Hampi Kannada University: CM ಬೊಮ್ಮಾಯಿ ಭಾಷಣಕ್ಕೆ ಅಡ್ಡಿ, ಸಂಶೋಧನಾ ವಿದ್ಯಾರ್ಥಿ ನೋಂದಣಿ ರದ್ದು ಮಾಡೋದಾಗಿ ನೋಟಿಸ್

ವಿಶ್ವವಿದ್ಯಾಲಯಕ್ಕೆ ಅನುದಾನ, ವಿದ್ಯಾರ್ಥಿಗಳಿಗೆ ಅನುದಾನಕೋರಿ ಸದರಿ ವಿದ್ಯಾರ್ಥಿ ದೊಡ್ಡಬಸವಪ್ಪ ಮನವಿ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ವಿಶ್ವವಿದ್ಯಾಲಯಕ್ಕೆ ಬಂದ ವೇಳೆ ಭಾಷಣಕ್ಕೆ ಅಡ್ಡಿ ಪಡಿಸಿದ್ದೀರಿ ಎಂದು ದೊಡ್ಡ ಬಸವಪ್ಪ ಮೇಲೆ ಆರೋಪ ಮಾಡಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ವಿಜಯನಗರ (ಏ.19): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸಂಶೋಧನ ವಿದ್ಯಾರ್ಥಿಗೆ ಶಿಕ್ಷೆ ನೀಡಲು ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi  Kannada University) ಮುಂದಾಗಿದೆ. ಸಿಎಂ ಭಾಷಣಕ್ಕೆ ಅಡ್ಡಿಪಡಿಸದ ಹಿನ್ನೆಲೆ ಸಂಶೋಧನ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸೋದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನೋಟಿಸ್ (Notice)​ ಜಾರಿಗೊಳಿಸಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿ (Student) ಎ.ಕೆ ದೊಡ್ಡಬಸಪ್ಪ ಸಿಎಂ ಬೊಮ್ಮಾಯಿ ಭಾಷಣಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ತುತ್ತಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸದರಿ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸುವ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.

ವಿದ್ಯಾರ್ಥಿ ದೊಡ್ಡಬಸಪ್ಪಗೆ ನೋಟಿಸ್

ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿ ದೊಡ್ಡಬಸಪ್ಪ ನೋಂದಣಿ ರದ್ದುಗೊಳಿಸಿ ವಿಶ್ವವಿದ್ಯಾಲಯದಿಂದ ಅವರನ್ನು ಬಿಡುಗಡೆ ಮಾಡುವಂತೆ ಪತ್ರ ನೀಡಿದೆ. ಡಾ. ಸುಬ್ಬಣ್ಣ  ರೈ ಅವರಿಂದ ವಿದ್ಯಾರ್ಥಿಗೆ ಪತ್ರ ರವಾನೆ ಮಾಡಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಿಕೊಂಡು ವಾತಾವರಣ ಹಾಳು ಮಾಡುವ ಕೆಲಸ ಮಾಡಿದ್ದೀರಿ ಎಂದು ವಿದ್ಯಾರ್ಥಿ ದೊಡ್ಡಬಸಪ್ಪಗೆ ನೋಟಿಸ್ ನೀಡಲಾಗಿದೆ.

3 ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ಸೂಚನೆ

ವಿಶ್ವವಿದ್ಯಾಲಯಕ್ಕೆ ಅನುದಾನ, ವಿದ್ಯಾರ್ಥಿಗಳಿಗೆ ಅನುದಾನಕೋರಿ ಸದರಿ ವಿದ್ಯಾರ್ಥಿ ದೊಡ್ಡಬಸವಪ್ಪ ಮನವಿ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ವಿಶ್ವವಿದ್ಯಾಲಯಕ್ಕೆ ಬಂದ ವೇಳೆ ಭಾಷಣಕ್ಕೆ ಅಡ್ಡಿ ಪಡಿಸಿದ್ದೀರಿ ಎಂದು ದೊಡ್ಡ ಬಸವಪ್ಪ ಮೇಲೆ ಆರೋಪ ಮಾಡಲಾಗಿದೆ. ಏಪ್ರಿಲ್ 16 ರಂದು ಸಿಎಂ ಬಸವರಾಜ ಬೊಮ್ಮಾಯಿ ವಿವಿಯ ಕಾರ್ಯಕ್ರಮದ ಅಂಗವಾಗಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿತ್ತು. ಈ ವೇಳೆ ಭಾಷಣಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆರೋಪ ಮಾಡಿದೆ. ಇನ್ನೂ 3 ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ಸೂಚನೆ ನೀಡಲಾಗಿದ್ದು, ಇಲ್ಲವಾದಲ್ಲಿ ವಿಶ್ವವಿದ್ಯಾಲಯದಿಂದ ಬಿಡುಗಡೆ ಮಾಡುವುದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನೋಟಿಸ್ ನೀಡಿದೆ.

ಇದನ್ನೂ ಓದಿ: Siddaramaiah: ’ಮೋದಿಗೆ ಧಮ್ ಇದ್ರೆ ಕೆಂಪಣ್ಣ ಆರೋಪದ ಬಗ್ಗೆ ತನಿಖೆ ನಡೆಸಲಿ’; ಪ್ರಧಾನಿಗೆ ಸಿದ್ದು ಸವಾಲ್

ವಿಡಿಯೋ, ಸಾಕ್ಷಿಗಳ ಆಧಾರದ ಮೇಲೆ ತನಿಖೆ

ಶಿವಮೊಗ್ಗ : ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ವಿಡಿಯೋ ಹಾಗೂ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಗಲಭೆ ಹಿಂದೆ‌ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬರುತ್ತಿದೆ. ಆದಷ್ಟು ಬೇಗ ಎಲ್ಲರನ್ನೂ ದಸ್ತಗಿರಿ ಮಾಡಲಾಗುವುದು. ಅಂದು ನಡೆದ ಎಲ್ಲವೂ ನಮ್ಮ ತನಿಖೆಗೆ ಒಳಪಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಪಿಯಲ್ಲಿ ಧಂಗೆಗಳಾದಾಗ ಕಠಿಣ ಕ್ರಮಕೈಗೊಂಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಂಡಿದ್ದರು. ಆದರೆ, ನಾವು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಹಿಂದೆ‌ ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಯಾದಾಗ ಕಠಿಣ ಕ್ರಮಕೈಗೊಂಡಿದ್ದೇವೆ. ಈ ಪ್ರಕರಣದಲ್ಲಿ ರಿಕವರಿ ಕಮಿಷನ್ ನೇಮಿಸಿದ್ದೇವೆ.‌ ಗಲಭೆ ಮಾಡಿದವರಿಗೆ ತಕ್ಕ ಪಾಠವಾಗಿದೆ. ಪ್ರಚೋದನೆ ಮಾಡಿದಾಗ ತಕ್ಕ ಪಾಠ ಕಲಿಸುವ ಕೆಲಸವಾಗಿದೆ ಎಂದರು.

ಇದನ್ನೂ ಓದಿ:  Bagalkot: ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ.30 ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಸ್ವಾಮೀಜಿ

ಆಸ್ಪತ್ರೆ ಇಲ್ಲದ ಊರು ನಿಧಾನವಾಗಿ ಚಲಿಸಿ

ಚಿಕ್ಕಮಗಳೂರು : ಶೃಂಗೇರಿಗೆ ಮುಖ್ಯಮಂತ್ರಿಗಳು ಆಗಮಿಸಿದ್ದಾರೆ. ಜನರು ತಮ್ಮ ಅಗತ್ಯತೆಗೆ ಅನುಗುಣವಾಗಿಲ್ಲದ ಆಸ್ಪತ್ರೆಯ ಕುರಿತು ಬ್ಯಾನರ್ ಅಳವಡಿಸಿ ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. ಶೃಂಗೇರಿ ತಾಲೂಕಿನ ಜನರು ಕಳೆದ ಅನೇಕ ವರ್ಷಗಳಿಂದ ಊರಿಗೊಂದು ನೂರು ಬೆಡ್ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಮನವಿ ಸಲ್ಲಿಕೆ, ಹೋರಾಟ, ಪ್ರತಿಭಟನೆ, ಶೃಂಗೇರಿ ಬಂದ್ ಕೂಡ ನಡೆಸಿದ್ದರು. ಆದರೆ, ಅವರಿಗೆ ನೀಡಿರುವ ಆಶ್ವಾಸನೆಗಳು ಕೇವಲ ಆಶ್ವಾಸನೆಯಾಗಿಯೇ ಉಳಿದಿರುವ ಕಾರಣ ವಿಭಿನ್ನವಾಗಿ ಬ್ಯಾನರ್ ಅಳವಡಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.
Published by:Pavana HS
First published: