HOME » NEWS » State » OFFICERS WHO MISS USE KOLAR TAHASHILDAR NAME HAS BEEN SUSPENDED SESR

ತಹಶೀಲ್ದಾರ್​ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ; ಮೂವರು ಅಧಿಕಾರಿಗಳ ಅಮಾನತ್ತು

ತಹಶೀಲ್ದಾರ್ ಶೋಭಿತಾ ಜಿಲ್ಲೆಯಲ್ಲಿ  ಸಾಕಷ್ಟು ಬಾರಿ ಅಕ್ರಮ ಮರಳುಗಾರಿಕೆ ಹಾಗೂ ಮಣ್ಣು ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿಗೆ ಮುಂದಾದಾಗ, ಕೆಳಹಂತದ ಅಧಿಕಾರಿಗಳೇ ಅನೇಕ ಬಾರಿ ಗುಟ್ಟು ಬಿಟ್ಟುಕೊಡುತ್ತಿದ್ದರು. ಹೀಗಾಗಿ ಹಲವು ದಾಳಿಗಳು ವ್ಯರ್ಥವಾಗುತ್ತಿದ್ದವು.

Seema.R | news18-kannada
Updated:March 3, 2020, 3:14 PM IST
ತಹಶೀಲ್ದಾರ್​ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ; ಮೂವರು ಅಧಿಕಾರಿಗಳ ಅಮಾನತ್ತು
ತಹಶೀಲ್ದಾರ್​ ಬಳಸುತ್ತಿದ್ದ ವಾಹನ
  • Share this:
ಕೋಲಾರ (ಮಾ.03): ತಹಶೀಲ್ದಾರ್​​ ಕಾರು ಬಳಸಿ ಜಿಲ್ಲೆಯ ಲಾರಿ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಕಂದಾಯ ನಿರೀಕ್ಷಕ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಕಾರು ಚಾಲಕರನ್ನು ಅಮಾನತು ಮಾಡಲಾಗಿದೆ. 

ಜಿಲ್ಲೆಯ ತಹಶೀಲ್ದಾರ್​ ಶೋಭಿತಾ ಅವರನ್ನು ಕೆಲಸ ಮುಗಿದ ಬಳಿಕ ಮನೆಗೆ ಬಿಟ್ಟು ಅವರ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕ​ ಶ್ರೀನಿವಾಸ್​, ವಕ್ಕಲೇರಿ ಕಂದಾಯ ನಿರೀಕ್ಷಕ ಮಂಜುನಾಥ್​ ಹಾಗೂ ಡಿ ಗ್ರೂಪ್​ ನೌಕರರಾದ ಜಗದೀಶ್​ ಮತ್ತು ಚಂದ್ರು, ಈ ಕೃತ್ಯ ಎಸಗಿದ್ದಾರೆ.

ರಾತ್ರಿ ನಗರದ ಹೊರವಲಯದ ಟಮಕ ಬಳಿ ಸರ್ವೀಸ್​ ರಸ್ತೆಯಲ್ಲಿ ತಹಶೀಲ್ದಾರ್​ ಕಾರು ನಿಲ್ಲಿಸಿಕೊಂಡ ಇವರು, ಮೇಡಂ ಕಾರಿನಲ್ಲಿದ್ದಾರೆ ಎಂದು ಹೇಳಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು. ಈ ವೇಳೆ ಲಾರಿ ಚಾಲಕರೊಬ್ಬರು ಸ್ಥಳೀಯ ರಾಜಕಾರಣಿಗೆ ಈ ಮಾಹಿತಿ ನೀಡಿದ್ದಾರೆ. ಆಗ ಅವರು ನೇರವಾಗಿ ತಹಶೀಲ್ದಾರ್​ಗೆ ಕರೆ ಮಾಡಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ವಿಷಯ ಗೊತ್ತಾಗುತ್ತಿದ್ದಂತೆ ತಹಶೀಲ್ದಾರ್ ಶೋಭಿತಾ ಅವರು ಸ್ಥಳಕ್ಕೆ ಬಂದಾಗ  ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮೂವರು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ.

ಇದನ್ನು ಓದಿ: ನಿಖಿಲ್​ ಮದುವೆ: ರಾಮನಗರ ಜನರಿಗೆ ಭರ್ಜರಿ ಗಿಫ್ಟ್​; ರೇಷ್ಮೆ ಸೀರೆ, ಪಂಚೆ, ಶರ್ಟ್​ ನೀಡಿ ಮತದಾರರಿಗೆ ಎಚ್​ಡಿಕೆ ಆಹ್ವಾನ

ತಹಶೀಲ್ದಾರ್ ಶೋಭಿತಾ ಜಿಲ್ಲೆಯಲ್ಲಿ  ಸಾಕಷ್ಟು ಬಾರಿ ಅಕ್ರಮ ಮರಳುಗಾರಿಕೆ ಹಾಗೂ ಮಣ್ಣು ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿಗೆ ಮುಂದಾದಾಗ, ಕೆಳಹಂತದ ಅಧಿಕಾರಿಗಳೇ ಅನೇಕ ಬಾರಿ ಗುಟ್ಟು ಬಿಟ್ಟುಕೊಡುತ್ತಿದ್ದರು. ಹೀಗಾಗಿ ಹಲವು ದಾಳಿಗಳು ವ್ಯರ್ಥವಾಗುತ್ತಿದ್ದವು. ಕೆಳಹಂತದ ಅಧಿಕಾರಿಗಳು ದಂಧೆಕೋರರ ಜೊತೆ ಶಾಮೀಲ್​ ಆಗಿರುವ ಮಾತು ಕೇಳಿ ಬಂದಿದೆ.

(ವರದಿ: ರಘುರಾಜ್​)
First published: March 3, 2020, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories