Chamrajpet: ಜಮೀರ್ ಅಹ್ಮದ್​ಗೆ ಸಂಕಷ್ಟ; ನಾಮಪತ್ರ ರದ್ದುಗೊಳಿಸುವಂತೆ ಅರ್ಜಿ

ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ

ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Zameer Ahmed Khan: ನಾಮಪತ್ರ ತಿರಸ್ಕರಿಸುವಂತೆ ಚಾಮರಾಜಪೇಟೆಯ ನವಭಾರತ ಸೇನಾ ಪಾರ್ಟಿಯ ವಿಧಾನಸಭಾ ಅಭ್ಯರ್ಥಿ ರುಕ್ಮಂಗ ಎಂಬವರು ದೂರು ಸಲ್ಲಿಸಿದ್ದಾರೆ.

  • Share this:

ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗಳಿಗೆ (Election Commission) ಪತ್ರ ಬರೆದು ನವಭಾರತ ಸೇನಾ ಪಕ್ಷ (Navabharata Sena Party) ಮನವಿ ಮಾಡಿಕೊಂಡಿದೆ. ಜಮೀರ್ ಅಹ್ಮದ್ ನಾಮಪತ್ರ ಸಲ್ಲಿಕೆಯ ವಿವರದಲ್ಲಿ ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ. ಲೋಕಾಯುಕ್ತಕ್ಕೆ (Lokayukta) ಮಾಹಿತಿ ಸಲ್ಲಿಸುವ ವೇಳೆ ತನ್ನ ಅವಲಂಬಿತರ ಹೆಸರಿನಲ್ಲಿ ತಾಯಿ ಹೆಸರು (Mother Name) ಸೇರಿಸಿದ್ದಾರೆ. ಆದ್ರೆ ನಾಮಪತ್ರದಲ್ಲಿ ಮಾತ್ರ ತಾಯಿ ಹೆಸರನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಜಮೀರ್ ಅಹ್ಮದ್ ಉಲ್ಲಂಘಿಸಿದ್ದಾರೆ. ಹೀಗಾಗಿ ನಾಮಪತ್ರ ತಿರಸ್ಕರಿಸುವಂತೆ ಚಾಮರಾಜಪೇಟೆಯ ನವಭಾರತ ಸೇನಾ ಪಾರ್ಟಿಯ ವಿಧಾನಸಭಾ ಅಭ್ಯರ್ಥಿ ರುಕ್ಮಂಗ ಎಂಬವರು ದೂರು ಸಲ್ಲಿಸಿದ್ದಾರೆ.


ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಕ್ರಮಬದ್ಧವಾಗಿ ನಾಮಪತ್ರಿಕೆ ಸಲ್ಲಿಕೆ ಮಾಡಿಲ್ಲ. ಆದಾಯ ಗಳಿಕೆ ಹಾಗೂ ಸಾಲದ ವಿಚಾರದಲ್ಲಿ ಸರಿಯಾಗಿ ನಮೂದು ಮಾಡಿಲ್ಲ. ಬಹುತೇಕ ಕಡೆ NIL ಎಂದೇ ದಾಖಲಿಸಿದ್ದಾರೆ. ಈ ವಿಚಾರವಾಗಿ ದಾಖಲೆ ಸಮೇತ ದೂರು ನೀಡಲಾಗಿದೆ ಎಂದು ನವಭಾರತ ಸೇನಾ ಪಕ್ಷ ಹೇಳಿದೆ.


ಬಿಜೆಪಿಯಿಂದ ಭಾಸ್ಕರ್ ರಾವ್ ಸ್ಪರ್ಧೆ


ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜಪೇಟೆಯಿಂದ ಕಣಕ್ಕಿಳಿದಿದ್ದಾರೆ. ನಿವೃತ್ತಿ ಬಳಿಕ AAP ಸೇರಿದ್ದ ಚುನಾವಣೆಗೂ ಘೋಷಣೆಗೂ ಮುನ್ನ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಟಿಕೆಟ್ ಪಡೆಯುವಲ್ಲಿ ಭಾಸ್ಕರ್ ರಾವ್ ಯಶಸ್ವಿಯಾಗಿದ್ದಾರೆ.
ಸೈಲೆಂಟ್ ಸುನಿಲ್​ಗೆ ತಪ್ಪಿದ ಟಿಕೆಟ್


ಇನ್ನು ರೌಡಿಶೀಟರ್ ಸೈಲೆಂಟ್ ಸುನಿಲ್ ಚಾಮರಾಜಪೇಟೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದನು. ಚುನಾವಣೆ ಹಿನ್ನೆಲೆ ಚಾಮರಾಜಪೇಟೆಯಲ್ಲಿ ಸಕ್ರಿಯನಾಗಿದ್ದನು.


ಇದನ್ನೂ ಓದಿ:  Chalavadi Narayanaswamy: ಸಿದ್ದರಾಮಯ್ಯ ನಯವಂಚಕ ದಲಿತ ವಿರೋಧಿ: ಬಿಜೆಪಿ ಎಂಎಲ್​ಸಿ


ಸೈಲೆಂಟ್ ಸುನಿಲ್ ಆಯೋಜನೆಯ ಕಾರ್ಯಕ್ರಮಗಳಲ್ಲಿ ಬಿಜೆಪಿ ಪ್ರಮುಖ ನಾಯಕರೆಲ್ಲಾ ಭಾಗಿಯಾಗಿದ್ದರು. ಟಿಕೆಟ್ ತಪ್ಪಿದ್ದಕ್ಕೆ ಸೈಲೆಂಟ್ ಸುನಿಲ್ ಬೆಂಬಲಿಗರ ಜೊತೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

First published: