HOME » NEWS » State » OFFICIALS DID CROP LOSS SURVEY BEFORE AUGUST AND NOT SURVEY SIX VILLAGES RSK LG

ಆಗಸ್ಟ್ ತಿಂಗಳಲ್ಲೇ ಬೆಳೆ ನಷ್ಟ ಸಮೀಕ್ಷೆ ಮುಗಿಸಿದ ಅಧಿಕಾರಿಗಳು; ಸರ್ವೇಯಿಂದ ಹೊರಗುಳಿದ 6 ಗ್ರಾಮಗಳು

ಅಧಿಕಾರಿಗಳು ಮಳೆ ಪ್ರಮಾಣವನ್ನು ಸರಿಯಾಗಿ ವಿಚಾರಿಸಿದೆ, ಎಲ್ಲೋ ಒಂದೆಡೆ ಕುಳಿತು ಅವೈಜ್ಞಾನಿಕವಾಗಿ ಸರ್ವೆ ಮಾಡಿ ಹೋಗಿದ್ದಾರೆ. ಹೀಗಾಗಿ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಐದುನೂರಕ್ಕೂ ಹೆಚ್ಚು ಕಾಫಿ ಬೆಳೆಗಾರರು ಸರ್ವೆಯಿಂದ ಕೈತಪ್ಪಿದ್ದಾರೆ ಎನ್ನೋದು ರೈತ ಸುರೇಶ್ ಅವರ ಗಂಭೀರ ಆರೋಪ.

news18-kannada
Updated:October 15, 2020, 9:34 AM IST
ಆಗಸ್ಟ್ ತಿಂಗಳಲ್ಲೇ ಬೆಳೆ ನಷ್ಟ ಸಮೀಕ್ಷೆ ಮುಗಿಸಿದ ಅಧಿಕಾರಿಗಳು; ಸರ್ವೇಯಿಂದ ಹೊರಗುಳಿದ 6 ಗ್ರಾಮಗಳು
ಬೆಳೆ ನಷ್ಟ
  • Share this:
ಕೊಡಗು(ಅ.15): ಎರಡು ವರ್ಷಗಳಿಂದ ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಇಲ್ಲಿನ ಕಾಫಿ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಮೂರನೆ ಬಾರಿಯೂ ಅದು ಮುಂದುವರೆದಿದ್ದು ಕಾಫಿ ಬೆಳೆಗಾರರು ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ಸರ್ಕಾರದಿಂದ ಸಿಗುವ ಪರಿಹಾರದ ಹಣವಾದರೂ ಸಿಗಬಹುದೆ ಎಂದರೆ ಕಾಫಿ ಮಂಡಳಿ ಅಧಿಕಾರಿಗಳು ನಷ್ಟ ಅನುಭವಿಸಿರುವ ನೂರಾರು ರೈತರ ಸಾವಿರಾರು ಎಕರೆ ಕಾಫಿ ತೋಟವನ್ನು ಸರ್ವೆ ಮಾಡದೆ ಕೈಬಿಟ್ಟಿದ್ದಾರೆ. ಇದು ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರನ್ನು ಸಿಟ್ಟಿಗೇಳಿಸಿದೆ. ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಎಮ್ಮೆತಾಳು ಮೇಘತಾಳು ಸೇರಿದಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಐದುನೂರಕ್ಕೂ ಹೆಚ್ಚು ಕಾಫಿ ಬೆಳೆಗಾರರ ಕಾಫಿ ತೋಟಗಳನ್ನು ಸರ್ವೆಯಿಂದ ಕೈಬಿಡಲಾಗಿದೆ.  2018 ರಲ್ಲಿ ಭಾರೀ ಭೂಕುಸಿತವಾಗಿ ಬಹುತೇಕ ತೋಟಗಳೆ ಕೊಚ್ಚಿ ಹೋಗಿದ್ದವು. ಈ ಬಾರಿ ಸುರಿದ ಭಾರೀ ಮಳೆಗೆ ಇಡೀ ಕಾಫಿ ಹಣ್ಣು ಉದುರಿ ಹೋಗಿ ಈಗ ಕೇವಲ ಗಿಡಗಳು ಮಾತ್ರವೇ ನಿಂತಿವೆ.

ಬೆಳೆ ಚೆನ್ನಾಗಿ ಬಂದಿದ್ದರೆ ಒಂದು ಗಿಡದಲ್ಲಿ ಕನಿಷ್ಠ 10 ಕೆ ಜಿ ಕಾಫಿ ಕೊಯ್ಯುತಿದ್ದೆವು. ಆದರೆ ಈ ಬಾರಿ ಸುರಿದ ಮಳೆಗೆ ಕಾಲ್ ಕೆಜಿ ಕಾಫಿ ಹಣ್ಣು ಕೊಯ್ಯವುದು ಕಷ್ಟವಾಗಿದೆ. ಆದರೆ ಅಧಿಕಾರಿಗಳು ಮಳೆ ಪ್ರಮಾಣವನ್ನು ಸರಿಯಾಗಿ ವಿಚಾರಿಸಿದೆ, ಎಲ್ಲೋ ಒಂದೆಡೆ ಕುಳಿತು ಅವೈಜ್ಞಾನಿಕವಾಗಿ ಸರ್ವೆ ಮಾಡಿ ಹೋಗಿದ್ದಾರೆ. ಹೀಗಾಗಿ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಐದುನೂರಕ್ಕೂ ಹೆಚ್ಚು ಕಾಫಿ ಬೆಳೆಗಾರರು ಸರ್ವೆಯಿಂದ ಕೈತಪ್ಪಿದ್ದಾರೆ ಎನ್ನೋದು ರೈತ ಸುರೇಶ್ ಅವರ ಗಂಭೀರ ಆರೋಪ.

ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್​.ಮುನಿಯಪ್ಪ ಸ್ಪರ್ಧೆ?; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ರಣತಂತ್ರ

ಮಳೆಯಿಂದ ಸಂಪೂರ್ಣ ನಷ್ಟ ಅನುಭವಿಸಿದ್ದು ಕನಿಷ್ಠ ಸರ್ಕಾರದ ಪರಿಹಾರವನ್ನು ಪಡೆಯಲು ಅಧಿಕಾರಿಗಳು ತಪ್ಪಿಸಿದ್ದಾರೆ ಎಂದು ರೈತರ ರಮೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಸರ್ವೆ ಮಾಡಿ ಕೂಡಲೇ ಪರಿಹಾರ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೊಡಗಿನಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಮಳೆ ಸುರಿದಿದೆ. ಆದರೆ ಅಧಿಕಾರಿಗಳು ಆಗಸ್ಟ್ ತಿಂಗಳಲ್ಲೇ ಸರ್ವೆ ಮಾಡಿ ಮುಗಿಸಿದ್ದೇ ಇದಕ್ಕೆಲ್ಲಾ ಕಾರಣ ಎನ್ನೋದು ರೈತರ ಆಕ್ರೋಶ.
Published by: Latha CG
First published: October 15, 2020, 9:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories