ನಮ್ಮಲ್ಲಿ ಹೆಚ್ಚಿನವರಿಗೆ ಈ ಮೊಬೈಲ್ ಅಪ್ಲಿಕೇಶನ್ (Mobile Applications) ಆಧಾರಿತ ಕ್ಯಾಬ್ (Cab) ಸೇವೆಗಳ ಮೂಲಕ ಬುಕಿಂಗ್ ಮಾಡುವಾಗ ಮತ್ತು ಕ್ಯಾಬ್ ಬುಕ್ ಮಾಡಿಕೊಂಡು ಪ್ರಯಾಣಿಸುವಾಗ (Travel) ಹಲವಾರು ರೀತಿಯ ಕಹಿ ಅನುಭವಗಳು ಆಗಿರುತ್ತವೆ. ಏನು ಮಾಡೋದು ಹೇಳಿ? ಬೆಂಗಳೂರಿನಂತಹ (Bengaluru) ಮಹಾ ನಗರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಆಟೋ ರಿಕ್ಷಾವನ್ನು (Auto rickshaw) ಬುಕ್ ಮಾಡಿಕೊಂಡರೆ ಅಷ್ಟೊಂದು ಸರಿ ಹೋಗುವುದಿಲ್ಲ ಎಂದು ಹೇಳಿ ಆರಾಮಾಗಿ ಕಾರಿನಲ್ಲಿ ಕುಳಿತು ಹೋಗೋಣ ಎಂದು ಕ್ಯಾಬ್ ಬುಕ್ (Cab Book) ಮಾಡಿಕೊಂಡರೆ, ಕೆಲವೊಮ್ಮೆ ಅದೇ ದೊಡ್ಡ ತಲೆನೋವು ಆಗಿ ಪರಿಣಮಿಸುವುದು.
ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿಕೊಂಡು ಪ್ರಯಾಣಿಸುವವರಿಗೆ ಕೇಳಿದರೆ ಅವರು ಎದುರಿಸುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ. ಕ್ಯಾಬ್ ಬುಕ್ ಮಾಡಿದ ಮೇಲೂ ಸಹ ಸರಿಯಾದ ವಿಳಾಸ ಸಿಗುತ್ತಿಲ್ಲ ಎಂದು ತಡವಾಗಿ ಬರುವುದರಿಂದ ಹಿಡಿದು ಪ್ರಯಾಣ ಮುಗಿದ ನಂತರ ಬಾಡಿಗೆ ಹಣವನ್ನು ಹೇಗೆ ಪಾವತಿಸುವುದು ಎಂಬುವವರೆಗೂ ಅನೇಕ ರೀತಿಯ ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸುತ್ತಾರೆ.
ಕ್ಯಾಬ್ ಬುಕ್ ಮಾಡುವ ಮುನ್ನ ಎಚ್ಚರ
ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಗೆ ತುಂಬಾನೇ ಕೆಟ್ಟ ಅನುಭವ ಆಗಿದೆ ನೋಡಿ. ವಿಕಾಸ್ ಗೌಡ ಎಂಬ ಟ್ವಿಟ್ಟರ್ ಬಳಕೆದಾರರು ಅವರ ಒಂದು ಅನುಭವವನ್ನು ಹಂಚಿ ಕೊಂಡಿದ್ದಾರೆ. ಇವರ ಅನುಭವವನ್ನು ಕೇಳಿದರೆ ನಿಜಕ್ಕೂ ನೀವು ಮುಂದಿನ ಬಾರಿ ಕ್ಯಾಬ್ ಬುಕ್ ಮಾಡುವಾಗ ಅನೇಕ ಬಾರಿ ಯೋಚಿಸುತ್ತೀರಿ. ಇವರ ಸಾಮಾಜಿಕ ಮಾಧ್ಯಮದಲ್ಲಿರುವ ಟ್ವಿಟ್ಟರ್ ಸಂದೇಶಗಳ ಥ್ರೆಡ್ ಅನ್ನು ಒಮ್ಮೆ ನೀವು ನೋಡಿದರೆ ಭಯಭೀತರಾಗುವುದು ಗ್ಯಾರಂಟಿ.
ಪ್ರಯಾಣಿಕನನ್ನು ಮಧ್ಯದಲ್ಲೇ ಬಿಟ್ಟು ಹೋದ ಕ್ಯಾಬ್
ವಿಕಾಸ್ ತನ್ನ ಅನುಭವವನ್ನು ಓಲಾ ಕ್ಯಾಬ್ಸ್ ನೊಂದಿಗೆ ಹಂಚಿಕೊಳ್ಳಲು ಮೈಕ್ರೋ-ಬ್ಲಾಗಿಂಗ್ ಸೈಟ್ ಅನ್ನು ಬಳಸಿದ್ದಾರೆ. "ಎಚ್ಚರಿಕೆ.. ಯಾವುದೇ ಕಾರಣಕ್ಕೂ ಓಲಾ ಕ್ಯಾಬ್ ಅನ್ನು ಬುಕ್ ಮಾಡಿಕೊಳ್ಳಬೇಡಿ" ಎಂದು ಬರೆದಿದ್ದಾರೆ. ಟ್ವೀಟ್ ದೃಢವಾದ ಟಿಪ್ಪಣಿಯೊಂದಿಗೆ ಪ್ರಾರಂಭವಾಯಿತು. "ನನ್ನ ಪೋಷಕರೊಂದಿಗೆ ಮೈಸೂರಿಗೆ ಹಿಂತಿರುಗಲು ಪ್ರವಾಸವನ್ನು ಕಾಯ್ದಿರಿಸಿದ್ದೆ.
ಕ್ಯಾಬ್ ಹೊರಟ ಒಂದೂವರೆ ಗಂಟೆಯ ನಂತರ, ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬಂದು ಕ್ಯಾಬ್ ಗೆ ಅಡ್ಡಿ ಹಾಕಿದರು. ಈ ಕಲೆಕ್ಷನ್ ಏಜೆಂಟರು ಚಾಲಕನಿಗೆ ಆ ಕ್ಷಣದಲ್ಲಿಯೇ ಅವನ ಹಿಂದಿನ ಕಂತುಗಳನ್ನು ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ, ಇಲ್ಲದಿದ್ದರೆ ಅವರು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅವರು ನನ್ನ ಕುಟುಂಬ ಸದಸ್ಯರನ್ನು ಕ್ಯಾಬ್ ನಿಂದ ಮಾರ್ಗ ಮಧ್ಯದಲ್ಲಿ ಕೆಳಗಿಳಿಯಲು ಹೇಳಿ ಮತ್ತು ನಮ್ಮ ಬೇರೆ ಕ್ಯಾಬ್ ಮಾಡಿಕೊಂಡು ಹೋಗುವಂತೆ ಹೇಳಿದ್ದರು" ಎಂದು ಅವರು ಹೇಳಿದರು.
*WARNING. AVOID @Olacabs AT ALL COST*
Had one of the worst, traumatising experiences today. Had booked an outstation trip with @moon_natz and her parents to travel back to Mysore.
An hour and a half into the trip some rowdies come in their two wheelers and create a blockade..
— Vks (@VikHasya) May 15, 2022
ಈ ಗಲಾಟೆ ನಡೆಯುತ್ತಿದ್ದಾಗ, ವಿಕಾಸ್ ಕ್ಯಾಬ್ ಕಂಪನಿಯು ಒದಗಿಸಿದ ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ. ಏಕೆಂದರೆ ಗ್ರಾಹಕರ ಸಹಾಯವಾಣಿಯವರು ಏಜೆಂಟ್, ವಿಕಾಸ್ ಗೆ ಪರಿಸ್ಥಿತಿಯನ್ನು ಪರಿಹರಿಸುವ ಬದಲು ಮತ್ತೊಂದು ಕ್ಯಾಬ್ ಅನ್ನು ಕಾಯ್ದಿರಿಸಲು ಮತ್ತು ತನ್ನ ಪ್ರಯಾಣವನ್ನು ಮುಂದುವರೆಸಲು ಸಲಹೆ ನೀಡಿದರು.
ಅಷ್ಟೇ ಅಲ್ಲದೇ, ವಿಕಾಸ್ ಅವರ ಈ ಕಹಿ ಅನುಭವದ ನಂತರವೂ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಯಿತು. "ಇದು ಅವರ ತುರ್ತು ಪ್ರತಿಕ್ರಿಯೆ ತಂಡದ ಗುಣಮಟ್ಟವಾಗಿದ್ದರೆ, ಪ್ರಯಾಣದ ಸಮಯದಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗಳ ನೋಡಿದರೆ, ಮಹಿಳೆಯರು, ಕುಟುಂಬದವರನ್ನು ಮತ್ತು ಸಾಮಾನ್ಯವಾಗಿ ಜನರಿಗೆ ಕ್ಯಾಬ್ ಸವಾರಿಗಳು ಸುರಕ್ಷಿತವಾಗಿರಿಸಲು ಇನ್ನೂ ತುಂಬಾನೇ ಮುಂಜಾಗ್ರತೆ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಿದೆ" ಎಂದು ವಿಕಾಸ್ ಕಳವಳದಿಂದ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಓಲಾ ಕ್ಯಾಬ್ಸ್ ನ ಕ್ಷಮಾಪಣೆಯನ್ನು ಸ್ವೀಕರಿಸಲು ನಿರಾಕರಿಸಿದ ನೆಟ್ಟಿಗರು
ಓಲಾ ಕ್ಯಾಬ್ಸ್ ಈ ಘಟನೆಗೆ ಪ್ರತಿಕ್ರಿಯಿಸಿ ಕಾಮೆಂಟ್ ವಿಭಾಗದಲ್ಲಿ ಕ್ಷಮೆಯಾಚಿಸಿದೆ. "ನೀವು ಮತ್ತು ನಿಮ್ಮ ಕುಟುಂಬವು ಸುರಕ್ಷಿತವಾಗಿ ಮನೆಯನ್ನು ತಲುಪಿದ್ದೀರಿ ಎಂದು ನಾವು ಭಾವಿಸುತ್ತೇವೆ. ಇದು ಎಷ್ಟು ಬೇಸರ ತರಿಸುತ್ತದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಇದರ ಬಗ್ಗೆ ನಾವು ಸರಿಯಾದ ಪರಿಶೀಲನೆ ಮಾಡುತ್ತಿದ್ದೇವೆ. ನೀವು ಈಗಾಗಲೇ ಅಗತ್ಯ ವಿವರಗಳನ್ನು ಹಂಚಿಕೊಂಡಿರುವುದರಿಂದ, ಸಂಬಂಧಿತ ತಂಡವು ಯಾವುದೇ ವಿಳಂಬವಿಲ್ಲದೆ ನಿಮ್ಮನ್ನು ಸಂಪರ್ಕಿಸಿ ಸೂಕ್ತವಾದ ಸಹಾಯವನ್ನು ಮಾಡುತ್ತದೆ" ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: Uniform: ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳಿಗೂ ಯೂನಿಫಾರಂ ಕಡ್ಡಾಯ; ಪಿಯುಸಿ ಬೋರ್ಡ್ ಆದೇಶ
ಆದರೆ, ನೆಟ್ಟಿಗರು ಮಾತ್ರ ಈ ಕ್ಷಮಾಪಣೆಯನ್ನು ಸ್ವೀಕರಿಸಲು ನಿರಾಕರಿಸಿದರು. ಅನೇಕರು ತಮ್ಮದೇ ಆದ ಭಯಾನಕ ಪ್ರವಾಸ ಅನುಭವಗಳೊಂದಿಗೆ ಕಾಮೆಂಟ್ಸ್ ಬಾಕ್ಸ್ ಅನ್ನು ತುಂಬಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ