ಬಳ್ಳಾರಿಯ ಹಂಪಿಗೆ ಈಗ ಮತ್ತೊಂದು ಗರಿ; ನೋಡಲೇಬೇಕಾದ ವಿಶ್ವತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ

ನ್ಯೂಯಾರ್ಕ್ ಟೈಮ್ಸ್ (NYT) ತಯಾರಿಸಿದ ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಪ್ರದೇಶವಿದು. ವಿಶ್ವದಾದ್ಯಂತ ಒಟ್ಟು ಐವತ್ತೆರಡು ಸ್ಥಳಗಳ ಪೈಕಿ ಇದು ಎರಡನೇ ಅತ್ಯುತ್ತಮ ಪ್ರವಾಸಿ ತಾಣ ಎಂದು ಘೋಷಿಸಿದೆ.

G Hareeshkumar | news18
Updated:January 12, 2019, 8:06 AM IST
ಬಳ್ಳಾರಿಯ ಹಂಪಿಗೆ ಈಗ ಮತ್ತೊಂದು ಗರಿ; ನೋಡಲೇಬೇಕಾದ ವಿಶ್ವತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ
ಹಂಪಿಯ ಒಂದು ರಮ್ಯ ಫೋಟೋ
G Hareeshkumar | news18
Updated: January 12, 2019, 8:06 AM IST
- ಶರಣು‌ ಹಂಪಿ,

ಬಳ್ಳಾರಿ(ಜ. 12): ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಗೆ ಇದೀಗ ಮತ್ತೊಂದು ಗರಿ ಸಿಕ್ಕಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯು ಈಗ ಪ್ರಪಂಚದ ಅತ್ಯತ್ತಮ ಐವತ್ತೆರಡು ಪ್ರೇಕ್ಷಣೀಯ ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಭಾರತದ ಅಗ್ರಗಣ್ಯ ಪ್ರೇಕ್ಷಣೀಯ ತಾಣ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಭಿಪ್ರಾಯಪಟ್ಟಿದೆ. 2019ರಲ್ಲಿ ಪ್ರವಾಸಿಗರು ಹೋಗಲೇಬೇಕಾದ 52 ತಾಣಗಳ ಈ ಪಟ್ಟಿಯಲ್ಲಿ ಹಂಪಿ 2ನೇ ಸ್ಥಾನ ಪಡೆದಿರುವುದು ಗಮನಾರ್ಹ. ಕೆರಿಬಿಯನ್ ದ್ವೀಪದ ಪ್ಯೂರ್ಟೊರಿಕೊ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಹಂಪಿಯನ್ನು ಉತ್ತಮ ತಾಣವಾಗಿ ಪರಿಗಣಿಸಿ ಅದರ ಪುರಾತತ್ವ ಸ್ಮಾರಕಗಳಿಗೆ, ತುಂಗಭದ್ರ ನದಿ, ಹಂಪಿಯ ನೈಸರ್ಗಿಕ ಹಾಗೂ ಭೌಗೋಳಿಕ ತಾಣಗಳು, ಸಾಲು ಮಂಟಪಗಳು, ಶಿಲ್ಪ ಕಲೆ, ವಾಸ್ತು ಶಿಲ್ಪ ಸೇರಿದಂತೆ ನಾನಾ ವಿಚಾರಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ಅಧ್ಯಯನ ನಡೆಸಿ ಈ ವರದಿ ಮಾಡಿದೆ.

ಇದನ್ನೂ ಓದಿ : ಬಸ್ ಚಾಲಕನ ಸಮಯ ಪ್ರಜ್ಞೆ; ರೈಲ್ವೆ ಗೇಟ್​ನಲ್ಲಿ ತಪ್ಪಿದ ಭಾರೀ ಅನಾಹುತ

16 ನೇ ಶತಮಾನದಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ಜಯನಗರ ಸಾಮ್ರಾಜ್ಯ ಆಗಿದ್ದು ಹಂಪಿ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾಗಿತ್ತು. ಬೀದಿಯಲ್ಲಿ ವಜ್ರ ವೈಡೂರ್ಯ ನಿರ್ಭೀತಿಯಿಂದ ಮಾರಾಟ ಮಾಡುತ್ತಿದ್ದದ್ದು ವಿಜಯನಗರ ಕಾಲದ ರಾಜಧಾನಿ ಇದೇ ಹಂಪಿಯಲ್ಲೇ. ಈ ಪ್ರದೇಶದಲ್ಲಿ 1000 ಕ್ಕಿಂತ ಹೆಚ್ಚು ಸಂರಕ್ಷಿಸಲ್ಪಟ್ಟ ಸ್ಮಾರಕಗಳು, ಹಿಂದೂ ದೇವಾಲಯಗಳು, ಕೋಟೆಗಳು, ಅರಮನೆಗಳ ಕುರಿತಂತೆ 150 ಪದಗಳನ್ನು ನ್ಯೂಯಾರ್ಕ್ ಟೈಮ್ಸ್ ನಮೂದು ಮಾಡಿದೆ. ಹಂಪಿಗೆ ನ್ಯೂಯಾರ್ಕ್ ಟೈಮ್ಸ್ ಕೊಟ್ಟ ಮಹತ್ವಕ್ಕೆ ಭಾರತದ ಇತಿಹಾಸಕಾರರು ಹಾಗೂ ಸ್ಮಾರಕ ಸಂರಕ್ಷಣೆ ಹೊಣೆ ಹೊತ್ತ ಪುರಾತತ್ವ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಇದು ಭಾರತದ ಹೆಮ್ಮೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರಕಾರ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವವನ್ನು ಆಚರಣೆ ಮಾಡಲು ಮೀನಮೇಷ ಎಣಿಸುತ್ತಿದೆ. ಹಂಪಿಗೆ ದೇಶ, ವಿದೇಶಗಳ ಪ್ರವಾಸಿಗರು, ಬರಹಗಾರರು ಕೊಂಡಾಡಿದ್ದಾರೆ. ಇಂತಹ ಸಮಯದಲ್ಲಿ ಸರಕಾರ ಬರ, ಚುನಾವಣೆಯ ನೆಪಗಳನ್ನೊಡ್ಡಿ ಉತ್ಸವ ರದ್ದು ಮಾಡುತ್ತಿರುವುದು ಸರಿಯಲ್ಲ. ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ಹಂಪಿಯನ್ನು ಗುರುತಿಸಿದೆ. ಇನ್ನಾದರೂ ಸರಕಾರ ಬುದ್ದಿ ಕಲಿತು, ಈ ಕೂಡಲೇ ಹಂಪಿ ಉತ್ಸವ ಆಚರಣೆ ಮಾಡಬೇಕು ಎಂಬುದು ಜಿಲ್ಲೆಯ ಕಲಾಸಕ್ತರು, ಸಾಹಿತಿಗಳ ಒತ್ತಾಯವಾಗಿದೆ.
Loading...

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...