Student Attack: ಬಸ್ಸಲ್ಲಿ ವಿದ್ಯಾರ್ಥಿನಿ ಮೈ ಟಚ್ ಮಾಡಿದ್ನಂತೆ ವೃದ್ಧ, ಗ್ರಾಮಕ್ಕೇ ಬಂದು ಅಟ್ಟಾಡಿಸಿ ಹೊಡೆದ್ರು ಕಿರಿಕ್ ಬಾಯ್ಸ್!

ಬೆಂಗಳೂರು ಸಮೀಪದಲ್ಲೇ ಇರೋ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟಿಕೆ ಒಂದೆರಡಲ್ಲ. ಸಂಜೆ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ ಟಚ್ ಮಾಡಿದ್ದಾನೆಂದು ಆರೋಪಿಸಿ ವಿದ್ಯಾರ್ಥಿಗಳು ಪುಂಡಾಟಿಕೆ ನಡೆಸಿದ್ದಾರೆ. ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ದೊಣ್ಣೆಗಳೊಂದಿಗೆ ಗ್ರಾಮಕ್ಕೆ ನುಗ್ಗಿ ಅವಾಜ್ ಹಾಕಿ ಬಂದಿದ್ದಾರೆ.

ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಮುನಿಯಲ್ಲಪ್ಪ

ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಮುನಿಯಲ್ಲಪ್ಪ

  • Share this:
ಬೆಂಗಳೂರು (Bengaluru) ಸಮೀಪದಲ್ಲೇ ಇರೋ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ (Alliance Collage) ವಿದ್ಯಾರ್ಥಿಗಳ (Students) ಪುಂಡಾಟಿಕೆ ಒಂದೆರಡಲ್ಲ. ಈಗಲೂ ಅಲ್ಲಿನ ಸ್ಟೂಡೆಂಟ್ಸ್​​ನ ಆಟಾಟೋಪ ಮುಂದುವರಿದಿದೆ. ನಿನ್ನೆ ಸಂಜೆ ಬಸ್ಸಿನಲ್ಲಿ (Bus) ಓರ್ವ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ (Aged Person) ಟಚ್ ಮಾಡಿದ್ದಾನೆಂದು ಆರೋಪಿಸಿ ಅಲಯನ್ಸ್ ವಿದ್ಯಾರ್ಥಿಗಳು ಪುಂಡಾಟಿಕೆ ನಡೆಸಿದ್ದಾರೆ. ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ (Attack) ನಡೆಸಿದ್ದಾರೆ. ಮಾತ್ರವಲ್ಲದೇ ದೊಣ್ಣೆಗಳೊಂದಿಗೆ ಗ್ರಾಮಕ್ಕೆ ನುಗ್ಗಿದ್ದಾರೆ. ಗ್ರಾಮದಲ್ಲಿ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳು ವೃದ್ಧನನ್ನು ಹುಡುಕಾಡಿದ್ದಾರೆ. ಎಷ್ಟೇ ಹುಡುಕಿದರೂ ವೃದ್ಧ ಸಿಗದಿದ್ದಾಗ ಹಳ್ಳಿಗರಿಗೆ ವಿದ್ಯಾರ್ಥಿಗಳು ಅವಾಜ್ (Warning) ಹಾಕಿ ಬಂದಿದ್ದಾರೆ. ವಿದ್ಯಾರ್ಥಿಗಳ ಏಟಿಗೆ ಗಾಯಗೊಂಡಿರೋ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಸಮೀಪದ ಅರವಂಟಿಗೆಪುರ ನಿವಾಸಿಯಾದ ಮುನಿಯಲ್ಲಪ್ಪ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ವೃದ್ಧ. ಕೂಲಿ ಕೆಲಸ ಮುಗಿಸಿಕೊಂಡು ಆನೇಕಲ್ ಸಂತೆಗೆ ತೆರಳಿದ್ದ ವೃದ್ಧ ಮುನಿಯಲ್ಲಪ್ಪ, ನಂತರ ದಿನಸಿ ಸೊಪ್ಪು-ತರಕಾರಿ ಖರೀದಿಸಿ ಮನೆ ಕಡೆ ಬಸ್ಸಿನಲ್ಲಿ ವಾಪಸ್ ಹೊರಟಿದ್ದಾರೆ.

ಬಸ್​​ನಲ್ಲಿ ಅಚಾನಕ್ ಆಗಿ ವಿದ್ಯಾರ್ಥಿನಿಗೆ ಕೈ ಟಚ್

ಈ ವೇಳೆ ಅಲಯನ್ಸ್ ಕಾಲೇಜು ಬಳಿ ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಒಂದು ಕೈಯಲ್ಲಿ ದಿನಸಿ, ತರಕಾರಿ ತುಂಬಿದ್ದ ಬ್ಯಾಗು ಮತ್ತೊಂದು ಕೈಯಲ್ಲಿ ಬಸ್​ ಮೇಲಿನ ಮೇಲ್ಛಾಣಿ ಪೈಪ್ ಹಿಡಿದು ನಿಂತಿದ್ದಾರೆ. ಆಗ ವೃದ್ಧ ಮುನಿಯಲ್ಲಪ್ಪರವರ ಭುಜ ಓರ್ವ ವಿದ್ಯಾರ್ಥಿನಿಗೆ ಟಚ್ ಆಗಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹಂತಕರಿಗಾಗಿ ಎನ್‌ಐಎ ಜಾಲಾಟ, ತನಿಖಾ ತಂಡಕ್ಕೆ 9 ಪೊಲೀಸರ ಸೇರ್ಪಡೆ

ಬಸ್​ನಿಂದ ಇಳಿದು ಹೋಗ್ತಿದ್ದಂತೆ ಅಟ್ಯಾಕ್

ಅಚಾನಕ್ ಆಗಿ ವಿದ್ಯಾರ್ಥಿನಿಗೆ ಟಚ್ ಆಗಿದ್ದು, ಆಗ ಯಾರೂ ಕೂಡ ಘಟನೆಯನ್ನು ಪ್ರಶ್ನಿಸಲಿಲ್ಲ. ನಂತರ ಅನಕ್ಷರಸ್ಥ ಮುನಿಯಲ್ಲಪ್ಪ ತನ್ನ ಪಾಡಿಗೆ ಅರವಂಟಿಗೆಪುರ ಗೇಟ್ ನಲ್ಲಿ ಬಸ್ಸಿನಿಂದ ಇಳಿದು ಊರಿನತ್ತ ಹೊರಟಿದ್ದಾರೆ. ಆಗ ಅಲ್ಲಿಗೆ ಬಂದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.

old man touching the student s shoulder Alliance students attacked the old man entered the village and shouted
ಹಲ್ಲೆಗೊಳಗಾದ ಮುನಿಯಲ್ಲಪ್ಪ


ಕೈ, ಕಾಲು, ಎದೆ ಮತ್ತು ದವಡೆಗೆ ಹಲ್ಲೆ

ಈ ಬಗ್ಗೆ ಮಾತನಾಡಿದ ಮುನಿಯಲ್ಲಪ್ಪ, ದಾಳಿಯ ಅರಿವು ಇಲ್ಲದೇ ನಾನು ಊರಿನತ್ತ ತೆರಳುತ್ತಿದ್ದೆ. ಆಗ ಸುಮಾರು ಐದಾರು ಮಂದಿ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು.  ಕೈ, ಕಾಲು, ಎದೆ ಮತ್ತು ದವಡೆ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿದರು ಅಂತಾ ದೂರಿದ್ದಾರೆ.

ಊರಿನೊಳಗೂ ನುಗ್ಗಿ ವಿದ್ಯಾರ್ಥಿಗಳಿಂದ ಅವಾಜ್

ವಿದ್ಯಾರ್ಥಿಗಳು ಹಲ್ಲೆ ನಡೆಸೋವಾಗ ಕೆಲ ಸ್ಥಳೀಯರು ನೆರವಿಗೆ ಧಾವಿಸಿ ನನ್ನನ್ನು ಬಚಾವ್ ಮಾಡಿದರು. ನಾನು ಭಯದಿಂದ ಓಡಿ ಹೋಗಿ ಮನೆ ಸೇರಿಕೊಂಡೆ. ಆದರೂ ನನ್ನನ್ನು ಹಿಂಬಾಲಿಸಿ ಗ್ರಾಮಕ್ಕೆ ದೊಣ್ಣೆಗಳನ್ನು ಹಿಡಿದು ಬಂದ ಅಲಯನ್ಸ್ ವಿದ್ಯಾರ್ಥಿಗಳು ನನ್ನನ್ನು ಊರಿನಲ್ಲಿ ಹುಡುಕಾಡಿದ್ದಾರೆ.ಈ ವೇಳೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಸ್ಥಳೀಯರ ಮೇಲೂ ಅವಾಜ್ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ  ಮುನಿಯಲ್ಲಪ್ಪ ತಿಳಿಸಿದ್ದಾರೆ.

ಗಾಂಜಾ ಸೇವಿಸಿ ಪ್ರತಿನಿತ್ಯ ಕಿರಿಕ್

ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿ ಸಾಕಷ್ಟು ಅವಾಂತರಗಳನ್ನು ಈ ಹಿಂದೆ ಮಾಡಿದ್ದಾರೆ. ಗಾಂಜಾ ಸೇವನೆ ಮಾಡಿ ವೇಗವಾಗಿ ವಾಹನ ಚಾಲನೆ ಮಾಡುವುದು ಮಾತ್ರವಲ್ಲದೆ ಆನೇಕಲ್ ಮತ್ತು ಚಂದಾಪುರ ರಸ್ತೆಯಲ್ಲಿ ಆಕ್ಸಿಡೆಂಟ್​ ನಡೆಸೋದು ಕಾಮನ್ ಆಗಿದೆ. ಇದೆಲ್ಲಾ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳಿಂದನೇ ಸಂಭವಿಸುತ್ತಿದೆ.

ಇದನ್ನೂ ಓದಿ: ಬಿರಿಯಾನಿ ತಿನ್ನೋಕೆ ಬಂದವರು ಜೈಲು ಪಾಲಾದ್ರು; ಗುರಾಯಿಸಿದ್ದ ಅಂತ ಮಾರಣಾಂತಿಕ ಹಲ್ಲೆ

ಪದೇ ಪದೇ ಅಪಘಾತ

ಇಲ್ಲಿನ ಮಕ್ಕಳು ಅಪಘಾತದಿಂದ ಸಾವನ್ನಪ್ಪೋದರ ಜೊತೆಗೆ ಅಮಾಯಕ ಪಾದಚಾರಿಗಳು ಮತ್ತು ವಾಹನ ಸವಾರರ ಸಾವಿಗೂ ಕಾರಣರಾಗುತ್ತಿದ್ದಾರೆ. ಜೊತೆಗೆ ಮೋಜು ಮಸ್ತಿ, ರಸ್ತೆಗಳಲ್ಲಿ ಅಶ್ಲೀಲವಾಗಿ ವರ್ತಿಸುವುದು ಸೇರಿದಂತೆ ಸಾಕಷ್ಟು ದೂರುಗಳಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ವೃದ್ಧಗೆ ಚಿಕಿತ್ಸೆ

ಅಂದಹಾಗೆ ಅಲಯನ್ಸ್ ವಿದ್ಯಾರ್ಥಿಗಳ ಹಲ್ಲೆಯಿಂದ ಗಾಯಗೊಂಡ ವೃದ್ಧ ಮುನಿಯಲ್ಲಪ್ಪ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯಾವ ರೀತಿ ಕ್ರಮ ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Published by:Thara Kemmara
First published: