Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಟಾಪ್​ 10 ಸುದ್ದಿಗಳು.

Seema.R | news18-kannada
Updated:October 12, 2019, 6:27 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಮೂರುದಿನಗಳ ಅಧಿವೇಶನ ಅಂತ್ಯ

ಹಣಕಾಸು ಮಸೂದೆ ಎರಡು ಸದನಗಳಲ್ಲಿ ಒಪ್ಪಿಗೆ ಪಡೆಯುವ ಮೂಲಕ ಚಳಿಗಾಲದ ಮೂರು ದಿನಗಳ ಅಧಿವೇಶನ ಮುಕ್ತಾಯಗೊಂಡಿದೆ. ಪ್ರವಾಹ ಸಂತ್ರಸ್ತರ ಸಂಕಷ್ಟ ಹಾಗೂ ಇಲಾಖೆಗಳ ಮೇಲಿನ ಬಜೆಟ್ ಚರ್ಚೆಗೆ ಹೆಚ್ಚಿನ ಅವಕಾಶ ನೀಡಿಲ್ಲ ಎಂ ಆರೋಪವನ್ನು ವಿಪಕ್ಷ ನಾಯಕರು ಆಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಪ್ರದಾಯದಂತೆ ಹೆಚ್ಚಿನ ದಿನ ಅಧಿವೇಶನ ನಡೆಸಲಾಗುವುದು. ಆದರೆ ಈ ಬಾರಿ ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಬೇಕಾದ ಹಿನ್ನೆಲೆ ಮೂರು ದಿನಕ್ಕೆ ಅಧಿವೇಶನ ಕೊನೆಗೊಳಿಸುತ್ತಿದ್ದೇವೆ ಎಂದು ಸಿಎಂ ಸಮಜಾಯಿಷಿ ನೀಡಿದರು.

2. ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ

ಕಳೆದೆರಡು ದಿನಗಳಿಂದ ಐಟಿ ಅಧಿಕಾರಿಗಳು ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಮತ್ತು ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ತನಿಖೆಗೆ ನಡೆಸುತ್ತಿದ್ದಾರೆ. ಈ ಸಂಬಂಧ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆಯಿಂದ ಕಿರುಕಳಗೊಂಡು ಅವರು ಇಂದು ಜ್ಞಾನಭಾರತಿ ಕ್ಯಾಂಪಸ್ನಲ್ಲಿ ನೇಣಿಗೆ ಶರಣಾಗಿದ್ದಾರೆ. ಐಟಿ ದಾಳಿ ಮತ್ತು ವಿಚಾರಣೆಗೆ ಹೆದರಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ ಎಂದು ರಮೇಶ್ ಈ ಮೊದಲೇ ತನ್ನ ಗೆಳೆಯರಿಗೆ ಫೋನ್ ಮಾಡಿ ಹೇಳಿದ್ದರು ಎಂದು ತಿಳಿದುಬಂದಿದೆ.

3. ಮೂರು ಸಿನಿಮಾಗಳಿಂದ 120ಕೋಟಿ ಆಗಿರುವಾಗ ಆರ್ಥಿಕತೆ ಕುಸಿತ ಹೇಗೆ?

ಅಕ್ಟೋಬರ್ ಎರಡರಂದು ಬಿಡುಗಡೆಯಾದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದು, ಕೋಟಿ ಗಳಿಕೆ ನಡೆಸಿದೆ. ಹೀಗಿರುವಾಗ ಆರ್ಥಿಕತೆ ಕುಸಿತ ಎಲ್ಲಿಂದ ಬಂತು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಆರ್ಥಿಕತೆ ಕುಸಿತವಾಗಿದೆ ಎಂಬ ಹೇಳಿಕೆಯನ್ನು ನಗುನಗುತ್ತಾ ತಳ್ಳಿ ಹಾಕಿದ ಅವರು, ಸಿನಿಮಾಗಳ ಗಳಿಕೆಯನ್ನು ಉದಾಹರಣೆ ನೀಡಿದರು. ದೇಶದ ಆರ್ಥಿಕತೆ ಚೆನ್ನಾಗಿ ಇರುವುದರಿಂದಲೇ ಸಿನಿಮಾಗಳು ಕೋಟಿ ಗಳಿಸಲು ಸಾಧ್ಯವಾಗಿದೆ ಎಂದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನಾನು ಮಾಹಿತಿ ಮತ್ತು ಪ್ರಸಾರ ಸಚಿವನಾಗಿದ್ದೆ. ಸಿನಿಮಾ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇದೆ, ಸಿನಿಮಾಗಳು ಉತ್ತ ಉದ್ಯಮ ಲಾಭಾ ಮಾಡುತ್ತವೆ. ಅಕ್ಟೋಬರ್ 2ರಂದು ರಜಾ ದಿನ ಬಿಡುಗಡೆಯಾದ ಮೂರು ಸಿನಿಮಾಗಳು ಉತ್ತಮ ಗಳಿಗೆ ಮಾಡಿವೆ ಎಂದು ಸಿನಿಮಾ ವಿಮರ್ಶಕ ಕೊಮಲ್ ನಹ್ತಾ ನನಗೆ ತಿಳಿಸಿದರು. 120ಕೋಟಿ ದೇಶದಲ್ಲಿ ಇದೆ ಎಂದರೆ ಆರ್ಥಿಕತೆ ಉತ್ತಮವಾಗಿದೆ ಎಂದು ಅರ್ಥ ಎಂದರು.

4. ಸಮ-ಬೆಸ ಸಂಚಾರ ನಿಯಮಕ್ಕೆ ದೆಹಲಿ ಸರ್ಕಾರ ಸಿದ್ಧತೆಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವೂ ದೆಹಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ ನಿಯಮ ಜಾರಿಗೆ ತರಲು ಮುಂದಾಗಿದೆ. ಅಲ್ಲದೇ ಈ ನಿಯಮದಿಂದ ಮಹಿಳೆ ಸೇರಿದಂತೆ 12 ವರ್ಷದೊಳಗಿನ ಮಕ್ಕಳ ಜೊತೆಗೆ ಪ್ರಯಾಣಿಸುವ ಪ್ರತಿಯೊಬ್ಬರಿಗೂ ವಿನಾಯಿತಿ ನೀಡಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ದಿನೇದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಈ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮೂರನೇ ಬಾರಿಗೆ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಗೆ ತರಲಾಗುವುದು. ಇದು ನವೆಂಬರ್.4 ರಿಂದ 15ರವರೆಗೂ ಅನ್ವಯವಾಗಿರಲಿದೆ ಎಂದು ಖುದ್ದು ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಎಂದಿನಂತೆ ಈ ಬಾರಿ ಖಾಸಗಿ ಸಿಎನ್ಜಿ ವಾಹನಗಳಿಗೆ ವಿನಾಯಿತಿ ನೀಡುವುದಿಲ್ಲ. ಬದಲಿಗೆ ವಾಹನದಲ್ಲಿ ಮಹಿಳೆಯರು ಮತ್ತು 12 ವರ್ಷದೊಳಗಿನ ಮಕ್ಕಳು ಇದ್ದರೇ ವಿನಾಯಿತಿ ಮಾತ್ರ ನೀಡುತ್ತೇವೆ ಎಂದೆಳಿದ್ದಾರೆ.

5. ರಮೇಶ್ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ; ಸಿದ್ದರಾಮಯ್ಯ

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಸಾವಿಗೆ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಐಟಿ ಅಧಿಕಾರಿಗಳು ದಾಳಿಗಳನ್ನು ನಡೆಸುವುದು ತಪ್ಪಲ್ಲ. ಆದರೆ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡುತ್ತಿರುವುದು ಏಕೆ..? ಬಿಜೆಪಿಯಲ್ಲಿ ದುಡ್ಡು ಇರುವವರು ಇಲ್ಲವಾ? ಅವರು ವೈದ್ಯಕೀಯ ಕಾಲೇಜುಗಳನ್ನು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲವಾ? ಅವರ ಮೇಲೆಯೂ ಐಟಿ ದಾಳಿ ನಡೆಸಲಿ. ರಾಜಕೀಯ ದ್ವೇಷದಲ್ಲಿ ಐಟಿ ದಾಳಿ ಸರಿಯಲ್ಲ ಎಂದು ಸಿದ್ಧರಾಮಯ್ಯ ಐಟಿ ವಿರುದ್ದ ಗುಡುಗಿದರು. ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆ ಯಾವ ಆಕ್ಷೇಪವೂ ಇಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದರು.

6. ಮಂಗಳವಾರ ಐಟಿ ವಿಚಾರಣೆಗೆ ಹಾಜರಾಗಲು ಸೂಚನೆ

ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದೆ. ಸದಾಶಿವನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೆಳಗಿನ ಜಾವ 3.30ರವರೆಗೆ ಪರಿಶೀಲನೆ ನಡೆಸಿದ್ದರು. ಸದ್ಯ ಅವರ ಮನೆಯಲ್ಲಿ ಐಟಿ ದಾಳಿ ಅಂತ್ಯವಾಗಿದ್ದು, ಬೇರೆ ಕಡೆ ಐಟಿ ದಾಳಿ ಮುಂದುವರೆದಿದೆ. ಸಿಕ್ಕ ದಾಖಲೆಗಳ ಬಗ್ಗೆ ಪರಮೇಶ್ವರ್ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದರು. ಹೀಗಾಗಿ ಪರಮೇಶ್ವರ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು. 15 ಜನ ಐಟಿ ಅಧಿಕಾರಿಗಳು 15 ಗಂಟೆಗಳ ಕಾಲ ನಿನ್ನೆ ಪರೀಶೀಲನೆ ನಡೆಸಿದ್ದರು. 2 ದಿನ ಬಿಟ್ಟು ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಪರಮೇಶ್ವರ್ಗೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 10ರಂದು ಮಾಜಿ ಡಿಸಿಎಂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳು ಹಾಗೂ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪರಮೇಶ್ವರ್ ಅವರನ್ನು ವಿಚಾರಣೆ ನಡೆಸಿದ್ದರು.

7. ಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗ್ರೆನೇಡ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಬರೀ ಏಳು ಮಂದಿಗೆ ತೀವ್ರ ಗಾಯಗಳಾಗಿವೆ. ಶ್ರೀನಗರದ ಹರಿ ಸಿಂಗ್ ಹೈ ರಸ್ತೆ ಸಮೀಪ ಈ ಗ್ರೆನೇಡ್ ದಾಳಿ ನಡೆದಿದೆ ಎಂದು ವರದಿಯಾಗಿದೆ. ಗ್ರೆನೇಡ್ ದಾಳಿ ನಡೆಯುತ್ತಿದ್ದಂತೆ ಶ್ರೀನಗರದ ಸುತ್ತ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಾಗೆಯೇ ಸಿಆರ್ಪಿಎಫ್ ಪೊಲೀಸರು ಈ ದಾಳಿಗೆ ಕಾರಣವಾದ ಉಗ್ರರನ್ನು ಬಂಧಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಇದಾದ ನಂತರ ಉಗ್ರರು ಕಣೆವೆ ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ

8. ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಸೋಮವಾರದಿಂದ ಪುನಾರಾಂಭ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಮೊಬೈಲ್ ಪೋಸ್ಟ್ ಪೇಯ್ಡ್ ಸೇವೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಲಾಗುವುದು. ಸೋಮವಾರದಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಪುನರ್ಸ್ಥಾಪಿಸಲಾಗುವುದು ಎಂದು ರಾಜ್ಯ ಆಡಳಿತ ಪ್ರಕಟಿಸಿದೆ. ರಾಜ್ಯದ ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ, ರೋಹಿತ್ ಕನ್ಸಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನ 12 ಬಳಿಕ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಯನ್ನು ಮರು ಅಳವಡಿಸಲಾಗುವುದು ಎಂದಿದ್ದಾರೆ. ಶನಿವಾರ ಈ ಸೇವೆಯನ್ನು ನೀಡುವುದಾಗಿ ನಾವು ಹೇಳಿದ್ದೇವು. ಆದರೆ ಇಂಟರ್ನೆಟ್ ಸೇವೆಯನ್ನು ಅಳವಡಿಸಲು ಸಮಯಬೇಕು ಎಂದಿದ್ದಾರೆ.

9. ಸ್ವಿಟ್ಜರ್ಲೆಂಡ್ನಲ್ಲಿ ಒಡೆಯ ಸಿನಿಮಾ ಚಿತ್ರೀಕರಣ

ದರ್ಶನ್ ಅಭಿನಯದ 52ನೇ ಸಿನಿಮಾ 'ಒಡೆಯ'. ಕೇವಲ ಪೋಸ್ಟರ್ಗಳಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ ಈ ಚಿತ್ರ. 'ಕುರುಕ್ಷೇತ್ರ' ಹಾಗೂ 'ಯಜಮಾನ' ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದರ್ಶನ್ ಮತ್ತೊಂದು ಹಿಟ್ ಸಿನಿಮಾ ನೀಡುವ ಮೂಡ್ನಲ್ಲಿದ್ದಾರೆ. ದಸರಾ ಹಬ್ಬದ ಅಂಗವಾಗಿ ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಮಗುವನ್ನು ಎತ್ತಿ ಆಡಿಸುವ ದರ್ಶನ್ ಅವರ ಪೋಸ್ಟರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಇದೇ ಸಿನಿಮಾದ ಅಡ್ಡಾದಿಂದ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ

10. ಮತ್ತೆ ಕಾಪ್​ ಅವತಾರದಲ್ಲಿ ಸಲ್ಮಾನ್

ಬಾಲಿವುಡ್ನ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಬಗ್ಗೆ ಒಂದು ಸುಳಿವು ಕೊಟ್ಟಿದ್ದರು. ಅದು ಮುಂದಿನ ವರ್ಷ ಅಂದರೆ 2020ರ ಈದ್ಗೆ ಒಂದು ಹೊಸ ಚಿತ್ರವನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಇದೇ ಕಾರಣಕ್ಕೆ ಈದ್ಗೆ ಬಿಡುಗಡೆಯಾಗಬೇಕಿದ್ದ ಸಂಜಯ್ ಲೀಲಾ ಬನ್ಸಅಲಿ ಅವರ 'ಇನ್ಶಾ ಅಲ್ಲಾಹ್' ಸಿನಿಮಾಗೂ ಗುಡ್ ಬೈ ಹೇಳಿದ್ದರು. ಆದರೆ ಈದ್ಗೆ ಸಲ್ಮಾನ್ ಮಾಡಲಿರುವ ಸಿನಿಮಾ ಬಗ್ಗೆ ಮತ್ತಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ
First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading