದ್ದು, ಈಗ ವಯಸ್ಸು ಮತ್ತು ಅನಾರೋಗ್ಯದಿಂದ ನಾಲ್ಕೈದು ವರ್ಷಗಳಿಂದ ತರಕಾರಿ ಮಾರಾಟವನ್ನು ನಿಲ್ಲಿಸಿದ್ದಾರೆ. ಬೀದಿ ಬದಿ ತರಕಾರಿ ಚಿಲ್ಲರೆ ವ್ಯಾಪಾರ ಮಾಡಿದ ಚಂದ್ರವ್ವಳಿಗೆ ಅಲ್ವಸ್ವಲ್ಪ ಜಮೀನು ಇತ್ತು. ಆ ಜಮೀನು ಮಾರಾಟ ಮಾಡಿ 20 ಕೆಜಿ ತೂಕದ ಅಂದಾಜು 15 ಲಕ್ಷ ರೂ. ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿ ದೇವರಿಗೆ ತನ್ನ ಭಕ್ತಿ ಅನಾವರಣ ಮಾಡಿದ್ದಾರೆ.

  ಇದನ್ನೂ ಓದಿ: E-Bike: ಈ ಕಾಲೇಜ್‌ನಲ್ಲಿ ಇನ್ನು ಗಸ್ತು ತಿರುಗುತ್ತೆ ಇ-ಬೈಕ್! ವಿದ್ಯಾರ್ಥಿಗಳೇ ತಯಾರಿಸಿದ್ರು ಪರಿಸರ ಸ್ನೇಹಿ ವಾಹನ

  ದೇಗುಲಕ್ಕೆ ಕೊಠಡಿ ಕಟ್ಟಿಸಿಕೊಟ್ಟ ಚಂದ್ರವ್ವ

  ಅಜ್ಜಿ ಚಂದ್ರವ್ವಳಿಗೆ ಪತಿ, ಮಕ್ಕಳಿಲ್ಲ. ಸಂಬಂಧಿಕರು ಅಜ್ಜಿಗೆ ಬೆಂಗಾವಲಾಗಿದ್ದಾರೆ. ಮನೆಯಲ್ಲಿ ಚಂದ್ರವ್ವ ಒಬ್ಬಳೆ ಇರುತ್ತಾರೆ. ಜೀವನ ಪೂರ್ತಿ ತರಕಾರಿ ಮಾರಾಟ ಮಾಡಿ ಅದರಿಂದ ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಹಣದಲ್ಲಿ ಒಂದಿಷ್ಟು ಆಸ್ತಿ ಕೂಡ ಖರೀದಿಸಿದ್ದು, ಇದಕ್ಕೆಲ್ಲ ಅಲ್ಲಮಪ್ರಭುಯ ಕೃಪೆ ಕಾರಣ ಎನ್ನೋದು ಅಜ್ಜಿಯ ನಂಬಿಕೆ. ಇನ್ನು ಕಳೆದ ಎಂಟು ವರ್ಷದ ಹಿಂದೆ ಮೂರು ಲಕ್ಷ ಖರ್ಚು ಮಾಡಿ ದೇವಸ್ಥಾನದಲ್ಲಿ ಒಂದು ಕೊಠಡಿ ಕಟ್ಟಿಸಿಕೊಟ್ಟಿದ್ದಾರೆ.

  40 ವರ್ಷಗಳಿಂದ ದೇವರಿಗೆ ಬಾಳೆ ಹಣ್ಣು ಅರ್ಪಣೆ

  ಇನ್ನು ಹೊಲದಲ್ಲಿ ಬಾಳೆ  ಹಾಗೂ ಎಲೆ ಬೆಳೆದಾಗ ಉತ್ತಮ ಫಸಲು ನೀಡು ಎಂದು ಅಲ್ಲಮಪ್ರಭುಗೆ ಅಜ್ಜಿ ಬೇಡಿಕೊಂಡಿದ್ದಳು. ಹರಕೆ ಎನ್ನುವಂತೆ ಉತ್ತಮ ಫಸಲು ಬಂದಿತ್ತು. ಆದ್ದರಿಂದ ನಿರಂತರ 40 ವರ್ಷ ನಿರಂತರವಾಗಿ ದೇವರಿಗೆ ಬಾಳೆ ಹಣ್ಣಿನ ಅಭಿಷೇಕ ಮಾಡಿಸಿದ್ದಾರೆ. ಈಗ 20 ಕೆಜಿ ತೂಕದ ಹದಿನೈದು ಲಕ್ಷ ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿದ್ದಾರೆ. ಬೆಳ್ಳಿ ಬಾಗಿಲನ್ನು ಚಿತ್ರದುರ್ಗ ಮೂಲದ ಅಕ್ಕಸಾಲಿಗರು ಮಾಡಿದ್ದು ಯುಗಾದಿ ಪಾಡ್ಯದ  ದಿನ ಚಂದ್ರವ್ವ ಮಾಡಿಸಿದ ಬೆಳ್ಳಿ ಬಾಗಿಲನ್ನು ಅಳವಡಿಸಲಾಗಿದೆ.

  ಇದನ್ನೂ ಓದಿ: Kolar: ಈ ಮುಸ್ಲಿಂ ಶಿಲ್ಪಿಯ ಕೈಯಲ್ಲಿ ರೂಪುಗೊಳ್ಳುತ್ತವೆ ಹಿಂದೂ ದೇವರು! ಎಲ್ಲರಿಗೂ ಇವರೇ ಅಚ್ಚುಮೆಚ್ಚು

  ಅಜ್ಜಿಗೆ ಕ್ಷೇತ್ರದ ಶಾಸಕರಿಂದ ಸನ್ಮಾನ

  ಇನ್ನು ಅಲ್ಲಮಪ್ರಭು ಸ್ವಾಮಿ ಬ್ರಹನ್ ಮಠವನ್ನು ನವೀಕರಣ ಮಾಡಲಾಗುತ್ತಿದೆ. ಹೀಗೆ ನವೀಕರಣದ ವೇಳೆ ಅಲ್ಲಿ ತಾನೊಂದು ಕಟ್ಟಡ ಕಟ್ಟಿಸಬೇಕು ಅಂತ ಅಜ್ಜಿ ಅಂದುಕೊಂಡಿದ್ದಳು. ಆದರೆ, ಕಟ್ಟಡ ಕಾರ್ಯ ನಡೆದಿದೆ. ನೀವು ಬೆಳ್ಳಿ ಬಾಗಿಲು ಮಾಡಿಸಿಕೊಡಿ ಎನ್ನುವ ಸಲಹೆ ಅಜ್ಜಿಗೆ ಬಂದಿದೆ. ಅದರಂತೆ 15 ಲಕ್ಷ ರೂ. ಖರ್ಚು ಮಾಡಿ ಬೆಳ್ಳಿಯ ಕದಗಳನ್ನು ಮಾಡಿಸಿಕೊಟ್ಟಿದ್ದಾಳೆ. ಅಜ್ಜಿಯ ಈ ಮಹಾದಾನ ಮೆಚ್ಚಿ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಅಜ್ಜಿಗೆ ಸನ್ಮಾನಿಸಿದ್ದಾರೆ.

  (ವರದಿ: ಮಂಜುನಾಥ್ ತಳವಾರ)
  Published by:Annappa Achari
  First published: