Raichur: ಹಳೆಯ ವಿದ್ಯಾರ್ಥಿಗಳ ಅಭಿಮಾನದಿಂದ‌ ಬದಲಾಯ್ತು ಸರಕಾರಿ ಶಾಲೆಯ ಚಿತ್ರಣ..!

ಇಲ್ಲೊಂದು‌‌ ಸರಕಾರಿ ಶಾಲೆ (Government School) ಹಳೆ ವಿದ್ಯಾರ್ಥಿಗಳ ಅಭಿಮಾನದಿಂದಾಗಿ‌ ಸಂಪೂರ್ಣವಾಗಿ ಬದಲಾಗಿದೆ.. ತಾವೇ ಕೈ ಯಲ್ಲಿ ಪಿಕಾಸಿ, ಗುದ್ದಲಿಗಳನ್ನ ಹಿಡಿದು, ಮರಳಿನೊಟ್ಟಿಗೆ ಸಿಮೆಂಟ್ ಕಲಿಸಿ ಪ್ಲಾಸ್ಟರ್ ಮಾಡಿದ್ದಾರೆ.

ಸರ್ಕಾರಿ ಶಾಲೆ

ಸರ್ಕಾರಿ ಶಾಲೆ

  • Share this:
ತಮಗೆ ವಿದ್ಯೆ ಕೊಟ್ಟ ಶಾಲೆ (School) ಮರೆಯದ ಹಳೆಯ ವಿದ್ಯಾರ್ಥಿಗಳು (Old Students), ಶಾಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ತಾವು ಕಲಿತ ಆಗಲೋ ಈಗಲೋ ಬೀಳುವಂತಿದ್ದ ಶಾಲೆಯನ್ನ ಮೊದಲಿನ ಸ್ಥಿಗೆ ತಂದು ಬಣ್ಣ ಹಚ್ಚಿ ಅಂದವಾಗಿ ಕಾಣುವಂತೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಶಿಕ್ಷಕರು ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ತಾವು ಕಲಿತ ಶಾಲೆಯನ್ನ ಮರೆತು ಬಾಳುವ ಅದೆಷ್ಟೋ ಜನರನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಂದು‌‌ ಸರಕಾರಿ ಶಾಲೆ (Government School) ಹಳೆ ವಿದ್ಯಾರ್ಥಿಗಳ ಅಭಿಮಾನದಿಂದಾಗಿ‌ ಸಂಪೂರ್ಣವಾಗಿ ಬದಲಾಗಿದೆ.. ತಾವೇ ಕೈ ಯಲ್ಲಿ ಪಿಕಾಸಿ, ಗುದ್ದಲಿಗಳನ್ನ ಹಿಡಿದು, ಮರಳಿನೊಟ್ಟಿಗೆ ಸಿಮೆಂಟ್ ಕಲಿಸಿ ಪ್ಲಾಸ್ಟರ್ ಮಾಡಿದ್ದಾರೆ. ಕೈಯಲ್ಲಿ ಕುಂಚ ಹಿಡಿದು ಬಣ್ಣ ಬಳಿದಿದ್ದಾರೆ. ಇವರ ಶ್ರಮದ ಫಲವಾಗಿ ಆ ಸರಕಾರಿ‌ ಶಾಲೆ ಇಂದು ಖಾಸಗಿ ಶಾಲೆಯನ್ನೂ ನಾಚುವಂತೆ ಮಾಡಿದೆ..

ರಾಯಚೂರು ತಾಲ್ಲೂಕಿನ ಯರಮರಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಹೊಸ ಕಳೆ ಬಂದಿದೆ. 60 ವರ್ಷದ ಹಳೆಯ ಶಾಲೆಯ ಕಟ್ಟಡಕ್ಕೆ 30  ವರ್ಷ ದಿಂದ ಸುಣ್ಣ ಬಣ್ಣ ಇರಲಿಲ್ಲ.. ಗಬ್ಬೆದ್ದು ಹೋಗಿದ್ದ ಶಾಲೆಗೆ  ಇದೀಗ ಹಳೆಯ ವಿದ್ಯಾರ್ಥಿಗಳ ಶ್ರಮದ ಫಲದಿಂದ ಹೊಸ ಕಳೆ ಬಂದಿದೆ.

ಮಕ್ಕಳ ಮೊಗದಲ್ಲಿ ಮಂದಹಾಸ

ಮೊದಮೊದಲು ಈ ಸರಕಾರಿ ಶಾಲೆಯ ಅವಸ್ಥೆ ಕಂಡು ಶಾಲೆಗೆ ಬರೊದಕ್ಕೆ ಹಿಂಜರೆಯುತ್ತಿದ್ದ ಮಕ್ಕಳು ಇದೀಗ ಶಾಲೆಯ ಅಂದ ಚೆಂದ‌ ಕಂಡು‌ ನಾ ಮುಂದು ತಾ ಮುಂದು ಎಂದು ಬರುತ್ತಿದ್ದಾರೆ. ಮಕ್ಕಳ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

ಇದನ್ನೂ ಓದಿ:  Mangaluru: ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿ ಎಂಜಾಯ್​ ಮೂಡ್​ನಲ್ಲಿದ್ದ ಪೊಲೀಸ್​ ಸಿಬ್ಬಂದಿಗೆ ಸಸ್ಪೆಂಡ್ ಶಾಕ್..!

ಗ್ರಾಮಸ್ಥರ ಸಹಕಾರದೊಂದಿಗೆ ಆ ಹಳೆಯ ವಿದ್ಯಾರ್ಥಿ ಯುವಕರ‌ ಶ್ರಮದಿಂದ ಈ‌ ಸರಕಾರಿ‌ ಶಾಲೆ  ರಂಗು ರಂಗಿನಿಂದ ಕಂಗೊಳಿಸುತ್ತಿದೆ. ಶಾಲೆಯಲ್ಲಿ ಇದೀಗ ಎತ್ತ ನೋಡಿದರೂ. ಕಲರ್ ಫುಲ್ ಚಿತ್ರಗಳು, ಗಾದೆ‌ ಬರಹಗಳು.. ಅಂದವಾದ ಬಣ್ಣದಿಂದ ಸುಂದರ ಚಿತ್ತಾರದ ನಡುವೆ ಇದೀಗ ಮಕ್ಕಳು ಖುಷಿ ಖುಷಿಯಾಗಿ ಪಾಠ ಕೇಳುತ್ತಿದ್ದಾರೆ.

1964ರಲ್ಲಿ ನಿರ್ಮಾಣವಾದ ಶಾಲೆ

1964 ರಲ್ಲಿ ನಿರ್ಮಾಣಗೊಂಡಿದ್ದ ಈ ಶಾಲೆ ಅಂದಿನಿಂದ ಅಭಿವೃದ್ಧಿ ಕಾಣದೇ ಬೀಳು ಬಿದ್ದಿರುವ ಕೊಂಪೆಯಾಗಿತ್ತು.‌ ಸರಕಾರದಿಂದ ಅನುದಾನದ‌ ಕೊರತೆ ಎದುರಿಸುತ್ತಿದ್ದ ಈ ಶಾಲೆಯ ಜೀರ್ಣೋದ್ಧಾರಕ್ಕೆ ಕೊನೆಗೂ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಬರಬೇಕಾಯಿತು.

ನಿಶಾಚರಿಗಳ ವಾಸಸ್ಥಾನವಾಗಿದ್ದ ಶಾಲೆಯ ಅವಸ್ಥೆಯನ್ನು ಕಂಡು ಮರುಗಿದ ಹಳೆಯ ವಿದ್ಯಾರ್ಥಿಗಳು ತಾವೇ ಮುಂದೆ‌ ನಿಂತು ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.. ಈ ಹಿಂದೆ ಇದೇ ಯರಮರಸ್ ಸರಕಾರಿ ಶಾಲೆಯಲ್ಲಿ ಕಲಿತ ಈ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಹಾಗೂ ನಗರ ಸಭೆ ಸದಸ್ಯರ ಸಹಾಯದೊಂದಿಗೆ ಶಾಲೆಗೆ ಕಳೆ ಕಟ್ಟಿ ಕೊಟ್ಟಿದ್ದಾರೆ.

ಇದನ್ನೂ ಓದಿ:  Murder: ಪತ್ನಿಯನ್ನು ಕೊಂದು ಮಂಚದ ಕೆಳಗೆ ಹೂತಿಟ್ಟ; ಪೊಲೀಸರ ಮುಂದೆ ಹೆಗ್ಗಣದ ಕತೆ ಹೇಳಿದ್ದವ ಅರೆಸ್ಟ್ ಆಗಿದ್ದೇಗೆ?

ಬಣ್ಣಗಳಿಂದ ಕಂಗೊಳಿಸುತ್ತಿರುವ ಗೋಡೆಗಳು

ಬಾಗಿಲು, ಕಿಟಕಿಗಳ ರಿಪೇರಿ ಹಾಗೂ ಕಟ್ಟಡ ದುರಸ್ತಿ ಗೆ ಪ್ಲಾಸ್ಟರಿಂಗ್. ಶಾಲೆಯ ಗೋಡೆಗಳಿಗೆ ಹಾಗೂ ಕಾಂಪೌಂಡ್ ಗೆ ಹಳೇ ವಿದ್ಯಾರ್ಥಿಗಳಿಂದಲೇ ಬಣ್ಣ ಬಳಿಯಲಾಗಿದೆ. ಹೀಗಾಗಿ ಶಾಲೆಯಲ್ಲಿನ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ

‘ಶಾಲೆಯ ಗೋಡೆಗೆ ರಾಷ್ಟ್ರದ ಮಹಾತ್ಮರ ಭಾವಚಿತ್ರ ಗಳು ಆಕರ್ಷಕ ಬರಹಗಳು. ಲಕ್ಷಾಂತರ ಹಣ ಖರ್ಚು ಮಾಡಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿದೆ . ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಶಾಲೆಯ ಶಿಕ್ಷಕರೂ ಸಹ ಸಾಥ್ ನೀಡಿದ್ದು, ಸರ್ಕಾರ ಮಾಡಬೇಕಾದ ಕೆಲಸ ಹಳೆ ವಿದ್ಯಾರ್ಥಿಗಳಿಂದ ಪೂರ್ಣಗೊಂಡಿದೆ.

ಏನೇ ಆಗಲಿ ಯರಮರಾ್ ಗ್ರಾಮದ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
Published by:Mahmadrafik K
First published: