Mandya: ಸನ್ನಿ ಲಿಯೋನ್ ಅಭಿಮಾನಿಗಳಿಗೆ ಮಂಡ್ಯ ಹುಡ್ಗ ಕೊಟ್ಟ ಬಂಪರ್ ಆಫರ್; ಆದ್ರೆ ಕಂಡಿಷನ್ಸ್ ಅಪ್ಲೈ

ಚಿಕನ್ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಶೇ. 10% ಡಿಸ್ಕೌಂಟ್ ಕೊಡುವುದಾಗಿ ಮಾಹಿತಿ ಫಲಕ ಒಂದನ್ನ ಹಾಕಿದ್ದಾನೆ. ಆದ್ರೆ ಅಭಿಮಾನಿಗಳು 3 ಷರತ್ತಿನಲ್ಲಿ ಪಾಸ್​ ಆಗಲೇಬೇಕು.

ಸನ್ನಿ ಲಿಯೋನ್ ಅಭಿಮಾನಿ

ಸನ್ನಿ ಲಿಯೋನ್ ಅಭಿಮಾನಿ

  • Share this:
ಯಾರದ್ರೂ ನಿಮಗೆ ನಟಿ ಸನ್ನಿ ಲಿಯೋನ್ (Sunny leone) ಗೊತ್ತಾ ಅಂತ ಕೇಳಿದ್ರೆ, ಅಯ್ಯೋ ಅಂತ ಮುಗುಳು ನಗುತ್ತಾ ಹಿಂದೆ ಸರಿಯೋರೆ ಹೆಚ್ಚು. ಆದ್ರೆ ಮಂಡ್ಯದಲ್ಲೊಬ್ಬ (Mandya) ನೀಲಿ ತಾರೆ ಸನ್ನಿಲಿಯೋನ್‌ರ ಅಪ್ಪಟ ಅಭಿಮಾನಿ ಇದ್ದಾನೆ. ಸನ್ನಿಲಿಯೋನ್ ನನ್ನ ನೆಚ್ಚಿನ ತಾರೆ ಎಂದು ಗಂಟಾಘೋಷವಾಗಿ ಹೇಳೋದ್ರ ಜೊತೆಗೆ ಆಕೆಯ ಅಭಿಮಾನಿಗಳಿಗೆ (Fans) ಬಂಪರ್ ಆಫರ್​ (Big Offer) ಒಂದನ್ನು ನೀಡಿದ್ದಾನೆ.  ಸಾಮಾನ್ಯವಾಗಿ ಹಬ್ಬದ (Festival) ಸಂದರ್ಭದಲ್ಲಿ ಅಂಗಡಿಗಳಲ್ಲಿ ರಿಯಾಯಿತಿ ಕೊಡುವುದನ್ನು ನಾವು-ನೀವೆಲ್ಲಾ ನೋಡಿದ್ದೇವೆ. ಆದರೆ ಮಂಡ್ಯದಲ್ಲಿ ನೀಲಿ ಸಿನಿಮಾ ತಾರೆ ಸನ್ನಿಲಿಯೋನ್‌ ಲಿಯೋನ್‌ ಅಪ್ಪಟ ಅಭಿಮಾನಿಯೊಬ್ಬ, ವರ್ಷ ಪೂರ್ತಿ ಸನ್ನಿ ಅಭಿಮಾನಿಗಳಿಗಾಗಿ ವಿಶೇಷ ಆಫರ್ ನೀಡಿದ್ದಾನೆ.

ಸನ್ನಿ ಲಿಯೋನ್ ಅಭಿಮಾನಿಗಳಿಗೆ ಬಂಪರ್ ಆಫರ್

ನೀವು ನಿಜಾಗ್ಲೂ ನೀಲಿ ತಾರೆ ಸನ್ನಿ ಲಿಯೋನ್ ಅಭಿಮಾನಿಯಾಗಿದ್ದೀರಾ..? ಆಗಿದ್ರೆ ನಿಮಗೊಂದು ಬಂಪರ್ ಆಫರ್ ಮಂಡ್ಯದಲ್ಲಿದೆ‌. ಹೌದು ಮಂಡ್ಯದ ಪ್ರಸಾದ್ ಎಂಬ ಯುವಕ ನೀಲಿ ತಾರೆ ಸನ್ನಿ ಲಿಯೋನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಹಿಗಾಗಿ ತನ್ನಂತೆ ಸನ್ನಿಲಿಯೋನ್ ಅಭಿಮಾನಿಗಳು ಯಾರಾದರೂ ಇದ್ದರೆ ಅಂತವರಿಗೆ ಏನಾದರೂ ಉಡುಗೊರೆ ನೀಡಬೇಕು ಎಂದುಕೊಂಡ ಪ್ರಸಾದ್, ತನ್ನ ಚಿಕನ್ ಸೆಂಟರ್ ನಲ್ಲಿ ಸನ್ನಿ ಅಭಿಮಾನಿಗಳಿಗೆ ಅಂತ ಬಂಪರ್ ಆಫರ್ ನೀಡಿದ್ದಾನೆ.

ಚಿಕನ್ ನಲ್ಲಿ 10% ಡಿಸ್ಕೌಂಟ್

ಮಂಡ್ಯ ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್, ತನ್ನ ಅಂಗಡಿಯಲ್ಲಿ ಚಿಕನ್ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಶೇ. 10% ಡಿಸ್ಕೌಂಟ್ ಕೊಡುವುದಾಗಿ ಮಾಹಿತಿ ಫಲಕ ಒಂದನ್ನ ಹಾಕಿದ್ದಾನೆ. ಆದ್ರೆ ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗಲ್ಲ, ಬದಲಿಗೆ ಮೂರು ಪ್ರಮುಖ ಷರತ್ತು ಪೂರೈಸಬೇಕಾಗಿದೆ.

ಇದನ್ನೂ ಓದಿ: Mango: ಈ ವರ್ಷ ಮಾವು ದುಬಾರಿ..! ಹವಾಮಾನ ಬದಲಾವಣೆಯಿಂದಾಗಿ ಬೆಲೆ ಏರಿಕೆ

3 ಷರತ್ತುಗಳಲ್ಲಿ ಪಾಸ್ರಾ​ ಆದವರಿಗೆ ಮಾತ್ರ ಆಫರ್ ಅಪ್ಲೆ

ಹೌದು.. ಸುಮ್ಮನೆ ಬಂದು ನಾನು ಸನ್ನಿ ಲಿಯೋನ್ ಅಭಿಮಾನಿ ಎಂದರೆ ಡಿಸ್ಕೌಂಟ್ ಸಿಗೋದಿಲ್ಲ. ಅದಕ್ಕಾಗಿಯೇ 3 ಕಂಡಿಷನ್ ಗಳನ್ನ ಹಾಕಲಾಗಿದೆ. ಅದರಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರಬೇಕು, ತಮ್ಮ ಮೊಬೈಲ್ ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸೇವ್ ಮಾಡಿಕೊಂಡಿರಬೇಕು, ಅಲ್ಲದೆ ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕು ಎಂದು ಷರತ್ತು ಹಾಕಲಾಗಿದೆ. ಹೀಗೆ ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್ ನೀಡಲಾಗುತ್ತದೆ.

ವರ್ಷ ಪೂರ್ತಿ ಇರಲಿದೆ ಆಫರ್​

ಇನ್ನು ಈ ಆಫರ್ ವರ್ಷ ಪೂರ್ತಿ ನೀಡುವುದಾಗಿ ಪ್ರಸಾದ್ ತಿಳಿಸಿದ್ದಾರೆ. ಸನ್ನಿ ಲಿಯೋನ್ ಅಂದ್ರೆ ಹಲವರು ಆಕೆಯನ್ನ ಕೆಟ್ಟ ಭಾವನೆಯಿಂದ ನೋಡ್ತಾರೆ‌. ಆದ್ರೆ ಸನ್ನಿ ಲಿಯೋನ್ ನನಗೆ ನೆಚ್ಚಿನ ನಟಿ. ಆಕೆ ಹಲವಾರು ಅನಾಥ ಮಕ್ಕಳಿಗೆ ತಾಯಿಯಾಗಿದ್ದಾರೆ. ತನಗೆ ಬಂದ ಆದಾಯದಲ್ಲಿ ಬಡವರು ಮತ್ತು ಅನಾಥರಿಗೆ ವ್ಯಯಿಸುತ್ತಿದ್ದಾರೆ. ಹೀಗಾಗಿ ನಾನು ಈ ರೀತಿ ಆಫರ್​ನನ್ನ ಘೋಷಣೆ ಮಾಡಿದ್ದೇನೆ. ಸನ್ನಿ ಅಭಿಮಾನಿಗಳು ಯಾವಾಗ ಬೇಕಾದರೂ ನನ್ನ ಅಂಗಡಿಗೆ ಬರಬಹುದು ಎಂದು ಅಭಿಮಾನಿ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: Temple: ಧರ್ಮದ ವಿಚಾರಕ್ಕೆ ಜಗಳ ಮಾಡ್ತೀರಾ? ಈ ದೇವಸ್ಥಾನದಲ್ಲಿ ಯಾರೂ ಅಂಗಡಿ ಹಾಕುವಂತಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಒಟ್ಟಾರೆ ಮಂಡ್ಯದ ಈ ಚಿಕನ್ ಅಂಗಡಿ ಮಾಲೀಕನ ಶೇ.10ರಷ್ಟು ಡಿಸ್ಕೌಂಟ್ ಆಫರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೇ ಸನ್ನಿಲಿ ಲಿಯೋನ್ ಅಭಿಮಾನಿಗಳು ಪ್ರಸಾದ್ ಚಿಕಿನ್ ಅಂಗಡಿಗೆ ಡಿಸ್ಕೌಂಟ್‌ಗಾಗಿ ಮುಗಿಬೀಳುತ್ತಿದ್ದಾರೆ.  ಸನ್ನಿ ಲಿಯೋನ್ ನೀಲಿ ಚಿತ್ರ ತಾರೆ ಎಂದು ಕೆಲವರು ಮೂಗು ಮುರಿಯಬಹುದಾದರೂ, ಆಕೆಯ ಅಭಿಮಾನಿಯ ಅಪ್ಪಟ ಅಭಿಮಾನ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ತನ್ನ ವ್ಯಾಪಾರ ವೃದ್ಧಿಗಾಗಿ ಆತನ ವಿಭಿನ್ನ ತಂತ್ರವನ್ನು ಕಂಡು ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.
Published by:Pavana HS
First published: