HOME » NEWS » State » OFFICIALS EVACUATE 17 HOUSES IN AGRAHARA DASARAHALLI IT IS WRONG SAYS MINISTER V SOMANNA RHHSN

ಅಗ್ರಹಾರ ದಾಸರಹಳ್ಳಿಯಲ್ಲಿ 17 ಮನೆಗಳನ್ನು ಅಧಿಕಾರಿಗಳು ಏಕಾಏಕಿ ತೆರವು ಮಾಡಿಸಿದ್ದು ತಪ್ಪು; ವಸತಿ ಸಚಿವ ವಿ.ಸೋಮಣ್ಣ

ಹಣ ಕೊಟ್ಟವರ ಮನೆಯನ್ನು ಹಾಗೇ ಬಿಟ್ಟಿದ್ದಾರೆ. ಹಣ ಕೊಡದವರನ್ನು ಮನೆಯಿಂದ ಹೊರಹಾಕಿದ್ದಾರೆ. ಕಾರ್ಪೋರೇಟರ್ ಕೂಡ ದುಡ್ಡು ಕೇಳ್ತಿದ್ದಾರೆ ಎಂದು ಸಂತ್ರಸ್ತರು ಆರೋಪ ಮಾಡಿ, ಕಣ್ಣೀರು ಹಾಕುತ್ತಿದ್ದಾರೆ. ಮನೆ ಖಾಲಿ ಮಾಡಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

news18-kannada
Updated:February 11, 2021, 2:16 PM IST
ಅಗ್ರಹಾರ ದಾಸರಹಳ್ಳಿಯಲ್ಲಿ 17 ಮನೆಗಳನ್ನು ಅಧಿಕಾರಿಗಳು ಏಕಾಏಕಿ ತೆರವು ಮಾಡಿಸಿದ್ದು ತಪ್ಪು; ವಸತಿ ಸಚಿವ ವಿ.ಸೋಮಣ್ಣ
ವಿ ಸೋಮಣ್ಣ
  • Share this:
ಬೆಂಗಳೂರು; ಅಗ್ರಹಾರ ದಾಸರಹಳ್ಳಿ ಮನೆ ತೆರವು ಗಲಾಟೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ವಸತಿ ಸಚಿವ ವಿ.ಸೋಮಣ್ಣ ಅವರು,  ಮೊದಲು ‌ನಮ್ಮ ಅವಧಿಯಲ್ಲಿ ‌ಮನೆ ಕಟ್ಟಲಾಗಿತ್ತು. 30 ಕುಟುಂಬ ಇಂದಿಗೂ ಅಲ್ಲಿವೆ. ಮನೆಗಳನ್ನು ತೆರವು ಮಾಡೋಕೆ ಹೇಳಿದ್ದರು. ಸಿದ್ದರಾಮಯ್ಯನವರೂ ನನಗೆ ಹೇಳಿದ್ದರು. ಕೋರ್ಟ್ ನಲ್ಲೂ ಕೂಡ ವಿಚಾರಣೆ ನಡೆದಿತ್ತು. ಇವತ್ತು 17 ಮನೆಗಳನ್ನು ತೆರವು ಮಾಡಿದ್ದಾರೆ ಎಂದು ಹೇಳಿದರು.

ಬಡವರ ಮನೆಗಳನ್ನು ತೆರವು ಮಾಡಲಾಗಿದೆ. ಬರಿ ಬಿಜೆಪಿಯವರಿಗೆ ಮನೆಗಳನ್ನು ಕೊಡಲಾಗಿದ್ಯಾ. ಅಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಏನಾದರೂ ಇದ್ದರೆ ಮಾಹಿತಿ ತೆಗೆದುಕೊಳ್ಳಿ. ಹಲವು ವರ್ಷಗಳಿಂದ ಅವರು ಅಲ್ಲಿ ವಾಸಿಸುತ್ತಿದ್ದಾರೆ. ಏಕಾಏಕಿ ತೆರವು ಮಾಡಿದರೆ ಹೇಗೆ? ಯಾರೋ ಜನರನ್ನು ಕೂರಿಸಿ ಸೀನ್ ಕ್ರಿಯೇಟ್ ಮಾಡ್ತಾರೆ. ನೀವು ಅದನ್ನು ತೋರಿಸ್ತಿದ್ದೀರಿ. ಅಲ್ಲಿ ವಾಸ್ತವವೇ ಬೇರೆಯಿದೆ. ಒಳ್ಳೆಯ ಕೆಲಸ ಮಾಡೋಕೂ ಬಿಡಲ್ಲ ಅಂದರೆ ಹೇಗೆ? ಯಾರ್ಯಾರು ಎಷ್ಟು ಪ್ರಭಾವ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಅಲ್ಲಿ ವಾಸ್ತವ ನೋಡಿ ನೀವೇ ಹೇಳಿ. ಅಧಿಕಾರಿಗಳು ಮಾಡಿರುವುದು ತಪ್ಪೇ.  ಎಲ್ಲೆಲ್ಲಿಂದಲೋ ದುಡ್ಡು ತಂದು ಅಲ್ಲಿ ಹಾಕಿದ್ದಾರೆ. ಆತ್ಮಹತ್ಯೆ ನಾಟಕವೋ ಏನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಎಂ.ಕೃಷ್ಣಪ್ಪ ವಿರುದ್ಧ ಸೋಮಣ್ಣ ಆರೋಪ ಮಾಡಿದರು.

ಇದನ್ನು ಓದಿ: ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್

ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಲಂ ಬೋರ್ಡ್ ಹಾಗೂ ಬಿಬಿಎಂಪಿ ಅಡಿಯಲ್ಲಿ ಬಡವರಿಗೆ 65 ಮನೆ ನಿರ್ಮಾಣ ಮಾಡಲಾಗಿತ್ತು. ಸ್ಲಂ ಬೋರ್ಡ್ ವತಿಯಿಂದ 35 ಮನೆ ಅಲಾರ್ಟ್ ಮಾಡಲಾಗಿತ್ತು. ಬಿಬಿಎಂಪಿ ಕಡೆಯಿಂದ 30 ಮನೆಗಳಲ್ಲಿ 17 ಮನೆಯವರು ಅನಧಿಕೃತ ವಾಸವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ 17 ಮನೆಗಳ ಸದಸ್ಯರಿಗೆ ಹೊರಗೆ ಹೋಗುವಂತೆ ಸ್ಲಂ ಬೋರ್ಡ್​ ಆದೇಶ ನೀಡಿತ್ತು. ಇಂದು ಏಕಾಏಕಿ ಮನೆಗಳನ್ನು ಅಧಿಕಾರಿಗಳು ಖಾಲಿ ಮಾಡಿದ್ದಾರೆ.

ಸಂತ್ರಸ್ತರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ

ಹಣ ಕೊಟ್ಟವರ ಮನೆಯನ್ನು ಹಾಗೇ ಬಿಟ್ಟಿದ್ದಾರೆ. ಹಣ ಕೊಡದವರನ್ನು ಮನೆಯಿಂದ ಹೊರಹಾಕಿದ್ದಾರೆ. ಕಾರ್ಪೋರೇಟರ್ ಕೂಡ ದುಡ್ಡು ಕೇಳ್ತಿದ್ದಾರೆ ಎಂದು ಸಂತ್ರಸ್ತರು ಆರೋಪ ಮಾಡಿ, ಕಣ್ಣೀರು ಹಾಕುತ್ತಿದ್ದಾರೆ. ಮನೆ ಖಾಲಿ ಮಾಡಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Published by: HR Ramesh
First published: February 11, 2021, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories