Minister Sriramulu ಸ್ವಕ್ಷೇತ್ರದಲ್ಲಿ ಮುರಿದ್ದು ಬಿದ್ದಿರೋ ಸರ್ಕಾರಿ ಶಾಲಾ ಕಟ್ಟಡಗಳು: ಬಿಸಿಲು, ಮಳೆ, ಗಾಳಿ ಎನ್ನದೆ ಮರದ ಕೆಳಗೆ ವಿದ್ಯಾರ್ಥಿಗಳಿಗೆ ಪಾಠ

ಶಾಲಾ ಮಕ್ಕಳ ಜೀವ ಕೈಲಿಡಿದು ಗಾಳಿ,ಮಳೆ, ಬಿಸಿಲಿಗೆ ಜಗ್ಗದೆ ಶಿಕ್ಷಣ ಕಲಿಯುತ್ತಿದ್ದಾರೆ. ಆದರೇ ಇಷ್ಟೆಲ್ಲ ದುಸ್ಥಿತಿಯನ್ನ ಕಣ್ಣ ಮುಂದೆ ನೊಇಡುತ್ತಿರುವ ಪೋಷಕರು, ಶಾಲೆಗೆ ಹೋದ ಮಕ್ಕಳು ಮರಳಿ ಬರುವವರೆಗೆ ದೇವರಲ್ಲಿ ನಿತ್ಯ ಪ್ರಾರ್ಥಿಸಿ ಜೀವ ಬಿಕ್ಷೆ ಕೇಳುವ ಸ್ಥಿತಿ ನಿರ್ಮಾಣವಾಗಿದೆ

ಓಬಳಾಪುರ ಶಾಲೆ

ಓಬಳಾಪುರ ಶಾಲೆ

  • Share this:
ಚಿತ್ರದುರ್ಗ : ಸರ್ಕಾರಗಳು (Governments) ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ (Education) ಎಲ್ಲಿಲ್ಲದ ಸವಲತ್ತು ಕೊಟ್ಟಿದ್ದೇವೆ ಅಂತ ಬೊಬ್ಬೆ ಹೊಡೆಯುತ್ತವೆ. ಆದರೇ ಚಿತ್ರದುರ್ಗ (Chitradurga) ಜಿಲ್ಲೆ ಆಂದ್ರಾ ಗಡಿ ಗ್ರಾಮಗಳ ಮಕ್ಕಳು ಮುರುಕಲು ಶಾಲೆಯಲ್ಲಿ ಜೀವ ಕೈಯಲ್ಲಿಡಿದು, ಬಿಸಿಲು ಮಳೆ ಲೆಕ್ಕಿಸದೆ ಮರಗಳ ನೆರಳನ್ನ ಆಶ್ರಯಿಸಿ ಪಾಠ ಕೇಳುವ ದುಸ್ಥಿತಿ ಬಂದಿದೆ. ಹಿಂದುಳಿದ ಜಿಲ್ಲೆಯಲ್ಲಿ ಕೂಲಿ ನಾಲಿ ಬದುಕು ಸಾಗಿಸುವ ಜನರು  ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು (Minister B Sriramulu) ಅವರ ಕ್ಷೇತ್ರದ ಈ ಶಾಲೆ ಅಭಿವೃದ್ದಿಯ ಇಚ್ಚಾ ಶಕ್ತಿ ಕೊರತೆಯನ್ನ ತೋರುತ್ತಿದೆ.

ಸಾಕ್ಷರತೆ ಮೇಲಿನ ಪ್ರೀತಿಗೆ ಕೊರತೆಯೇ ಇಲ್ಲ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಓಬಳಾಪುರ ಗ್ರಾಮ ಮೊಳಕಾಲ್ಮೂರು (Molakalmuru) ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅಲ್ಲದೇ ಎರಡೂ ತಾಲ್ಲೂಕುಗಳಿಂದ ದೂರುವಿರುವ ಈ ಗ್ರಾಮ ಪಕ್ಕದ ಆಂಂಧ್ರ ಗಡಿಲ್ಲಿದೆ.  ಇಲ್ಲಿ ಹೇಳಿ ಕೇಳಿ ಬಡತನ, ಬರ, ತಾಂಡವ ಆಡುತ್ತದೆ. ಇಲ್ಲಿನ ಜನರು ಕೂಲಿ ನಾಲಿ ಮಾಡಿ ಬದುಕಿನ ಬಂಡಿ ಸಾಗಿಸಬೇಕಿದೆ. ಅದರೇ ಇವರಿಗಿರೋ ಶಿಕ್ಷಣ, ಸಾಕ್ಷರತೆ ಮೇಲಿನ ಪ್ರೀತಿಗೆ ಕೊರತೆಯೇ ಇಲ್ಲ. ಆದ್ದರಿಂದಲೇ ಇಂದಿನ ಖಾಸಗಿ ಶಾಲೆಗಳ ಆವಳಿಯಿಂದ ಮುಚ್ಚಿ ಬರಿದಾಗುತ್ತಿರುವ ಸರ್ಕಾರಿ ಶಾಲೆಗಳ ನಡುವೆ ಕೊಂಚವೂ ಕೂಡಾ ಮಕ್ಕಳ ಹಿಂದೆ ಸರಿಯದೆ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದೆ. ನೂರು ವರ್ಷ ಹಳೆಯದಾಗಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 271 ಮಕ್ಕಳು ದಾಖಲಾಗಿದ್ದಾರೆ.

ಮರದ ನೆರಳಿನಲ್ಲಿ ಮಕ್ಕಳಿಗೆ ಪಾಠ

ಸರ್ಕಾರಿ ಶಾಲೆ ಉಳಿವಿಗೆ ಹಲವು ಅಭಿಯಾನಗಳನ್ನ ಮಾಡಿ ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯ ಕಟ್ಟಡಗಳು, ಮೇಲ್ಚಾವಣಿ ಮುರಿದು ಬಿದ್ದು ಬಿದ್ದು, ವಿದ್ಯಾರ್ಥಿಗಳು ಮರದ ನೆರಳನ್ನ ಆಶ್ರಯಿಸಿ ಬೀದಿಯಲ್ಲಿ ಕುಳಿತು ಪಾಠ ಕೇಳಿದ್ರು ಶಾಲೆ ಕಟ್ಟಡಗಳ ಮರು ನಿರ್ಮಾಣ, ಅಥವಾ ಅಭಿವೃದ್ದಿಗೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಮುಂದಾಗದೆ ದಿವ್ಯ ನಿರ್ಲಕ್ಷ ತೋರಿದ್ದಾರೆ.

ಇದನ್ನೂ ಓದಿ: Students Tested Positive: ಕೊಡಗಿನ ಶಾಲೆಯಲ್ಲಿ ಕೊರೊನಾ ಸ್ಫೋಟ; 21 ಮಕ್ಕಳ ರಿಪೋರ್ಟ್ ಪಾಸಿಟಿವ್

ಶಾಲೆಯಲ್ಲಿ 1ರಿಂದ 8 ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಒಟ್ಟು  12 ಕೊಠಡಿಗಳಿದ್ದು ಅದರಲ್ಲಿ 8 ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ. ಆದರೂ ಶಿಕ್ಷಣಕ್ಕಾಗಿ ಹಂಬಲಿಸೋ 271 ವಿದ್ಯಾರ್ಥಿಗಳು ಶಾಲೆಗೆ ನಿತ್ಯವೂ ಆಗಮಿಸುತ್ತಾರೆ. ಸದ್ಯ ಬಿದ್ದು ಹೋಗಿರುವ ಕಟ್ಟಡಗಳನ್ನ ಹೊರತುಪಡಿಸಿ ಉಳಿದ ನಾಲ್ಕು ಕಟ್ಟಡಗಳಲ್ಲಿ ಶಾಲಾ ಕಚೇರಿ ಸೇರಿ 6,7,8 ನೇ ತರಗತಿ ನಡೆಸಲಾಗುತ್ತದೆ.

ಕಟ್ಟಡ ರಿಪೇರಿಗೆ ಮುಂದಾಗದ ಶಿಕ್ಷಣ ಇಲಾಖೆ

ಉಳಿದಂತೆ 1-5  ವರೆಗಿನ ವಿದ್ಯಾರ್ಥಿಗಳಿ ಆಗಲೋ ಈಗಲೋ ಬೀಳುವಂತಿರೋ ಕಟ್ಟಡದ ಮುಂಭಾಗದ ಸೂರು, ಶಾಲಾ ಆವರಣದಲ್ಲಿರುವ ಮರಗಳ ಕೆಳಗೆ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಇಂತ ದುಸ್ತಿಯಲ್ಲಿಯೂ ಶಾಲಾ ಮಕ್ಕಳ ಜೀವ ಕೈಲಿಡಿದು ಗಾಳಿ,ಮಳೆ, ಬಿಸಿಲಿಗೆ ಜಗ್ಗದೆ ಶಿಕ್ಷಣ ಕಲಿಯುತ್ತಿದ್ದಾರೆ. ಆದರೇ ಇಷ್ಟೆಲ್ಲ ದುಸ್ಥಿತಿಯನ್ನ ಕಣ್ಣ ಮುಂದೆ ನೊಇಡುತ್ತಿರುವ ಪೋಷಕರು, ಶಾಲೆಗೆ ಹೋದ ಮಕ್ಕಳು ಮರಳಿ ಬರುವವರೆಗೆ ದೇವರಲ್ಲಿ ನಿತ್ಯ ಪ್ರಾರ್ಥಿಸಿ ಜೀವ ಭಿಕ್ಷೆ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಸುಟ್ರೆ ಬೂದಿ ಆಗ್ತೀನಿ, ಹೂತ್ರೆ ಕೊಳೆತು ಹೋಗ್ತೀನಿ, ಅಂಗಾಂಗ ದಾನ ನೀಡಿ: ವಿಡಿಯೋ ಮಾಡಿ Engineering Student ಆತ್ಮಹತ್ಯೆ

ಈ ಎಲ್ಲಾ ಪರಿಸ್ಥಿತಿಯನ್ನ ಅರಿತು, ಸ್ಥಳೀಯರು ಶಿಕ್ಷಣ ಇಲಾಖೆ, ಶಾಸಕರು, ಸಚಿವರಿಗೆ ಶಾಲಾಕಟ್ಟಡ ನಿರ್ಮಾಣ ಮಾಡಿ ಕೊಡಿ ಅಂತ ಮನವಿ ಮಾಡಿದ್ದಾರೆ. ಆದರೂ ಇತ್ತ ಯಾವ ಅಧಿಕಾರಿಗಳೂ ಕೂಡಾ ಸುಳಿದು ಪರಿಸ್ಥಿತಿ ನೋಡಿ ಕಷ್ಟ ಕೇಳಿಲ್ಲ. ಅಲ್ಲದೇ ಬಾಯಿ ತೆಗೆದ್ರೆ ಸರ್ಕಾರದ  ಅಭಿವೃದ್ದಿ ಪರ ಉದ್ದುದ್ದ ಭಾಷಣ ಮಾಡೋ ಸಚಿವ ಶ್ರೀರಾಮುಲು ತನ್ನದೇ ಕ್ಷೇತ್ರದ ಗಡಿಯಂಚಿನ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಹೊತ್ತು ನೀಡದೆ ನಿರ್ಲಕ್ಷ ವಹಿಸಿದ್ದಾರೆ‌.

ಸರ್ಕಾರಿ ಶಾಲೆಯ ಉಳಿವಿಗೆ ಅಭಿಯಾನ ಮಾಡೋ ಅಧಿಕಾರಿಗಳು, ಶಾಸಕ,ಸಚಿವರು, ಅಳಿಯದೇ ಉಳಿದಿರೋ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಹೊತ್ತು ಕೊಡಿ ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Published by:Mahmadrafik K
First published: