• Home
  • »
  • News
  • »
  • state
  • »
  • Murugha Swamy: ಬಿಳಿ ಪೌಡರ್​ಗಾಗಿ ಗೋಡೆ ಮುಂದೆ ಅಳ್ತಿದ್ದ ಬಾಲಕಿ; ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಕೆ

Murugha Swamy: ಬಿಳಿ ಪೌಡರ್​ಗಾಗಿ ಗೋಡೆ ಮುಂದೆ ಅಳ್ತಿದ್ದ ಬಾಲಕಿ; ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಕೆ

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

ಈ ರೀತಿ ಮಕ್ಕಳನ್ನು ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಸಿಕೊಳ್ಳುತ್ತಿದ್ದರು. ಮಠದ ಒಳಗೆ ಡ್ರಗ್ಸ್​ ಹೇಗೆ ಬರುತ್ತಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕು. ಡ್ರಗ್ಸ್​ ಜಾಲದ ಹಿಂದೆ ಇರೋರು ಯಾರು ಎಂಬುವುದು ತನಿಖೆಯಲ್ಲಿ ತಿಳಿದು ಬರಬೇಕಿದೆ ಎಂದು ಪರಶು ಒತ್ತಾಯಿಸಿದರು.

  • Share this:

ಮುರುಘಾ ಸ್ವಾಮಿಯ (Murugha Swamy Case) ಕಾವಿ ಹಿಂದಿನ ಕಾಮಿಯ ಮೃಗದ ದರ್ಶನ ಚಾರ್ಜ್​ಶೀಟ್​​ನಲ್ಲಿ (Charge sheet) ಬಯಲಾಗಿದೆ. ಸಂತ್ರಸ್ತ ಬಾಲಕಿಯರು ನೀಡಿದ ಹೇಳಿಕೆಯಲ್ಲಿ ಶೇ.80 ರಷ್ಟು ಅಂಶಗಳು ಚಾರ್ಜ್​ಶೀಟ್​​ನಲ್ಲಿ ದಾಖಲಾಗಿರುವ ವಿಚಾರ ತಿಳಿದಿದೆ. ಚಾರ್ಜ್​ಶೀಟ್​ ಸಲ್ಲಿಕೆ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಒಡನಾಡಿ ಸಂಸ್ಥೆಯ ಪರಶು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಚಾರ್ಜ್​ಶೀಟ್​ನಲ್ಲಿ ಮಕ್ಕಳ ಹೇಳಿಕೆ (Children Statement) ಸತ್ಯ ಎಂದು ಪ್ರಕರಣದ ತನಿಖಾಧಿಕಾರಿಯೇ (Investigation Officer) ಹೇಳುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಆದ್ರೆ ಪ್ರಕರಣ ಬೆಳಕಿಗೆ ಬರುತ್ತಲೇ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಮಕ್ಕಳಿಗೆ ಕೌನ್ಸಲಿಂಗ್ ಮಾಡಿಸೋದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದರು.


ಎಷ್ಟೋ ಮಕ್ಕಳು ಇನ್ನು ಭಯದಿಂದ ಹೊರ ಬಂದಿಲ್ಲ. ರಾತ್ರಿ ಇನ್ನೂ ಭಯದಿಂದ ನಡುಗುತ್ತಿದ್ದಾರೆ. ಕೆಲ ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿಯೇ ಸಿಕ್ಕಿಲ್ಲ. ಮಠದ ವಸತಿ ಶಾಲೆಯಲ್ಲಿದ್ದ ಮಕ್ಕಳ ಪೋಷಕರು ಬಡವರು ಮತ್ತು ಅನಕ್ಷರಸ್ಥರಾಗಿದ್ದಾರೆ. ಅಂತಹ ಪೋಷಕರಿಗೆ ತಮ್ಮ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳು ಗಮನಕ್ಕೆ ಬರದಿರಬಹುದು. ಒಂದು ವೇಳೆ ಬಂದ್ರೂ ಯಾರ ಬಳಿಯೂ ಹೇಳಿಕೊಳ್ಳದ ಅಸಹಾಯಕ ಸ್ಥಿತಿಯಲ್ಲಿರಬಹುದು ಎಂದು ಹೇಳದರು.


ಬಿಳಿ ಪೌಡರ್​​ಗಾಗಿ ಗೋಡೆ ಮುಂದೆ ಬಾಲಕಿ ಕಣ್ಣೀರು


ನ್ಯೂಸ್ 18 ಜೊತೆ ಮಾತನಾಡುತ್ತಿರುವ ವೇಳೆ ಹಲವು ಸ್ಫೋಟಕ ವಿಚಾರಗಳನ್ನು ಪರಶುರಾಮ್ ಹಂಚಿಕೊಂಡಿದ್ದಾರೆ. ಓರ್ವ ಬಾಲಕಿ ತನಗೆ ಡ್ರಗ್ಸ್​ ಬೇಕೆಂದು ಗೋಡೆ ಮುಂದೆ ಹೇಳುತ್ತಾ ಅಳುತ್ತಿದ್ದಳಂತೆ. ಇದನ್ನು ಸಂತ್ರಸ್ತ ಬಾಲಕಿಯರು ಹೇಳಿದ್ದಾರೆ.


ಈ  ಒಂದು ಘಟನೆ ಮಠದ ವಸತಿ ನಿಲಯದಲ್ಲಿದ್ದ ಮಕ್ಕಳ ಮೇಲೆ ಡ್ರಗ್ಸ್ ಅಥವಾ ಮಾದಕದ್ರವ್ಯ ಎಷ್ಟು ಪರಿಣಾಮ ಬೀರಿತ್ತು ಅನ್ನೋದಕ್ಕೆ ಸಾಕ್ಷಿ. ಆದ್ರೆ ಮಕ್ಕಳಿಗೆ ತಾವು ಕೇಳುತ್ತಿರೋದು ಡ್ರಗ್ಸ್​ ಎಂಬುವುದು ಸಹ ಗೊತ್ತಿರಲಿಲ್ಲ. ಸೇಬು ಹಣ್ಣಿನ ಜೊತೆ ಕೊಡುವ ಬಿಳಿ ಬಣ್ಣದ ಪೌಡರ್ ಕೊಡಿ ಎಂದು ಹೇಳುತ್ತಿದ್ದರಂತೆ.


ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಸಿಕೊಳ್ತಿದ್ರು


ಈ ರೀತಿ ಮಕ್ಕಳನ್ನು ಡ್ರಗ್ಸ್​ ದಾಸರನ್ನಾಗಿಸಿ ವಿಕೃತವಾಗಿ ಬಳಸಿಕೊಳ್ಳುತ್ತಿದ್ದರು. ಮಠದ ಒಳಗೆ ಡ್ರಗ್ಸ್​ ಹೇಗೆ ಬರುತ್ತಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕು. ಡ್ರಗ್ಸ್​ ಜಾಲದ ಹಿಂದೆ ಇರೋರು ಯಾರು ಎಂಬುವುದು ತನಿಖೆಯಲ್ಲಿ ತಿಳಿದು ಬರಬೇಕಿದೆ ಎಂದು ಪರಶು ಒತ್ತಾಯಿಸಿದರು. ಇದೇ ವೇಳೆ ನೆರೆಯ ಗೋವಾದಿಂದ ಡ್ರಗ್ಸ್ ಬರುತ್ತಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಂಬಂಧ ಎನ್​ಡಿಪಿಎಸ್​ ಕಾಯ್ದೆಯಡಿ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ:  Dattapeetha: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ; ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ


20 ರಿಂದ 23  ಮಕ್ಕಳಿಗೆ ಡ್ರಗ್ಸ್​ ನೀಡ್ತಿದ್ರು


ಪ್ರಥಮ ಪಿಯು ಪಾಸ್ ಆಗಿರುವ ರಶ್ಮಿ ಅಲ್ಲಿ ಹಾಸ್ಟೆಲ್ ವಾರ್ಡನ್ ಆಗಿದ್ದು ಹೇಗೆ? ಆಕೆ ಯಾರು? ಆಕೆಗೆ ಎಲ್ಲಿಂದ ಡ್ರಗ್ಸ್​ ಸಿಗುತ್ತಿತ್ತು ಎಂಬಿತ್ಯಾದಿ ಅಂಶಗಳೆಲ್ಲ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ. ಸುಮಾರು 20 ರಿಂದ 23 ಮಕ್ಕಳಿಗೆ ಈ ರೀತಿ ಡ್ರಗ್ಸ್ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಮಕ್ಕಳ ರಕ್ತದಲ್ಲಿ ಡ್ರಗ್ಸ್​ ಅಂಶ ಹೋಗಿದೆ. ಇವರಿಗೆಲ್ಲ ಸೂಕ್ತ ಸಮಾಲೋಚನೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಈ ಎಲ್ಲಾ ಮಕ್ಕಳನ್ನು ಪತ್ತೆ ಮಾಡಿ ಸರ್ಕಾರ ಒಂದಿಷ್ಟು ಪರಿಹಾರ ನೀಡಬೇಕು ಎಂದು ಪರಶು ಮನವಿ ಮಾಡಿಕೊಂಡರು.


ಒಟ್ಟು 694 ಪುಟಗಳ ಚಾರ್ಜ್​​​ಶೀಟ್ ಸಲ್ಲಿಕೆ ಮಾಡಲಾಗಿದೆ. 347 ಪುಟಗಳ ಎರಡು ಸೆಟ್ ಚಾರ್ಜ್​​ಶೀಟ್ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಫೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ:  Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ


ಆರೋಪಿಗಳ ಪಟ್ಟಿ


A1ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಾರ್ಜ್​​​ಶೀಟ್​​ ಸಲ್ಲಿಕೆಯಾಗಿದೆ.A 3 ಮಠದ ಉತ್ತರಾಧಿಕಾರಿ , A5 ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ. ತನಿಖೆ ಮುಂದುವರಿಕೆ ಎಂದು ಮಾಹಿತಿ ನೀಡಲಾಗಿದೆ.

Published by:Mahmadrafik K
First published: