• Home
  • »
  • News
  • »
  • state
  • »
  • Ramanagara: ಸರ್ಕಾರದ ವಿಶೇಷ ಯೋಜನೆ ಅನುಷ್ಠಾನಕ್ಕೆ ಅಸಡ್ಡೆ, ಅಧಿಕಾರಿಗಳ ವಿರುದ್ಧ ಜನರ ಬೇಸರ

Ramanagara: ಸರ್ಕಾರದ ವಿಶೇಷ ಯೋಜನೆ ಅನುಷ್ಠಾನಕ್ಕೆ ಅಸಡ್ಡೆ, ಅಧಿಕಾರಿಗಳ ವಿರುದ್ಧ ಜನರ ಬೇಸರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮರ್ಪಕ ಪ್ರಚಾರ ನೀಡಿ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

  • Share this:

ರಾಮನಗರ: ಬಡವರಿಗೆ (Poor People) ಸಹಕಾರಿಯಾಗಲೆಂದು ಸರ್ಕಾರ (Government) ಹಲವು ಯೋಜನೆಗಳನ್ನು ರೂಪಿಸುತ್ತದೆ. ಅದರಲ್ಲೂ ವಿಶೇಷವಾಗಿ ಕೋವಿಡ್‌ (COVID) ಹೊಡೆತಕ್ಕೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಡವರಿಗೆ ಅನುಕೂಲವಾಗಲೆಂದು ಬೆಸ್ಕಾಂ (BESCOM) ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿನ ಬಿಪಿಎಲ್‌ ಕಾರ್ಡ್ (BPL Card Holders)‌ ಹೊಂದಿರುವ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದವರಿಗೆ ಗೃಹ ಬಳಕೆಯಲ್ಲಿ (Domestic Use) 75 ಯೂನಿಟ್‌ಗಳವರೆಗೆ ಉಚಿತವಾಗಿ (Free) ನೀಡಲು ಆದೇಶ ಹೊರಡಿಸಿದೆ. ವಿಪರ್ಯಾಸ ಎಂದರೆ, ಜಿಲ್ಲೆಯಲ್ಲಿ ಯೋಜನೆಯ ಬಗ್ಗೆ ಸಮರ್ಪಕ ಪ್ರಚಾರ ನೀಡಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು (Officers) ವಿಫಲರಾಗಿದ್ದಾರೆ.


ಜಿಲ್ಲೆಯಲ್ಲಿ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಸರ್ಕಾರದ ಯೊಜನೆಗೆ ದಾಖಲಾತಿಗಳನ್ನು ಪಡೆದು ಸ್ವತಃ ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈವರೆಗೂ ಯಾವುದೇ ಪ್ರಚಾರ ಸಂಬಂಧ ಕ್ರಮ ಕೈಗೊಳ್ಳದ ಅಧಿಕಾರಿಗಳು ಕಣ್ಣು ಮನಸ್ಸು ಎರಡು ಬೇರೆಡೆ ಕೇಂದ್ರೀಕೃತವಾದಂತಿದೆ.


ಏನಿದು ಯೋಜನೆ?


ಸರ್ಕಾರ ಬಡ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ನೆರವಾಗಲೆಂದು ಉಚಿತ ವಿದ್ಯುತ್‌ ನೀಡುವ ಯೋಜನೆ ಜಾರಿಗೆ ತಂದಿದೆ. ಅದರಲ್ಲಿ 75 ಯೂನಿಟ್‌ ಉಚಿತವಾಗಿ ನೀಡಬೇಕೆಂಬ ನಿಯಮವಿದೆ.


ಇದನ್ನೂ ಓದಿ:  Ramanagara: ವಿದ್ಯಾರ್ಥಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಹಲ್ಲೆ; ಠಾಣೆಗೆ ಮುತ್ತಿಗೆಹಾಕಿ‌ ಪ್ರತಿಭಟನೆ, SP ಸ್ಪಷ್ಟನೆ


ಈ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮರ್ಪಕ ಪ್ರಚಾರ ನೀಡಿ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆದರೆ, ಪಾಪ ನಮ್ಮ ರಾಮನಗರ ಜಿಲ್ಲೆಯ ಅಧಿಕಾರಿಗಳಿಗೆ ಅದು ಸಾಧ್ಯವಾಗಿಲ್ಲ, ಏನಿದ್ದರೂ ಇನ್‌ಕಮಿಂಗ್‌ ಅಷ್ಟೇ. ಸಾರ್ವಜನಿಕರ ಹಿತದೃಷ್ಟಿ ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ.


ಯೋಜನೆಗೆ ಬೇಕಾದ ದಾಖಲೆ


ಬಿಪಿಎಲ್‌ ರೇಷನ್‌ ಕಾರ್ಡ್‌(ಆರ್‌ಸಿ ಸಂಖ್ಯೆಸಹಿತ)ಜೆರಾಕ್ಸ್‌ ಪ್ರತಿ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ, ಜಾತಿ ಪ್ರಮಾಣಪತ್ರ (ಅರ್‌ಡಿ ಸಂಖ್ಯೆ ಸಹಿತ), ಬ್ಯಾಂಕ್‌ ಖಾತೆ ಸಂಖ್ಯೆ ಐಎಫ್‌ಎಸ್‌ಸಿ ಕೋಡ್‌ ಇತ್ಯಾದಿ ವಿವರಗಳನ್ನೊಳಗೊಂಡ ಪಾಸ್‌ಬುಕ್‌ ಜೆರಾಕ್ಸ್‌ ಪ್ರತಿಯನ್ನು ತಮ್ಮ ವ್ಯಾಪ್ತಿಯ ಬೆಸ್ಕಾಂ ವಿಭಾಗಕ್ಕೆ ನೀಡಬೇಕು. ಎಲ್ಲಾ ದಾಖಲೆಗಳೂ ಕೂಡ ವಿದ್ಯುತ್‌ ಸಂಪರ್ಕ ಹೊಂದಿರುವವರ ಹೆಸರಿನಲ್ಲಿಯೆ ಇರಬೇಕು.


ಯೋಜನೆ ಜಾರಿ ವಿಳಂಬ


ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದು ಜಾರಿ ವಿಳಂಬವಾಗುವ ಜೊತೆಗೆ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮಾಹಿತಿಗಾಗಿ ಕರೆ ಮಾಡಿದರೂ, ಕಾರ್ಯಪಾಲಕ ಅಭಿಯಂತರರ ದೂರವಾಣಿ ಸಂಖ್ಯೆ ನಾಟ್‌ ರೀಚಬಲ್‌ ಬರುತ್ತೆ ಕಿರಿಯ ಅಧಿಕಾರಿಗಳನ್ನು ಕೇಳಿದ್ರೆ ನಮಗಿಂತ ದೊಡ್ಡವರಿದ್ದಾರೆ ಸಾರ್‌ ದಯಮಾಡಿ ಅವರನ್ನ ಕೇಳಿ ಎನ್ನುತ್ತಾರೆ.


ಜೊತೆಗೆ ಯೋಜನೆಯ ಬಗ್ಗೆ ದಾಖಲೆಗಳನ್ನು ಸ್ವಯಂ ಫಲಾನುಭವಿಗಳು ಇಲಾಖೆ ಕೌಂಟರ್‌ಗೆ ತಂದು ಕೊಟ್ಟರೆ ಯೋಜನೆಯ ಪ್ರಯೋಜನಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳುತ್ತಾರೆ. ಆದರೆ, ಇಲಾಖೆಯಿಂದ ಈ ಸಂಬಂಧ ಯಾವುದೇ ಪ್ರಚಾರ ಮಾಡಿಲ್ಲ ಎನ್ನುವುದನ್ನೂ ಹೇಳ್ತಾರೆ.


ಇದನ್ನೂ ಓದಿ:  Ramanagara: ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ! ಸಿಎಂಗೆ ಪತ್ರ ಬರೆದ ಯೋಗೇಶ್ವರ್


ಇದು ಸರ್ಕಾರದ ಯೋಜನೆಯ ಫಲ ಪಡೆಯುವಲ್ಲಿ ಫಲಾನುಭವಿಗಳಿಗೆ ಹಿನ್ನಡೆಯಾಗಿದ್ದು, ಅಧಿಕಾರಿಗಳ ವೈಫಲ್ಯ ಎತ್ತಿ ತೋರುತ್ತದೆ ಎನ್ನುತ್ತಾರೆ ಸ್ಥಳೀಯರು. ಅಧಿಕಾರಿಗಳ ವರ್ಗ ಈಗಲಾದರೂ ಎಚ್ಚರಿಕೆವಹಿಸಬೇಕಿದೆ.


ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಸಾಮಾನ್ಯ ಆಗಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ.


ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

Published by:Mahmadrafik K
First published: