• Home
  • »
  • News
  • »
  • state
  • »
  • Student School Bag: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಆಕ್ಷೇಪಾರ್ಹ ವಸ್ತುಗಳು; ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

Student School Bag: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಆಕ್ಷೇಪಾರ್ಹ ವಸ್ತುಗಳು; ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಠ್ಯಪುಸ್ತಕ ರಚನಾ ಸಮಿತಿಯ ಮಾಜಿ ಮುಖ್ಯಸ್ಥ ರೋಹಿತ್ ಚಕ್ರತೀರ್ಥ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇವರ ಪೋಸ್ಟ್​ಗೆ ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  • Share this:

ಶಾಲಾ ಮಕ್ಕಳ ಬ್ಯಾಗ್​ನಲ್ಲಿ (School Bag) ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು ಸೇರಿದಂತೆನ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರುವ ವಿಷಯ ಪೋಷಕರಲ್ಲಿ (Parents) ಆತಂಕ ಮನೆ ಮಾಡಿದೆ. 9 ಮತ್ತು 10ನೇ ತರಗತಿ ಮಕ್ಕಳ (Children) ಬ್ಯಾಗ್​ಗಳಲ್ಲಿ ಈ ವಸ್ತುಗಳ ಪತ್ತೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆಗಳು ಆರಂಭಗೊಂಡಿವೆ. ಈ ಬೆಳವಣಿಗೆ ಅಥವಾ ಮಕ್ಕಳ ನಡವಳಿಕೆಗೆ ಯಾರು ಹೊಣೆ? ಇದರಿಂದ ಮಕ್ಕಳನ್ನು ಹೊರಗೆ ತರಲು ಏನು ಮಾಡಬೇಕು? ಈ ವಿಷಯದಲ್ಲಿ ಪೋಷಕರು ಮತ್ತು ಶಿಕ್ಷಕರ (Teachers) ಪಾತ್ರ ಎಷ್ಟು ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಬಹುತೇಕರು ತಮ್ಮ ಬಾಲ್ಯದಲ್ಲಿ (Childhood) ಶಾಲಾ ಜೀವನ ಹೇಗಿತ್ತು ಎಂಬುದನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಇನ್ನು 90ರ ದಶಕದ ಯುವ ಪೀಳಿಗೆ ತಮ್ಮ ಸ್ಕೂಲ್ ಬ್ಯಾಗ್​ನಲ್ಲಿ ಕ್ರಿಕೆಟ್ ಸ್ಟಾರ್​ಗಳ, ವಿವಿಧ ಸ್ಟಿಕ್ಕರ್, ಹೂವಿನ ದಳ, ನವಿಲು ಗರಿ ಇರುತ್ತಿತ್ತು. ಚ್ಯೂಯಿಂಗ್ ಗಮ್​ನಲ್ಲಿ ಸಿಗುತ್ತಿದ್ದ WWE ಸ್ಟಾರ್​​ಗಳ ಫೋಟೋ ಇರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.


ಈ ಚರ್ಚೆಗಳಲ್ಲಿ ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮುಂದೆ ಶಾಲೆಗಳು ಮತ್ತು ಪೋಷಕರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಕುರಿತಾಗಿಯೂ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.


ಪೋಷಕರು ನೀಡುವ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್​ ಉತ್ಪನ್ನಗಳು ಮಕ್ಕಳ ಮುಗ್ಧತೆಯನ್ನು ಕಸಿಯುವಂತಾಗಬಾರದು. ಇದರ ಜೊತೆಗೆ ಪೋಷಕರು ಮಕ್ಕಳಿಗೆ ನೀಡುವ ಉತ್ಪನ್ನಗಳ ಬಳಕೆಯ ಮೇಲೆ ಹೇಗೆ ಮಿತಿ ಹೇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.


ಪಠ್ಯಪುಸ್ತಕ ರಚನಾ ಸಮಿತಿಯ ಮಾಜಿ ಮುಖ್ಯಸ್ಥ ರೋಹಿತ್ ಚಕ್ರತೀರ್ಥ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇವರ ಪೋಸ್ಟ್​ಗೆ ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.


ಮಾವಿನಕಾಯಿ, ಗಣೇಶನ ಚಿತ್ರಗಳು


Tns Chitrodyama ಎಂಬವರು ನಮ್ಮನ್ನೂ ಒಂದು ದಿನ ಹಠಾತ್ತನೆ ಬಾಗಿಲ ಬಳಿ ನಿಲ್ಲಿಸಿ ಟೀಚರು ತೆರೆಸಿದ್ದರೆ ಚೀಲ ಸಿಗುತ್ತಿತ್ತೇನೋ ಆಗಷ್ಟೇ ತಿಮ್ಮೇಗೌಡರ ತೋಪಿಂದ ಕದ್ದು ತಂದಿದ್ದ ಮಾವಿನಕಾಯಿ, ಬಾಯಿಗೆ ಬಂದ ಹಾಗೆ ಗೀಚಿದ್ದ ನಾಯಿ, ಮನೆ, ಗಣೇಶನ ಚಿತ್ರಗಳು, ಸುಧಾ ವಾರಪತ್ರಿಕೆಯ ಮದ್ಯ ಹಾಳೆಯಲ್ಲಿ ಬರುತ್ತಿದ್ದ ಫೊಟೊಕಾಮಿಕ್ಸ್ ನ ಹಾಳೆ.


ವಾರದಿಂದ ಬರೆಯದೇ ಖಾಲಿ ಬಿಟ್ಟಿದ್ದ ಶ್ರೀರಾಮ ಕಾಪಿ ಪುಸ್ತಕ, ದಿನಕ್ಕೊಂದು ಒಳ್ಳೆಯ ಕೆಲಸ, ಪ್ರಜಾವಾಣಿಯ ಸುಭಾಷಿತ. ಗಣಿತ ಮೇಷ್ಟ್ರಿಗೆ ಕೊಡಲೆಂದು ತಂದಿದ್ದ ಬೆತ್ತ  ಚೀಲದ ಕೆಳಗಡೆ ಖಂಡಿತ ಸಿಕ್ಕಿರುತ್ತಿತ್ತು.


ಇದನ್ನೂ ಓದಿ:  Bengaluru: ಡ್ರಾಪ್​ ಕೊಡುವ ನೆಪದಲ್ಲಿ ಶಾಲಾ ಬಸ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರ! ​


ಬುಗುರ,ಜೀರಂಗಿ ಹಾಕಿದ ಬೆಂಕಿಪೊಟ್ಟಣ


ಇನ್ನರ್ಧ ಹೊಸೆಯಬೇಕಾಗಿದ್ದ ಬುಗುರಿಯ ಚಾಟಿ, ಜೀರಂಗಿ ಹಾಕಿಟ್ಟಿದ್ದ ಬೆಂಕಿಪೊಟ್ಟಣ, ಅಜ್ಜಿ ಕೊಡಿಸಿದ್ದ ಶುಂಠಿ ಪೆಪ್ಪರಮೆಂಟು ಜೊತೆಯಲ್ಲಷ್ಟು ಹುಣಿಸೆ-ಜೀರಿಗೆ ಜಜ್ಜಿ ಮಾಡಿದ್ದ ಉಂಡೆ  ನಮ್ಮ ಚೀಲದಲ್ಲಿ ಸಿಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.


ಮಕ್ಕಳಲ್ಲಿ ಹೆಚ್ಚಾಗ್ತಿದೆ ಲೈಂಗಿಕ ಆಸಕ್ತಿ


ಕೊರೊನಾ ಕಾಲಘಟ್ಟದ ನಂತರ ಮಕ್ಕಳಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಶವನ್ನು ಚೈಲ್ಡ್ ರೈಟ್ಸ್ ಸಂಸ್ಥೆ ಹಾಗೂ ಮನೋವೈದ್ಯರು ಹೊರ ಹಾಕಿದ್ದಾರೆ. ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳು ಮೊಬೈಲ್​ನಲ್ಲಿ ಏನ್ ಮಾಡ್ತಾರೆ? ಯಾವ ರೀತಿಯ ವಿಡಿಯೋಗಳನ್ನ ನೋಡ್ತಾರೆ ಎಂಬುದರ ಬಗ್ಗೆ ಕಣ್ಣಿರಿಸುವಂತೆ ಸಲಹೆ ನೀಡಿದ್ದಾರೆ.


ಇದನ್ನೂ ಓದಿ:  Kannada Flag: ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗೆ ಥಳಿತ; ನಮ್ಮ ನಾಡಲ್ಲಿ ಇದೆಂಥಾ ದೌರ್ಜನ್ಯ?


14-15ನೇ ವಯಸ್ಸಿಗೆ ಮಕ್ಕಳು ಅಶ್ಲೀಲ ಚಿತ್ರಗಳನ್ನ ವೀಕ್ಷಣೆ ಮಾಡುವ ಗೀಳು ಶುರು ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರ ಬಂದಿದೆ. ಹಾಗಾದ್ರೆ ಮಕ್ಕಳ ಈ ರೀತಿ ಚಟಕ್ಕೆ ಮುಕ್ತಿ ಹೇಗೆ? ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು