ತುಮಕೂರು: ಕನ್ನಡ ಬಾರದ ಉಪವಿಭಾಗಧಿಕಾರಿಯಿಂದ ಗ್ರಾಮ ವಾಸ್ತವ್ಯ ಸಂಪೂರ್ಣ ವಿಫಲ

ಮಾಧ್ಯಮದವರ ಆಕ್ಷೇಪಣೆ ಬಳಿಕ ವೇದಿಯಲ್ಲಿದ್ದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ಇ.ಓ. ಬಳಿ ತೆರಳಲು ಅವಕಾಶ ನೀಡಲಾಯಿತು. ಆದರೆ ಭಾಷೆ ಬಾರದ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ನಾಮಕಾವಸ್ಥೆಗೆ ಎಂಬಂತೆ ಜನರಿಂದ ಅರ್ಜಿ ಸ್ವೀಕರಿಸಿ, ಮುಂದಕ್ಕೆ ರವಾನಿಸಿದರು.

ಉಪವಿಭಾಗಾಧಿಕಾರಿ

ಉಪವಿಭಾಗಾಧಿಕಾರಿ

  • Share this:
ತಿಪಟೂರು(ಫೆ.21): ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ವಿಘ್ನಸಂತೆಯಲ್ಲಿ ನಡೆದ ಸಾರ್ವಜನಿಕರ ಮತ್ತು ರೈತರ ಕೊರತೆ ಕುರಿತ ಗ್ರಾಮಸಭೆ ಮತ್ತು ಗ್ರಾಮ ವಾಸ್ತವ್ಯ, ಕೇವಲ ಸರ್ಕಾರಿ ಸುತ್ತೋಲೆ ಪಾಲನೆಗೆ ಸೀಮಿತವಾಗಿದ್ದು ಬಿಟ್ಟರೆ, ಭಾಷೆ ಬಾರದ ಉಪವಿಭಾಗಾಧಿಕಾರಿಗಳಿಗೆ ರೈತರ ಸಮಸ್ಯೆ ಅರ್ಥವಾಗಲಿಲ್ಲ. ಜೊತೆಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶವನ್ನೂ ನೀಡಲಿಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದರೂ, ಸ್ಥಳದಲ್ಲೇ ಸಮಸ್ಯೆಗೆ ಹರಿಹಾರ ಸಿಗುತ್ತೆ. ಪಹಣಿ ತಿದ್ದುಪಡಿ, ವೃದ್ದಾಪ್ಯ ವೇತನ, ಜಾಬ್ ಕಾರ್ಡ್ ಸಮಸ್ಯೆಗೆ ಸ್ಥಳದಲ್ಲೆ ಮುಕ್ತಿ ಸಿಗಲಿದೆ ಎಂದು ಭಾವಿಸಿ ಬಂದ ರೈತರಿಗೆ ಇಲ್ಲಿ ನಿರಾಸೆ ಕಾದಿತ್ತು.

ಸಮಸ್ಯೆ ಹೊತ್ತು ಬಂದಿದ್ದ ರೈತರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡದ ಅಧಿಕಾರಿಗಳು, ನಾಮಕಾವಸ್ಥೆಗೆ ಎಂಬಂತೆ ಅವರಿಂದ ಅರ್ಜಿ ಪಡೆದು, ಸ್ವೀಕೃತಿ ನೀಡಿದ್ದು ಬಿಟ್ಟರೆ ಯಾರ ಸಮಸ್ಯೆಗೂ ಈ ಸಭೆಯಲ್ಲಿ ಪರಿಹಾರ ಸಿಗಲಿಲ್ಲ. ಮೊದಲು, ಸ್ವೀಕೃತಿ ನೀಡಲೆಂದೇ ಕುಳಿತಿದ್ದ ಸಿಬ್ಬಂದಿ ಬಳಿಗೆ ಅರ್ಜಿದಾರರನ್ನು ಕಳಿಸಲಾಯಿತು. ಮಾಧ್ಯಮದವರ ಆಕ್ಷೇಪಣೆ ಬಳಿಕ ವೇದಿಯಲ್ಲಿದ್ದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ಇ.ಓ. ಬಳಿ ತೆರಳಲು ಅವಕಾಶ ನೀಡಲಾಯಿತು. ಆದರೆ ಭಾಷೆ ಬಾರದ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ನಾಮಕಾವಸ್ಥೆಗೆ ಎಂಬಂತೆ ಜನರಿಂದ ಅರ್ಜಿ ಸ್ವೀಕರಿಸಿ, ಮುಂದಕ್ಕೆ ರವಾನಿಸಿದರು.

42 ಸಾವಿರ ವರ್ಷಗಳ ಹಿಂದೆಯೇ ಭೂಮಿಯ ಅಯಸ್ಕಾಂತೀಯ ವಲಯದಲ್ಲಿ ಭಾರೀ ಬದಲಾವಣೆ: ಸಂಶೋಧನೆ

ವಿಘ್ನಸಂತೆ ಗ್ರಾಮದಲ್ಲೇ ಹುಟ್ಟಿ ಬೆಳೆದಿರುವ ಮಾತು ಬಾರದ ಎಂ.ಟಿ. ರಂಗಪ್ಪ ಸ್ವಾಮಿ ಎಂಬಾತನಿಗೆ ಇಲ್ಲಿವರೆಗೂ ಅಂಗವಿಕಲರ ಕೋಟಾದಡಿ ಮಾಶಾಸನ ಸಿಕ್ಕಿಲ್ಲ. ಸ್ಥಳದಲ್ಲೆ ಇದಕ್ಕೆ ಪರಿಹಾರ ಸೂಚಿಸುವ ಕೆಲಸವೂ ಆಗಲಿಲ್ಲ. ಕನಿಷ್ಟ ಗ್ರಾಮ ಲೆಕ್ಕಿಗ, ಅಥವಾ ಕಾರ್ಯದರ್ಶಿಗೆ ಈತ ಹುಟ್ಟು ಮಾತುಬಾರದವ ಎಂಬ ಸಂಗತಿಯೇ ಗೊತ್ತಿಲ್ಲ. 16 ವರ್ಷದ ಲೋಕೇಶ್ ಬಿನ್ ಮಂಜುನಾಥ್, ಅಂಗವಿಕಲನಾಗಿದ್ದು ಮಾಶಾಸನಕ್ಕೆ ಅರ್ಜಿ ಹಾಕಿ 2 ವರ್ಷವಾಗಿದ್ದರೂ ಇನ್ನೂ ಮಂಜೂರಾಗಿಲ್ಲ. ಕನಿಷ್ಟ ಸಭೆಯಲ್ಲಾದರೂ ಸಂಬಂಧಪಟ್ಟವರನ್ನು ಕರೆಸಿ, ವಿಚಾರಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನವೂ ಆಗಲಿಲ್ಲ.

ಇಂತಹ ಅರ್ಥಪೂರ್ಣ ಸಮಾರಂಭಕ್ಕೆ ವಿಘ್ನಸಂತೆ ಗ್ರಾಮವನ್ನು ಆಯ್ಕೆ ಮಾಡುವುದಕ್ಕೂ ಮೊದಲು, ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದಲ್ಲಿ ತಾಡವವಾಡುತ್ತಿರುವ ಅನೈರ್ಮಲ್ಯವನ್ನು ತೊಡೆದುಹಾಕುವ ಪ್ರಯತ್ನವನ್ನೂ ಮಾಡಿಲ್ಲ. ಗ್ರಾಮದ ದೇವಸ್ಥಾನಗಳೂ ಸೇರಿದಂತೆ ರಸ್ತೆ, ಮತ್ತು ಚರಂಡಿಗಳಲ್ಲಿ ಕಸದ ತ್ಯಾಜ್ಯ ತುಂಬಿ ತುಳುಕುತ್ತಿತ್ತು. ಆರೋಗ್ಯ ತಪಾಸಣೆ, ಮತ್ತು ರೇಷನ್ ಕಾರ್ಡ್ ಕೇಂದ್ರಗಳನ್ನು ತೆರೆಯುವ ಮೂಲಕ ಹೆಚ್ಚಿನ ಜನರನ್ನು ಸೇರಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ಸುಮಾರು 82 ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು.

ಒಟ್ಟಾರೆ ನಮ್ಮ ಸಮಸ್ಯೆಗಳು ಇಂದೇ ಬಗೆಹರಿಯುತ್ತೆ ಎಂದು ಕಾದು ಕುಳಿತಿದ್ದ ಗ್ರಾಮಸ್ಥರಿಗೆ ಬ್ರಹ್ಮನಿರಸನ ಆಗಿದ್ದಂತೂ ದುರಂತವೇ ಸರಿ. ಬಜಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಬಸವರಾಜು, ತಾ.ಪಂ ಸದಸ್ಯ ರಾಜಣ್ಣ. ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ . ತಹಶೀಲ್ದಾರ್. ಆರ್.ಜಿ. ಚಂದ್ರಶೇಖರ್. ಇ.ಓ. ಹೆಚ್.ಎಂ. ಸುದರ್ಶನ್. ನಗರಾಯುಕ್ತ ಉಮಾಕಾಂತ್.  ಬಿ.ಇ.ಓ. ಪ್ರಭುಸ್ವಾಮಿ. ಮತ್ತು ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.
Published by:Latha CG
First published: