ಮಲೆನಾಡಿನ ಭೂಮಿಯೊಳಗೆ ವಿಚಿತ್ರ ಶಬ್ದ ಪ್ರಕರಣ; ಕಾರಣ ತಿಳಿಯಲು ಭೂಮಾಪನ ಉಪಕರಣಗಳ ಅಳವಡಿಕೆ

news18
Updated:September 7, 2018, 2:44 PM IST
ಮಲೆನಾಡಿನ ಭೂಮಿಯೊಳಗೆ ವಿಚಿತ್ರ ಶಬ್ದ ಪ್ರಕರಣ; ಕಾರಣ ತಿಳಿಯಲು ಭೂಮಾಪನ ಉಪಕರಣಗಳ ಅಳವಡಿಕೆ
news18
Updated: September 7, 2018, 2:44 PM IST
-ವೀರೇಶ್​ ಜಿ.ಹೊಸೂರ್, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ.07): ಮಲೆನಾಡಿನ ಕೆಲವೆಡೆ ಭೂಮಿಯೊಳಗಿಂದ ಬರುತ್ತಿದ್ದ ವಿಚಿತ್ರ ಶಬ್ಧಕ್ಕೆ ಕಾರಣ ಹುಡುಕಲು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಮುಂದಾಗಿದ್ದಾರೆ. ಹೀಗಾಗಿ ಆ ಸ್ಥಳಗಳಲ್ಲಿ ಭೂಮಾಪನ ಉಪಕರಣಗಳನ್ನು ಅಳವಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅತ್ತಿಕೂಡಿಗೆ ಗ್ರಾಮ ಪಂಚಾಯಿತಿಯ ಹತ್ತಾರು ಹಳ್ಳಿಯ ಭೂಮಿಯೊಳಗಿಂದ ಕೇಳಿ ಬರುತ್ತಿದ್ದ ಭಾರೀ ಶಬ್ಧಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದರು. ಈ ಪ್ರಕರಣ ಹಿನ್ನೆಲೆ ಇಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಂಗಳೂರಿನ ಕೆ.ಎಸ್.ಎನ್.ಡಿ.ಎಂ.ಸಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶಬ್ಧಕ್ಕೆ ಕಾರಣ ತಿಳಿಯಲು ಕೊಗ್ರೆ ಗ್ರಾಮದಲ್ಲಿ ಭೂಮಾಪನ ಉಪಕರಣಗಳನ್ನು ಅಳವಡಿಸಿದ್ದಾರೆ.

ಈ ಉಪಕರಣ ಆರು ತಿಂಗಳ ಕಾಲ ಗ್ರಾಮದಲ್ಲೇ ಇರಲಿದ್ದು, ಭೂಮಿಯೊಳಗಿಂದ ಬರುವ ಶಬ್ಧದ ಪ್ರಮಾಣ ಹಾಗೂ ಕಾರಣ ತಿಳಿಯಲಿದೆ. ಬಳಿಕ ಅದರ ಡಾಟಾವನ್ನ ನಿಮಗೂ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ  ಸ್ಥಳೀಯರಲ್ಲಿ ಆತಂಕ ತಾತ್ಕಾಲಿಕವಾಗಿ ದೂರಾಗಿದೆ.

ಕೊಪ್ಪಾದ ಕೊಗ್ರೆ, ಬೈರೇದೇವರಗುಡ್ಡ, ಬಸರೀಕಟ್ಟೆ, ಮೇಗುಂದಾ ಗ್ರಾಮದ ಸುತ್ತಮುತ್ತ ಭೂಮಿಯೊಳಗಿಂದ ಭಾರೀ ಸದ್ದು ಬರುತ್ತಿತ್ತು. ಮಲೆನಾಡಿಗರು ಭೂಕಂಪವೇ ಎಂದು ಅನುಮಾನಗೊಂಡು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರು. ಶಬ್ಧ ಬಂದಾಗ ಮನೆಯ ವಸ್ತುಗಳನ್ನೆಲ್ಲಾ ಮನೆಯಿಂದ ಹೊರಗಿಟ್ಟು ತಾವೂ ಹೊರ ಓಡಿ ಬರುತ್ತಿದ್ದರು.

ಕಳೆದ ಆರು ತಿಂಗಳಿಂದ 200ಕ್ಕೂ ಹೆಚ್ಚು ಬಾರಿ ಬಂದಿದ್ದ ಭಾರೀ ಶಬ್ಧಕ್ಕೆ ಮಲೆನಾಡಿಗರು ನಮಗೆ ಭವಿಷ್ಯ ಇದೆಯೋ ಇಲ್ಲವೋ ಎಂದು ಆತಂಕಕ್ಕೀಡಾಗಿದ್ದರು. ಎರಡ್ಮೂರು ಬಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ, ಆತಂಕಪಡುವ ಅಗತ್ಯವಿಲ್ಲ ಎಂದಿದ್ದರು. ಈಗ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಭೂಮಾಪನ ಯಂತ್ರ ಅಳವಡಿಸಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ