ಸಲ್ಲು ಬಗ್ಗೆ ಮಾಹಿತಿ ನೀಡಿ ಎಂದು ಅರ್ಜಿ ಹಾಕಿದ್ರೆ, ಸಲ್ಮಾನ್​ ಬಳಿಯೇ ಅನುಮತಿ ಕೇಳಿದ್ರು!


Updated:July 4, 2018, 3:41 PM IST
ಸಲ್ಲು ಬಗ್ಗೆ ಮಾಹಿತಿ ನೀಡಿ ಎಂದು ಅರ್ಜಿ ಹಾಕಿದ್ರೆ, ಸಲ್ಮಾನ್​ ಬಳಿಯೇ ಅನುಮತಿ ಕೇಳಿದ್ರು!

Updated: July 4, 2018, 3:41 PM IST
ಶ್ಯಾಮ್​. ಎಸ್​, ನ್ಯೂಸ್ 18 ಕನ್ನಡ

ಬೆಂಗಳೂರು(ಜು.04): ಒಬ್ಬ ಅಪರಾಧಿ ಕುರಿತು ಮಾಹಿತಿ ಕೋರಿ ಆರ್​ಟಿಐ ಅಡಿ ಬಂಧಿಖಾನೆ ಇಲಾಖೆಗೆ ಅರ್ಜಿ ಸಲ್ಲಿಸಿದ್ರೆ, ಇರೋ ಮಾಹಿತಿ ಕೊಡಬೇಕು. ಆದ್ರೆ, ಸಲ್ಮಾನ್ ಖಾನ್ ವಿಚಾರದಲ್ಲಿ, ಜೈಲಾಧಿಕಾರಿಗಳು ಮಹಾ ಎಡವಟ್ಟು ಮಾಡಿದ್ದಾರೆ. ಮಾಹಿತಿ ಕೊಡಬಹುದೇ ಎಂದು ಖುದ್ದು ಸಲ್ಮಾನ್ ಖಾನ್​ ಬಳಿ ಅನುಮತಿ ಕೇಳಿದ್ದಾರೆ. ಇದರ ಎಕ್ಸ್​ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ರಾಜಸ್ಥಾನದ ಜೋಧಪುರ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದೇ ವರ್ಷದ ಏಪ್ರಿಲ್ 5ರಂದು ಸಲ್ಮಾನ್ ಖಾನ್ ಜೈಲು ಸೇರಿದ್ರು. ಆಗ ಜೈಲಲ್ಲಿ ಸಲ್ಮಾನ್ ಖಾನ್​ಗೆ ವಿಐಪಿ ಟ್ರೀಟ್​ಮೆಂಟ್ ಕೊಡಲಾಗಿತ್ತು, ಯಾರು ಎಷ್ಟೊತ್ತಿಗೆ ಬಂದ್ರೂ ಭೇಟಿಗೆ ಅವಕಾಶ ನೀಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಆರ್​ಟಿಐ ಮೂಲಕ, ಅರ್ಜಿ ಸಲ್ಲಿಸಿದ್ದ ಕರ್ನಾಟಕದ ಹಿರಿಯ ವಕೀಲ ಹಾಗೂ ಆರ್​ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ, ಸಲ್ಮಾನ್ ಖಾನ್ ಕುರಿತು ಮಾಹಿತಿ ಕೇಳಿದ್ರು. ಇದಕ್ಕೆ ಉತ್ತರಿಸಿದ್ದ ಜೋಧಪುರ ನ್ಯಾಯಾಲಯ, ಸಲ್ಲುಗೆ ಯಾಱರು ಭೇಟಿಯಾಗಿದ್ರು ಎಂದು ಮಾಹಿತಿ ನೀಡಿದೆ.ಏಪ್ರಿಲ್ 5ರಂದು ಜೈಲು ಸೇರಿದ ಸಲ್ಮಾನ್ ಖಾನ್​ಗೆ ಏಪ್ರಿಲ್ 6ರ ಬೆಳಗ್ಗೆ 8 ಗಂಟೆ ಸುಮಾರಿಗೆ ಇಬ್ಬರು ವಕೀಲರು ಭೇಟಿ ಮಾಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಭೇಟಿಯಾಗಿ ಸಲ್ಲು ಜೊತೆ ಮಾತುಕತೆ ನಡೆಸಿದ್ದಾರೆ. ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಲ್ಲು ತಂಗಿ ಅರ್ಪಿತಾ ಸೇರಿದಂತೆ ಮೂವರು ಭೇಟಿಯಾಗಿದ್ದಾರೆ.ಅಸಲಿಗೆ ಜೈಲ್ ಮ್ಯಾನ್ಯುಯಲ್ ಪ್ರಕಾರ ಸಜಾಬಂದಿ ಕೈದಿಗೆ ಸಂಜೆ 4ರಿಂದ 6 ಗಂಟೆವರೆಗೆ ಮಾತ್ರ ಭೇಟಿ ಮಾಡಲು ಅವಕಾಶವಿದೆ. ಆದ್ರೂ ಬೆಳಗ್ಗೆ, ಮಧ್ಯಾಹ್ನ ಭೇಟಿಗೆ ಅವಕಾಶ ನೀಡುವ ಮೂಲಕ ನಿಯಮ ಗಾಳಿಗೆ ತೂರಲಾಗಿದೆ ಅನ್ನೋದು, ಆರ್​ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ.
Loading...

ಸಲ್ಲು ವಿಚಾರದಲ್ಲಿ, ಕಾನೂನು ಉಲ್ಲಂಘನೆಯಾಗಿರೋದು ಸ್ಪಷ್ಟ ಎಂದಿರುವ ನರಸಿಂಹಮೂರ್ತಿ, ಸ್ವಯಂಪ್ರೇರಿತ ದೂರು ದಾಖಲಿಸುವಂತೆ ರಾಜಸ್ಥಾನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯೋದಾಗಿ ಹೇಳಿದ್ದಾರೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ