• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cabs In Bengaluru: ಬೆಂಗಳೂರಿನಲ್ಲಿ ಉಬರ್, ಓಲಾ ಸಿಗುತ್ತಿಲ್ಲವೇ? ಇದಕ್ಕೆ ಕಾರಣ ಇಲ್ಲಿದೆ ನೋಡಿ

Cabs In Bengaluru: ಬೆಂಗಳೂರಿನಲ್ಲಿ ಉಬರ್, ಓಲಾ ಸಿಗುತ್ತಿಲ್ಲವೇ? ಇದಕ್ಕೆ ಕಾರಣ ಇಲ್ಲಿದೆ ನೋಡಿ

ಉಬರ್, ಓಲಾ ಅಭಾವ

ಉಬರ್, ಓಲಾ ಅಭಾವ

ಆ್ಯಪ್ ಆಧಾರಿತ ಓಲಾ, ಉಬರ್ ಗಳನ್ನೇ ಸಂಚಾರಕ್ಕೆ ಅವಲಂಬಿಸಿ ಕೊಂಡಿರುವ ಪ್ರಯಾಣಿಕರಿಗೆ ಬೆಂಗಳೂರಿನಲ್ಲಿ ಕ್ಯಾಬ್ ಗಳ ಅಭಾವದ ಬಗ್ಗೆ ಖಂಡಿತ ಅರಿವಾಗಿರುತ್ತದೆ. ಎಷ್ಟು ಕಾದರೂ ಬುಕ್ ಆಗದ ವಾಹನಗಳು, ಬುಕ್ ಮಾಡಿದರೂ ಸಹ ಕೊನೆಯ ಕ್ಷಣದಲ್ಲಿ ರದ್ದಾಗುವಿಕೆ ಈ ಎಲ್ಲಾ ಅನುಭವಗಳಿಂದ ರಾಜಧಾನಿ ಜನ ರೋಸಿ ಹೋಗಿದ್ದಾರೆ ಎನ್ನಬಹುದು.

ಮುಂದೆ ಓದಿ ...
  • Share this:

ಆ್ಯಪ್ ಆಧಾರಿತ ಓಲಾ (Ola) ಉಬರ್​ಗಳನ್ನೇ (Uber) ಸಂಚಾರಕ್ಕೆ ಅವಲಂಬಿಸಿ ಕೊಂಡಿರುವ ಪ್ರಯಾಣಿಕರಿಗೆ (Travel) ಬೆಂಗಳೂರಿನಲ್ಲಿ (Bengaluru) ಕ್ಯಾಬ್ ಗಳ ಅಭಾವದ ಬಗ್ಗೆ ಖಂಡಿತ ಅರಿವಾಗಿರುತ್ತದೆ. ಎಷ್ಟು ಕಾದರೂ ಬುಕ್ ಆಗದ ವಾಹನಗಳು, ಬುಕ್ ಮಾಡಿದರೂ ಸಹ ಕೊನೆಯ ಕ್ಷಣದಲ್ಲಿ ರದ್ದಾಗುವಿಕೆ ಈ ಎಲ್ಲಾ ಅನುಭವಗಳಿಂದ ರಾಜಧಾನಿ ಜನ ರೋಸಿ ಹೋಗಿದ್ದಾರೆ ಎನ್ನಬಹುದು. ಕೋವಿಡ್ ನಂತರದ ಎರಡು ವರ್ಷಗಳು ಮನೆಯಿಂದ ಕೆಲಸ ಮಾಡುವ (Work From Home) ಸೌಕರ್ಯದ ನಂತರ ಕಚೇರಿಗಳಿಗೆ ಮರಳುತ್ತಿರುವ ನಗರದಾದ್ಯಂತ ಬೆಂಗಳೂರಿನ ನಿವಾಸಿಗಳು ಓಲಾ ಮತ್ತು ಉಬರ್ ಕ್ಯಾಬ್‌ಗಳ ಕೊರತೆಯಿಂದ ಬಳಲುತ್ತಿದ್ದಾರೆ.


"ನಾನು ಪ್ರತಿದಿನ ವಿಶ್ವವಿದ್ಯಾನಿಲಯಕ್ಕೆ ಪ್ರಯಾಣಿಸಬೇಕಾಗಿದೆ. ನನಗೆ ಯಾವುದೇ ಕ್ಯಾಬ್ ಸಿಗುತ್ತಿಲ್ಲ, ಮತ್ತು ಬುಕ್ ಆದ ಕ್ಯಾಬ್​ಗಳು ಸಾಮಾನ್ಯವಾಗಿ ಕೊನೆಯ ಕ್ಷಣದಲ್ಲಿ ರದ್ದಾಗುತ್ತವೆ" ಎಂದು ಬನಶಂಕರಿಯಲ್ಲಿ ವಾಸಿಸುವ ವಿದ್ಯಾರ್ಥಿನಿ ಸನ್ಯಾ ಹೇಳುತ್ತಾರೆ.


ಕ್ಯಾಬ್ ಚಾಲಕರ ಜೀವನ ದುಸ್ತರ ಮಾಡಿದ ಕೊರೋನಾ
ಕೆಲವು ಐಟಿ ಉದ್ಯೋಗಿಗಳನ್ನೇ ನಂಬಿಕೊಂಡಿದ್ದ ಹೋಟೆಲ್, ಕ್ಯಾಂಟೀನ್, ಆಟೋ, ಕ್ಯಾಬ್ ಉದ್ಯಮಗಳು ಕೋವಿಡ್ ಸಮಯದಲ್ಲಿ ತತ್ತರಿಸಿ ಹೋಗಿದ್ದವು. ಪ್ರಸ್ತುತ ಪ್ರಯಾಣ ಮತ್ತು ಆತಿಥ್ಯದಂತಹ ವ್ಯವಹಾರಗಳಲ್ಲಿ ಏರಿಕೆ ಕಂಡುಬಂದಿದ್ದರೂ, ರೈಡ್-ಹೇಲಿಂಗ್ ಕ್ಯಾಬ್ ಚಾಲಕರು ಕೋವಿಡ್ -19 ಸಾಂಕ್ರಾಮಿಕ, ಇಂಧನ ಬೆಲೆ ಏರಿಕೆ ಮತ್ತು ಹಣದುಬ್ಬರದಂತಹ ಪರಿಣಾಮದಿಂದ ವಾಹನ ಓಡಿಸಲು ಕಷ್ಟಪಡುತ್ತಿದ್ದಾರೆ. ಸಾಂಕ್ರಾಮಿಕ ರೋಗವು ಬೆಂಗಳೂರಿನ ಕಾರ್ಮಿಕ ವರ್ಗದ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಕ್ಯಾಬ್ ಡ್ರೈವರ್‌ಗಳ ಜೀವನವನ್ನು ದುಸ್ತರ ಮಾಡಿದೆ.


ಬೆಂಗಳೂರಿನ ಓಲಾ ಮತ್ತು ಉಬರ್ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, “ಕೊರೋನಾ ಚಾಲಕರನ್ನು ನಷ್ಟದ ಸ್ಥಿತಿಗೆ ತಳ್ಳಿದೆ. ಅವರು ಲಾಕ್‌ಡೌನ್ ಸಮಯದಲ್ಲಿ ಕೆಲಸ, ಸಿಟಿ ಬಿಟ್ಟು ತಮ್ಮ ಊರನ್ನು ಸೇರಿಕೊಂಡು ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಮತ್ತೆ ಅವರುಗಳು ನಗರಕ್ಕೆ ಹಿಂದಿರುಗುವುದಿಲ್ಲ” ಎಂದು ಪಾಷಾ ಹೇಳುತ್ತಾರೆ.


‘ಬೆಂಗಳೂರು ಬಿಟ್ಟು ಊರು ಸೇರಿದ ಕ್ಯಾಬ್ ಚಾಲಕರು’
ಕೋವಿಡ್ ಮುನ್ನ ಬೆಂಗಳೂರಿನಲ್ಲಿ ಕ್ಯಾಬ್‌ಗಳ ಸಂಖ್ಯೆ ಸಾಕಷ್ಟು ಹೆಚ್ಚಿತ್ತು, ಆದರೆ ಕೋವಿಡ್ ನಂತರ, ಸಂಖ್ಯೆ ಕಡಿಮೆಯಾಗಿದೆ. “ಲಾಕ್‌ಡೌನ್ ಜಾರಿಯಾದಾಗ ಆದಾಯವು ಇಳಿಮುಖವಾಯಿತು. ಈ ಅವಧಿಯಲ್ಲಿ ಬಹಳಷ್ಟು ಚಾಲಕರು ತಮ್ಮ ಹಳ್ಳಿಗಳಿಗೆ ಮರಳಿದರು. ಏಳೆಂಟು ತಿಂಗಳವರೆಗೆ, ಎರಡು ಲಾಕ್‌ಡೌನ್‌ಗಳಲ್ಲಿ, ಅವರಿಗೆ ಯಾವುದೇ ಸಂಪಾದನೆ ಇರಲಿಲ್ಲ. ಹೊಸ ಕಾರುಗಳನ್ನು ಖರೀದಿಸಿದವರು ಇಎಂಐ ಪಾವತಿಯಲ್ಲಿ ಡೀಫಾಲ್ಟ್ ಆಗಿದ್ದಾರೆ, ಆದ್ದರಿಂದ ಕಾರುಗಳನ್ನು ಅವರಿಂದ ಹಿಂಪಡೆಯಲಾಗಿದೆ” ಈ ಎಲ್ಲಾ ಕಾರಣಗಳಿಂದ ಕ್ಯಾಬ್ ಅಭಾವ ಉಂಟಾಗಿದೆ ಎನ್ನುತ್ತಾರೆ ಪಾಷಾ.


ಇದನ್ನೂ ಓದಿ: Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ


ವಿಮಾನ ನಿಲ್ದಾಣದ ಚಾಲಕ ಹಮೀದ್ ಅಕ್ಬರ್ ಅಲಿ ಹೇಳುವ ಪ್ರಕಾರ, ಸಾಂಕ್ರಾಮಿಕ ರೋಗದಿಂದಾಗಿ ಚಾಲಕರು ನಗರವನ್ನು ತೊರೆದಿರುವುದು ಮತ್ತು ಕಾರುಗಳ ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ ಎನ್ನುತ್ತಾರೆ. ಸಾಂಕ್ರಾಮಿಕ ಸಮಯದಲ್ಲಿ, ಹಲವಾರು ಕಾರುಗಳನ್ನು ಫೈನಾನ್ಷಿಯರ್‌ಗಳು ವಶಪಡಿಸಿಕೊಂಡಿದ್ದಾರೆ ಮತ್ತು ಬ್ಯಾಂಕುಗಳು ಈಗ ಅವರಿಗೆ ಸಾಲ ನೀಡಲು ನಿರಾಕರಿಸುತ್ತಿವೆ. ಹೀಗಾಗಿ ಊರಿಗೆ ಹೋದವರು ಮತ್ತೆ ಇಲ್ಲಿ ಬಂದು ತಮ್ಮ ವ್ಯಾಪಾರ ಮರು ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.


ಇತ್ತೀಚೆಗೆ ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸದ ವೇಳೆ ಸಾಲ ವಸೂಲಾತಿ ಏಜೆಂಟ್‌ಗಳಿಂದ ಬಲವಂತವಾಗಿ ಕಾರಿನಿಂದ ಹೊರದಬ್ಬಿದ ತನ್ನ ಕುಟುಂಬವನ್ನು ಓಲಾ ಆ್ಯಪ್ ಬಳಕೆದಾರರು ಪೋಸ್ಟ್ ಮಾಡಿದಾಗ ಸಾಲದ ಸುಳಿಯಲ್ಲಿ ಸಿಲುಕಿರುವ ಕ್ಯಾಬ್ ಚಾಲಕರು ಮತ್ತು ಅವರ ಅಸಹಾಯಕ ಗ್ರಾಹಕರ ಸ್ಥಿತಿ ಬಹಿರಂಗವಾಗಿದೆ.


“ಆದಾಯ ಇಳಿಮುಖ, ಸಾಲ ಕಟ್ಟಲು ಆಗುತ್ತಿಲ್ಲ”
“ಕಂಪೆನಿಗಳು ಮತ್ತು ಬ್ಯಾಂಕ್‌ಗಳು ನಮಗೆ ಸಾಲ ನೀಡಲು ನಿರಾಕರಿಸುತ್ತವೆ. ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ಸಾಲವನ್ನು ಮರುಪಾವತಿಸಲು ಬ್ಯಾಂಕ್‌ಗಳು ನಮಗೆ ಸ್ವಲ್ಪ ಸಮಯ ನೀಡಿದರೂ ಅದು ಸಾಕಾಗಲಿಲ್ಲ. ಅವರು ಈಗ ನಮ್ಮ ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ನಮ್ಮ ವ್ಯವಹಾರವನ್ನು ಚೇತರಿಸಿಕೊಳ್ಳಲು ನಮಗೆ ಸಮಯ ಬೇಕು ಎನ್ನುತ್ತಾರೆ ಅಲಿ.


ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿರುವ ಚಾಲಕರು ಹೆಚ್ಚಾಗಿ ಮಂಡ್ಯ, ಬೆಳಗಾವಿ ಜಿಲ್ಲೆಗಳಿಂದ ಬಂದವರು. ಈ ಸಮಯದಲ್ಲಿ ಚಾಲಕರು ತಮ್ಮ ಊರಿಗೆ ಮರಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಸಾಂಕ್ರಾಮಿಕ ರೋಗದ ನಂತರ ಬೆಂಗಳೂರು ತೊರೆದಿರುವ ಚಾಲಕರು ಉತ್ತಮ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಜೀವನ ವೆಚ್ಚ ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರಿನ ಇನ್ನೊಬ್ಬ ಕ್ಯಾಬ್ ಚಾಲಕ ಹೇಳಿದರು.


ಕ್ಯಾಬ್ ಅಗ್ರಿಗೇಟರ್‌ಗಳ ಹೊಸ ನೀತಿ
ಕ್ಯಾಬ್ ಕೊರತೆಗೆ ಕ್ಯಾಬ್ ಅಗ್ರಿಗೇಟರ್‌ಗಳ ಹೊಸ ನೀತಿ ಸಹ ಕಾರಣವಾಗಿದೆ. ಇದು ಚಾಲಕರು ಬುಕ್ಕಿಂಗ್ ಸ್ವೀಕರಿಸುವ ಮೊದಲು ಡ್ರಾಪ್ ಮಾಡುವ ಸ್ಥಳವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಡಿಸೆಂಬರ್ 2021ರಲ್ಲಿ ರೈಡ್-ಹೇಲಿಂಗ್ ಮೇಜರ್ ಓಲಾ ತನ್ನ ಚಾಲಕ-ಪಾಲುದಾರರು ಈಗ ರೈಡ್ ಅನ್ನು ಸ್ವೀಕರಿಸುವ ಮೊದಲು ತಮ್ಮ ಡ್ರಾಪ್ ಸ್ಥಳ ಮತ್ತು ಪಾವತಿ ಮೋಡ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದು ರದ್ದುಗೊಳಿಸುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ವರ್ಷದ ಮೇ ತಿಂಗಳಲ್ಲಿ ಉಬರ್ ಸಹ ಇದನ್ನು ಅನುಸರಿಸಿತು, ಅದರ ಚಾಲಕರು ತಮ್ಮ ಡ್ರಾಪ್ ಸ್ಥಳವನ್ನು ವೀಕ್ಷಿಸಲು ಮತ್ತು ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ. ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಅಪ್ಲಿಕೇಶನ್ ಗಳು ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ.


ಇದನ್ನೂ ಓದಿ:  Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?


ಹೆಚ್ಚುತ್ತಿರುವ ಗ್ರಾಹಕರ ದೂರುಗಳು ಮತ್ತು ಈ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಸರ್ಕಾರವು ನೀಡಿದ ಎಚ್ಚರಿಕೆಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಪ್ರಾರಂಭಿಸಲಾಗಿದೆ. ತಮ್ಮ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿರಂತರ ರದ್ದತಿಗೆ ಸಂಬಂಧಿಸಿದಂತೆ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಒತ್ತಾಯಿಸುತ್ತದೆ. ಆದಾಗ್ಯೂ, ಈ ಹೊಸ ನೀತಿಯು ಪ್ರತಿಕೂಲವಾಗಿರಬಹುದು ಏಕೆಂದರೆ ಕ್ಯಾಬ್ ಚಾಲಕರು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ತಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನ ನಿವಾಸಿಗಳಿಗೆ ಸಾರಿಗೆಯ ಸೀಮಿತ ಆಯ್ಕೆಗಳಿವೆ.


ಈ ಎಲ್ಲಾ ಕಾರಣಗಳು ಬೆಂಗಳೂರಿನ ಜನತೆಗೆ ಕ್ಯಾಬ್ ಗಳು ರಸ್ತೆಯಲ್ಲಿ ಕಡಿಮೆ ಕಾಣಸಿಗುತ್ತಿದ್ದು, ಸಂಚಾರಕ್ಕೆ ಸಂಚಕಾರ ತಂದ್ದೊಡಿದೆ. ಮಳೆ ಬಂದಾಗಲಂತೂ ಕ್ಯಾಬ್ ಗಳ ಅನಿವಾರ್ಯತೆ ಹೆಚ್ಚು ಕಂಡುಬರುತ್ತಿದೆ.

top videos
    First published: