ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರಿಂದ ಲೂಟಿ; ಸಂಬಳವಿಲ್ಲದೇ ಸಿಬ್ಬಂದಿ ಪರದಾಟ


Updated:June 13, 2018, 6:46 PM IST
ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರಿಂದ ಲೂಟಿ; ಸಂಬಳವಿಲ್ಲದೇ ಸಿಬ್ಬಂದಿ ಪರದಾಟ
ಒಕ್ಕಲಿಗರ ಸಂಘದ ಸಿಬ್ಬಂದಿಯಿಂದ ಪ್ರತಿಭಟನೆ

Updated: June 13, 2018, 6:46 PM IST
- ಥಾಮಸ್ ಪುಷ್ಪರಾಜ್, ನ್ಯೂಸ್18 ಕನ್ನಡ

ಬೆಂಗಳೂರು (ಜೂನ್ 13): ಇಬ್ಬಣಗಳ ನಡುವಿನ ದೊಂಬರಾಟದಲ್ಲಿ ಸ್ವಾಭಿಮಾನಿ ಒಕ್ಕಲಿಗರ ಸಾಕ್ಷಿಪ್ರಜ್ಞೆಯಾದ ರಾಜ್ಯ ಒಕ್ಕಲಿಗರ ಸಂಘದ ಘನತೆ-ಪ್ರತಿಷ್ಠೆ-ಗೌರವ ಎಲ್ಲವೂ ಮಣ್ ಪಾಲಾಗುತ್ತಿದೆ. ತಮ್ಮ ಸಮಸ್ಯೆಗಳಿಗೆ ಕಣ್ಣು-ಕಿವಿ-ಹೃದಯವಾಗ್ಲಿ ಎಂದು ಆಯ್ಕೆ ಮಾಡಿ ಕಳುಹಿಸಿದ ಒಕ್ಕಲಿಗ ಬಂಧುಗಳೇ ಇದೀಗ  ಡೈರೆಕ್ಟರ್ಸ್​ಗೆ ಹಿಡಿ ಶಾಪ ಹಾಕ್ತಿದ್ದಾರೆ. ಶತಪಥ  ಸಂಘದ ಖಜಾನೆಯನ್ನು ಖೋತ ಮಾಡ್ಲೇಬೇಕೆನ್ನುವ ಜಿದ್ದಿಗೆ ಬಿದ್ದಂತಿರುವ ನಿರ್ದೇಶಕ ಮಹಾಶಯರೇ ಹಣದಾಸೆಗೆ ಅಕ್ರಮ ನೇಮಕಾತಿಗೆ ಕೈ ಹಾಕಿ ಅಮಾಯಕ ಒಕ್ಕಲಿಗರನ್ನು ವಂಚಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಮುದಾಯದ ಪ್ರಜ್ಞಾವಂತರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಮಾತಾಡಿದ್ರೆ ತಮ್ಮ ಕಮ್ಯೂನಿಟಿಯ ಮಾನವೇ ಹೋಗೋದು ಎಂದು ಇಷ್ಟು ದಿನ ತುಟಿ ಕಚ್ಚಿ ಸಹಿಸಿಕೊಂಡಿದ್ದ ಆಕ್ರೋಶವನ್ನೆಲ್ಲಾ ಹೊರಗಾಕ್ತಿದ್ದಾರೆಂದ್ರೆ, ಇವರಿಗೆ ನಿರ್ದೇಶಕರುಗಳಿಂದ ಆಗಿರೋ ಅನ್ಯಾಯ ಎಂಥದಿರಬೋದು ಎನ್ನೋದನ್ನು ಊಹಿಸಿಕೊಳ್ಳಬಹುದು. ಇವ್ರ ಆಕ್ರೋಶಕ್ಕೂ ಸ್ಪಷ್ಟ ಕಾರಣ ಇದೆ. ಡೈರಕ್ಟರ್ಸ್ ಯಡವಟ್ಟಿನಿಂದ ಇವತ್ತು ಇವ್ರೆಲ್ಲಾ ಮುಷ್ಕರ ಮಾಡಿ ತಿಂಗಳ ಸಂಬಳ ಪಡೆಯಬೇಕಾದ ಸ್ಥಿತಿ ಸೃಷ್ಟಿಸಿದೆ.

ನಿಮಗೆ ಅಚ್ಚರಿ ಎನಿಸಬಹುದು. ಕಿಮ್ಸ್, ಬಿಐಟಿ ಸೇರಿದಂತೆ ಒಕ್ಕಲಿಗರ ಸಂಘದ ಅಧೀನದಲ್ಲಿ ನಡೆಯುತ್ತಿರುವ ಐವತ್ತಕ್ಕು ಹೆಚ್ಚು ಎಜುಕೇಷನ್ ಇನ್ಸ್ಟಿಟ್ಯೂಷನ್​ಗಳಲ್ಲಿ ಇವತ್ತು ಕೊಡಲು ಸಂಬಳವಿಲ್ಲ. ಇದಕ್ಕೆಲ್ಲಾ ಇತ್ತೀಚಿನ ವರ್ಷಗಳಲ್ಲಿ ಆಯ್ಕೆಯಾಗ್ತಿರೋ ನಿರ್ದೇಶಕರ ಅರಾಜಕತೆಯೇ ಕಾರಣ ಎನ್ನುವುದು ಒಕ್ಕಲಿಗರ ಆರೋಪ. ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಮಾಡ್ತಿರುವ ನಿರ್ದೇಶಕರು ಮಾಡಿರುವ ಮತ್ತೊಂದು ಯಡವಟ್ಟಿನಿಂದಾಗಿ ನೌಕರ ಸಮುದಾಯ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಲಕ್ಷಾಂತರ ಹಣ ಪಡೆದು 650 ಕ್ಕೂ ಹೆಚ್ಚು ಅಕ್ರಮ ನೇಮಕಾತಿ ಮಾಡ್ಕೊಂಡಿರುವ ನಿರ್ದೇಶಕರ ವಿರುದ್ದ ನೇರವಾಗಿ ಬೀದಿಗಿಳಿದಿದ್ದಾರೆ.

ಯಾವುದೇ ನಿಯಮ ಪಾಲಿಸದೆ ಶಿಕ್ಷಣ ಸಂಸ್ಥೆಗಳಿಗೆ ಅಕ್ರಮ ನೇಮಕ ಮಾಡಿಕೊಂಡಿದ್ದಾರೆ ಎನ್ನೋದು ನಿರ್ದೆಶಕರ ಮೇಲಿನ ಆರೋಪ. 650 ಅಭ್ಯರ್ಥಿಗಳಿಂದ 4 ರಿಂದ 8 ಲಕ್ಷದವರೆಗೆ ಹಣ ಪಡೆದು ಅಗತ್ಯವೇ ಇಲ್ಲದ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ವಿಚಿತ್ರ ಎಂದ್ರೆ 2017 ರಲ್ಲಿ ಸಂಸ್ಥೆಗಳಲ್ಲಿ 313 ಅನವಶ್ಯಕ ಸಿಬ್ಬಂದಿಯನ್ನು ರಿಲೀವ್ ಮಾಡಿ ಎಂದು ಆರ್ಡರ್ ಮಾಡಿದ್ದ ಅಧ್ಯಕ್ಷ ಬೆಟ್ಟೇಗೌಡ ಬಣವೇ 2018ರಲ್ಲಿ 650 ಹುದ್ದೆಗಳನ್ನು ಅದುಹೇಗೆ ಭರ್ತಿ ಮಾಡಿಕೊಂಡಿತು ಎನ್ನೋದೇ ಅಚ್ಚರಿ, ಜೊತೆಗೆ ಅನುಮಾನವನ್ನೂ ಹುಟ್ಟುಹಾಕಿದೆ. ಹುದ್ದೆಯ ಗ್ರೇಡ್ ಆಧಾರದಲ್ಲಿ ಹಣ ಫಿಕ್ಸ್ ಮಾಡಿ ಬೆಟ್ಟೇಗೌಡರ ಬಣವು ಕೋಟ್ಯಂತರ ಹಣ ನುಂಗಿಹಾಕಿದೆ ಎನ್ನೋದು ನೌಕರರ ಆರೋಪ.

4 ರಿಂದ 8 ಲಕ್ಷದವರೆಗೆ ಹಣ ಪಡೆದು 650 ಅಕ್ರಮ ನೇಮಕಾತಿ ಮಾಡಿಕೊಂಡಿರೋದ ರಿಂದಲೇ ಇತರೆ ನೌಕರರಿಗೆ ಸಂಬಳ-ಭತ್ಯೆ ಸಿಗದಂತಾಗಿದೆ. ಖಜಾನೆಗೆ ಪ್ರತಿ ತಿಂಗಳು 3 ಕೋಟಿ ಹೊರೆಯಾಗ್ತಿದೆ. ಹಣದಾಸೆಗೆ ಅಮಾಯಕರನ್ನು ವಂಚಿಸಿರುವ ನಿರ್ದೆಶಕರ ವಿರುದ್ಧ ಸಮುದಾಯದ ನೌಕರರೇ ತಿರುಗಿಬಿದ್ದಿರುವುದು ದುರಂತ. ಅಕ್ರಮದಲ್ಲಿ ತಮಗೂ ಪಾಲು ನೀಡಿದ್ದೇವೆಂದು ಹೇಳ್ಕಂಡು ತಿರುಗ್ತಿರೋ ಇವ್ರ ಹೆಡೆ ಮುರಿ ಕಟ್ಟಬೇಕಾದ್ರೆ ಸಮುದಾಯದ ವರಿಷ್ಠರೆನಿಸಿಕೊಂಡವ್ರು ಮಧ್ಯ ಪ್ರವೇಶಿಸಲೇಬೇಕು. ಇಲ್ಲವಾದಲ್ಲಿ ಸಮುದಾಯದ ಮಾನ ಶಾಶ್ಚತವಾಗಿ ಮಣ್ಣುಪಾಲಾಗುವುದರಲ್ಲಿ ಅನುಮಾನವೇ ಇಲ್ಲ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...