Bengaluru: ಅನ್ನ, ಆಶ್ರಯ ಕೊಟ್ಟವನನ್ನೇ ಕೊಂದು ಒಡವೆ ಜೊತೆ ಪರಾರಿ! ಬಾತ್​​ರೂಂನಲ್ಲಿತ್ತು ವೃದ್ಧನ ದೇಹ

ಹೀಗಿರೋ ಜುಗುರಾಮ್ ಮನೆ ಕೆಲಸಕ್ಕೆ ಅಂತ ರಾಜಸ್ತಾನದವನೇ ಆದ ಬಿಜೋರಾಮ್ ಎಂಬಾತನನ್ನು 8 ತಿಂಗಳ‌ ಹಿಂದೆ ಸೇರಿಸಿಕೊಂಡಿದ್ದ. ಆದರೆ ಅದೇ ಮನೆ‌ಕೆಲಸದವನು ತಡರಾತ್ರಿ ಕೈಕಾಲು ಕಟ್ಟಿಹಾಕಿ ಕಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ‌ಮಾಡಿದ್ದಾನೆ. ನಂತ್ರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಸಮೇತ ಎಸ್ಕೇಪ್ ಆಗಿದ್ದಾನೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಷ್ಟ ಅಂತ ಬಂದಿದ್ದವನಿಗೆ ಆ ವೃದ್ದನ‌ ಕುಟುಂಬ (Family) ಆಸರೆಯಾಗುತ್ತು. ಸಾಲದು ಅಂತ ಮನೆ ಮಗನ‌‌ ರೀತಿಯಲ್ಲಿ ನೋಡ್ಕೋತಾ ಇದ್ರು. ಕೆಲಸ ಅರಸಿ ಬಂದಿದ್ದವನಿಗೆ ಊಟ, ಮಲಗೋಕೆ ಜಾಗನೂ ಕೊಟ್ಟಿದ್ರು. ಆದ್ರೆ ನಂಬಿಕೆ‌ ಉಳಿಸಿಕೊಳ್ಳದ ಆತ ಉಪ್ಪು ತಿಂದ ಮನೆಗೆ ದ್ರೋಹ ಬಗೆದಿದ್ದಾನೆ. ಮನೆ ಮಾಲೀಕನ್ನೇ ಕೊಲೆ (Murder) ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕದ್ದೊಯ್ದಿದ್ದಾನೆ. 77 ವರ್ಷದ ಜುಗುರಾಮ್ ಜೈನ್ ಎಂಬ ವೃದ್ದನನ್ನ ಆತನ ಮನೆ ಕೆಲಸದವನೇ ಕೊಲೆ ಮಾಡಿ‌ ಮನೇಲಿದ್ದ ಚಿನ್ನಾಭರಣಗಳನ್ನ (Gold) ದೋಚಿಕೊಂಡು ಹೋಗಿರೋ ಘಟನೆ ಚಾಮರಾಜಪೇಟೆ (Chamarajapete) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿರೋ ಕಿಂಗ್ಸ್ ಎಂಕ್ಲೀವ್ ಅಪಾರ್ಟ್ಮೆಂಟ್ ನ (Apartment) ಮೂರನೇ ಮಹಡಿಯಲ್ಲಿ ವೃದ್ದನ ಕೈ ಕಟ್ಟಿಹಾಕಿ ಮುಖಕ್ಕೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಿದ ಮನೆ ಕೆಲಸದವನು ಎಸ್ಕೇಪ್ ಆಗಿದ್ದಾನೆ.

ಮೂಲತಃ ರಾಜಸ್ಥಾನದವರಾದ ಮನೆ ಮಾಲೀಕ ಜುಗುರಾಜ್ ಹಲವು ವರ್ಷಗಳಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸಿಸ್ತಿದ್ರು. ಈತನಿಗೆ ಪ್ರಕಾಶ್ ಹಾಗೂ ಆನಂದ್ ಇಬ್ಬರು ಮಕ್ಕಳು. ಎಲ್ಲರೂ ಬಿಸಿನೆಸ್ ಮಾಡ್ತಾ ಇದ್ದೋರೆ ಜೊತೆಗೆ ಟ್ರಾವೆಲ್ಸ್, ಜ್ಯುವೆಲರಿ ಶಾಪ್ ಹಾಗೈ ಎಲೆಕ್ಟ್ರಿಕ್ ಶಾಪ್ ಗಳನ್ನು ಸಹ ಹೊಂದಿದ್ದ.

ರಾಜಸ್ಥಾನ ಮೂಲದ ವ್ಯಕ್ತಿ ಬಿಜೋರಾಮ್

ಹೀಗಿರೋ ಜುಗುರಾಮ್ ಮನೆ ಕೆಲಸಕ್ಕೆ ಅಂತ ರಾಜಸ್ತಾನದವನೇ ಆದ ಬಿಜೋರಾಮ್ ಎಂಬಾತನನ್ನು 8 ತಿಂಗಳ‌ ಹಿಂದೆ ಸೇರಿಸಿಕೊಂಡಿದ್ದ. ಆದರೆ ಅದೇ ಮನೆ‌ಕೆಲಸದವನು ತಡರಾತ್ರಿ ಕೈಕಾಲು ಕಟ್ಟಿಹಾಕಿ ಕಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ‌ಮಾಡಿದ್ದಾನೆ. ನಂತ್ರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಸಮೇತ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: Chitradurga: ಮನೆ ಕಳೆದುಕೊಂಡು ಪರದಾಟ, ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ ಬೀದಿಗೆ ಬಿದ್ದ ಕುಟುಂಬಗಳು

ಮೂಟೆ ಕಟ್ಟಿದ್ದ ಬೆಳ್ಳಿ ಸಾಗಿಸಲಾಗದೆ ಬಿಟ್ಟು ಎಸ್ಕೇಪ್ ಆದ ಆರೋಪಿ..!

ದೊಡ್ಡ ಮಗ ಬಿಸಿನೆಸ್ ರಿಲೇಟೆಡ್ ಆಗಿ ಗೋವಾಗೆ ಹೋಗಿದ್ರೆ, ಚಿಕ್ಕ ಮಗ ಫಾರಿನ್ ಟ್ರಿಪ್ ಹೋಗಿದ್ದ. ಇತ್ತ ಸೊಸೆ ಹಾಗೂ ಹೆಂಡತಿ ಊರಿಗೆ ಹೋಗಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಬಿಜೋರಾಮ್ ರಾತ್ರಿ 10:30 ರ ಸುಮಾರಿಗೆ ಅಪಾರ್ಟ್ಮೆಂಟ್ ಗೆ ಬಂದಿದ್ದಾನೆ.‌ ನಂತ್ರ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಮೂಟೆ ಕಟ್ಟಿದ್ದಾನೆ.

ಕೊಲೆ ಮಾಡಿ ಚಿನ್ನ-ಬೆಳ್ಳಿ ಮೂಟೆ ಕಟ್ಟಿದ

ಆದ್ರೆ 28 _kg ಬೆಳ್ಳಿ ಮಾತ್ರ ಮೂಟೆ ಕಟ್ಟಿ ತಗೊಂಡು ಹೋಗೋಕೆ‌ ಆಗದೆ ಹಾಗೆಯೇ ಬಿಟ್ಟಿದ್ದಾನೆ.‌ ಇನ್ನು ಮೂಟೆ ಕಟ್ಟಿವಾದ ಕೆಲ ಚಿನ್ನಾಭರಣ ಹಾಗೂ ಹಣ ದ ಕಂತೆಗಳು ಚೆಲ್ಲಾಪಿಲ್ಲಿಯಾಗಿ ಬೀಳಿಸಿ ಹೋಗಿದ್ದಾನೆ. ಹೀಗಾಗಿ ನಾಲ್ಕು ವಿಶೇಷ ತಂಡಗಳೊಂದಿಗೆ ಆರೋಪಿಗಾಗಿ ಪತ್ತೆ ಕಾರ್ಯ ಮಾಡ್ತಾ ಇದ್ದಾರೆ.

ಇದನ್ನೂ ಓದಿ: Bike Silencer: ಕರ್ಕಶ ಶಬ್ಧ ಮಾಡಿದ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿದ ಕಡೂರು ಪೊಲೀಸರು

ಸದ್ಯ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದು, ಆರೋಪಿ ಸಿಕ್ಕ‌ಬಳಿಕ ಎಷ್ಟು ಕಳ್ಳತನ ಮಾಡಿದ್ದ ಅನ್ನೋದು ಗೊತ್ತಾಗಲಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೊಡುವ ಸಂದರ್ಭ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಪರಿಚಿತರು ಬಾಡಿಗೆಗೆ ಬಂದು ಈ ರೀತಿಯ ಕೃತ್ಯಗಳನ್ನು ಎಸಗುವ ಘಟನೆಗಳೂ ವರದಿಯಾಗುತ್ತಲೇ ಇರುತ್ತವೆ.
Published by:Divya D
First published: