Coronavirus: ಕೋವಿಡ್ ಟೆಸ್ಟ್ ಮಾಡ್ಸಿದ್ರಾ? ವರದಿ ನೋಡೋದು ಈಗ ಬಹಳ ಸುಲಭ, ಹೀಗೆ ಮಾಡಿ ಸಾಕು

Official Government of Karnataka Website : ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುಚನೆ ನೀಡಲಾಗಿದ್ದು,  ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲು ಆದೇಶಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಕೊರೊನಾ ಪ್ರಕರಣಗಳು (Coronavirus Cases) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೇ. ರೂಪಾಂತರಿ ವೈರಸ್ ಓಮೈಕ್ರಾನ್​ (Omicron) ಸಹ ಹೆಚ್ಚಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ (Night curfew) , ವೀಕೆಂಡ್​ ಕರ್ಫ್ಯೂ (Weekend curfew) ಜಾರಿ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ರಾಜ್ಯದಲ್ಲಿ ಸಹ ಕೊರೊನಾ ಆರ್ಭಟ ಮುಂದುವರೆದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈಗಾಗಲೇ ವೀಕೆಂಡ್​ ಕರ್ಫ್ಯೂ ವಿಸ್ತರಿಸಲಾಗಿದ್ದು, ಈ ತಿಂಗಳ ಅಂತ್ಯದವರೆಗೆ ಕರ್ಫ್ಯೂ ಜಾರಿ ಇರಲಿದೆ. ಇನ್ನು ಆರೋಗ್ಯದ ಸಮಸ್ಯೆ (Health Problem) ಕಂಡು ಬಂದು ಕೊರೊನಾ ಟೆಸ್ಟ್ ಮಾಡಿಸಿಕೊಂಡವರು ತಮ್ಮ ವರದಿಯನ್ನು ಸುಲಭವಾಗಿ ಪಡೆಯಲು ಸರ್ಕಾರ ಹೊಸ ವೆಬ್​ಸೈಟ್​ ಬಿಡುಗಡೆ ಮಾಡಿದೆ.  

ಸಾಮಾನ್ಯವಾಗಿ ಕೊರೊನಾ ಪರೀಕ್ಷೆ ಮಾಡಿಸಿದ ನಂತರ ನಮ್ಮ ವರದಿಗಾಗಿ ಕಾಯಬೇಕಾಗುತ್ತದೆ. ಕೆಲವೊಮ್ಮೆ ಮೆಸೇಜ್ ಬರುವುದು ತಡವಾಗಬಹುದು. ಈ ಸಂದರ್ಭದಲ್ಲಿ ನಿಮ್ಮ ಪರೀಕ್ಷೆಯ ವರದಿಯನ್ನು ಸುಲಭವಾಗಿ ಈ ಲಿಂಕ್ ಮೂಲಕ ಪಡೆಯಬಹುದಾಗಿದೆ.

ಕೊರೊನಾ ಪರೀಕ್ಷೆ ವರದಿ ಪಡೆಯುವ ಲಿಂಕ್

ಇನ್ನು ನಿನ್ನೆಯಷ್ಟೇ ರಾಜ್ಯದಲ್ಲಿ ಕೊರೊನಾ ಹರಡುವುಕೆಯನ್ನು ತಡೆಯುವ ಸಲುವಾಗಿ ಸಿಎಂ ಅಧಿಕಾರಿಗಳು ಮತ್ತು ಸಚಿವರ ಜೊತೆ ಸಭೆ ನಡೆಸಿದ್ದು, ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯನ್ನು ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Private Covid Care Centreನಲ್ಲಿ ಕೋವಿಡ್ ಚಿಕಿತ್ಸೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ.. ಯಾವುದಕ್ಕೆ ಎಷ್ಟು?

ಈಗಾಗಲೇ ರಾಜ್ಯದಲ್ಲಿ 14 ಸಾವಿರಕ್ಕಿಂತಲೂ ಅಧಿಕ ಕೇಸ್ ಗಳು ಪತ್ತೆಯಾಗುತ್ತಿದ್ದು, ಹಲವು ಬಿಗಿ ಕ್ರಮಗಳು ಜಾರಿಯಲ್ಲಿದೆ. ಇದರ ಜೊತೆಗೆ ಎರಡನೇ ಅಲೆಯಲ್ಲಿನ ಭೀಕರ ದೃಶ್ಯಗಳು ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈಗಾಗಲೇ ಆಕ್ಸಿಜನ್, ಬೆಡ್, ಆಂಬುಲೆನ್ಸ್ ಟ್ರಯಾಜಿಂಗ್ ಸೆಂಟರ್ ಗಳೆಲ್ಲವನ್ನೂ ಸಿದ್ಧ ಮಾಡಿಟ್ಟುಕೊಂಡಿದೆ. ಇದೀಗ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಅವಕಾಶ ಕೊಟ್ಟಿದೆ.

ಎರಡನೇ ಅಲೆಯಲ್ಲಿ ಹಲವಾರು ಹೋಟೆಲ್ ಗಳು ತಾತ್ಕಾಲಿಕ ಆಸ್ಪತ್ರೆಗಳಾಗಿ ಮಾರ್ಪಾಡು ಆಗಿದ್ದವು. ಖಾಸಗಿ ಆಸ್ಪತ್ರೆಯೊಂದಿಗೆ ಕೈಜೋಡಿಸಿ ಹೋಟೆಲ್, ಲಾಡ್ಜ್ ಗಳೆಲ್ಲಾ ಕೊರೋನಾ ಆರೈಕೆ ಕೇಂದ್ರಗಳಾಗಿದ್ದವು. ಇದೀಗ ಮತ್ತೆ ಮೂರನೇ ಅಲೆ ಆರಂಭವಾಗುತ್ತಿದ್ದಂತೆ ಮತ್ತೆ ಹೋಟೆಲ್ ಹಾಗೂ ಆಸ್ಪತ್ರೆಗಳಿಗೆ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರಯಲು ಸರ್ಕಾರ ಅನುಮತಿ ಕೊಟ್ಟಿದೆ. ಇದರ ಜೊತೆ ಸಾರ್ವಜನಿಕರಿಂದ ಪಡೆದುಕೊಳ್ಳ ಬೇಕಾದ ಹಣವನ್ನೂ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುಚನೆ ನೀಡಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲು ಆದೇಶಿಸಲಾಗಿದೆ.

ಕೋವಿಡ್  ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ (CCC) ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದ್ದು, CCC ಚಿಕಿತ್ಸೆಗೆ ದರವನ್ನೂ ಸರ್ಕಾರವೇ ನಿಗದಿ ಮಾಡಿದೆ. ಬಜೆಟ್ ಸಿಸಿಸಿಗೆ ಪ್ರತಿ ದಿನ 4,000, 3 ಸ್ಟಾರ್ ಕೇರ್ ಸೆಂಟರ್ ಗಳಿಗೆ ದಿನವೊಂದಕ್ಕೆ 8,000 ಹಾಗೂ 5 ಸ್ಟಾರ್ ಕೋವಿಡ್ ಆರೈಕೆ ಕೇಂದ್ರಗಳಿಗೆ 10,000 ರೂಪಾಯಿ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ನಿಯಮದನ್ವಯವೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ರೋಗ ಲಕ್ಷಣಗಳು ಇಲ್ಲದ ಸೋಂಕಿತರಿಗೆ ಅವಕಾಶ ನೀಡುವುದು ಅಥವಾ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲು ಮಾಡುವುದು ಮತ್ತು ಸೋಂಕಿತ ಗುಣಮುಖನಾದ ಮೇಲೂ ಉಳಿಸಿಕೊಂಡು ಚಿಕಿತ್ಸೆ ಕೊಡುವುದು ಹೀಗೆ ಸರ್ಕಾರದ ಆದೇಶ ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Lockdown ಭಯಕ್ಕೆ ಊರು ಬಿಡುತ್ತಿರುವ ಕಾರ್ಮಿಕರು; ಸಂಕಷ್ಟದಲ್ಲಿ ಮೀನುಗಾರರು

ಖಾಸಗಿ CCC ಗಳಲ್ಲಿ 24*7 ಆಂಬುಲೆನ್ಸ್ ಸೇವೆ ಅಗತ್ಯ 

ಅದಾಗಿಯೂ ಮಾಡರೇಟ್ ಅಥವಾ ಸಿವಿಯರ್ ಕೋವಿಡ್ ಸೋಂಕಿತರಿಗೆ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದೆ. ‌ಇನ್ನು ಪ್ರತಿ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿಯೂ 24*7 ಆಂಬ್ಯುಲೆನ್ಸ್ ಸೇವೆ ಒದಗಿಸಲು ತಾಕೀತು ಮಾಡಲಾಗಿದೆ. ಸೋಂಕು ಹರಡದಂತೆ CCC ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು ಸುತ್ತೋಲೆಯಲ್ಲಿ ಹೇಳಲಾಗಿದೆ.
Published by:Sandhya M
First published: