ಒಡೆಯರ್ ಚಿತ್ರ ಮುಹೂರ್ತಕ್ಕೂ ಮೊದಲೆ ವಿಘ್ನ- ಟೈಟಲ್ ಬದಲಿಸಲು ಆಗ್ರಹಿಸಿ ದೂರು ದಾಖಲು

news18
Updated:August 2, 2018, 9:09 PM IST
ಒಡೆಯರ್ ಚಿತ್ರ ಮುಹೂರ್ತಕ್ಕೂ ಮೊದಲೆ ವಿಘ್ನ- ಟೈಟಲ್ ಬದಲಿಸಲು ಆಗ್ರಹಿಸಿ ದೂರು ದಾಖಲು
news18
Updated: August 2, 2018, 9:09 PM IST
ನ್ಯೂಸ್ 18 ಕನ್ನಡ 

ವಿಜಯಪುರ  ( ಆಗಸ್ಟ್ .02) :  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ. ಈ ಚಿತ್ರದ ಟೈಟಲ್ ಗೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ದೂರು ದಾಖಲಾಗಿದೆ.

ಒಡೆಯರ್ ಚಿತ್ರದ ಹೆಸರು ಬದಲಿಸಲು ಆಗ್ರಹಿಸಿ ವಿಜಯಪುರದಲ್ಲಿ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಚಿತ್ರ ನಿರ್ಮಾಪಕ ಸಂದೇಶ ನಾಗರಾಜ ಮತ್ತು ಚಿತ್ರ ತಂಡದ ವಿರುದ್ಧ ದೂರು ದಾಖಲಿಸಲಾಗಿದೆ.

ಒಡೆಯರ್ ಎಂಬ ಹೆಸರು ಪವಿತ್ರವಾಗಿದೆ. ನಮ್ಮ ರಾಜವಂಶಸ್ಥರ ಹೆಸರಿನಲ್ಲಿ ಚಿತ್ರ ಮಾಡುವುದು ಸರಿಯಲ್ಲ. ಒಡೆಯರ್ ಹೆಸರಿಗೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಡೆಯರ್ ಹೆಸರು ಬದಲಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.

 

 
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ