ದಸರಾ ಉದ್ಘಾಟಕರಾಗಿ ಸಾಹಿತಿ ಎಸ್​.ಎಲ್​.ಭೈರಪ್ಪ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಸ್ವಾಗತ ಸಮಿತಿ ನಿಯೋಗದೊಂದಿಗೆ ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ಕಾರದ ಪರವಾಗಿ ಆಹ್ವಾನ ನೀಡಿದರು. ಮೈಸೂರು ಜಿಲ್ಲಾಧಿಕಾರಿ, ಮೈಸೂರು ಪಾಲಿಕೆ ಮೇಯರ್, ಮೈಸೂರು ಸಂಸದ ಪ್ರತಾಪ್‌ಸಿಂಹ ಈ ವೇಳೆ ಉಪಸ್ಥಿತರಿದ್ದರು.

HR Ramesh | news18-kannada
Updated:September 23, 2019, 12:02 PM IST
ದಸರಾ ಉದ್ಘಾಟಕರಾಗಿ ಸಾಹಿತಿ ಎಸ್​.ಎಲ್​.ಭೈರಪ್ಪ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ
ದಸರಾ ಉದ್ಘಾಟಕರಾಗಿ ಎಸ್.ಎಲ್​.ಭೈರಪ್ಪ ಅವರಿಗೆ ಸಚಿವ ವಿ.ಸೋಮಣ್ಣ ಸರ್ಕಾರದ ಪರವಾಗಿ ಆಹ್ವಾನ ನೀಡಿದರು.
  • Share this:
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪರಿಗೆ ಸರ್ಕಾರದಿಂದ ಇಂದು ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಸ್ವಾಗತ ಸಮಿತಿ ನಿಯೋಗದೊಂದಿಗೆ ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ಕಾರದ ಪರವಾಗಿ ಆಹ್ವಾನ ನೀಡಿದರು. ಮೈಸೂರು ಜಿಲ್ಲಾಧಿಕಾರಿ, ಮೈಸೂರು ಪಾಲಿಕೆ ಮೇಯರ್, ಮೈಸೂರು ಸಂಸದ ಪ್ರತಾಪ್‌ಸಿಂಹ ಈ ವೇಳೆ ಉಪಸ್ಥಿತರಿದ್ದರು. ಸೆ.29ರಂದು ಚಾಮುಂಡಿ ಬೆಟ್ಟದಲ್ಲಿ ಎಸ್.ಎಲ್. ಭೈರಪ್ಪನವರು ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ.

ಇದನ್ನು ಓದಿ: ಮೈಸೂರು ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ಗೆ ಅಧಿಕೃತ ಆಹ್ವಾನ ನೀಡಿದ ಸರ್ಕಾರ

ಸರ್ಕಾರದಿಂದ ಅಧಿಕೃತ ಆಹ್ವಾನ ಸ್ವೀಕರಿಸಿದ ನಂತರ ಮಾತನಾಡಿದ ಎಸ್.ಎಲ್. ಭೈರಪ್ಪ, ಉದ್ಘಾಟನೆ ಮಾಡ್ತಿರೋದು ಖುಷಿ ತಂದಿದೆ. ಲಂಡನ್ ಪ್ರವಾಸ ಕೈಗೊಂಡಿದ್ದೆ.  ಪ್ರೀತಿಯಿಂದ ಕರೆದಿದ್ದಾರೆ. ಹೀಗಾಗಿ ಪ್ರವಾಸ ಮುಂದಕ್ಕೆ ಹಾಕಿದ್ದೇನೆ. ಇವರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಕರೆದರು ಅಂತ ತಲೆ ಬಗ್ಗಿಸೋದು ಅಂತ ಖಂಡಿತ ಅಲ್ಲ. ಪ್ರೀತಿಗೆ ಯಾರೇ ಆದರೂ ತಲೆ ಬಾಗಲೇಬೇಕು. ಸಾಹಿತಿಗಳನ್ನು ಪ್ರೀತಿ ಮಾಡುವ ಜನರು ಈ ಸರ್ಕಾರದಲ್ಲಿ ಇದ್ದಾರೆ. ಇದು ಬಹಳ ಮುಖ್ಯ. ಇದಕ್ಕಿಂತ ಹೆಚ್ಚಾಗಿ ಹೇಳಿದ್ರೆ ನಾನು ಹೊಗಳ್ತೀನಿ ಅನ್ನಿಸಬಹುದು ಎಂದು ಹೇಳಿದರು.

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ