Ganesh Festival: ಅನುಮತಿಗಾಗಿ ಹುಬ್ಬಳ್ಳಿ ಪಾಲಿಕೆಗೆ ಬಂದ ಗಣೇಶ! ಅಧಿಕಾರಿಗಳ ಸುತ್ತ ಪ್ರದಕ್ಷಿಣೆ ಹಾಕಿದ್ರೂ ಸಿಗದ ಪರ್ಮೀಷನ್!

ತನ್ನ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಸ್ವತಹ ಗಣೇಶನೇ ಅರ್ಜಿ ಹಿಡಿದು ಹುಬ್ಬಳ್ಳಿ ಪಾಲಿಕೆ ಕಛೇರಿಗೆ ಬಂದಿದ್ದ. ಆಫೀಸರ್‌ಗಳ ಸುತ್ತ ಸುತ್ತಿದರೂ ಅನುಮತಿ ಸಿಗದೇ ಗಣೇಶನಿಗೆ ತೀವ್ರ ನಿರಾಸೆಯಾಯಿತು. ಈದ್ಗಾ ಗಣೇಶೋತ್ಸವಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಅಣಕ ಪ್ರದರ್ಶನ ಗಮನ ಸೆಳೆಯಿತು.

ಅನುಮತಿ ಪಡೆಯಲು ಬಂದ ಗ:ಣೇಶ

ಅನುಮತಿ ಪಡೆಯಲು ಬಂದ ಗ:ಣೇಶ

  • Share this:
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ (Eidgha Maidan) ಗಣೇಶೋತ್ಸವಕ್ಕೆ (Ganeshotsava) ಅನುಮತಿ ನೀಡುವ ಸಂಬಂಧ ವಿವಾದ (Controversy) ತೀವ್ರ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಈ ನ಼ಡುವೆ ಸ್ವತಃ ವಿಘ್ನ ನಿವಾರಕನೇ ಹುಬ್ಬಳ್ಳಿಯ ಪಾಲಿಕೆಗೆ (Corporation) ಅರ್ಜಿ (Application) ಹಿಡಿದು ಬಂದಿದ್ದ! ಅಧಿಕಾರಿಗಳ (Officers) ಸುತ್ತ ಪ್ರದಕ್ಷಿಣೆ ಹಾಕಿದ್ರೂ ಈ ಗಣೇಶನಿಗೆ (Ganesh) ಮಾತ್ರ ಅನುಮತಿ ಸಿಗದೆ ತೀವ್ರ ನಿರಾಸೆ ಅನುಭವಿಸುವಂತಾಯಿತು. ಪಾಲಿಕೆ ಕಾರ್ಯವೈಖರಿ ಖಂಡಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಅಣಕ ಪ್ರದರ್ಶನ ಗಮನ ಸೆಳೆಯಿತು.

ಹಿಂದೂಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ

ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ವಿನೂತನ ಪ್ರತಿಭಟನೆ ನಡೆಯಿತು. ಗಣಪತಿ ಮುಖವಾಡ ಹಾಕಿಕೊಂಡು ಪಾಲಿಕೆ ಎದುರು ಪ್ರತಿಭಟನೆ ಮಾಡಲಾಯಿತು. ಗಣೇಶ ಮುಖವಾಡ ಧರಿಸಿದ ವ್ಯಕ್ತಿ ವಿವಿಧ ಇಲಾಖೆ ಅಧಿಕಾರಿಗಳ ಬಳಿ ತೆರಲಿ ತನ್ನ ಪ್ರತಿಷ್ಠಾಪನೆಗೆ ಅನುಮತಿ ನೀಡವಂತೆ ಕೇಳಿಕೊಳ್ಳುವ ಅಣಕ ಪ್ರದರ್ಶನ ಮಾಡಲಾಯಿತು.

ವಿನೂತನ ಪ್ರತಿಭಟನೆ


ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ದುರ್ಗದ ಬೈಲು ಪ್ರದೇಶದಿಂದ ಸಹಿ ಸಂಗ್ರಹ ಮಾಡಿಕೊಂಡು ಬಂದ ಪ್ರತಿಭಟನಾಕಾರರು, ನಗರದ ವಿವಿಧೆಡೆ ಸಹಿ ಸಂಗ್ರಹಿಸಿ, ಪಾಲಿಕೆಗೆ ಎಂಟ್ರಿ ಕೊಟ್ಟರು. ಶ್ರೀರಾಮಸೇನೆ, ಭಜರಂಗದಳ, ಗಜಾನನೋತ್ಸವ ಸಮೀತಿ ಸೇರಿ ವಿವಿಧ ಸಂಘಟನೆಗಳು ಸಾಥ್ ನೀಡಿದ್ದರು. ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಕೋರಿ ಕೊನೆಯ ಗಡುವು ನೀಡಿದರು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರಿಂದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ‌ ನಡೆಯಿತು.

ಇದನ್ನೂ ಓದಿ: Ganesh Festival: ಮನೆಯಲ್ಲಿ ಗಣೇಶನ ಪೂಜಿಸ್ತೀರಾ? ರೋಡಲ್ಲಿ ಗಣಪನ ಕೂರಿಸ್ತೀರಾ? ಹಾಗಿದ್ರೆ ಗೈಡ್‌ಲೈನ್ಸ್‌ ಬಗ್ಗೆ ತಿಳ್ಕೊಳ್ಳಿ

ಭಜನೆ, ಶ್ಲೋಕ ಹೇಳುತ್ತಾ ಆಕ್ರೋಶ

ಪಾಲಿಕೆಯ ಆವರಣದಲ್ಲಿ ಭಜನೆ ಮಾಡುತ್ತ ವಿನೂತನ ಪ್ರತಿಭಟನೆ ಮಾಡಲಾಯಿತು. ಗಣಪತಿಯ ಶ್ಲೋಕ, ಭಜನೆ ಮಾಡುತ್ತ ಪ್ರತಿಭಟನೆ‌ ಮಾಡಲಾಯಿತು. ಗಣೇಶ ಪ್ರತಿಷ್ಟಾಪನೆಯ ಬಗ್ಗೆ ಸ್ಪಷ್ಟ ಪರವಾನಗಿ ನೀಡುವಂತೆ ಪಟ್ಟು ಹಿಡಿದರು. ಗಣೇಶ ವೇಷಧಾರಿಯಿಂದ ವಿವಿಧ ಇಲಾಖೆಗಳ ಮುಂದೆ ಹೋಗಿ ಅಂಗಲಾಚುವ ಅಣಕು ಪ್ರದರ್ಶನ ಮಾಡಲಾಯಿತು.

ಭಜನೆ ಹೇಳುತ್ತಾ ಆಕ್ರೋಶ


ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಪಾಲಿಕೆಯ ಹಿಂಬರಹಕ್ಕೆ ಆ ಮೂಲಕ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಪಾಲಿಕೆಯು ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕು. ಇಲ್ಲದೆ ಇದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪಾಲಿಕೆ ಅಧಿಕಾರಿಗಳು ಹೇಳಿದ್ದೇನು?

ಈದ್ಗಾ ‌ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮನವಿ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷನರ್ ಗೋಪಾಲಕೃಷ್ಣ, ಸ್ಥಳದ ವಸ್ತು ಸ್ಥಿತಿ ಬಗ್ಗೆ  ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗುವುದು. ಅಲ್ಲಿಯವರಿಗೆ ಸಂಘಟನೆಗಳು ಮೊದಲಿನಂತೆ ಎಲ್ಲಾ ಇಲಾಖೆಯ ಪೂರ್ವಾನುಮತಿ ಪಡೆಯಬೇಕು. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಅಗತ್ಯವಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಆ ಬಳಿಕ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಕುರಿತು ತೆಗೆದುಕೊಳ್ಳಲಾಗುತ್ತದೆ ಎಂದರು.

ಪಾಲಿಕೆ ವಿರುದ್ಧ ಆಕ್ರೋಶ


ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಪಟ್ಟು ಮುಂದುವರೆದಿದ್ದು, ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದಲ್ಲಿ ಅದರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನ್ಯೂಸ್ 18 ಜೊತೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಗೆ 2 ಬಾರಿ ನಮಾಜಿಗೆ ಅವಕಾಶ ನೀಡಲಾಗಿದೆ. ಆದರೆ ಗಣೆಶೋತ್ಸವ ಆಚರಣೆಗೆ ಸರ್ಕಾರ ಹಾಗೂ ಪಾಲಿಕೆ ಮೀನಾ ಮೇಷ ಎಣಿಸುತ್ತಿದೆ. ಈದ್ಗಾ ಮೈದಾನವೇನೂ ನಿಮ್ಮಪ್ಪನ ಸ್ವತ್ತಲ್ಲ. ಈದ್ಗಾ ಮೈದಾನ ಸಾರ್ವಜನಿಕ ಸ್ವತ್ತು. ಅಲ್ಲಿ  ಮುಸ್ಲಿಂ ಪ್ರಾರ್ಥನೆಗೆ ಅವಕಾಶ ನೀಡ್ತಾರೆ. ಆದ್ರೆ ಗಣೆಶೋತ್ಸವ ಆಚರಣೆಗೆ ಯಾಕೆ ಅವಕಾಶ ನೀಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Ganesh Chaturthi: ಗಣೇಶನನ್ನು ನೀರಲ್ಲಿ ಮುಳುಗಿಸುವುದೇಕೆ? ಇಲ್ಲಿದೆ ನೋಡಿ ಮಾಹಿತಿ

ಸರ್ಕಾರಕ್ಕೆ ಶಾಪ ತಟ್ಟುತ್ತದೆ ಎಂದ ಮುತಾಲಿಕ್

ಅನುಮತಿ ನೀಡ ದೇ ಇದ್ದರೆ ಸರ್ಕಾರಕ್ಕೆ ಅದರ ಶಾಪ ತಟ್ಟುತ್ತೆ. ಅನುಮತಿ ಕೊಟ್ಟರೂ ಸರಿ ಕೊಡದಿದ್ದರೂ ಸರಿ ಗಣೆಶೋತ್ಸವ ಆಚರಣೆ ಮಾಡೇ ಮಾಡ್ತೀವಿ.  ಪಾಲಿಕೆಗೆ ಇದು ಕೊನೆಯ ಗಡವು, ಈ ಗಡುವು ಮೀರಿದ್ರೆ ನಾವು ಗಣೇಶ ಆಚರಣೆ ಮಾಡೇ ಮಾಡ್ತೀವಿ. ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ. ಈ ಸಂಬಂಧ 26 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಗಣೇಶ ಮೂರ್ತಿಯನ್ನು ಕೂಡಿಸ್ತೇವೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.
Published by:Annappa Achari
First published: