ಬಸ್ ಗಳಲ್ಲಿ ಚಿಲ್ಲರೆ ಕೇಳಿದರೆ ಮೂರು ವರ್ಷ ಜೈಲು: NWKRTCಯ ವಿವಾದಾತ್ಮಕ ಪೋಸ್ಟರ್

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North Western Karnataka Road Transport Corporation) ವಿವಾದಾತ್ಮಕ ಪೋಸ್ಟರ್ ಗಳನ್ನು ನಿಲ್ದಾಣಗಳಲ್ಲಿ ಅಂಟಿಸಿದೆ. ಸಾರಿಗೆ ಸಂಸ್ಥೆಯ ವಿರುದ್ಧ ಸಾರ್ವಜನಿರಕ ಅಸಮಾಧಾನ ಹೊರ ಹಾಕಿದ್ದು, ಅಂಟಿಸಿರುವ ಪೋಸ್ಟರ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

NWKRTC ಬಸ್

NWKRTC ಬಸ್

  • Share this:
ಬಸ್ (Bus)ಗಳಲ್ಲಿ ಚಿಲ್ಲರೆ ಹಣಕ್ಕಾಗಿ (money) ನಿರ್ವಾಹಕರ (Conductor) ಜೊತೆಯಲ್ಲಿ ಪ್ರಯಾಣಿಕರು ಜಗಳ ಮಾಡಿರೋದನ್ನು ಎಲ್ಲರೂ ನೋಡಿರುತ್ತಾರೆ. ಇಂತಹ ದೃಶ್ಯಗಳನ್ನು ಚಿತ್ರದಲ್ಲಿಯೂ ಬಳಸಲಾಗಿರುತ್ತದೆ, ಪ್ರಯಾಣದ ವೇಳೆ ನಿರ್ವಾಹಕನ ಬಳಿ ಚಿಲ್ಲರೆ ಇರದಿದ್ರೆ, ಇಬ್ಬರು ಅಥವಾ ಮೂವರ ನಡುವೆ ಹಣ ಹೊಂದಾಣಿಕೆ ಮಾಡುವಂತೆ ಹೇಳಿ ನಿರ್ವಾಹಕ ಹೋಗುತ್ತಾರೆ, ಒಂದು ಅಥವಾ ಎರಡು ರೂಪಾಯಿಗೆ ಪ್ರಯಾಣಿಕರು (Passengers) ಒಬ್ಬರಿಂದ ಹಿಂದೆ ಒಬ್ಬರಂತೆ ಓಡಾಡಬೇಕಾಗುತ್ತದೆ. ಕೆಲವರು ಎರಡ್ಮೂರು ರೂಪಾಯಿ ಮುಖ ನೋಡದೇ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಒಂದಿಷ್ಟು ಜನಕ್ಕೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ರಸ್ತೆ ಬದಿಯಲ್ಲಿರುವ ಅಂಗಡಿಗಳಲ್ಲಿ ಚಿಲ್ಲರೆ ಮಾಡಿಕೊಂಡು ಹಣ ಹಂಚಿಕೊಳ್ಳುತ್ತಾರೆ. ಇನ್ನೂ ಒಂದಿಷ್ಟು ಜನರಂತೂ ತಮಗೆ ಪ್ರತ್ಯೇಕ ಚಿಲ್ಲರೆ ನೀಡಬೇಕೆಂದು ನಿರ್ವಾಹಕರ ಜೊತೆ ಜಗಳ ಮಾಡುತ್ತಾರೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North Western Karnataka Road Transport Corporation) ವಿವಾದಾತ್ಮಕ ಪೋಸ್ಟರ್ ಗಳನ್ನು ನಿಲ್ದಾಣಗಳಲ್ಲಿ ಅಂಟಿಸಿದೆ. ಸಾರಿಗೆ ಸಂಸ್ಥೆಯ ವಿರುದ್ಧ ಸಾರ್ವಜನಿರಕ ಅಸಮಾಧಾನ ಹೊರ ಹಾಕಿದ್ದು, ಅಂಟಿಸಿರುವ ಪೋಸ್ಟರ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಏನಿದು ವಿವಾದಾತ್ಮಕ ಪೋಸ್ಟರ್?

ಬಸ್ಸುಗಳಲ್ಲಿ ಸಂಚರಿಸುವ ವೇಳೆ ಚಿಲ್ಲರೆ ಕೇಳುವುದನ್ನು ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಂದು ಭಾವಿಸಲಾಗುವುದು. ಹಾಗೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಗಳಿವೆ ಎಂಬ ಬರಹಗಳಿರುವ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಇದನ್ನೂ ಓದಿ:  ಈ Chewing Gum ಜಗಿದರೆ ಸಾಕು, ಕೋವಿಡ್ ನಿಮ್ಮ ಹತ್ತಿರಕ್ಕೂ ಬರಲ್ಲ: ವಿಜ್ಞಾನಿಗಳ ಹೊಸಾ ಆವಿಷ್ಕಾರ!

ಸಾರ್ವಜನಿಕರು ಹೇಳೋದೇನು?

ಪ್ರತಿಬಾರಿಯೂ ಬಸ್ ಹತ್ತುವಾಗ ಚಿಲ್ಲರೆ ಇದೆಯಾ ಅಂತ ನೋಡಿಕೊಂಡು ಹತ್ತಲು ಆಗಲ್ಲ. ಇಂದು ಈ ಪೋಸ್ಟರ್ ಗಳನ್ನು ಕಂಡು ಒಮ್ಮೆ ಚಿಲ್ಲರೆ ಹಣ ಇದೆಯಾ ಎಂದು ಪರಿಶೀಲಿಸಿ, ಬಸ್ ನಲ್ಲಿ ಪ್ರಯಾಣ ಆರಂಭಿಸಿದೆ. ಒಮ್ಮೊಮ್ಮೆ ನಾಣ್ಯಗಳ ಕೊರತೆಯಿಂದಾಗಿ ಸಣ್ಣ ಜಗಳಗಳು ನಡೆಯುತ್ತವೆ. ಹಾಗಂತ ಚಿಲ್ಲರೆ ಹಣ ಕೇಳುವುದೇ ತಪ್ಪು ಅಂತ ಹೇಳುವುದು ಸಮಂಜಸವಲ್ಲ. ಸಾರ್ವಜನಿಕ ಸೇವೆಯಲ್ಲಿರುವ ನೌಕರರು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಎಲ್ಲ ರೀತಿಯ ಜನರು ಬಸ್ ನಲ್ಲಿ ಪ್ರಯಾಣಿಸುತ್ತಾರೆ. ಎಲ್ಲರ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಾಗಿರಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:   Coonoor, Tamil Nadu: ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರಿದ್ದ ಹೆಲಿಕಾಪ್ಟರ್ ಪತನ

ಪೋಸ್ಟರ್ ಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಆದೇಶವನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಬಸ್ ಗಳಲ್ಲಿ ಜೋರಾಗಿ ಹಾಡು ಕೇಳುವಂತಿಲ್ಲ

ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು KSRTC ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್ ದೂರವಾಣಿ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ದಿನೇ ದಿನೇ ಬಸ್ ನಲ್ಲಿಯೂ ಈ ಬಳಕೆ ಹೆಚ್ಚಾಗುತ್ತಿದೆ ಎಂದು ಕೆಎಸ್ಆರ್ ಟಿಸಿ ಹೇಳಿದೆ.

ಇನ್ಮುಂದೆ ಸಾರ್ವಜನಿಕರು ಬಸ್ ನಲ್ಲಿ ದೂರವಾಣಿ ಮೂಲಕ ಜೋರಾಗಿ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಹಾಕುವಂತಿಲ್ಲ. ಜೋರಾಗಿ ಸೌಂಡ್ ಹಾಕುವದರಿಂದ ಶಬ್ದ ಮಾಲಿನ್ಯ ಮತ್ತು ಬಸ್ಸಿನಲ್ಲಿ ಪ್ರಯಾಣಿಸುವ ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

KSRTC ಸುತ್ತೋಲೆ

ಈ ಸಂಬಂಧ ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದಮಾಲಿನ್ಯ ನಿಯಂತ್ರಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಉಚ್ಛನ್ಯಾಯಾಲದಲ್ಲಿ ದಾಖಲಾಗಿದೆ. ಕರ್ನಾಟಕ ಮೋಟಾರು ವಾಹನಗಳು ನಿಯಮಗಳು 1989, ನಿಯಮ 94(1)(V)ನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಜೋರಾಗಿ ಹಾಡು ಕೇಳುವಂತಿಲ್ಲ ಎಂದು KSRTC ಸುತ್ತೋಲೆಯಲ್ಲಿ ಹೇಳಿದೆ.

ಒಂದು ವೇಳೆ ಪ್ರಯಣಿಕರ ವಿನಂತಿಗೆ ಮನ್ನಣೆ ನೀಡದಿದ್ರೆ, ಅಂತಹ ಪ್ರಯಾಣಿಕರನ್ನು ನಿಯಮಾನುಸಾರ ಬಸ್ಸಿನಿಂದ ಕೆಳಗೆ ಇಳಿಸಲಾಗುತ್ತದೆ. ಜೊತೆಗೆ ಪ್ರಯಾಣಿಕರಿಗೆ ಯಾವುದೇ ಹಣ ಹಿಂದಿರುಗಿಸಲ್ಲ.
Published by:Mahmadrafik K
First published: