• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: ಎಂಟೇ ದಿನಕ್ಕೆ ಜನರನ್ನು ಕಾಳಜಿ ಕೇಂದ್ರದಿಂದ ಹೊರ ಹಾಕಲು ಸಿದ್ಧತೆ; ಕೊಡಗಿನಲ್ಲಿ ಅಮಾನವೀಯ ಘಟನೆ

Kodagu: ಎಂಟೇ ದಿನಕ್ಕೆ ಜನರನ್ನು ಕಾಳಜಿ ಕೇಂದ್ರದಿಂದ ಹೊರ ಹಾಕಲು ಸಿದ್ಧತೆ; ಕೊಡಗಿನಲ್ಲಿ ಅಮಾನವೀಯ ಘಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ಬೆಳಗ್ಗ ಕಾಳಜಿ ಕೇಂದ್ರದಲ್ಲಿರುವ ಜನರಿಗ ಯಾವುದೇ ಉಪಹಾರ ಸಹ ವಿತರಣೆ ಮಾಡಿಲ್ಲ. ಸೂಕ್ತ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವವರೆಗೆ ಕಾಳಜಿ ಕೇಂದ್ರಬಿಟ್ಟು ತೆರಳಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.

  • Share this:

ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯ (Kodagu Rains) ಅಬ್ಬರ ಕೊಂಚ ತಗ್ಗಿದೆ. ಆದ್ರೆ ಮಳೆ ನಂತರ ಉಂಟಾಗುತ್ತಿರುವ ಅನಾಹುತಗಳಿ ಭೀಕರವಾಗಿವೆ. ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಭೂಕಂಪನದ (Earthquake) ಅನುಭವ ಜನರನ್ನು ಆತಂಕಕ್ಕೆ ತಳ್ಳಿತ್ತು. ಈ ಹಿನ್ನೆಲೆ ಅಪಾಯದ ಸ್ಥಳದಲ್ಲಿರುವ ಜನರನ್ನು ಕಾಳಜಿ ಕೇಂದ್ರಕ್ಕೆ (Relief Centre) ಶಿಫ್ಟ್ ಮಾಡಲಾಗಿತ್ತು. ಆದ್ರೆ ಇದೀಗ ಎಂಟೇ ದಿನಕ್ಕೆ ಜಿಲ್ಲಾಡಳಿತ ತನ್ನ ಜವಾಬ್ದಾರಿಯನ್ನು ಮರೆತಿದ್ಯಾ ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ. ಕಾರಣ ಕೊಡಗಿನ ಚೆಟ್ಟಳ್ಳಿಯಲ್ಲಿ ಅಧಿಕಾರಿಗಳು (Officers) ಜನರನ್ನು ಕಾಳಜಿ ಕೇಂದ್ರದಿಂದ ಹೊರ ಹಾಕಲು ಮುಂದಾಗಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.


ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್.ಎಸ್.ಚೆಟ್ಟಳ್ಳಿ ( ಪೊನ್ನತ್ತ್ ಮೊಟ್ಟೆ) ಯಲ್ಲಿರುವ ಕಾಳಜಿ ಕೇಂದ್ರದಲ್ಲಿ 30 ಕ್ಕೂ ಹೆಚ್ಚು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಆದ್ರೆ ನಿನ್ನೆ ರಾತ್ರಿ ಜನರಿಗೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಮಳೆ ಕಡಿಮೆ ಆಗಿದೆ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ ಎಂದು ಹೇಳಲಾಗಿದೆ.


ಕಾಳಜಿ ಕೇಂದ್ರದಿಂದ ಹೋಗಲ್ಲ ಎಂದು ಸಂತ್ರಸ್ತರ ಪಟ್ಟು


ಇಂದು ಬೆಳಗ್ಗ ಕಾಳಜಿ ಕೇಂದ್ರದಲ್ಲಿರುವ ಜನರಿಗ ಯಾವುದೇ ಉಪಹಾರ ಸಹ ವಿತರಣೆ ಮಾಡಿಲ್ಲ. ಸೂಕ್ತ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವವರೆಗೆ ಕಾಳಜಿ ಕೇಂದ್ರಬಿಟ್ಟು ತೆರಳಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.


ಇದನ್ನೂ ಓದಿ:  HD Kumaraswamy: ಕೋವಿಡ್ ಚಿಕಿತ್ಸೆ ವೇಳೆ ನೋಡಿದ ಎರಡು ಸಿನಿಮಾಗಳ ಬಗ್ಗೆ HDK ಹೇಳಿದ್ದು ಹೀಗೆ


ಅಧಿಕಾರಿಗಳ ನಡೆಗೆ ಸಂತ್ರಸ್ತರ ಆಕ್ರೋಶ


ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಯಲ್ಲಿ ಏಳು ಕುಟುಂಬಗಳು ಜೀವನ ನಡೆಸುತ್ತಿದ್ದವು.  ಪೊನ್ನತ್ ಮೊಟ್ಟೆಯಲ್ಲಿ ಭೂಕುಸಿತದ ಆತಂಕ ಎದುರಾಗಿದ್ದ ಕಾರಣ ಅಧಿಕಾರಿಗಳೇ ಏಳು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಕಾಳಜಿ ಕೇಂದ್ರ ತೆರೆಯಲು ಸೂಚನೆ ನೀಡಿರೋದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಲು ಸಂತ್ರಸ್ತರು ಒತ್ತಾಯಿಸಿದ್ದರು.


officials to vacate the flood relief centre in kodagu mrq
ಮಳೆಗೆ ಮನೆ ಹಾನಿ


ವಿಷಯ ತಿಳಿಯುತ್ತಿದ್ದಂತೆ ಕಾಳಜಿ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡ ಹಕೀಂ ನೆಲ್ಲಿಹುದಿಕೇರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತಪ್ಪ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸುತ್ತಿದ್ದಾರೆ.


ತಡೆಗೋಡೆ ಕುಸಿಯುವ ಆತಂಕ; ಕೊಡಗು ಜಿಲ್ಲಾಡಳಿತ ಭವನ ಗಢ ಗಢ


ಜಿಲ್ಲೆಯ ಮಳೆಹಾನಿಯನ್ನು ನಿಭಾಯಿಸಲು ಸಜ್ಜಾಗಿರುವ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ ಎದುರಾಗಿದೆ. 2018 ರಲ್ಲಿ ಸಣ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ಭವನದ  (Kodagu DC Office) ಮುಂಭಾಗದಲ್ಲಿ ಕುಸಿತವಾಗಿತ್ತು. ಅದು ಮತ್ತಷ್ಟು ಕುಸಿಯದಂತೆ ಕೋಟ್ಯಂತರ ರೂಪಾಯಿ ವ್ಯಯಿಸಿ ತಡೆಗೋಡೆ (Wall) ಮಾಡಲಾಗುತ್ತಿತ್ತು.


ಆದರೆ ಕಾಮಗಾರಿ (Construction) ಪೂರ್ಣಗೊಳ್ಳುವ ಮೊದಲೇ ಇಲ್ಲಿ ತಡೆಗೋಡೆ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ತಡೆಗೋಡೆಗೆ ಅಳವಡಿಸಿದ್ದ ಸ್ಲ್ಯಾಬ್ ಗಳು ಸಂಪೂರ್ಣ ಹೊರಕ್ಕೆ ಭಾಗಿದ್ದು ಯಾವುದೇ ಕ್ಷಣದಲ್ಲಾದರೂ ಹೆದ್ದಾರಿ 275 ಕ್ಕೆ ಅಡ್ಡಲಾಗಿ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.


ಇದನ್ನೂ ಓದಿ:  Saffron Shawl: ಬೇಡ ಬೇಡ ಅಂದ್ರು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್​ಗೆ ಕೇಸರಿ ಶಾಲು ಹಾಕಿದ ರಾಜೂಗೌಡ


ತಡೆಗೋಡೆಯಲ್ಲಿ ಬಿರುಕು ಮೂಡಿದ್ದ ಹಿನ್ನೆಲೆಯಲ್ಲಿ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು ಅವುಗಳಿಗೆ ಕೆಲವು ಬೋಲ್ಟ್ ಗಳನ್ನು ಹಾಕಲು ಪ್ರಯತ್ನಿಸಲಾಗಿತ್ತು. ಆದರೆ ಅವುಗಳು ಅತೀ ಹೆಚ್ಚು ಹೊರಕ್ಕೆಬಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡು ಅಧಿಕಾರಿಗಳು ಅಷ್ಟಕ್ಕೇ ಕೆಲಸವನ್ನು ನಿಲ್ಲಿಸಿ ಮಡಿಕೇರಿಯಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದರು.

Published by:Mahmadrafik K
First published: